Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Bengaluru: ಅತ್ತೆ ಸಾಯಿಸಲು ವೈದ್ಯರ ಬಳಿ ಸಹಾಯ ಕೇಳಿದ ಸೊಸೆ..! ಆದ್ರೆ ಆಮೇಲೆ ಆಗಿದ್ದೇ ಬೇರೆ..!
ಅತ್ತೆ ಸೊಸೆ ಅಂದ ಮೇಲೆ ಜಗಳ, ಪ್ರೀತಿ, ಮುನಿಸು, ಗಲಾಟೆ ಇದೆಲ್ಲವು ಸಾಮಾನ್ಯ. ಇದ್ಯಾವುದೂ ಇಲ್ಲ ಅಂದ್ರೆ ಅತ್ತೆ-ಸೊಸೆ ಸಂಬಂಧಕ್ಕೆ ಅರ್ಥವೇ ಇರೋದಿಲ್ಲ. ಇತ್ತೀಚಿಗೆ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವುದು ನೋಡಬಹುದು. ಅದರಲ್ಲೂ ಅತ್ತೆ ಸೊಸೆ ಅಂದರೆ ಅವರು ಜಗಳ ಮಾಡಲೇಬೇಕು ಎಂಬಷ್ಟು ಮಟ್ಟಿಗೆ ಬಂದು ತಲುಪಿದೆ. ಇನ್ನು ಇಬ್ಬರ ನಡುವಿನ ಜಗಳ ಕೆಲವು ಗಂಟೆ, ದಿನ, ವಾರ, ತಿಂಗಳ, ವರ್ಷದ ಎಲ್ಲಾ ದಿನವೂ ಇರಬಹುದು.
ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸೊಸೆ, ಅತ್ತೆಯ ಉಸಿರು ನಿಲ್ಲಿಸುವ ಯೋಜನೆ ರೂಪಿಸಿದ್ದಾಳೆ. ಆದ್ರೆ ಇದಕ್ಕೆ ಅವಳು ಕೇಳಿದ್ದು ಮಾತ್ರ ಜೀವ ಉಳಿಸುವ ವೈದ್ಯರ ನೆರವನ್ನ. ಹೌದು ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ವಿದ್ಯಾವಂತರೇ ತುಂಬಿರುವ ಬೆಂಗಳೂರಿನಲ್ಲಿ ಇಂತಹದೊಂದು ಘಟನೆ ವರದಿಯಾಗಿರುವುದು ಆಘಾತಕ್ಕೆ ಕಾರಣವಾಗಿದೆ.

ಉತ್ತರ ಬೆಂಗಳೂರಿನ ವೈದ್ಯರೊಬ್ಬರಿಗೆ ವಾಟ್ಸಾಪ್‌ನಲ್ಲಿ ಬಂದಿದ್ದ ಸಂದೇಶ ನೋಡಿ ಶಾಕ್‌ಗೆ ಒಳಗಾಗಿದ್ದರು, ನಮ್ಮ ಅತ್ತೆಯನ್ನು ಕೊಲ್ಲಲು ಯಾವ ಮಾತ್ರೆ ಬಳಸಬೇಕು ಎಂಬುದು ತಿಳಿಸಿ ಎಂದು ಸೊಸೆ ಮೆಸೇಜ್ ಮಾಡಿದ್ದಳು. ಈ ಸಂದೇಶ ಓದಿದ ವೈದ್ಯರು ಆಘಾತಕ್ಕೊಳಗಾಗಿದ್ದಾರೆ. ಡಾ. ಸುನಿಲ್ ಕುಮಾರ್ ಎಂಬುವವರಿಗೆ ವಾಟ್ಸಾಪ್ ಮೂಲಕ ಈ ರೀತಿ ಪ್ರಶ್ನೆ ಕೇಳಲಾಗಿತ್ತು.
ಈ ಸಂದೇಶ ಸ್ವೀಕರಿಸಿದ ಬಳಿಕ ಪ್ರತ್ಯುತ್ತರ ನೀಡಿದ ವೈದ್ಯರು, ' ವೈದ್ಯರು ಜೀವ ಉಳಿಸಬೇಕೇ ವಿನಃ ಜೀವ ಕಸಿಯಬಾರದು ಎಂದು ಮೆಸೇಜ್ ಮಾಡಿದರು. ಈ ಸಂದೇಶ ನೋಡಿದ ತಕ್ಷಣ ಮಹಿಳೆ ತನ್ನ ಮೆಸೇಕ್ ಡಿಲೀಟ್ ಮಾಡಿದ್ದಾಳೆ. ಆದ್ರೆ ಅಷ್ಟರಾಗಲೆ ತಡವಾಗಿತ್ತು. ವೈದ್ಯರು ಈ ಸಂದೇಶ ಬಂದೊಡನೆ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದರು.
ಸೋಮವಾರ ಮಧ್ಯಾಹ್ನ 2:10 ರ ಸುಮಾರಿಗೆ ಈ ಸಂದೇಶಗಳನ್ನು ಅವರು ಪಡೆದಿದ್ದಾರೆ. ಆರಂಭದಲ್ಲಿ ಮಹಿಳೆ ಕನ್ನಡದಲ್ಲಿ ಸಂದೇಶ ಕಳುಹಿದ್ದರಂತೆ. ಆಕೆಗೆ ಈ ವೈದ್ಯರು ಸಹಾಯ ಮಾಡುವುದಿಲ್ಲ ಎಂದು ತಿಳಿದು ಮೆಸೇಜ್ ಡಿಲೀಟ್ ಮಾಡಿದ್ದಾಳೆ. ಆಕೆ ತನ್ನ 70 ವರ್ಷದ ಅತ್ತೆ ಮಾನಸಿಕವಾಗಿ ಕಿರುಕುಳು ನೀಡುತ್ತಾಲೆ ಎಂದು ಹೇಳಿಕೊಂಡಿದ್ದಾಳಂತೆ.
ಸದ್ಯ ಡಾ. ಸುನಿಲ್ ಕುಮಾರ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ಮೆಸೇಜ್ ಅನ್ನು ಸಾಕ್ಷ್ಯವಾಗಿಟ್ಟುಕೊಂಡು ದೂರ ನೀಡಲಾಗಿದ್ದು, ಪೊಲೀಸರು ಆಕೆಯ ಕುರಿತು ತನಿಖೆ ಆರಂಭಿಸಿ. ನೋಟಿಸ್ ಜಾರಿ ಮಾಡಿದ್ದರು, ಹೀಗಾಗಿ ಪತಿಯ ಜೊತೆಗೆ ಠಾಣೆಗೆ ಆಗಮಿಸಿದ ಆಕೆ ತನ್ನ ಅತ್ತೆಯ ಬದಲಾಗಿ ತಾನೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿ ಕೇಳಿರುವುದಾಗಿ ಹೇಳಿದ್ದಾಳೆ. ತನಗಾಗಿ ಕೇಳಿದರೆ ನೀಡುವುದಿಲ್ಲ ಎಂದು ಅತ್ತೆಯ ಹೆಸರಿನಲ್ಲಿ ಕೇಳಲು ಮುಂದಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.
ನಾನು ವೈದ್ಯರ ಬಳಿ ಆತ್ಮಹತ್ಯೆಗೆ ಮಾತ್ರೆಗಳ ನೀಡುವಂತೆ ಕೇಳಿದ್ದರೆ, ಅವರು ಖಂಡಿತವಾಗಿಯೂ ನಿರಾಕರಿಸುತ್ತಿದ್ದರು. ಹಾಗಾಗಿ ನಾನು ಅದನ್ನು ಬೇರೆ ರೀತಿಯಲ್ಲಿ ಕೇಳಿದೆ. ಒಂದು ವೇಳೆ ಅವರು ಮಾತ್ರೆಗಳ ಹೆಸರು ಹೇಳಿದ್ದರೆ ಅದನ್ನು ನಾನೇ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಆಕೆ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಆಕೆಗೆ ಸುಮಾರು 40 ವರ್ಷವಾಗಿದ್ದು, ಪತಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಗೆ ಚಿಕ್ಕ ಮಗಳು ಕೂಡ ಇದ್ದಾಳೆ. ಆಕೆ ಆನ್‌ಲೈನ್‌ನಲ್ಲಿ ಡಾ. ಸುನಿಲ್ ಕುಮಾರ್ ಅವರ ಮೊಬೈಲ್ ನಂಬರ್ ಪಡೆದಿರುವುದಾಗಿ ಹೇಳಿಕೊಂಡಿದ್ದಾಳೆ.



Click it and Unblock the Notifications
