Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜೈಸಲ್ಮೇರ್‌ನಲ್ಲಿ ಸರಸ್ವತಿ ನದಿ ಮತ್ತೆ ಉಕ್ಕಿತ್ತಾ..? ಈ ಘಟನೆ ಸತ್ಯ ಏನು ಗೊತ್ತಾ?
ನೀವು ಹಿಂದೂ ಪುರಾಣಗಳಲ್ಲಿ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಸರಸ್ವತಿ ನದಿ ಅಸ್ಥಿತ್ವ ಕುರಿತು ಇಂದಿಗೂ ಹಲವು ಪ್ರಶ್ನೆಗಳು ಬಗೆಹರಿಯದಷ್ಟು ಕುತೂಹಲಗಳಿವೆ. ಭಾರತದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ ಪವಿತ್ರ ನದಿ ಎಂದು ಸರಸ್ವತಿ ನದಿಯ ಕರೆಯಲಾಗಿದೆ. ಋಗ್ವೇದ ಕಾಲದಲ್ಲಿ
ಇದರ ಉಲ್ಲೇಖ ಇದ್ದು, ನದಿ ಹರಿವು ಈಗ ಸಂಪೂರ್ಣ ಬತ್ತಿ ಹೋಗಿದೆ ಎಂಬುದಾಗಿ ನಂಬಲಾಗಿದೆ. ಹಲವು ಪುರಾಣಗಳಿಗೂ ಈ ನದಿಗೂ ಸಂಬಂಧವಿದೆ ಎಂಬ ನಂಬಲಾಗಿದೆ.

ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಈ ನದಿ ಬತ್ತಿ ಹೋಗಿದೆ ಎಂದು ನಂಬಲಾಗಿದೆ. ಹಾಗೆ ಈಗೊಂದು ವಿಡಿಯೋದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸರಸ್ವತಿ ನದಿ ಏಕಾಏಕಿ ಮೇಲೆದ್ದು ಬಂದು ಮರುಭೂಮಿಯಾಗಿರುವ ರಾಜಸ್ಥಾನದಲ್ಲಿ ಹರಿಯಲು ಆರಂಭಿಸಿದೆ ಎಂಬ ವಿಡಿಯೋ ಇದಾಗಿದೆ.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ರೈತರೊಬ್ಬರು ಬೋರ್ ವೆಲ್ ಕೊರೆಸುತ್ತಿರುವಾಗ ಏಕಾಏಕಿ ನೀರು ಚಿಮ್ಮಿ ನದಿಯಾಗಿ ರೂಪುಗೊಂಡು ಬೋರ್ ಕೊರೆಯುವ ಲಾರಿ ಆ ದೊಡ್ಡ ಕುಳಿಯಲ್ಲಿ ಸಿಲುಕಿದ ಘಟನೆ ನಡೆದಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸರಸ್ವತಿ ನದಿಯ ಹರಿವಿನ ಬಗ್ಗೆ ಮತ್ತೆ ಚರ್ಚೆಗಳು ಮುನ್ನಲೆಗೆ ಬಂದಿದೆ.
ಈ ವಿಚಿತ್ರ ಘಟನೆ ನೋಡಲು ಇಡೀ ಗ್ರಾಮಸ್ಥರು ನೆರೆದ್ದಿದ್ದರು. ಭೂಮಿ ಒಳಗಿಂದ ನೀರು ಧುಮುಕುವುದನ್ನು ಕಂಡು ನಿಬ್ಬೆರಗಾದರು, ಈ ನೀರು ಇಡೀ ಗ್ರಾಮವನ್ನೇಲ್ಲಾ ಆವರಿಸಿಕೊಂಡು ಪ್ರವಾಹದಂತೆ ಕಾಣುತ್ತಿತ್ತು. ಈ ಘಟನೆ ನಡೆದು ಇಂದಿಗೆ ಮೂರಕ್ಕೂ ಹೆಚ್ಚು ದಿನ ಕಳೆದಿದ್ದು ಈಗ ನೀರು ಹರಿಯುವಿಕೆ ಸಂಪೂರ್ಣ ನಿಂತು ಬಿಟ್ಟಿದೆ.
ಹೌದು ಸರಸ್ವತಿ ನದಿ ಹರಿಯುತ್ತಿದೆ ಎಂದು ವಾದಿಸುತ್ತಿರುವಾಗ ಭೂಮಿಯಿಂದ ಹೊರಬರುತ್ತಿದ್ದ ನೀರು ಈಗ ಸಂಪೂರ್ಣ ನಿಂತಿದೆ. ಹೀಗಾಗಿ ಇದು ನದಿಯ ಮೂಲ ಅಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾದ್ರೆ ಇಷ್ಟೊಂದು ಪ್ರಮಾಣದ ನೀರು ಮರುಭೂಮಿಯಲ್ಲಿ ಸಿಕ್ಕಿದ್ದೇಗೆ? ಅಲ್ಲಿ ನಡೆದಿರುವ ಅಚ್ಚರಿ ವಿಚಾರ ಏನು ಎಂಬುದನ್ನು ನಾವಿಂದು ವಿವರಿಸುತ್ತೇವೆ ನೋಡಿ.
ಬೋರ್‌ವೆಲ್ ಅಗೆಯುವ ವೇಳೆ ಏಕಾಏಕಿ ಒತ್ತಡದಿಂದ ನೀರು ಮತ್ತು ಅನಿಲ ಹೊರಬಿದ್ದಿರುವ ಬಗ್ಗೆ ತನಿಖೆ ನಡೆಸಿ ಅದರ ಕಾರಣಗಳನ್ನು ಪತ್ತೆ ಮಾಡಲಾಗುವುದು ಎಂದು ರಾಜಸ್ಥಾನದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ (ಪಿಎಚ್‌ಇಡಿ) ತಿಳಿಸಿದೆ. ಅಂದರೆ ಬೋರ್‌ವೆಲ್ ಕೊರೆಯುವಾಗ ನದಿ ಉಗಮವಾಗಿಲ್ಲ ಬದಲಿಗೆ ಅನಿಲ ಹಾಗೂ ನೀರು ಏಕಾಏಕಿ ಉಕ್ಕಿ ಬಂದಿದೆ ಎಂದು ತಿಳಿಸಿದೆ.
ಹೊಂಡ ಮಾಡಲಾದ ನೆಲದಿಂದ ಅನಿಲದ ಜೊತೆಗೆ ನೀರಿನ ಹರಿವು ಆಗಸ್ಕೆ ಚಿಮ್ಮಿತ್ತು. ಭಾನುವಾರ ರಾತ್ರಿಯಿಂದ ಭೂಮಿಯಿಂದ ಹೊರಬರುವ ನೀರು ಮತ್ತು ಅನಿಲದ ಹರಿವು ನಿಂತಿದೆ. ಜಿಲ್ಲಾಡಳಿತವು ಪ್ರದೇಶದ 500 ಮೀಟರ್ ಒಳಗೆ ಯಾವುದೇ ವ್ಯಕ್ತಿ ಅಥವಾ ಜಾನುವಾರುಗಳನ್ನು ಪ್ರವೇಶಿಸುವುದನ್ನು ನಿಷೇಧಿಸಿದೆ ಮತ್ತು ಪ್ರದೇಶದ ಸುತ್ತಲಿನ ಹೊಲಗಳ ರೈತರನ್ನು ನಿರ್ಬಂಧಿಸಿದೆ. ತಜ್ಞರ ಅಭಿಪ್ರಾಯ ಬರುವವರೆಗೆ ಗುಂಡಿಯಲ್ಲಿ ಸಿಲುಕಿರುವ ಉಪಕರಣಗಳನ್ನು ಹೊರತೆಗೆಯದಂತೆ ಆಡಳಿತ ತಿಳಿಸಿದೆ.
ಈ ಪ್ರಕ್ರಿಯೆಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲಿ ತಜ್ಞರ ತಂಡ ಸ್ಥಳಕ್ಕೆ ತಲುಪಿ ಪರಿಶೀಲನೆ ಕೂಡ ನಡೆಸಿದೆ. ಭೂಮಿ ಒಳಗಿಂದ ಇಷ್ಟೊಂದು ಪ್ರಮಾಣದ ಗ್ಯಾಸ್ ಹಾಗೂ ನೀರು ಬರಲು ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕಿದೆ. ಹಾಗೆ ಮರುಭೂಮಿ ಪ್ರದೇಶ ಆಗಿರುವುದರಿಂದ ಅಲ್ಲಿನ ಗಟ್ಟಿ ನೆಲಸದಲ್ಲಿ ಗ್ಯಾಸ್ ಛೇಂಬರ್‌ನಂತಹ ಅಪಾಯವಿದೆಯೇ ಎಂಬುದನ್ನು ಕೂಡ ಪತ್ತೆ ಮಾಡಬೇಕಿದೆ. ಆದ್ರೆ ಸರಸ್ವತಿ ನದಿ ಈಗ ಮತ್ತೆ ಮೇಲೆದ್ದು ಹರಿಯ ತೊಡಗಿದ್ದಾಳೆ ಎಂಬ ವಾದ ಮತ್ತೆ ಸುಳ್ಳಾಗಿದೆ.



Click it and Unblock the Notifications
