Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆದಿತ್ಯ ಎಲ್-1 ಉಡಾವಣೆ ದಿನವೇ ಇಸ್ರೋ ಅಧ್ಯಕ್ಷರಿಗೆ ಕ್ಯಾನ್ಸರ್ ದೃಢ
ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯವಂತ, ಯುವ ಸಮುದಾಯದಲ್ಲೂ ಕ್ಯಾನ್ಸರ್ ಪೀಡಿತರ ಕಾಣುತ್ತಿದ್ದೇವೆ. ಜೊತೆಗೆ ಕ್ಯಾನ್ಸರ್ ಹೊಂದಿರುವ ಜನಸಂಖ್ಯೆ ಪ್ರಮಾಣ ಸಹ ಹೆಚ್ಚಾಗುತ್ತಲೇ ಇದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾನ್ಯರು ಇಂದು ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ.
ಈ ಸಾಲಿಗೀಗ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಸಹ ಸೇರಿಕೊಂಡಿದ್ದಾರೆ. ಇಸ್ರೋದ ಕನಸಿನ ಯೋಜನೆ ಆದಿತ್ಯ ಎಲ್ 1 ಮಿಷನ್ ಉಡಾವಣೆ ದಿನದಂದು ಕ್ಯಾನ್ಸರ್ ಇರುವುದು ಅವರಿಗೆ ತಿಳಿದುಬಂದಿತ್ತು ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಹಾಗಾದರೆ ಅವರಿಗಿದ್ದ ಕ್ಯಾನ್ಸರ್ ಯಾವುದು?

ತರ್ಮಾಕ್ ಮೀಡಿಯಾ ಹೌಸ್‌ಗೆ ನೀಡಿದ ಸಂದರ್ಶನದಲ್ಲಿ, ಸೋಮನಾಥ್ ಅವರು ತಮ್ಮ ಹೊಟ್ಟೆಯಲ್ಲಿ ಕ್ಯಾನ್ಸರ ಗಡ್ಡೆ ಬೆಳೆದ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಬಗ್ಗೆ ಅವರು ಶಸ್ತ್ರ ಚಿಕಿತ್ಸೆಗೂ ಒಳಗಾಗಿರುವುದಾಗಿ ತಿಳಿಸಿದರು. ಕೀಮೋಥೆರಪಿಗೆ ಒಳಗಾಗುವ ಮೂಲಕ ಹೊಟ್ಟೆಯಲ್ಲಿದ್ದ ಕ್ಯಾನ್ಸರ್ ಗಡ್ಡೆಗೆ ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಕ್ಯಾನ್ಸರ್ ಎಂದರೆ ಹೆಸರಬೇಕಾಗಿಲ್ಲ. ಅದು ಸಹ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಸೂಕ್ತ ಸಮಯದಲ್ಲಿ ಅದರ ಚಿಕಿತ್ಸೆ ಅಗತ್ಯ ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿದರು.
ಆದಿತ್ಯ ಎಲ್ 1 ಮಿಷನ್ ದಿನವೇ ಸುದ್ದಿ ಬಂದಿತ್ತು
ಇನ್ನು ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಆದಿತ್ಯ ಎಲ್1 ಸೂರ್ಯನತ್ತ ಉಪಗ್ರಹ ಉಡಾವಣೆ ಮಾಡುವ ದಿನವಾಗಿತ್ತು. ಈ ದಿನಕ್ಕಾಗಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿತ್ತು. ಆದರೆ ಅದೇ ದಿನ ಇಸ್ರೋ ಅಧ್ಯಕ್ಷ ಸೋಮನಾಥನ್‌ಗೆ ಕ್ಯಾನ್ಸರ್ ಇರುವ ಕುರಿತು ವೈದ್ಯರು ಮಾಹಿತಿ ನೀಡಿದ್ದರು. ಇದಕ್ಕೂ ಮುನ್ನ ಅವರು ಹೊಟ್ಟೆ ನೋವಿನಿಂದ ಬಳಲಿದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದರು.
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದ ವೈದ್ಯರು ಅವರ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದನ್ನು ಖಚಿತಪಡಿಸಿದರು. ಆದರೆ ಎಲ್1 ಮಿಷನ್ ಉಡಾವಣೆಗೆ ಕೌಂಟ್‌ಡೌನ್ ನೀಡುತ್ತಿರುವಾಗ ಅವರಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು.
ಚಂದ್ರಯಾನ-3 ಮಿಷನ್‌ನ ಉಡಾವಣೆಯ ಸಮಯದಲ್ಲಿ ಅವರಲ್ಲಿ ಅನಾರೋಗ್ಯಕರ ಲಕ್ಷಣಗಳು ಗೋಚರವಾಗಿದ್ದವಂತೆ. ಆದರೆ ಆ ಬಗ್ಗೆ ಅವರು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಚಂದ್ರಯಾನ್ ಬಳಿಕ ಆದಿತ್ಯ ಯೋಜನೆಯ ತಯಾರಿಯಲ್ಲಿ ಗಮನ ಹರಿಸಿದ್ದರು. ಆದರೆ ಬರುಬರುತ್ತ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಾಗ ವೈದ್ಯರ ಬಳಿ ತೆರಳಿದ್ದರು.
ಕ್ಯಾನ್ಸರ್ ಇದೆ ಎಂದು ತಿಳಿದು ಬಂದ ಪ್ರಾರಂಭದಲ್ಲಿ ಇದರಿಂದ ಸಂಪೂರ್ಣ ಗುಣಮುಖನಾಗುತ್ತೇನೆ ಎಂದುಕೊಂಡಿರಲಿಲ್ಲ. ನಾನು ಚಿಕಿತ್ಸೆಯ ಎಲ್ಲಾ ಪ್ರಕ್ರಿಯೆಗಳಿಗೆ ಒಳಗಾಗಿದ್ದೆ. ಈ ಹೋರಾಟದಲ್ಲಿ ಜಯ ಗಳಿಸಿದ್ದೆ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವ ಅವಶ್ಯಕತೆ ಇದೆ. ನನಗೆ ಯಾವ ರೋಗ ಲಕ್ಷಣವೂ ಕಾಣಿಸಲಿಲ್ಲ. ಆದರೂ ಕ್ಯಾನ್ಸರ್‌ಗೆ ಒಳಗಾಗಿದ್ದೆ. ಹೀಗಾಗಿ ಎಲ್ಲರು ಆಗಾಗ ಆರೋಗ್ಯ ತಪಾಸಣೆಗೆ ಒತ್ತು ನೀಡಿ ಎಂದು ಸಲಹೆ ನೀಡಿದ್ದಾರೆ.
ಉದರ ಕ್ಯಾನ್ಸರ್ ಲಕ್ಷಣವೇನು?
ಉದರ ಕ್ಯಾನ್ಸರ್ ಅಥವಾ ಗ್ಯಾಸ್ಟ್ರಿಕ್ ಕ್ಯಾನ್ಸರ್ ಭಾರತದಲ್ಲಿ ಸುಮಾರು 60,000 ವಾರ್ಷಿಕ ಹೊಸ ಪ್ರಕರಣಗಳೊಂದಿಗೆ ಐದನೇ ಹೆಚ್ಚು ರೋಗನಿರ್ಣಯದ ಕ್ಯಾನ್ಸರ್ ಆಗಿದೆ. ಇದು ವಾರ್ಷಿಕವಾಗಿ ಸರಿಸುಮಾರು 50,000 ಸಾವುಗಳಿಗೆ ಕಾರಣವಾಗುತ್ತದೆ. ಕಳೆದ ಕೆಲವು ದಶಕಗಳಲ್ಲಿ, ಸುಧಾರಿತ ರೋಗನಿರ್ಣಯ ಪರೀಕ್ಷೆಗಳು, ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಕೀಮೋಥೆರಪಿ ಏಜೆಂಟ್‌ಗಳ ಕಾರಣದಿಂದಾಗಿ ಹೊಟ್ಟೆಯ ಕ್ಯಾನ್ಸರ್ ರೋಗಿಗಳ ದೃಷ್ಟಿಕೋನವು ಗಮನಾರ್ಹವಾಗಿ ಸುಧಾರಿಸಿದೆ.
ಜಠರ ಕೋಶಗಳ ಡಿಎನ್‌ಎಯಲ್ಲಿನ ಆನುವಂಶಿಕ ಬದಲಾವಣೆಗಳು, ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಸಾಮಾನ್ಯ ಬ್ಯಾಕ್ಟೀರಿಯಂ, ಇದನ್ನು ಹೆಚ್. ಪೈಲೋರಿ ಎಂದೂ ಕರೆಯುತ್ತಾರೆ, ಇದು ಹೊಟ್ಟೆಯ ಉರಿಯೂತ ಮತ್ತು ಹುಣ್ಣುಗಳನ್ನು ಉಂಟುಮಾಡುತ್ತದೆ, ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD), ಜಠರದುರಿತ, ಎಪ್ಸ್ಟೀನ್-ಬಾರ್ ವೈರಸ್ ಸೋಂಕು, ಹೈಪರ್ಆಸಿಡಿಟಿ, ಅತಿಯಾದ ಧೂಮಪಾನ ಮತ್ತು ಉಪ್ಪು ಆಹಾರ, ಮದ್ಯಪಾನ, ಕಡಿಮೆ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಅಥವಾ ಹಿಂದೆ ಹೊಟ್ಟೆಯ ಹುಣ್ಣುಗಳಿಗೆ ಒಳಗಾಗಿರುವುದು ಇವೆಲ್ಲವೂ ಹೊಟ್ಟೆಯ ಕ್ಯಾನ್ಸರ್‌ಗೆ ಸಂಭವನೀಯ ಕಾರಣಗಳಾಗಿರಬಹುದು.



Click it and Unblock the Notifications