Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಈ ರಾಶಿಯವರನ್ನು ಅಭದ್ರತೆ ಹೆಚ್ಚಾಗಿ ಕಾಡುತ್ತಂತೆ
ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮಲ್ಲಿ ಅಭದ್ರತೆಯನ್ನು ಕಾಡುವಂತೆ ಮಾಡುತ್ತದೆ. ನಷ್ಟ, ಅಪನಂಬಿಕೆ, ಪರಿತ್ಯಾಗ, ನೋವುಗಳು ಅಭದ್ರತೆಗೆ ಕಾರಣವಾಗುತ್ತದೆ. ಇನ್ನೂ ನಮ್ಮ ಮನದೊಳಗೆ ವಿಶ್ವಾಸ ಕಡಿಮೆ ಇದ್ದಾಗಲೂ ಕೂಡ ಅಭದ್ರತೆ ಕಾಡುತ್ತದೆ. ಈ ಅಭದ್ರತೆ ನಮ್ಮನ್ನು ಜೀವನದಲ್ಲಿ ಮುಂದೆ ಬರೋದಕ್ಕೆ ಅವಕಾಶವನ್ನೇ ನೀಡೋದಿಲ್ಲ. ಅದ್ರಲ್ಲೂ ಈ ರಾಶಿಯವರಿಗೆ ಅಭದ್ರತೆ ತುಂಬಾನೇ ಕಾಡುತ್ತಂತೆ. ಹಾಗಾದ್ರೆ ಆ ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವೃಷಭ ರಾಶಿಯ ಜನರು ಬದಲಾವಣೆಗೆ ಹೆದರುತ್ತಾರೆ. ಅವರು ಯಾವುದೇ ವಿಷಯಗಳನ್ನು ತ್ವರಿತವಾಗಿ ಸ್ವೀಕರಿಸುವುದಿಲ್ಲ, ಇದರಿಂದಾಗಿ ಅವರಲ್ಲಿ ಅಭದ್ರತೆಯ ಭಾವನೆ ಬೆಳೆಯಲು ಪ್ರಾರಂಭಿಸುತ್ತದೆ. ಪ್ರೀತಿಯ ವಿಷಯದಲ್ಲಿ, ಅವರ ಅಭದ್ರತೆಯ ಮಟ್ಟವು ಮತ್ತಷ್ಟು ಹೆಚ್ಚಾಗುತ್ತದೆ.

ಮಿಥುನ ರಾಶಿ
ಈ ಮಿಥುನ ರಾಶಿಯವರು ದ್ವಂದ್ವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ತುಂಬಾ ಅಸುರಕ್ಷಿತ ಭಾವನೆ ಹೊಂದಿರುತ್ತಾರೆ. ಈ ರಾಶಿಯವರ ಮನಸ್ಥಿತಿಯು ಕ್ಷಣಾರ್ಧದಲ್ಲಿ ಬದಲಾಗುತ್ತದೆ. ವಿಶೇಷವಾಗಿ ಇವರು ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದಾಗ ತಮ್ಮ ಭವಿಷ್ಯದ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಾರೆ. ಪ್ರಯಾಣದ ವಿಷಯಕ್ಕೆ ಬಂದಾಗ ಇವರು ಪ್ರಯಾಣಕ್ಕಾಗಿ ಖರ್ಚು ಮಾಡಬೇಕೇ ಅಥವಾ ತಮ್ಮ ಭವಿಷ್ಯಕ್ಕಾಗಿ ಉಳಿಸಬೇಕೇ ಎಂದು ನಿರ್ಧರಿಸಲು ಸಾಧ್ಯವಾಗದೇ ಒದ್ದಾಡುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಭಾವನೆಗಳಿಗಿಂತ ಇತರರ ಭಾವನೆಗಳ ಬಗ್ಗೆ ಹೆಚು ತಲೆ ಕೆಡಿಸಿಕೊಳ್ಳುತ್ತಾರಂತೆ. ಇನ್ನೂ ತಮ್ಮ ಆಪ್ತರು ದುಃಖಿಸುತ್ತಿರುವ ಸಂದರ್ಭದಲ್ಲಿ ಕರ್ಕಾಟಕ ರಾಶಿಯವರು ಅವರ ದುಃಖದಲ್ಲಿ ಪಾಲುದಾರರಾಗಿರುತ್ತಾರೆ. ಹಾಗೂ ಅವರಿಗೆ ಹೆಗಲಾಗಿ ನಿಲ್ಲುತ್ತಾರೆ. ಹಾಗೂ ಇವರ ಭಿಪ್ರಾಯವು ಪ್ರತಿ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ಇದೇ ವಿಚಾರಕ್ಕೆ ಇವರು ಅಭದ್ರತೆಯನ್ನು ಅನುಭವಿಸುತ್ತಾರೆ.
ಕನ್ಯಾ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಟೀಕೆಗಳಿಗೆ ಹೆದರುತ್ತಾರೆ. ಕೆಲವೊಂದು ಸಾರಿ ತಮ್ಮನ್ನು ನಾವೇ ಟೀಕಿಸಿಕೊಳ್ಳುತ್ತಾರೆ. ಕನ್ಯಾ ರಾಶಿಯವರನ್ನು ಅಭದ್ರತೆ ಹೆಚ್ಚಾಗಿ ಕಾಡುತ್ತದೆ. ಇವರು ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸುತ್ತಾರೆ. ಆದರೆ ಆ ಕೆಲಸ ಆಗುವುದಕ್ಕಿಂತಲೂ ಮೊದಲು ಕೆಲಸ ಆಗುತ್ತೋ ಇಲ್ಲವೋ ಎಂಬ ಭಯ ಇವರನ್ನು ಕಾಡುತ್ತಿರುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ತ್ವರಿತವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳೋದಿಲ್ಲ. ಈ ರಾಶಿಯ ಜನರು ಶಾಂತಿ, ಸೌಹಾರ್ದತೆ, ಪ್ರೀತಿ ಮತ್ತು ನ್ಯಾಯವನ್ನು ಬಯಸುತ್ತಾರೆ. ಆದರೆ ತಮ್ಮ ಈ ಗುಣಗಳಿಂದ ಅಪಾಯ ಎದುರಾಗುತ್ತೋ ಎಂದು ಭಯ ಪಡುತ್ತಾರೆ. ಇವರು ಯಾರನ್ನೂ ವಿರೋಧಿಸೋದಕ್ಕೆ ಹೋಗೋದಿಲ್ಲ. ಯಾಕಂದ್ರೆ ಅವರ ಪ್ರೀತಿಯನ್ನು ಎಲ್ಲಿ ಕಳೆದುಕೊಳ್ಳುತ್ತೇನೆ ಎಂಬ ಭಯ ಇವರಲ್ಲಿರುತ್ತದೆ.
ಮೀನ ರಾಶಿ
ಮೀನ ರಾಶಿಯವರನ್ನು ಅನುಮಾನ ಹೆಚ್ಚಾಗಿ ಕಾಡುತ್ತದೆ. ನೀವು ಅವರನ್ನು ಹೊಗಳಿ ನೀವು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹೇಳಿದರೆ ಅವರು ಸಂತೋಷಪಡುವ ಬದಲು ಮೊದಲು ಚೆನ್ನಾಗಿ ಕಾಣುತ್ತಿರಲಿಲ್ವಾ? ಎಂದು ಮರು ಪ್ರಶ್ನಿಸುತ್ತಾರೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಅವರು ಹೆಚ್ಚಾಗಿ ಅಭದ್ರತೆ ಕಾಡೋದಿಲ್ಲ. ಆದರೆ ಮೀನ ರಾಶಿಯವರು ಕನಸುಗಳ ಜಗತ್ತಿನಲ್ಲಿ ವಾಸಿಸುತ್ತಾರೆ.



Click it and Unblock the Notifications

