Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪಿತೃಪಕ್ಷ ಹಿಂದಿನ ಕರ್ಣನ ಕಥೆ ಗೊತ್ತಾ? ನೀವು ಹಿರಿಯರಿಗೆ ಊಟ ಹಾಕೋದು ಇಂದ್ರನ ಕರುಣೆಯಿಂದ..!!
Pitru Paksha: ಹಿಂದೂ ಧರ್ಮದಲ್ಲಿ ವ್ಯಕ್ತಿಯೊಬ್ಬನ ಮರಣದ ನಂತರವು ಆತನನ್ನು ಪೂಜಿಸುವುದು, ಊಟ, ಮದುವೆ, ಪಿಂಡ ಪ್ರದಾನದಂತಹ ಸಂಪ್ರದಾಯಗಳಿರುವುದು ನೋಡಬಹುದು. ಪ್ರತಿ ವರ್ಷ ನಮ್ಮನ್ನಗಲಿದ ಹಿರಿಯರನ್ನು ನೆನೆಯುವುದು ಅವರಿಗೆ ಅನ್ನ ಆಹಾರ ನೀಡುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.
ಈ ಸಂಪ್ರದಾಯವನ್ನು ಪಿತೃ ಪಕ್ಷ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗುವ ಶ್ರಾದ್ಧವು ಅಶ್ವಿನಿ ಮಾಸದ ಅಮಾವಾಸ್ಯೆಯಂದು ಸರ್ವಪಿತೃ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ. ಒಟ್ಟು 15ರಿಂದ 16 ದಿನಗಳ ಕಾಲ ಈ ಆಚರಣೆ ಇರಲಿದೆ. ಈ ದಿನದಲ್ಲಿ ಒಂದು ದಿನ ಅಥವಾ ಕೊನೆಯ ದಿನ ಪಿತೃ ಪಕ್ಷ ಆಚರಿಸಿ ಊಟ ಹಾಕುವುದು ನೋಡಬಹುದು.

ಪೂರ್ವಜರು ಈ ದಿನ ತಾವು ಬಡಿಸಿದ ಅನ್ನ ಆಹಾರ ಸೇವಿಸುತ್ತಾರೆ ಎಂಬ ನಂಬಿಕೆ ಇದೆ. ಮತ್ತೆ ಕೆಲವರು ಪೂರ್ವಜನರು ಮರಣ ಹೊಂದಿದ ದಿನದಂದು ಕೂಡ ಈ ಆಚರಣೆ ಮಾಡುತ್ತಾರೆ. ಈ ಅವಧಿಯಲ್ಲಿ ಪಿತೃಲೋಕದ ಬಾಗಿಲುಗಳು ತೆರೆದುಕೊಳ್ಳುತ್ತವೆ ಮತ್ತು ಪೂರ್ವಜರ ಆತ್ಮಗಳು ತಮ್ಮ ವಂಶಸ್ಥರಿಂದ ತರ್ಪಣಕ್ಕಾಗಿ ಕಾಯುತ್ತಾ ಭೂಮಿಗೆ ಬರುತ್ತವೆ ಮತ್ತು ತೃಪ್ತರಾದಾಗ ಆಶೀರ್ವಾದ ನೀಡಿದ ನಂತರ ಮರಳುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಆಡಂಬರದಿಂದ ಅಲ್ಲದಿದ್ದರೂ ಪೂರ್ವಜರಿಗೆ ಸತ್ಕಾರ ಮಾಡಿಯೇ ಮಾಡುತ್ತಾರೆ.
ಇನ್ನು ಈ ಸಂಪ್ರದಾಯ ಆರಂಭವಾದ ಕುರಿತಾಗಿ ದೊಡ್ಡ ಕಥೆಯೊಂದಿದೆ. ಈ ಕಾರ್ಯ ಆರಂಭಗೊಂಡಿದ್ದು ಹೇಗೆ? ಆರಂಭವಾಗಲು ಕಾರಣವಾದವರು ಯಾರು ಎಂಬುದು ನಿಮಗೆ ಗೊತ್ತಾ? ವರ್ಷಗಳಿಂದ ನೀವು ಈ ಸಂಪ್ರದಾಯ ಆಚರಿಸುತ್ತಿದ್ದರೂ ಇದರ ಹಿಂದಿರುವ ಕಾರಣವೇನು ಎಂಬುದನ್ನು ತಿಳಿದಿರುವುದಿಲ್ಲ. ಆದ್ರೆ ಇದರ ಹಿಂದಿನ ಪುರಾಣ ಕಥೆ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಿತೃ ಪಕ್ಷದ ಕುರಿತ ಪುರಾಣ ಕಥೆ ಏನು ಹೇಳುತ್ತೆ?
ಗರುಡ ಪುರಾಣದಲ್ಲಿ ಶ್ರಾದ್ಧವನ್ನು ಭಕ್ತಿಯಿಂದ ಮತ್ತು ಕ್ರಮಬದ್ಧವಾಗಿ ಮಾಡುವ ವ್ಯಕ್ತಿಯು ತನ್ನ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಉಳಿಸಿಕೊಳ್ಳುತ್ತಾನೆ ಎಂದು ಹೇಳಲಾಗಿದೆ. ಪ್ರತಿಯೊಬ್ಬ ಮಕ್ಕಳು ತಮ್ಮ ಪೋಷಕರು ಮೃತಪಟ್ಟ ಬಳಿಕ ಅವರಿಗೆ ಈ ಕಾರ್ಯ ಕಡ್ಡಾಯವಾಗಿ ಮಾಡಬೇಕು ಎಂದು ಕೂಡ ಹೇಳಿದೆ.

ಪಿತೃಪಕ್ಷವನ್ನು ಕೇವಲ 16 ದಿನಗಳವರೆಗೆ ಏಕೆ ಆಚರಿಸಲಾಗುತ್ತದೆ ಎಂಬುದಕ್ಕೆ ಪುರಾತನ ಕಾರಣವಿದೆ. ಅದ್ರಲ್ಲೂ ನೀವು ಮಹಾಭಾರತದ ಮುಖ್ಯ ಪಾತ್ರ ಕರ್ಣನಿಗೂ ಪಿತೃಪಕ್ಷಕ್ಕೂ ನೇರ ಸಂಬಂಧವಿದೆ. ಮಹಾಭಾರತ ಯುದ್ಧದ ಸಮಯದಲ್ಲಿ ಕರ್ಣನು ತನ್ನ ತಾಯಿ ಕುಂತಿಯಿಂದ ಅರ್ಜುನನನ್ನು ಹೊರತುಪಡಿಸಿ ಬೇರೆ ಯಾವುದೇ ಪಾಂಡವರ ಮೇಲೆ ಶಸ್ತ್ರಾಸ್ತ್ರ ಎತ್ತುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದನು ಎಂಬುದು ನಿಮಗೆಲ್ಲಾ ತಿಳಿದಿದೆ.
ಎಂದು ಹೇಳಲಾಗುತ್ತದೆ. ಅವನು ತನ್ನ ಭರವಸೆಯನ್ನು ಪೂರ್ಣ ಭಕ್ತಿಯಿಂದ ಉಳಿಸಿಕೊಂಡನು. ಆದರೆ ಕೊನೆಯಲ್ಲಿ ಅರ್ಜುನನು ಕರ್ಣನನ್ನು ಮೋಸದಿಂದ ಕೊಂದನು. ಕರ್ಣನ ದಾನ ಮತ್ತು ಅವನ ಜೀವನದ ಆದರ್ಶಗಳಿಂದ ಪ್ರಭಾವಿತನಾದ ಭಗವಾನ್ ಕೃಷ್ಣನು ತನ್ನ ಕೈಗಳಿಂದಲೇ ತನ್ನ ಅಂತ್ಯಕ್ರಿಯೆಗಳನ್ನು ಮಾಡಿದನು. ಕರ್ಣನು ತನ್ನ ಅಂತ್ಯಕ್ರಿಯೆಗಳನ್ನು ಎಂದಿಗೂ ಪಾಪ ಮಾಡದ ಸ್ಥಳದಲ್ಲಿ ನಡೆಸಬೇಕೆಂದು ಪ್ರತಿಜ್ಞೆ ಮಾಡಿದ್ದನು.

ಹಾಗೆ ಕುಂತಿ ಬದುಕಿರುವವರೆಗೂ ಕರ್ಣನನ್ನು ತನ್ನ ಸ್ವಂತ ಪುತ್ರನೆಂದು ಸ್ವೀಕರಿಸಲು ಹಾಗೆ ಎಲ್ಲರೆದುರು ಒಪ್ಪಿಕೊಳ್ಳಲು ಆಗಿರಲಿಲ್ಲ. ಕರ್ಣ ಕೂಡ ಈ ಸತ್ಯವನ್ನು ಪಾಂಡವರ ಬಳಿ ಹೇಳಿಕೊಳ್ಳಲು ಆಗಲಿಲ್ಲ. ಕೊನೆಗೆ ಪಾಂಡವರಿಂದಲೇ ಹತನಾದ. ಆದ್ರೆ ಕರ್ಣನು ಮೃತಪಟ್ಟ ಬಳಿಕ ಪುನರ್ಜನ್ಮ ಪಡೆದನಂತೆ. ಇದಕ್ಕೆ ಎರಡು ಕಾರಣಗಳನ್ನು ಕೂಡ ಹೇಳಲಾಗಿದೆ.
ಮಹಾಭಾರತ ಯುದ್ಧ ಮುಗಿದ ವರ್ಷಗಳ ನಂತರ ತಾಯಿ ಕುಂತಿ ಕರ್ಣನನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದಳು. ಗಾಂಧಾರಿಯೂ ತನ್ನ ಮಕ್ಕಳನ್ನು ಭೇಟಿಯಾಗಲು ಬಯಸಿದ್ದಳು. ನಂತರ ಋಷಿ ವೇದವ್ಯಾಸರು ಗಂಗಾನದಿಯ ದಡದಲ್ಲಿ ಒಂದು ಆಚರಣೆಯನ್ನು ಮಾಡಿದರು ಮತ್ತು ಶ್ರೀಕೃಷ್ಣನ ಕೃಪೆಯಿಂದ, ಯುದ್ಧದಲ್ಲಿ ಕೊಲ್ಲಲ್ಪಟ್ಟ ಎಲ್ಲಾ ಯೋಧರು ಒಂದು ರಾತ್ರಿಗಾಗಿ ಮರುಜೀವ ಪಡೆದರು ಎಂದು ಹೇಳಲಾಗಿದೆ. ಈ ರಾತ್ರಿಯೇ ಕರ್ಣ ತನ್ನ ತಾಯಿ ಕುಂತಿಯನ್ನು ಭೇಟಿಯಾದನು.
ಇದಾದ ಬಳಿಕ ಕರ್ಣನು ಸ್ವರ್ಗಸ್ಥನಾದನಂತೆ ಅಲ್ಲಿ ಆತನಿಗೆ ಆಹಾರದ ಬದಲು ಚಿನ್ನ, ಬಂಗಾರ, ವಜ್ರಗಳು ಸಿಕ್ಕವಂತೆ. ಇದನ್ನು ಕಂಡ ಕರ್ಣನು ಇಂದ್ರನ ಬಳಿ ಅಚ್ಚರಿಯಿಂದ ಕೇಳಿದನಂತೆ. ಇಂದ್ರನು ತನ್ನ ಜೀವಿತಾವಧಿಯಲ್ಲಿ ದಾನ ಧರ್ಮ ಮಾಡಿದ್ದನಂತೆ ಆದ್ರೆ ತನ್ನ ಪೂರ್ವಜರಿಗೆ ಆಹಾರ ನೀಡಲು ಆಗಲಿಲ್ಲವಂತೆ. ಇದರಿಂದ ಆತನಿಗೆ ಇದೊಂದು ಶಾಪವಾಗಿತ್ತಂತೆ. ಹೀಗಾಗಿ ಕರ್ಣನಿಗೂ ತನ್ನ ಪೋಷಕರಿಗೆ ಆಹಾರ ನೀಡಲು ಆಗಿರುವುದಿಲ್ಲ.
ಸೂತಪುತ್ರ ಮತ್ತು ದತ್ತು ಪಡೆದ ಮಗುವಾಗಿದ್ದರಿಂದ, ತನ್ನ ನಿಜವಾದ ವಂಶಾವಳಿಯ ಬಗ್ಗೆ ಆತ ತಿಳಿದಿರಲಿಲ್ಲ, ಆದ್ದರಿಂದ ಪೂರ್ವಜರಿಗೆ ತರ್ಪಣ ಅಥವಾ ಆಹಾರವನ್ನು ಅರ್ಪಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದನು. ಇಂದ್ರನ ಬಳಿಕ ಕರ್ಣನು ಭೂಲೋಕಕ್ಕೆ ತೆರಳಿ ತನ್ನ ಕಾರ್ಯ ಪೂರ್ಣ ಮಾಡಿ ಬರುವುದಾಗಿ ಕರ್ಣ ಮನವಿ ಮಾಡಿದನಂತೆ.
ಈ ಮನವಿಗೆ ಒಪ್ಪಿದ ಇಂದ್ರನು 16 ದಿನಗಳ ಕಾಲ ಭೂಮಿಗೆ ಮರಳಿ ಶ್ರಾದ್ಧ ಮಾಡಲು ಮುಂದಾದನಂತೆ. ಭಕ್ತಿಯಿಂದ ಪೂರ್ವಜರಿಗೆ ಆಹಾರ ಮತ್ತು ನೀರನ್ನು ಅರ್ಪಿಸಿದನು. ಈ ಘಟನೆಯು ಪಿತೃ ಪಕ್ಷವನ್ನು ಪ್ರಾರಂಭಿಸಿತು ಮತ್ತು ಆದ್ದರಿಂದ ಪಿತೃ ಪಕ್ಷವು 16 ದಿನಗಳ ಅವರೆ ಆಚರಿಸಲಾಗುತ್ತದೆ ಎಂಬುದು ತಿಳಿದುಬರಲಿದೆ.
ಶ್ರಾದ್ಧದ ಮುಖ್ಯ ನಿಯಮಗಳು
ತಿಥಿಯ ಮಹತ್ವ - ಪೂರ್ವಜರ ಶ್ರಾದ್ಧವನ್ನು ಅವರ ಮರಣ ದಿನಾಂಕದ ಪ್ರಕಾರ ಮಾಡಲಾಗುತ್ತದೆ. ದಿನಾಂಕ ತಿಳಿದಿಲ್ಲದಿದ್ದರೆ, ಅಮವಾಸ್ಯೆಯಂದು ಶ್ರಾದ್ಧವನ್ನು ಮಾಡುತ್ತಾರೆ.
ಮನೆ ಶುದ್ಧ: ಹಲವರು ಮನೆಯಲ್ಲಿ ಶ್ರಾದ್ಧ ಮಾಡುತ್ತಾರೆ ಅವರು ಮನೆಯನ್ನು ಮೊದಲು ಸ್ವಚ್ಛ ಮಾಡಬೇಕು. ಅನಂತರ ಪೂಜಾ ವಿಧಾನಗಳನ್ನು ಅನುಸರಿಸಬೇಕು. ಒಬ್ಬೊಬ್ಬರು ಅವರ ನಂಬಿಕೆಯಂತೆ ಪೂಜೆ ಮಾಡುತ್ತಾರೆ. ಹಲವರು ಪೂರ್ವಜರ ಫೋಟೋ ಬಳಸಿ ಪೂಜೆ ಮಾಡುತ್ತಾರೆ ಮತ್ತೆ ಹಲವು ಕಡೆ ಕೇವಲ ತೆಂಗಿನಕಾಯಿ ಇಟ್ಟು ಪೂಜೆ ಸಲ್ಲಿಸುವುದುಂಟು.
ಪಿಂಡದಾನ ಮತ್ತು ತರ್ಪಣ - ನೀರು, ಎಳ್ಳು ಮತ್ತು ಕುಶದಿಂದ ತರ್ಪಣ ಮಾಡಲಾಗುತ್ತದೆ ಮತ್ತು ಪಿಂಡದಾನವನ್ನು ಭಕ್ಷ್ಯಗಳೊಂದಿಗೆ ಮಾಡಲಾಗುತ್ತದೆ. ಇದು ಪೂರ್ವಜರಿಗೆ ಶಕ್ತಿ ಮತ್ತು ತೃಪ್ತಿಯನ್ನು ತಲುಪಿಸುವ ಮಾಧ್ಯಮವಾಗಿದೆ.



Click it and Unblock the Notifications












