Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಲಮುರಿ ಹಾಗೂ ಎಡಮುರಿ ಗಣಪನಲ್ಲಿ ಯಾವುದು ಶ್ರೇಷ್ಠ: ಇದೆರಡರ ನಡುವಿನ ವ್ಯತ್ಯಾಸವೇನು?
ಗಣೇಶನ ಹಬ್ಬಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಪ್ರತಿ ಮನೆಯಲ್ಲೂ, ಪ್ರತಿ ಊರಿನಲ್ಲೂ ಗಣೇಶ ವಿಜೃಂಭಿಸಲಿದ್ದಾನೆ. ಗಣೇಶನ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುವುದು ನಾವು ನೋಡಬಹುದು. ಹಾಗೆ ಗಣೇಶನಿಗೆ ಪ್ರಿಯವಾದ ಅಡುಗೆ, ಪೂಜೆ, ಹೂವುಗಳ ಅರ್ಪಿಸುವುದು ಸಹ ಸಾಮಾನ್ಯ ಸಂಗತಿ.
ಆದ್ರೆ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣಪ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣಪನ ಮೂರ್ತಿ ಹೇಗಿರಬೇಕು ಎಂಬುದು ನಿಮಗೆ ಗೊತ್ತಾ? ಆದ್ರೆ ಈ ಗಣಪನ ಮೂರ್ತಿಯಲ್ಲಿ ಎರಡು ರೀತಿಯ ರಚನೆಯನ್ನು ನಾವು ನೋಡಬಹುದು. ಒಂದು ಬಲಮುರಿ ಗಣಪ ಇನ್ನೊಂದು ಎಡಮುರಿ ಗಣಪ ಎಂಬ ವ್ಯತ್ಯಾಸ ಕಾಣಬಹುದು.

ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ. ಹೆಚ್ಚಾಗಿ ನೀವು ಎಲ್ಲಿಯೇ ನೋಡಿದರು ಎಡಮುರಿ ಗಣಪ ಕಂಡುಬರುತ್ತದೆ. ಅಂದರೆ ಗಣಪತಿಯ ಸೊಂಡಿಲು ಎಡ ದಿಕ್ಕಿಗೆ ಬಾಗಿರುತ್ತದೆ ಅಥವಾ ಮಡಚಿಕೊಂಡಿರುತ್ತದೆ. ಇದನ್ನು ಎಡಮುರಿ ಗಣಪ ಎಂದು ಹಾಗೂ ಬಲ ಬದಿಗೆ ಮಡಚಿದ್ದರೆ ಅದನ್ನು ಬಲಮುರಿ ಗಣಪ ಎಂದು ಕರೆಯುತ್ತಾರೆ.
ಆದ್ರೆ ಈ ಬಲಮುರಿ ಹಾಗೂ ಎಡಮುರಿ ಗಣಪನ ವಿಶೇಷತೆ ಏನು? ಇದೆರಡಕ್ಕೂ ಇರುವ ವ್ಯತ್ಯಾಸವೇನು? ಯಾವ ಗಣಪ ಶ್ರೇಷ್ಟ ಎಂಬ ಮಾಹಿತಿ ಹಲವರಿಗೆ ತಿಳಿದಿರುವುದೇ ಇಲ್ಲ. ಹಾಗಾದ್ರೆ ನಾವಿಂದು ಈ ಎರಡು ಗಣೇಶನ ನಡುವಿನ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳೋಣ.
ಬಲಮುರಿ ಗಣಪ
ಬಲಮುರಿ ಗಣಪ ಎಂದರೆ ಆತ ದಕ್ಷಿಣಾಭಿಮುಖಿ ಎನ್ನಲಾಗಿದೆ. ಅಂದರೆ ದಕ್ಷಿಣ ದಿಕ್ಕಿಗೆ ಇರುವುದು ಯಮಲೋಕ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ ಎಂದು ನಂಬಲಾಗಿದೆ. ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು 'ಜಾಗೃತ' ಗಣಪತಿ ಎಂದು ಹೇಳುತ್ತಾರೆ. ಹೀಗಾಗಿಯೇ ದಕ್ಷಿಣಾಭಿಮುಖಿ ಗಣಪನ ಪೂಜೆ ಮಾಡುವುದಿಲ್ಲ. ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದಲ್ಲಿನ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಹೀಗಾಗಿ ಕೆಲವೇ ಕೆಲವೂ ಮೂರ್ತಿಗಳು ಬಲಮುರಿ ಗಣಪ ಆಗಿರುತ್ತವೆ. ಮಿಕ್ಕಿದ್ದೆಲ್ಲವು ಎಡಮುರಿ ಗಣಪನಾಗಿರುತ್ತೆ. ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ದಾರಿಯಾಗಬಹುದು ಎಂದು ಹೇಳಲಾಗಿದೆ.
ಎಡಮುರಿ ಗಣಪ
ಇಂದು ಬಹುತೇಕ ದೇವಾಲಯ, ಸಾರ್ವಜನಿಕ ಗಣೇಶೋತ್ಸವ ಸೇರಿ ಹಲವು ಕಡೆಗಳಲ್ಲಿ ನೋಡುವುದು ಈ ಎಡಮುರಿ ಗಣಪನನ್ನು. ಎಡಮುರಿ ಗಣಪನನ್ನು ವಾಮಮುಖಿ ಎಂದು ಕರೆಯಲಾಗುತ್ತದೆ. ವಾಮ ಎಂದರೆ ಉತ್ತರ ದಿಕ್ಕು, ಬಲಬದಿಗೆ ಸೂರ್ಯನಾಡಿ ಇದ್ದರೆ ಈ ಎಡಬದಿಗೆ ಚಂದ್ರನಾಡಿ ಇರುತ್ತದೆ. ಇದು ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ತರುವಂತಹ ದಿಕ್ಕಿನ ಸೂಚಕವಾಗಿದೆ. ಹೀಗಾಗಿ ಯಾವುದೇ ಸಮಸ್ಯೆಗಳಿಲ್ಲ, ಯಾವುದೇ ಆಚರಗಳಿಲ್ಲದೆ ಎಡಮುರಿ ಗಣಪನನ್ನು ಯಾರು ಬೇಕಾದರೂ ಪೂಜಿಸಬಹುದು. ಈ ಎಡಮುರಿ ಗಣಪ ಸಂತೋಷ, ಶಾಂತಿ, ಸಮೃದ್ಧಿ, ಸಕಾರಾತ್ಮಕತೆ, ಜ್ಞಾನ, ಬುದ್ಧಿವಂತಿಕೆ ಮತ್ತು ಯಶಸ್ಸನ್ನು ತರುತ್ತದೆ ಎಂದು ಹೇಳಲಾಗಿದೆ.
ಇನ್ನು ಗಣೇಶನ ಪ್ರತಿಷ್ಠಾಮನೆಯಲ್ಲಿ ಹಲವು ನಿಯಮಗಳ ಪಾಲಿಸಬೇಕಾಗುತ್ತದೆ. ಗಣಪನ ಮೂರ್ತಿ ಎಷ್ಟು ಎತ್ತರದಲ್ಲಿರಬೇಕು. ಯಾವ ದೇವರ ಫೋಟೋ ಅಥವಾ ಮೂರ್ತಿಯನ್ನು ಗಣಪನ ಮೂರ್ತಿ ಬಳಿ ಇಡಬಹುದು, ಯಾವ ಮಂತ್ರ ಪಠಿಸಬೇಕು ಹೀಗೆ ಹತ್ತಾರು ನಿಯಮಗಳಿದ್ದು, ಇವುಗಳನ್ನು ಸಮಯಕ್ಕನುಗುಣವಾಗಿ ಪಂಡಿತರ ಬಳಿ ಕೇಳಿ ಮಾಡುವುದು ಉಚಿತ.



Click it and Unblock the Notifications











