Latest Updates
-
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ!
ಅಂಬಾನಿ, ಅದಾನಿ ಯಾರು ಅಲ್ಲ..! ಸ್ವಂತ ರೈಲು ಹೊಂದಿದ್ದ ಈ ರೈತ.!!
ವಿಶ್ವದ ಶ್ರೀಮಂತ ವ್ಯಕ್ತಿ ಯಾರು ಅಂತ ಕೇಳಿದ್ರೆ ಥಟ್ ಅಂತ ಎಲ್ಲರು ಎಲಾನ್ ಮಸ್ಕ್, ಜೆಫ್ ಬೆಜೋಸ್ ಎನ್ನುತ್ತೇವೆ. ಹಾಗೆ ಭಾರತದ ಶ್ರೀಮಂತರು ಯಾರು ಅಂದ್ರೆ ಅಂಬಾನಿ, ಅದಾನಿ, ರತನ್ ಟಾಟಾ ಎಂಬ ಉತ್ತರ ಬರುತ್ತೆ. ಇದು ಸರಿ ಕೂಡ ಹೌದು. ಆದ್ರೆ ಇವರು ಯಾರು ಹೊಂದಿರದ ವಸ್ತುವೊಂದನ್ನ ವ್ಯಕ್ತಿಯೊಬ್ಬ ಹೊಂದಿದ್ದ.
ಇವರೆಲ್ಲರು ತಮ್ಮ ತಮ್ಮ ಸ್ವಂತ ಬಳಕೆಗಾಗಿ ಸ್ವಂತ ವಿಮಾನಗಳನ್ನು ಹೊಂದಿದ್ದಾರೆ. ಅದಾನಿ ತಮ್ಮದೇ ಏರ್‌ಪೋರ್ಟ್‌ಗಳನ್ನೇ ಹೊಂದಿರುವ ವ್ಯಕ್ತಿ. ಆದ್ರೆ ಇವರು ಯಾರು ಸ್ವಂತ ರೈಲನ್ನು ಹೊಂದಿಲ್ಲ. ಆದ್ರೆ ಭಾರತದಲ್ಲೊಬ್ಬ ರೈತ ಸ್ವಂತ ರೈಲು ಹೊಂದಿದ್ದ. ಈ ವಿಚಾರ ಕೇಳಿ ನಿಮಗೂ ಅಚ್ಚರಿಯಾಗಬಹುದು. ಆದ್ರೆ ಭಾರತದ ಒಬ್ಬ ರೈತ ತನ್ನ ಸ್ವಂತ ರೈಲು ಹೊಂದಿದ್ದ.

ಈ ಘಟನೆ ನಡೆದಿರುವುದೇ ದೊಡ್ಡ ಅಚ್ಚರಿಯ ಸಂಗತಿ. ಇದು 2007ರಲ್ಲಿ ಆರಂಭಗೊಂಡಿದ್ದ ಒಂದು ಘಟನೆ. ಇಲ್ಲಿನ ಪಂಜಾಬ್ ಪ್ರಾಂತ್ಯದ ರೈತನೊಬ್ಬ ಕೋರ್ಟ್ ಮೆಟ್ಟಿಲು ಏರಿ ತನ್ನ ಸ್ವಂತಕ್ಕೆ ರೈಲನ್ನೇ ಹೊಂದಿಬಿಟ್ಟಿದ್ದ. 2007 ರಲ್ಲಿ ಲುಧಿಯಾನ-ಚಂಡೀಗಢ ರೈಲು ಮಾರ್ಗವನ್ನು ನಿರ್ಮಿಸಲು ರೈಲ್ವೆ ಇಲಾಖೆ ಈ ರೈತನ ಭೂಮಿ ತೆಗೆದುಕೊಂಡಿತ್ತು. ಅಲ್ಲಿಂದ ಈ ತಿರುವು ಪಡೆದುಕೊಂಡಿತ್ತು.
ಆತನ ಹೆಸರು ಕಟಾನಾ ಸಿಂಗ್, ಲೂಧಿಯಾನದ ರೈತನಾಗಿರುವ ಆತ ರೈಲ್ವೆ ಇಲಾಖೆಯ ಒಪ್ಪಂದದಂತೆ 42 ಲಕ್ಷ ರೂಪಾಯಿ ಪಡೆದಿದ್ದರು. ಆದರೆ ರೈಲ್ವೆ ಈ ಜಮೀನಿಗೆ 1.05 ಕೋಟಿ ರೂಪಾಯಿ ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದರು. ಈ ವೇಳೆಗಾಗಲೇ ಪರಿಹಾರ ಧನ 50 ಲಕ್ಷ ರೂಪಾಯಿ ಹೆಚ್ಚಾಗಿತ್ತು. ಆದರೆ ರೈಲ್ವೆ ಇಷ್ಟೊಂದು ಹಣ ನೀಡಲು ನಿರಾಕರಿಸಿತ್ತು.
ಇಷ್ಟು ಹಣ ಭೂಮಿ ನೀಡಿದರೆ ರೈಲ್ವೆ ನಷ್ಟಕ್ಕೆ ಅನುಭವಿಸುತ್ತದೆ ಎಂದು ವಾದ ಮಂಡಿಸಿತ್ತು, ಹೀಗಾಗಿ ಕೋರ್ಟ್ ರೈಲ್ವೆ ಇಲಾಖೆ ವಿಳಂಭ ಮಾಡುತ್ತಿದೆ ಎಂದು ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ನೀಡಲು ಆಗ್ರಹಿಸಿತು. ಹಾಗೆ ನವದೆಹಲಿ ಮತ್ತು ಅಮೃತಸರ ನಡುವೆ ಪ್ರತಿದಿನ ಚಲಿಸುವ ರೈಲು ಹೆಚ್ಚುವರಿಯಾಗಿ ಸಿಂಗ್ ಅವರಿಗೆ ಲುಧಿಯಾನ ರೈಲ್ವೆ ಸ್ಟೇಷನ್ ಮಾಸ್ಟರ್ ಕಚೇರಿಯ ಮಾಲೀಕತ್ವವನ್ನು ನೀಡಲಾಯಿತು.
ಹೀಗಾಗಿ ಭಾರತದಲ್ಲಿ ಸ್ವಂತ ರೈಲ್ವೆ ಹೊಂದಿದ್ದ ಏಕೈಕ ವ್ಯಕ್ತಿಯಾದರು. ಈ ರೈಲು ಯಾವುದೇ ಅಡ್ಡಿಯಿಲ್ಲದೆ ಸಂಚರಿಸುತ್ತಿತ್ತು. ರೈಲ್ವೆ ಇಲಾಖೆ ಸಂಪೂರ್ಣ ಹಣ ನೀಡುವವರೆಗೂ ಅವರ ಹೆಸರಿನಲ್ಲಿಯೇ ಈ ನಿಲ್ದಾಣ ಸಹ ಇತ್ತು.
ಮೊದಲ ಸ್ವಂತ ವಿಮಾನ ಹೊಂದಿದ್ದು ಯಾರು?
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಂತ ವಿಮಾನ ಹೊಂದಿದ್ದು ಯಾವುದೇ ಉದ್ಯಮಿಯಲ್ಲ, ಬದಲಿಗೆ ಒಬ್ಬ ರಾಜ. ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಖಾಸಗಿ ಜೆಟ್ ಹೊಂದಿದ್ದ ಮೊದಲ ಭಾರತೀಯ. 1910ರಲ್ಲಿ, ಮಹಾರಾಜ ಭೂಪಿಂದರ್ ಸಿಂಗ್ ಖಾಸಗಿ ಜೆಟ್ ಅನ್ನು ಹೊಂದಿದ್ದ ಮೊದಲ ಭಾರತೀಯರಾದರು. ಅವರು ನೇರವಾಗಿ ಇಂಗ್ಲೆಂಡ್‌ನಿಂದಲೇ ವಿಮಾನವನ್ನು ಖರೀದಿಸಿದರು ಜೊತೆಗೆ ಪಟಿಯಾಲದಲ್ಲಿ ಏರ್‌ಸ್ಟ್ರಿಪ್ ಅನ್ನು ನಿರ್ಮಿಸಿದರು. ಈ ಮೂಲಕ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು.
ಮಹಾರಾಜ ಭೂಪಿಂದರ್ ಸಿಂಗ್ ಅವರು ಆಡಳಿತಗಾರ ಮಾತ್ರವಲ್ಲದೆ ಅತ್ಯಾಸಕ್ತಿಯ ಕ್ರಿಕೆಟಿಗರೂ ಆಗಿದ್ದರು. ಅವರ ತಂಡ, ಪಟಿಯಾಲ XI, ಅದರ ಯುಗದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು ಎಂಬ ಉಲ್ಲೇವಿದೆ. ಹಾಗೆ ಸ್ವಂತ ವಿಮಾನ ಹೊಂದಿದ್ದ ಏಕೈಕ ಕ್ರಿಕೆಟರ್ ಕೂಡ ಇವರೇ ಆಗಿದ್ದಾರೆ. ಇದಾದ ಬಳಿಕ ಈಗ ಹಲವು ಉದ್ಯಮಿಗಳು ತಮ್ಮ ಅನುಕೂಲಕ್ಕಾಗಿ ಜೆಟ್ ವಿಮಾನಗಳನ್ನು ಹೊಂದಿರುವುದು ನಾವು ನೋಡಬಹುದು.



Click it and Unblock the Notifications