Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೇತಾಜಿ ಬೋಸ್ ಅಗಲಿ ಇಂದಿಗೆ 80 ವರ್ಷ: ಜಪಾನ್ ದೇಗುಲದಲ್ಲಿ ಇಂದಿಗೂ ಅವರಿಗೆ ನಡೆಯುತ್ತೆ ಪೂಜೆ
ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಲಕ್ಷಾಂತರ ಹೋರಾಟಗಾರರ ಬಲಿದಾನವಿದೆ. ಅದ್ರಲ್ಲೂ ದೇಶದ ಯುವ ಜನತೆಯಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕ್ರಾಂತಿಕಾರಿಗಳ ಸಂಖ್ಯೆ ಕಡಿಮೆ ಏನಿಲ್ಲಾ. ಇದರಲ್ಲಿ ಅಗ್ರ ಸ್ಥಾನದಲ್ಲಿ ಕೇಳಿಬರುವ ಹೆಸರು ನೇತಾಜಿ ಸುಭಾಷ್ ಚಂದ್ರ ಬೋಸ್. ಭಾರತದ ಸ್ವಾತಂತ್ರ್ಯದ ಕಿಡಿ ಬೆಂಕಿಯಾಗಿ ರೂಪುಗೊಳ್ಳಲು ಬೋಸ್ ಕೂಡ ಕಾರಣರಾಗಿದ್ರು.
ಅವರು ನಿಧನರಾಗಿ ಇಂದಿಗೆ ಬರೋಬ್ಬರಿ 80 ವರ್ಷ. 1897ರ ಜನವರಿ 23ರಂದು ಜನಿಸಿದ್ದ ಅವರು 1945 ಆಗಸ್ಟ್ 18ರಂದು ನಿಧನರಾದರು. ಒಡಿಶಾದ ಕಟಕ್ ನಗರದಲ್ಲಿ ಜನಿಸಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಆದ್ರೆ ಅಹಿಂಸೆಯಿಂದ ಮಾತ್ರವೇ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂದು ನಂಬಿದ್ದ ಅವರು ಬಳಿಕ ಕ್ರಾಂತಿಕಾರಿ ಹೋರಾಟಗಳ ಮಾಡಿದ್ದರು.

ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಅವರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಜಪಾನ್ ಸಹಾಯದಿಂದ ಆಜಾದ್ ಹಿಂದ್ ಫೌಜ್ ಅನ್ನು ರಚಿಸಿದರು. ಅವರು ನೀಡಿದ ಜೈ ಹಿಂದ್ ಘೋಷಣೆಯು ಭಾರತದ ರಾಷ್ಟ್ರೀಯ ಘೋಷಣೆಯಾಗಿ ಮಾರ್ಪಟ್ಟಿದೆ. ಆಗಸ್ಟ್ 18, 1945 ರಂದು ಎರಡನೇ ಮಹಾಯುದ್ಧ ಮುಗಿದ ಮೂರು ದಿನಗಳ ನಂತರ, ನೇತಾಜಿ ಸುಭಾಷ್ ಚಂದ್ರ ಬೋಸ್ ತೈಪೆಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.
ಅವರ ಅವಶೇಷಗಳನ್ನು ಅಲ್ಲಿಯೇ ದಹನ ಮಾಡಿ ಜಪಾನ್‌ನ ಟೊಕಿಯೋಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ನೆಲೆಸಿದ್ದ ಭಾರತೀಯ ಸಮುದಾಯವು ತಾತ್ಕಾಲಿಕವಾಗಿ ರೆಂಕೋಜಿ ದೇವಾಲಯದಲ್ಲಿ ಬೋಸ್ ಅವರ ಚಿತಾಭಸ್ಮವನ್ನು ಇಡಲು ವ್ಯವಸ್ಥೆ ಮಾಡಿತು. ಆದ್ರೆ ಇಂದಿಗೂ ಅವರ ಚಿಯಾಭಸ್ಮ ಹಾಗೂ ಅವಶೇಷವು ಇನ್ನೂ ರೆಂಕೋಜಿ ದೇವಾಲಯದಲ್ಲಿ ಗೌರವಿಸಲಾಗುತ್ತದೆ.
ನೇತಾಜಿ ಸಾವಿನ ಸುತ್ತ ಅನುಮಾನಗಳೇಕೆ?
ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಬಳಿಕ ಅವರ ಸಾವಿನ ಸುತ್ತಲು ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡಿತು. ಅದ್ರಲ್ಲೂ ನೇತಾಜಿ ಈ ವಿಮಾನ ಅಪಘಾತದಲ್ಲಿ ಬದುಕುಳಿದರು ಎಂಬುದು ದೊಡ್ಡ ಸುದ್ದಿಯಾಯಿತು. ಹಾಗೆ ಅವರು ಹಿಮಾಲಯದಲ್ಲಿ ನೆಲೆಸಿದರು ಎಂದು ಕೂಡ ಹಲವು ನಂಬಿದ್ದಾರೆ, ಆದ್ರೆ ಅವರು ಮೃತಪಟ್ಟಿರುವುದಾಗಿ ದೃಢಿಕೃತ ವರದಿಗಳಾದವು.
ಅವರ ಅವಶೇಷಗಳು ಮರಳಿ ಬರಲಿಲ್ಲ ಏಕೆ?
ನೇತಾಜಿ ಮೃತಪಟ್ಟ ಬಳಿಕ ಅವರ ಅವಿಶೇಷಗಳನ್ನು ವಾಪಾಸು ತರಲು ಹತ್ತಾರು ಬಾರಿ ಪ್ರಯತ್ನಿಸಲಾಯಿತು. ಜಪಾನ್ ಸರ್ಕಾರವು ಭಾರತ ಸರ್ಕಾರದೊಂದಿಗೆ ಹಲವು ಬಾರಿ ಈ ಕುರಿತ ಮಾತುಕತೆ ನಡೆಸಿತ್ತು. 1990 ರ ದಶಕದಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಅವರ ವಿದೇಶಾಂಗ ಸಚಿವ, ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನೇತಾಜಿಯವರ ಪತ್ನಿ, ಮಗಳ ಬೆಂಬಲದೊಂದಿಗೆ, ಬೋಸ್ ಅವಶೇಷಗಳನ್ನು ಹಿಂದಿರುಗಿಸಲು ಪ್ರಯತ್ನಗಳು ನಡೆಯುತ್ತಿರುವಾಗಲೇ ಸರ್ಕಾರ ಪತನವಾಯಿತು. ಹೀಗಾಗಿ ಈ ಪ್ರಯತ್ನಕ್ಕೆ ಬ್ರೇಕ್ ಬಿದ್ದಿತು.
ಹಾಗೆ ನೇತಾಜಿಯವರ ಸಾವಿನ ಸಂದರ್ಭಗಳನ್ನು ಮತ್ತೊಮ್ಮೆ ಪರಿಶೀಲಿಸಲು 1999 ರಲ್ಲಿ ನ್ಯಾಯಮೂರ್ತಿ ಮುಖರ್ಜಿ ತನಿಖಾ ಆಯೋಗವನ್ನು ಸ್ಥಾಪಿಸಲು ಇತರ ಅನುಯಾಯಿಗಳು ಮತ್ತು ಕುಟುಂಬ ಸದಸ್ಯರ ಕೋರಿಕೆಗೆ ಸಮ್ಮತಿಸಿತು. 6 ವರ್ಷದ ಬಳಿಕ ವರದಿ ಸಿದ್ದವಾದರೂ ಈ ವರದಿಯನ್ನು ಸರ್ಕಾರವೇ ತಿರಸ್ಕರಿಸಿತು.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ನೇತಾಜಿ ಅವರ ಸಾವಿನ ಕುರಿತಾಗಿ ದೃಢೀಕೃತ ದಾಖಲೆಗಳ ಬಿಡುಗಡೆ ಮಾಡಿದರು. ಹಾಗೆ ಅವರ ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಬಹಿರಂಗಪಡಿಸಿದರು. ಹಾಗೆ ಗುಮ್ನಾಮಿ ಬಾಬಾ ಅವರ ಡಿಎನ್‌ಎ ಹಾಗೂ ನೇತಾಜಿ ಕುಟುಂಬಸ್ಥರ ಡಿಎನ್‌ಎ ಒಂದೇ ಆಗಿಲ್ಲ ಎಂಬ ವರದಿ ಬಂದಿತ್ತು, ಹೀಗಾಗಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ಹಲವು ವರದಿಗಳಲ್ಲಿ ತಿಳಿದುಬಂದಿತು.



Click it and Unblock the Notifications











