Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಳುನಾಡು ಸೃಷ್ಟಿಸಿದ್ದು ಬೆರ್ಮೆರಾ? ಕಾಂತಾರದಲ್ಲಿನ ಈ ದೈವಾ ಹುಟ್ಟಿದ್ದು ಹೇಗೆ?
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಎರಡು ಭಾಗವಾಗಿ ತೆರೆಕಂಡು ಈಗಾಗಲೆ ದಾಖಲೆಯ ಗಳಿಕೆ ಕಾಣುತ್ತಿದೆ. ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗೆ ಸಿನಿಮಾ ನೋಡಿದ ಪ್ರತಿಯೊಬ್ಬರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಕರಾವಳಿಯ ವಿಶಿಷ್ಟ ಸಂಪ್ರದಾಯ, ಆಚರಣೆಗಳನ್ನು ತೆರೆ ಮೇಲೆ ಕಟ್ಟಿಕೊಡುವಲ್ಲಿ ರಿಷಬ್ ಗೆದ್ದಿದ್ದಾನೆ.
ಮೊದಲ ಭಾಗದಲ್ಲಿ ಕಂಬಳದಿಂದ ಆರಂಭಗೊಂಡು ದೈವಾರಾಧನೆ ವರೆಗೆ ಸಿನಿಮಾದಲ್ಲಿ ತೋರಿಸಲಾಗಿತ್ತು. ಕರಾವಳಿ ಭಾಗದ ಈ ಆಚರಣೆ ಇಡೀ ವಿಶ್ವಕ್ಕೆ ತೆರೆ ಮೇಲೆ ಪ್ರದರ್ಶನಗೊಂಡಿತ್ತು. ಹಾಗೆ ಶ್ರೀಮಂತ ಆಚರಣೆಗಳು, ಅದರ ಹಿನ್ನಲೆಯನ್ನು ಕಂಡು ಜನರು ಕೂಡ ವಿಸ್ಮಿತರಾಗಿದ್ದರು. ದೈವಾರಾಧನೆಯ ಕುರಿತಾದ ಹಾಗೆ ತುಳುನಾಡ ಸಂಪ್ರದಾಯವನ್ನು ಜನರು ತೆರೆ ಮೇಲೆ ನೋಡಿದ್ದರು.

ಹಾಗೆ ಈಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿಯೂ ಕೂಡ ದೈವಾರಾಧನೆ ನೋಡಬಹುದು. ಹಾಗೆ ಕರಾವಳಿಯ ವಿಭಿನ್ನ ಆಚರಣೆಯನ್ನು ತೆರೆ ಮೇಲೆ ನೋಡಬಹುದು. ಕಾಂತಾರ ಕೇವಲ ಸಿನಿಮಾವಾಗಿ ಉಳಿದಿಲ್ಲ. ಅದು ತುಳು ಸಂಸ್ಕೃತಿಯ ಅಧ್ಯಯನ ಸಾಮಗ್ರಿಯಾಗಿ ತೆರೆ ಮೇಲೆ ಕಂಡಿದೆ. ರಿಷಬ್ ಶೆಟ್ಟಿ ಹಲವು ವರ್ಷಗಳ ಅಧ್ಯಯನ ಹಾಗೆ ಪರಿಶ್ರಮವನ್ನು ಇದಕ್ಕಾಗಿ ಮೀಸಲಿಟ್ಟಿದ್ದರು.
ಕಾಂತಾರದಲ್ಲಿ ತೋರಿಸಲಾದ ಪಂಜುರ್ಲಿ ದೇವರು ಹುಟ್ಟಿರುವ ಬಗೆ ಹಾಗೂ ಅದರ ಮೂಲವನ್ನು ನೀವು ತಿಳಿದಿರಬಹುದು. ಪಂಜುರ್ಲಿ ವರಾಹ ಅಥವಾ ಹಂದಿಯ ಸ್ವರೂಪದಲ್ಲಿ ನೋಡಬಹುದು. ಮೂಲ ಮೈಸಂದಾಯ (ಮಹಿಷ), ನಂದಿಗೋಣೆ(ಹೋರಿ), ಹೈಯ್ಗುಳಿ(ಹಾಯುವ ಗೂಳಿ), ಪಿಲ್ಚಂಡಿ( ಹುಲಿ) ಆನೆ, ಕುದುರೆ ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ತುಳುನಾಡಿನಲ್ಲಿ ಪೂಜಿಸಲ್ಪಡುವ ದೈವವಾಗಿದೆ. ಹಲವು ಯಕ್ಷಗಾನ ಪ್ರಸಂಗಗಳಲ್ಲಿಯೂ ಈ ದೈವಗಳ ಕುರಿತಾಗಿ ನೀವು ವೀಕ್ಷಿಸಿರಬಹುದು, ಆದ್ದರೆ ಪೂರ್ಣ ಪ್ರಮಾಣದಲ್ಲಿ ಅಥವಾ ಸಿನಿಮಾಗಳಲ್ಲಿ ಈ ಕುರಿತಾದ ಉಲ್ಲೇಖಗಳು ಸಿಗುವುದು ಬಹಳ ಕಡಿಮೆ.
ಆದ್ರೆ ಈಗ ಕಾಂತಾರ ಚಾಪ್ಟರ್ 1 ರಲ್ಲಿ ಬೆರ್ಮೆ ಅಥವಾ ಬೆರ್ಮೆರ್ ಎಂಬ ಹೆಸರು ನೀವು ಕೂಡ ಕೇಳಿರಬಹುದು. ಸಿನಿಮಾ ನೋಡಿದ ಮಂದಿ ಬೆರ್ಮೆ ದೈವದ ಕುರಿತಾಗಿ ಮಾತನಾಡಿಕೊಳ್ಳುವುದು ಕೇಳಿರಬಹುದು. ಹಾಗಾದ್ರೆ ತುಳುನಾಡಲ್ಲಿ ಈ ಬೆರ್ಮೆರ್ ದೈವವನ್ನು ಏಕೆ ಪೂಜಿಸುತ್ತಾರೆ. ತುಳುವರ ಆದಿಮೂಲದ ದೈವ ಬೆರ್ಮೆರ್ ಯಾರು? ಎಂಬುದನ್ನ ತಿಳಿದುಕೊಳ್ಳೋಣ.
ತುಳುನಾಡಿಗೆ ದೇವರುಗಳ ಸಂಸ್ಕೃತಿ ಬರುವ ಮೊದಲು, ತುಳು ಜನರು ಬೆರ್ಮೆರೆಯನ್ನು ಮೂಲ ದೇವರು ಎಂದು ನಂಬಿದ್ದರು ಹಾಗೆ ಪೂಜಿಸುತ್ತಿದ್ದರು. ಜಗತ್ತಿನ ಮೊದಲ ಪೂಜೆ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಹಾಕುವುದಾಗಿತ್ತು. ಹಾವು ಮಣ್ಣಿನ ರಕ್ಷಕ, ಆದರೆ ಯಕ್ಷ ನೀರಿನ ರಕ್ಷಕ. ಹಾಗೆ ಪ್ರಾಚೀನ ಕಾಲದಿಂದಲೂ ತುಳುವರು ನಾಗರಪೂಜೆ ಮಾಡಿಕೊಂಡು ಬಂದಿದ್ದಾರೆ. ಯಕ್ಷ ಆರಾಧನೆಯಲ್ಲಿ ಬೆರ್ಮೆರೆಯ ಆರಾಧನೆ ಸಾರ್ವತ್ರಿಕವಾದಾಗ, ನಾಗಾರಾಧನೆ ನಿಂತುಹೋಯಿತು. ವೈದಿಕ ಪೌರಾಣಿಕ ದೇವತೆಗಳು ತುಳುನಾಡಿಗೆ ಬಂದಾಗ ಮತ್ತು ಅವರ ಪ್ರಭಾವವು ಬೆರ್ಮೆರೆಯ ಆರಾಧನೆಯನ್ನು ಕಡಿಮೆ ಮಾಡಲು ಕಾರಣವಾಯಿತು.
ಅನಂತರ ಬೆರ್ಮೆರ್ ನಾಗ ಬ್ರಹ್ಮನಾದನು ಎಂದು ಹೇಳಲಾಗಿದೆ. ತದನಂತರ ನಾಗನನ್ನು ಕುಮಾರನಾಗಿಯೂ ಸುಬ್ರಮಣ್ಯ ದೇವರಾಗಿಯೂ ಆಚರಣೆ ಬಂದಿತು. ಹೀಗಾಗಿಯೇ ನಾಗಬೆರ್ಮೆರ್ ಹಾಗೆ ಪಂರ್ಜುಲಿಯ ಕೋಲಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯನ ನೆನೆಯುವ ಸಾಲುಗಳು ಸಿಗುವುದು ನೋಡಬಹುದು.
ಬೆರ್ಮೇರು ಒಂದು ಕೈಯಲ್ಲಿ ಕುಡುಗೋಲು ಮತ್ತು ಇನ್ನೊಂದು ಕೈಯಲ್ಲಿ ನೀರಿನ ಪಾತ್ರೆಯನ್ನು ಹಿಡಿದು ಕುದುರೆಯ ಮೇಲೆ ಕುಳಿತಿದ್ದಾನೆ. ಬ್ರಹ್ಮನ ಗ್ರಾಮೀಣ ರೂಪ ಬೆರ್ಮೇರು ಅಲ್ಲ. ಬ್ರಹ್ಮನ ತದ್ಭವ ರೂಪ ಬೊಮ್ಮ ಎಂದು ಕರೆಯಲಾಗಿದೆ. ಈ ಮಾಹಿತಿಯು ಡಾ . ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆಯಿನ ನಾಗಬೆರ್ಮ ಕೃತಿಯಲ್ಲಿ ನೋಡಬಹುದು.
ಹಾಗೆ ಕಾಂತಾರದಲ್ಲಿ ಉಲ್ಕೆಯ ರೂಪದಲ್ಲಿ ಒಂದು ಬೆಂಕಿ ಚಂಡು ಭೂಮಿಗೆ ಬೀಳುವ ದೃಶ್ಯ ಒಂದಿದೆ. ಇದು ಶಿವನಿಗೆ ಸಂಬಂಧಿಸಿದಂತಹ ವಿಚಾರ ಎಂಬುದು ನಿಮಗೆ ಗೊತ್ತಾ? ಕೈಲಾಸದಲ್ಲಿ ಪಾರ್ವತಿಗೆ ಭಸ್ಮದಲ್ಲಿ ಕಲ್ಲೊಂದು ಸಿಗುತ್ತದೆ ಅದನ್ನು ಶಿವನಿಗೆ ಕೊಟ್ಟಾಗ ಆತ ಅದನ್ನು ಭೂಮಿಗೆ ಎಸೆಯುತ್ತಾನೆ. ಅದರಿಂದ ಹುಟ್ಟುವುದೇ ಗುಳಿಗ! ಗುಳಿಗೆ ಶಿವಗಣವಾಗಿ ಸೇವೆ ಸಲ್ಲಿಸುತ್ತಾ ಇರುವಾಗ ಒಂದು ತಪ್ಪು ಮಾಡಿ ಸಂಕೆ ಮತ್ತು ಗಾಳಿ ಭದ್ರ ಕುಮಾರನಾಗಿ ಹುಟ್ಟುವಂತೆ ಶಾಪ ಪಡೆದ ಎಂಬ ಕಥೆ ಇದೆ.
ಹಾಗೆ ದಕ್ಷಿಣ ಕನ್ನಡ ಭಾಗದಲ್ಲಿ ಹೆಸರಾಗಿರುವ ಪಾಡ್ದನದಲ್ಲಿ ಹಲವು ಸಾಲುಗಳು ಬೆರ್ಮೆರ್ ಕುರಿತಾಗಿ ಹೇಳಿರುವುದು ನೋಡಬಹುದು. ಕುಂದಾಪುರದಲ್ಲಿ, ದೇವಾಲಯಗಳನ್ನು ಗದ್ದುಗೆ/ಗದ್ದಿಗೆ ಎಂದು ಕರೆಯಲಾಗುತ್ತದೆ. ಇದನ್ನು ಮರದ ಕೆಳಗೆ ಬ್ರಹ್ಮಕಲ (ಕ್ರಿ.ಶ. 1403 ರ ಶಾಸನ) ಎಂದೂ ಕರೆಯುತ್ತಾರೆ. ಮಲರಾಯೆ ಮಲಾರ ಬೂದು ಅಲದೇಡ್ (ಒಡಿಪು) ನ ಮುಖ್ಯ ದೇವರು. ದೇವರಿಗೆ ಬಂಡಿ ಉಚ್ಚಾಯವೂ ಇದೆ. ಕುಂದಾಪುರದಲ್ಲಿ ದೇವಾಲಯಗಳನ್ನು ಚಿತ್ತೇರಿ ಎಂದೂ ಕರೆಯುತ್ತಾರೆ. ಅವರು ಬೆರ್ಮೆರೆಯ ಆರಾಧಕರಾಗಿದ್ದರು ಮತ್ತು ಅವರ ಶಿಲಾ ಶಾಸನಗಳಲ್ಲಿ ಬೆರ್ಮೆರೆಯ ಉಲ್ಲೇಖವಿದೆ ಎಂದು ತುಳು ಸಾಹಿತಿ ಕೆ ಮಹೇಂದ್ರನಾಥ್ ಸಾಲೆತ್ತೂರ್ ಅವರ ಬರವಣಿಗೆಯಲ್ಲಿ ನೋಡಬಹುದು.



Click it and Unblock the Notifications

