Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
29 ವರ್ಷದಿಂದ 3 ಹೊತ್ತು ಉಚಿತ ಊಟ ನೀಡುವ ಏಕೈಕ ರೈಲಿದು..! ಯಾವ ಮಾರ್ಗ ಗೊತ್ತಾ?
ಭಾರತೀಯ ರೈಲ್ವೆ ಇಂದು ಬಹಳ ವೇಗವಾಗಿ ಬೆಳೆಯುತ್ತಿರುವ ವಲಯವಾಗಿ. ವಿಶ್ವದ ಅತ್ಯಂತ ದೊಡ್ಡ ನೌಕರರ ಹೊಂದಿರುವ ಹಾಗೆ ದೊಡ್ಡ ಸಂಪರ್ಕ ಜಾಲ ಹೊಂದಿರುವ ರೈಲ್ವೆ ಎಂವ ಹೆಗ್ಗಳಿಕೆ ಕೂಡ ಪಡೆದುಕೊಂಡಿದೆ. ಈಗ ವಂದೇ ಭಾರತ್, ಬುಲೆಟ್ ಟ್ರೈನ್, ಹೈಪರ್ ಲೂಪ್ ಸೇರಿದಂತೆ ಹೈ ಸ್ಪೀಡ್ ರೈಲಿನಂತರ ಹೊಸ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದೆ.
ಭಾರತೀಯ ರೈಲ್ವೆ ಹಲವು ವಿಚಾರಗಳಿಗೆ ಈಗ ಸುದ್ದಿಯಾಗುತ್ತಿದೆ. ಇತ್ತೀಚಿಗೆ ರೈಲ್ವೆಯಲ್ಲಿ ನೀಡಲಾಗುತ್ತಿರುವ ಆಹಾರ ಹಾಗೆ ರೈಲಿನಲ್ಲಿ ಸೀಟು ಸಿಗದೆ ಇರುವುದು ಸೇರಿ ಹಲವು ರೀತಿಯ ಸಮಸ್ಯೆಗಳಿಂದ ತುಂಬಿದ ಘಟನೆಗಳು ವರದಿಯಾಗುತ್ತಿವೆ. ಭಾರತದ ರೈಲ್ವೆ ಮೇಲ್ದರ್ಜೆಗೆ ಏರಿಸಿದ್ದರು ಕೂಡ ಅದರಿಂದ ಯಾವುದೇ ಪ್ರಯೋಜವಾಗದಿರುವುದು ಹಾಗೆ ಕೆಲವು ಕಡೆ ರೈಲು ಸಂಪರ್ಕ ಇಲ್ಲದಿರುವುದು ಸಹ ನೋಡಬಹುದು.

ಇನ್ನೊಂದು ಕಡೆ ರೈಲ್ವೆ ಜನರ ನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿರುವುದು. ಕಡಿಮೆ ದರದಲ್ಲಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವುದು. ಹಾಗೆ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿರುವ ಒಂದು ವಲಯವಾಗಿಯೂ ರೈಲ್ವೆ ಕಾಣಿಸಿಕೊಂಡಿದೆ. ಹಾಗೆ ಈಗ ಭಾರತೀಯ ರೈಲ್ವೆಯು ಪ್ರತಿ ದಿನ ಸುಮಾರು 2.5 ಕೋಟಿ ಪ್ರಯಾಣಿರನ್ನು ಹೊತ್ತು ಸಾಗಲಿದೆ. ಇದು ವಿಶ್ವದ ಯಾವುದೇ ರೈಲ್ವೆ ನೀವು ಹೋಲಿಸಿದರೂ ಇದು ಹೆಚ್ಚು.
ಭಾರತದಲ್ಲಿ ಈಗ 13,452 ರೈಲುಗಳು ಚಲಿಸುತ್ತಿವೆ ಎಂದು ತಿಳಿದುಬಂದಿದೆ. ಆದ್ರೆ ಇಷ್ಟು ರೈಲುಗಳಲ್ಲಿ ಕೇವಲ ಒಂದು ರೈಲು ಮಾತ್ರವೇ ಈಗ ವಿಶೇಷ ರೈಲು ಎನಿಸಿದೆ. ಹೌದು ಈ ರೈಲು ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಹಾಗೆ ರಾತ್ರಿ ಊಟವನ್ನು ಉಚಿತವಾಗಿ ನೀಡುತ್ತಿದೆ. ಅದರಲ್ಲೂ ಎಲ್ಲಾ ಪ್ರಯಾಣಿಕರಿಗೂ ಇದು ಉಚಿತ ಎಂಬುದು ನಿಮಗೆ ಗೊತ್ತಾ?
ಸಚ್ಖಂಡ್ ಎಕ್ಸ್‌ಪ್ರೆಸ್ (12715) ಎಂಬ ಹೆಸರಿನ ರೈಲು ಪ್ರತಿ ದಿನವು ಈ ರೀತಿ ಉಚಿತ ಊಟ, ಉಪಹಾರ ನೀಡುತ್ತದೆ. ಇದು ಮಹಾರಾಷ್ಟ್ರದ ನಾಂದೇಡ್ ಮತ್ತು ಪಂಜಾಬ್‌ನ ಅಮೃತಸರದ ನಡುವೆ ಕಾರ್ಯ ನಿರ್ವಹಿಸುತ್ತದೆ. ನಾಂದೇಡ್ ಹಾಗೂ ಈ ಪಂಜಾಬ್‌ನ ಅಮೃತಸರ ಸಿಖ್ಖರ ಪವಿತ್ರ ಭೂಮಿಯಾಗಿದೆ. ಹೀಗಾಗೀ ಈ ರೈಲಿನಲ್ಲಿ ನಿತ್ಯ ಸಾವಿರಾರು ಮಂದಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದು ನೋಡಬಹುದು. ಹೀಗಾಗಿ ಈ ರೈಲಿನಲ್ಲಿ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ.
ಸಚ್ಖಂಡ್ ಎಕ್ಸ್‌ಪ್ರೆಸ್ ಅಮೃತಸರದ ಶ್ರೀ ಹರ್ಮಂದರ್ ಸಾಹಿಬ್ ಗುರುದ್ವಾರದಿಂದ ನಾಂದೇಡ್‌ನಲ್ಲಿರುವ ಶ್ರೀ ಹಜೂರ್ ಸಾಹಿಬ್ ಗುರುದ್ವಾರಕ್ಕೆ ಚಲಿಸುತ್ತದೆ. ಕಳೆದ 29 ವರ್ಷಗಳಿಂದ ಈ ರೈಲು ತನ್ನ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡುತ್ತಾ ಬಂದಿದೆ. ಈ ಎರಡು ಪವಿತ್ರ ಸ್ಥಳಗಳ ನಡುವೆ ಸುಮಾರು 2 ಸಾವಿರ ಕಿ.ಮೀ ಅಂತರವಿದೆ. ಹಾಗೆ ಬರೋಬ್ಬರಿ 39 ನಿಲ್ದಾಣಗಳನ್ನು ದಾಟಲಿದೆ. ಇಂತಹ ಪ್ರಮುಖ ನಿಲ್ದಾಣಗಳಲ್ಲಿಯೂ ಈ ರೈಲು ಪ್ರಯಾಣಿಕರಿಗೆ ಸಾಮೂಹಿಕ ಊಟದ ವ್ಯವಸ್ಥೆ ಮಾಡುವುದು ಇದರ ಇನ್ನೊಂದು ವಿಶೇಷ ಎನ್ನಬಹುದು. ಹಾಗೆ ಈ ರೈಲು ಪ್ರಯಾಣವು ಸುಮಾರು 33 ಗಂಟೆ ತೆಗೆದುಕೊಳ್ಳಲಿದೆ.
ಸಾಮಾನ್ಯವಾಗಿ ಈ ರೈಲಿನಲ್ಲಿ ಅನ್ನ, ಚಪಾತಿ, ಚೋಲೆ, ದಾಲ್ ಖಿಚಡಿ, ಆಲೂಗಡ್ಡೆಯಿಂದ ಮಾಡಲಾದ ಹಲವು ಖಾದ್ಯಗಳ ನೋಡಬಹುದು. ಹಾಗೆ ಈ ರೈಲು ಪ್ರಯಾಣಿಕರು ತಮ್ಮದೇ ತಟ್ಟೆ ಹಾಗೂ ಲೋಟಗಳನ್ನು ಪ್ರಯಾಣದ ಸಮಯದಲ್ಲಿ ಬಳಸುವಂತೆ ಹೇಳಲಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿಯಾಗಿಯೂ ಗುರುತಿಸಿಕೊಂಡಿದೆ. ಇಂತಹ ಹಲವು ವಿಶೇಷತೆಗಳನ್ನು ಭಾರತೀಯ ರೈಲ್ವೆ ತನ್ನ ಬಳಿ ಇಟ್ಟುಕೊಂಡಿದೆ.



Click it and Unblock the Notifications
