Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮತದಾನ ಮಾಡಿ ಟಿವಿ, ಫ್ರಿಡ್ಜ್, ವಜ್ರದ ಉಂಗುರ ಗೆಲ್ಲಿ..! ಹೇಗೆ ಗೊತ್ತಾ?
ಭಾರತ ಈಗ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಹಬ್ಬಕ್ಕೆ ಸಾಕ್ಷಿಯಾಗುತ್ತಿದೆ. ಕೋಟಿ ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸುವ ಲೋಕಸಭೆ ಚುನಾವಣೆ ನಡೆಯುತ್ತಿದೆ. ದೇಶದಾದ್ಯಂತ ವಿವಿಧ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರ ಸೆಳೆಯುವ ಕಾರ್ಯವೂ ಭರದಿಂದ ಸಾಗಿದೆ.
ಇತ್ತಿಚಿಗೆ ಜನರು ಶಿಕ್ಷಣ ಪಡೆದರು ಸಹ ತಮ್ಮ ಹಕ್ಕುಗಳ ಬಗ್ಗೆ ನಿರ್ಲಕ್ಷ ತಳೆದಿರುತ್ತಾರೆ. ಅದರಲ್ಲಿ ಮತದಾನದ ಹಕ್ಕು ಸಹ ಸೇರಿದೆ. ಆದರೆ ಜನ ಮತದಾನ ಮಾಡಲು ಮನೆಯಿಂದ ಹೊರಬಾರದೆ ಇರುವುದು ಚುನಾವಣಾ ಆಯೋಗಕ್ಕೆ ತಲೆನೋವು ತಂದಿದೆ.

ವರ್ಷದಿಂದ ವರ್ಷಕ್ಕೆ ಈ ಮತದಾನದ ಪ್ರಮಾಣ ಏರಿಸಬೇಕು ಎಂಬ ಪಣ ತೊಟ್ಟಿರುವ ಆಯೋಗಕ್ಕೆ ಹಿನ್ನಡೆಯಾಗುತ್ತಲೇ ಇದೆ. ಹೀಗಾಗಿ ಆಯೋಗ ಈ ಬಾರಿ ವಿಶೇಷ ಅಭಿಯಾನ ನಡೆಸುತ್ತಲೇ ಇದೆ. ಮತದಾನ ಮಾಡುವಂತೆ ಉತ್ತೇಜಿಸಲು ನಟ, ನಟಿಯರ ಮೂಲಕ, ಜಾಹೀರಾತುಗಳ ಮೂಲಕ, ಅಧಿಕಾರಿ, ಸಿಬ್ಬಂದಿ ಮೂಲಕ ಮತದಾರರ ಮನ ಪರಿವರ್ತನೆಗೆ ಶ್ರಮಿಸುತ್ತಿದೆ.
ಹೀಗೆ ಮತದಾರರ ಸೆಳೆಯುವ ತಂತ್ರವಾಗಿ ಈಗ ಜನರಿಗೆ ಹೊಸ ಹೊಸ ಆಸೆ ತೋರಿಸಲು ಆಯೋಗ ಮುಂದಾಗಿದೆ. ಮತದಾನ ಮಾಡುವವರಿಗೆ ಟಿವಿ, ಫ್ರಿಡ್ಜ್, ಲ್ಯಾಪ್‌ಟಾಪ್, ಬೈಕ್, ವಜ್ರದ ಉಂಗುರ ಹೀಗೆ ಹತ್ತಾರು ಉಡುಗೊರೆಗಳ ಕೊಡಲು ಮುಂದಾಗಿದೆ. ಈ ಮೂಲಕ ಒಂದಿಷ್ಟು ಪ್ರಮಾಣದ ಮತದಾನ ಹೆಚ್ಚಳ ಮಾಡುವ ಗುರಿ ಹೊಂದಿದೆ.
2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಮಧ್ಯಪ್ರದೇಶದಲ್ಲಿ ಮತದಾನದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ, ಸರಾಸರಿ 8.5 ಪ್ರತಿಶತದಷ್ಟು ಕಡಿಮೆಯಾಗಿದೆ. ಇಲ್ಲಿನ ಭೋಪಾಲ್ ಜಿಲ್ಲಾಡಳಿತವು ಜನರಿಗೆ ವಜ್ರದ ಉಂಗುರಗಳು, ಟಿವಿ, ಬೈಕ್ ಮತ್ತು ರೆಫ್ರಿಜರೇಟರ್‌ಗಳನ್ನು ನೀಡುವ ಲಕ್ಕಿ ಡ್ರಾವನ್ನು ಘೋಷಿಸಿದೆ.
ಭೋಪಾಲ್ ಕ್ಷೇತ್ರದಲ್ಲಿ ಒಟ್ಟು 2,097 ಮತಗಟ್ಟೆಗಳಿವೆ. ಬಂಪರ್ ಬಹುಮಾನಗಳ ಜೊತೆಗೆ 6,000 ಕ್ಕೂ ಹೆಚ್ಚು ಬಹುಮಾನಗಳು ಲಭ್ಯವಿವೆ. ಮತದಾರರು ತಮ್ಮ ಹಕ್ಕು ಚಲಾಯಿಸಿ, ಕೈ ಬೆರಳಿನ ಮೇಲಿರುವ ಶಾಹಿ ಗುರುತು ತೋರಿಸಿ, ತಮ್ಮ ಮೊಬೈಲ್ ಸಂಖ್ಯೆ, ಹೆಸರು ಮತ್ತು ವೋಟರ್ ಐಡಿಗಳೊಂದಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಅವುಗಳನ್ನು ಕೂಪನ್ ಬಾಕ್ಸ್‌ನಲ್ಲಿ ಹಾಕಬೇಕಾಗುತ್ತದೆ.
ಪ್ರತಿ ಬೂತ್‌ನಲ್ಲಿ ಮೂರು ಮಂದಿ ಲಕ್ಕಿ ಡ್ರಾ ವಿಜೇತರಾಗಬಹುದು. ಯಾರ ಹೆಸರು ಚೀಟಿಯಲ್ಲಿ ಬರುತ್ತದೆಯೋ ಅವರು ಈ ಬಹುಮಾನಗಳ ಪಡೆಯುವ ಅದೃಷ್ಟವಂತರಾಗುತ್ತಾರೆ. ಬೆಳಗ್ಗೆ 10 ಗಂಟೆಗೆ, ಮಧ್ಯಾಹ್ನ 3 ಮತ್ತು ಸಂಜೆ 6 ಗಂಟೆಗೆ ಮೂರು ಬಾರಿ ಲಕ್ಕಿ ಡ್ರಾ ನಡೆಸಲಾಗುತ್ತದೆ. ಈ ಪ್ರತಿಯೊಂದು ಡ್ರಾದಲ್ಲಿ ಒಬ್ಬ ವಿಜೇತರು ಬಹುಮಾನವನ್ನು ಗೆಲ್ಲುತ್ತಾರೆ. ತದನಂತರ, ಚುನಾವಣೆಯ ನಂತರ ಒಂದು ಅಥವಾ ಎರಡು ದಿನ, ನಾವು ಮೆಗಾ ಡ್ರಾವನ್ನು ನಡೆಸುತ್ತೇವೆ ಅಲ್ಲಿ ವಿಜೇತರಿಗೆ ದೊಡ್ಡ ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಹುಮಾನಗಳನ್ನು ನೀಡಲು ಹಲವು ಸಂಘ ಸಂಸ್ಥೆಗಳು ಚುನಾವಣಾ ಆಯೋಗದ ಜೊತೆ ಕೈ ಜೋಡಿಸಿವೆ. ಹೀಗಾದರೂ ಮಾಡಿ ಒಂದಿಷ್ಟು ಮತದಾನದ ಪ್ರಮಾಣ ಏರಿಸುವತ್ತ ಆಯೋಗ ಗಮನ ಹರಿಸಿದೆ. ಜೊತೆಗೆ ಈ ಬಹುಮಾನ ಪಡೆದ ಮಂದಿ ಮುಂದೆಯೂ ಮತದಾನ ಮಾಡಬಹುದು. ಇಲ್ಲವೆ ಮತದಾನ ಮಾಡುವಂತೆ ಪ್ರೇರೇಪಿಸಬಹುದು ಎಂದು ಅಂದಾಜಿಸಲಾಗಿದೆ.
ಐದು ವಜ್ರದ ಉಂಗುರಗಳು, ಲ್ಯಾಪ್‌ಟಾಪ್, ರೆಫ್ರಿಜರೇಟರ್, ಎಂಟು ಡಿನ್ನರ್ ಸೆಟ್‌ಗಳು ಮತ್ತು ಎರಡು ಮೊಬೈಲ್ ಫೋನ್‌ಗಳು ಸೇರಿದಂತೆ 35 ವಸ್ತುಗಳು ಬಹುಮಾನವಾಗಿ ನೀಡಲು ಮುಂದಾಗಲಾಗಿದೆ. ಇದರ ಜೊತೆ ಹಲವು ಸಂಘ ಸಂಸ್ಥೆಗಳು ಬಹುಮಾನಗಳನ್ನು ನೀಡಲು ಮುಂದೆ ಬಂದಿವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಸ್ಥೆಗಳು ಮುಂದೆ ಬರುವ ನಿರೀಕ್ಷೆಯಲ್ಲಿ ಚುನಾವಣಾ ಆಯೋಗವಿದೆ.



Click it and Unblock the Notifications
