Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಗಲಿನಲ್ಲೂ ಜನರ ಕಾಡುವ ಬ್ರಹ್ಮ ರಾಕ್ಷಸರು ಯಾರು..? ಘೋರ ರಾಕ್ಷಸನ ಕಥೆ ಗೊತ್ತಾ?
ಭಾರತೀಯ ಪುರಾಣಗಳಲ್ಲಿ ಅನೇಕ ರಾಕ್ಷಸರು ಮತ್ತು ದೇವರುಗಳ ನಡುವಿನ ಕದನವನ್ನು ನಾವು ಕೇಳಿದ್ದೇವೆ. ಲೋಕಕಲ್ಯಾಣಕ್ಕಾಗಿ ದೇವರುಗಳು ಬೇರೆ ರೂಪದಲ್ಲಿ ಜನ್ಮ ತಳೆದು ಆ ರಾಕ್ಷಸರ ಸಂಹಾರ ಮಾಡಿರುವ ನೂರಾರು ಕಥೆಗಳನ್ನು ನಾವು ಕೇಳಿದ್ದೇವೆ. ಭೂ ಲೋಕದ ಮೇಲೆ ಹಾಗೂ ದೇವ ಲೋಕದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಎಲ್ಲಾ ರಾಕ್ಷಸರ ಸಂಹಾರ ಮಾಡಿದ ಕಥೆಗಳಿವೆ.
ಆದರೆ ಕೆಲ ರಾಕ್ಷಸರು ಭೂ ಲೋಕದಲ್ಲಿ ಪೂಜಿಸಲ್ಪಟ್ಟರು. ಹಾಗೆ ಅವರು ದೇವರಿಂದ ವರಗಳ ಪಡೆದು ಭೂಲೋಕದಲ್ಲಿ ಪೂಜಿಸಲ್ಪಟ್ಟರು. ಅಂತಹ ಓರ್ವ ರಾಕ್ಷಸ ಎಂದರೆ ಬ್ರಹ್ಮ ರಾಕ್ಷಸ, ಈ ಬ್ರಹ್ಮ ರಾಕ್ಷಸ ಯಾರು? ಇವನಿಗೆ ದೇವಾಲಯ ನಿರ್ಮಿಸಿದ್ದು ಏಕೆ? ಯಾವ ಕಾರಣಕ್ಕೆ ಬ್ರಹ್ಮ ರಾಕ್ಷಸನ ಪೂಜಿಸಲಾಗುತ್ತದೆ ಎಂಬ ಕುರಿತು ಇಲ್ಲಿದೆ ಮಾಹಿತಿ.

ಬ್ರಹ್ಮ ರಾಕ್ಷಸರು ಯಾರು?
ಬ್ರಹ್ಮ ರಾಕ್ಷಸರು ಭೂ ಲೋಕದಲ್ಲಿ ಜನ್ಮ ತಳೆದು ಜನರನ್ನು ಹಿಂಸಿಸಿದವರು, ಅಲ್ಲದೆ ಅತ್ಯಂತ ಕೆಟ್ಟ ಜೀವನವನ್ನು ನಡೆಸಿದ ಮತ್ತು ಅಸಹಜ ಮರಣವನ್ನು ಹೊಂದಿದ ಬೌದ್ಧಿಕ ಬ್ರಾಹ್ಮಣರ ಆತ್ಮಗಳು ಎನ್ನಲಾಗುತ್ತದೆ. ಕೆಲವು ದೇವಾಲಯಗಳಲ್ಲಿ ಬ್ರಹ್ಮ ರಾಕ್ಷಸರಿಗೆ ಪ್ರತ್ಯೇಕ ಸ್ಥಳವನ್ನು ನಿರ್ಮಿಸಲಾಗಿದೆ.
ಬ್ರಹ್ಮ ರಾಕ್ಷಸರ ಪುಣ್ಯ
ಬ್ರಹ್ಮ ರಾಕ್ಷಸರು ಪುರುಷ ಅಥವಾ ಸ್ತ್ರೀಯಾಗಿರಬಹುದು ಆದರೆ ವಿದ್ಯಾವಂತ ಬ್ರಾಹ್ಮಣನ ಆತ್ಮ ಮಾತ್ರ ಆಗಿರಲಿದೆಯಂತೆ. ಬ್ರಹ್ಮ ಎಂದರೆ ಅವರು ಬ್ರಾಹ್ಮಣರು ಮತ್ತು ರಾಕ್ಷಸ ಎಂದರೆ ಅವರ ದುಷ್ಟ ಗುಣಗಳು. ಅವರಿಗೆ ವೇದ ಮತ್ತು ಪುರಾಣಗಳ ಎಲ್ಲಾ ಜ್ಞಾನವಿರುತ್ತದೆ. ಆದರೆ ಅದರೊಂದಿಗೆ ಅವರು ಇತರರನ್ನು ಹಿಂಸಿಸುವ ಮತ್ತು ಜನರನ್ನು ತಿನ್ನುವಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಶಕ್ತಿಯುತ ದುಷ್ಟರು
ಬ್ರಹ್ಮ ರಾಕ್ಷಸರು ಬಹಳ ಶಕ್ತಿಶಾಲಿಗಳಾಗಿರುತ್ತಾರೆ. ಅವರು ಪ್ರೀತಿಸುವವರಿಗೆ ಸಂಪತ್ತು ಮತ್ತು ಸಂತೋಷವನ್ನು ನೀಡಬಹುದು. ತಮ್ಮನ್ನು ದ್ವೇಷಿಸುವವರಿಗೆ ಅವರು ನರಕಕ್ಕಿಂತ ಕೆಟ್ಟ ಶಿಕ್ಷೆಯನ್ನು ವಿಧಿಸಬಹುದು. ಅವರು ತಮ್ಮ ಹಿಂದಿನ ಜೀವನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಮತ್ತು ಆದ್ದರಿಂದ ಅವರು ತಮ್ಮ ಹಿಂದಿನ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳಬಹುದು.
ಬ್ರಹ್ಮ ರಾಕ್ಷಸರ ಕಥೆ
7 ನೇ ಶತಮಾನದಲ್ಲಿ, ಪ್ರಸಿದ್ಧ ಸಂಸ್ಕೃತ ಕವಿ ಮಯೂರ್ಪಾದರು ಸೂರ್ಯ ಸತಕಂ ಎಂಬ ಮಹಾನ್ ಗ್ರಂಥ ರಚಿಸಿದರು. ಸೂರ್ಯನನ್ನು ಹೇಗೆ ಪೂಜಿಸಬೇಕು ಎಂಬುದನ್ನು ವಿವರಿಸುವ ಗ್ರಂಥ ಇದಾಗಿದೆ. ಬಿಹಾರದ ಸುಪ್ರಸಿದ್ಧ ದೇವು ಸೂರ್ಯ ದೇವಾಲಯದಲ್ಲಿರುವ ರಾಜವೃಕ್ಷದ ಕೆಳಗೆ ಕುಳಿತು ಅವರು ಈ ಗ್ರಂಥ ಬರೆದರಂತೆ. ಅದೇ ಮರದಲ್ಲಿದ್ದ ಬ್ರಹ್ಮ ರಾಕ್ಷಸನು ತನ್ನ ಹಾಡುಗಳನ್ನು ಪುನರಾವರ್ತಿಸಿ ಅವನನ್ನು ವಿಚಲಿತಗೊಳಿಸಿದ್ದನು ಎಂದು ಹೇಳಲಾಗಿದೆ. ಬ್ರಹ್ಮ ರಾಕ್ಷಸನನ್ನು ಸೋಲಿಸಲು, ಮಯೂರ್ಬಟ್ಟನು ತನ್ನ ಮೂಗಿನಿಂದ ಮಂತ್ರವನ್ನು ಪಠಿಸಲು ಪ್ರಾರಂಭಿಸಿದನು. ಬ್ರಹ್ಮ ರಾಕ್ಷಸನಂತಹ ಆತ್ಮಗಳಿಗೆ ಮೂಗುಗಳಿರುವುದಿಲ್ಲ. ಆದುದರಿಂದ ಬ್ರಹ್ಮದೇವನಿಗೆ ಮಯೂರಭಟ್ಟನು ಹೇಳಿದ ಮಂತ್ರವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಇದರಿಂದ ಸೋತ ಬ್ರಹ್ಮ ರಾಕ್ಷಸ ಆ ಸ್ಥಳವನ್ನು ಬಿಟ್ಟು ತೆರಳಿದ ಎಂಬ ಕಥೆಯಿದೆ. ಹೀಗಾಗಿ ನೀವು ಎಲ್ಲಿಯಾದರೂ ಹೊರಗೆ ಹೋದಾಗ ನಿಮ್ಮನ್ನು ಯಾರಾದರು ಹಿಂಬಾಲಿಸುತ್ತಿದ್ದಾರೆ ಎಂದು ಅನಿಸಿದರೆ ನೀವು ಮೂಗಿನಿಂದ ಮಾತನಾಡಬೇಕು ಎಂಬ ಕಥೆ ಹುಟ್ಟಿಕೊಂಡಿದೆ.
ದೇವಸ್ಥಾನಗಳಲ್ಲಿ ಪೂಜೆ ಏಕೆ?
ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಬ್ರಹ್ಮ ರಾಕ್ಷಸರು ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅವರು ದೇವಾಲಯವನ್ನು ನಿರ್ಮಿಸುವ ವೇಳೆ ತೊಂದರೆಗಳ ನೀಡುತ್ತಾರಂತೆ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ತೊಂದರೆ ನೀಡದಿರಲು ಅವರನ್ನು ಪೂಜಿಸುವುದಾಗಿ ಬೇಡಿಕೊಂಡರೆ ಯಾವ ಸಮಸ್ಯೆಯನ್ನೂ ಮಾಡುವುದಿಲ್ಲವಂತೆ.
ಬ್ರಹ್ಮ ರಾಕ್ಷಸ ದೇವಾಲಯ
ಕೇರಳದ ತಿರುನಗರ ಶಿವ ದೇವಾಲಯವು ಬ್ರಹ್ಮ ರಾಕ್ಷಸನಿಗೆ ಮೀಸಲಾದ ಪ್ರತ್ಯೇಕ ದೇವಾಲಯವನ್ನು ಹೊಂದಿದೆ. ಅದರ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಈ ಪ್ರದೇಶವನ್ನು ಆಳಿದ ರಾಜ ಕುರೂಪಿಯಾಗಿದ್ದನಂತೆ ಅವನ ಆಪ್ತ ಸ್ನೇಹಿತ ಮೂಸಾ ಹೆಚ್ಚು ಸುಂದರನಾಗಿದ್ದನಂತೆ. ಇದರಿಂದ ರಾಣಿಗೆ ಅವನ ಮೇಲೆ ಪ್ರೀತಿ ಹುಟ್ಟಿತು. ಇದು ರಾಜನಿಗೆ ಕೋಪ ತಂದಿತ್ತು. ರಾಜನು ತನ್ನ ಸ್ನೇಹಿತ ಮೂಸಾನನ್ನು ಕೊಲ್ಲಲು ಆದೇಶಿಸಿದನು. ಆದರೆ ಸೈನಿಕರು ಮೂಸಾ ಎಂದು ತಿಳಿದು ದೇವಾಲಯದ ಅರ್ಚಕರನ್ನು ಕೊಂದರು. ಮೃತ ಅರ್ಚಕರ ಪತ್ನಿ ತನ್ನ ಸಾವಿನ ಬಳಿಕ ಬ್ರಹ್ಮ ರಾಕ್ಷಸನಾಗಿ ಎಲ್ಲರನ್ನೂ ಪೀಡಿಸುತ್ತಾಳೆ. ರಾಜನು ಅವನ ಈ ಆತ್ಮವನ್ನು ಶಾಂತಗೊಳಿಸಲು ದೇವಾಲಯವನ್ನು ನಿರ್ಮಿಸಿದನು.



Click it and Unblock the Notifications