Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಶಯನಿ ಏಕಾದಶಿ: ಇಷ್ಟಾರ್ಥ ಸಿದ್ಧಿಗಾಗಿ ನಿಮ್ಮ ರಾಶಿ ಪ್ರಕಾರ ಈ ಪರಿಹಾರ ಮಾಡಿ
ದೇವಶಯನಿ ಏಕಾದಶಿಯು ಪ್ರಮುಖ ಏಕಾದಶಿಗಳಲ್ಲಿ ಒಂದಾಗಿದೆ. ಆಷಾಢ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯಾನಿ ಏಕಾದಶಿ ಎಂದು ಕರೆಯಲಾಗುವುದು. ಈ ವರ್ಷ ಜುಲೈ 29ರಂದು ದೇವಶಯನಿ ಏಕಾದಶಿಯನ್ನು ಆಚರಿಸಲಾಗುವುದು. ಈ ಏಕಾದಶಿಯ ನಂತ ಶ್ರೀ ವಿಷ್ಣು ಯೋಗನಿದ್ರೆಗೆ ಜಾರುತ್ತಾರೆ. ನಾಲ್ಕು ತಿಂಗಳವರೆಗೆ ಶ್ರೀ ವಿಷ್ಣು ಯೋಗನಿದ್ರೆಯಲ್ಲಿರುತ್ತಾರೆ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರವು ದೇವಶಯನಿ ಏಕಾದಶಿಯಂದು ನಿಮ್ಮ ರಾಶಿಯ ಪ್ರಕಾರ ಪೂಜೆಯನ್ನು ಮಾಡಿದರೆ ನೀವು ಬಯಸಿದ್ದು ಬೇಗನೆ ನೆರವೇರುತ್ತದೆ ಎಂದು ಹೇಳುತ್ತದೆ, ದ್ವಾದಶ ರಾಶಿಗಳು ಈ ದಿನ ಪಠಿಸಬೇಕಾದ ಮಂತ್ರ ಹಾಗೂ ಮಾಡಬೇಕಾದ ಪರಿಹಾರದ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರು ಶ್ರೀವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು 'ಓಂ ಗೋವಿಂದಾಯ ನಮಃ' ಮಂತ್ರವನ್ನು ಪಠಿಸಬೇಕು.
ದೇವಶಯನಿ ಏಕಾದಶಿಯ ದಿನದಂದು ಮೇಷ ರಾಶಿಯವರು ಶ್ರೀ ವಿಷ್ಣುವಿನ ಪೂಜೆಯಲ್ಲಿ ಬೆಲ್ಲ ಮತ್ತು ಬೇಳೆಯನ್ನು ಅರ್ಪಿಸಬೇಕು, ಇದರಿಮದ ಅದೃಷ್ಟ ಹೆಚ್ಚಾಗುವುದು.
ವೃಷಭ ರಾಶಿ
ನಾರಾಯಣನನ್ನು ಮೆಚ್ಚಿಸಲು, ವೃಷಭ ರಾಶಿಯವರು 'ಓಂ ಪದ್ಮನಾಭಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು. ಈ ದಿನದಂದು ಭಗವಾನ್ ವಿಷ್ಣುವಿಗೆ ವೈಜಯಂತಿ ಮಾಲೆಯನ್ನು ಅರ್ಪಿಸಬೇಕು. ಭಗವಾನ್ ಶ್ರೀ ಹರಿಯು ಇದರಿಂದ ಪ್ರಸನ್ನನಾಗುತ್ತಾನೆ ಮತ್ತು ನಿಮಗೆ ಅಪಾರ ಸಂತೋಷ ಮತ್ತು ಸಂಪತ್ತನ್ನು ನೀಡುತ್ತಾನೆ. ಶ್ರೀ ಹರಿಯ ಮಂತ್ರಗಳನ್ನೂ ಪಠಿಸಿ.
ಮಿಥುನ ರಾಶಿ
ಮಿಥುನ ರಾಶಿಯವರು ದೇವಶಯನಿ ಏಕಾದಶಿಯ ದಿನದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಬೇಕು. ತುಳಸಿಗೆ ಗಂಗಾಜಲವನ್ನು ಅರ್ಪಿಸಿ. ಇದು ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ದೇವಶಯನಿ ಏಕಾದಶಿಯಂದು ಪೂಜೆಯ ಸಮಯದಲ್ಲಿ 'ಓಂ ಮಾಧವಾಯ ನಮಃ' ಎಂಬ ಮಂತ್ರವನ್ನು ಪಠಿಸಿ, ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಕರ್ಕ ರಾಶಿ
ಕರ್ಕ ರಾಶಿಯವರು ದೇವಶಯನಿ ಏಕಾದಶಿಯಂದು ಶ್ರೀ ಹರಿ ವಿಷ್ಣುವಿಗೆ 7 ಅರಿಶಿನದ ಕೊಂಬು ಅರ್ಪಿಸಬೇಕು. ನಂತರ' ಓಂ ಹ್ರೀ ಹಿರಣ್ಯಗರ್ಭಾಯ ಅವ್ಯಕ್ತರೂಪಿಣೇ ನಮಃ' ಎಂಬ ಮಂತ್ರವನ್ನು ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಕೆಲಸಗಳಲ್ಲಿ ಇರುವ ಅಡೆತಡೆಗಳು ದೂರಾಗಿ ಯಶಸ್ಸನ್ನು ನೀಡುತ್ತಾನೆ. ಶ್ರೀ ವಿಷ್ಣುವಿನ ಅನುಗ್ರಹಕ್ಕಾಗಿ 'ಓಂ ಕೇಶವಾಯ ನಮಃ' ಮಂತ್ರವನ್ನೂ ಪಠಿಸಿ.
ಸಿಂಹ ರಾಶಿ
ಸಿಂಹ ರಾಶಿಯವರು ದೇವಶಯನಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವಿಗೆ ಪೀತಾಂಬರವನ್ನು ಅರ್ಪಿಸಿ ಪೂಜಿಸಿದರೆ ಶೀಘ್ರದಲ್ಲೇ ಹಣದ ಲಾಭವಾಗುವುದು. ಈ ದಿನ
'ಓಂ ಹೃಷಿಕೇಶಾಯ ನಮಃ' ಎಂಬ ಮಂತ್ರವನ್ನು ಜಪಿಸಬೇಕು.
ಕನ್ಯಾ ರಾಶಿ
ಮಕ್ಕಳ ಅಪೇಕ್ಷಿತ ಕನ್ಯಾ ರಾಶಿಯವರು ದೇವಶಯನಿ ಏಕಾದಶಿಯಂದು ವಿಷ್ಣು ಸಹಸ್ತ್ರನಾಮವನ್ನು ಪಠಿಸಬೇಕು. ವಿಷ್ಣುವನ್ನು ಮೆಚ್ಚಿಸಲು ಕನ್ಯಾ ರಾಶಿಯವರು 'ಓಂ ಶ್ರೀಧರಾಯ ನಮಃ' ಎಂಬ ಮಂತ್ರವನ್ನು ಪಠಿಸಿ, ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ತುಲಾ ರಾಶಿ
ದೇವಶಯನಿ ಏಕಾದಶಿಯ ದಿನದಂದು, ತುಲಾ ರಾಶಿಯವರು ಭಗವಾನ್ ವಿಷ್ಣುವಿನ ಆಶೀರ್ವಾದ ಪಡೆಯಲು 'ಓಂ ಮಧುಸೂದನಾಯ ನಮಃ' ಎಂಬ ಮಂತ್ರವನ್ನು ಪಠಿಸಿದರೆ ಒಳ್ಳೆಯದು. ಈ ದಿನ ತುಳಸಿಯನ್ನು ಪೂಜಿಸಿ.
ವೃಶ್ಚಿಕ ರಾಶಿ
ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ವೃಶ್ಚಿಕ ರಾಶಿಯವರು ಶ್ರೀ ವಿಷ್ಣುವಿನ ಪೂಜಗೆ ಜೇನುತುಪ್ಪ, ಮೊಸರನ್ನು ಅರ್ಪಿಸಬೇಕು. ನಂತರ 'ಓಂ ಕೇಶವಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು.
ಧನು ರಾಶಿ
ಧನು ರಾಶಿಯವರು ದೇವಶಯನಿ ಏಕಾದಶಿಯ ದಿನದಂದು ವಿಷ್ಣುವಿಗೆ ತೆಂಗಿನಕಾಯಿಯನ್ನು ಅರ್ಪಿಸಿ ಪೂಜೆ ಮಾಡಬೇಕು. ನಂತರ ಈ ತೆಂಗಿನಕಾಯಿಯನ್ನು ಪ್ರಸಾದವನ್ನಾಗಿ ಸ್ವೀಕರಿಸಿ ಉಪವಾಸ ಮುರಿಯಬೇಕು. ಇದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ. ಈ ದಿನ ನೀವು 'ಓಂ ಮಾಧವಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು.
ಮಕರ ಸಂಕ್ರಾಂತಿ
ಮಕರ ರಾಶಿಯವರು ದೇವಶಯನಿ ಏಕಾದಶಿಯಂದು ಸಪ್ತಧಾನವನ್ನು ದಾನ ಮಾಡಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ಶ್ರೀ ವಿಷ್ಣು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾನೆ. ಈ ದಿನ "ಓಂ ತ್ರಿವಿಕರ್ಮಾಯ ನಮಃ" ಎಂಬ ಮಂತ್ರವನ್ನು ಪಠಿಸಿದರೆ ಒಳ್ಳೆಯದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ತುಳಸಿಯನ್ನು ಅಲಂಕರಿಸಿ ಪೂಜಿಸಬೇಕು. ಇದರಿಂದ ಮಕ್ಕಳ ಭಾಗ್ಯ ಸಿಗುವುದು, ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಕುಂಭ ರಾಶಿಯವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ 'ಓಂ ಶ್ರೀಧರಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು.
ಮೀನ ರಾಶಿ
ದೇವಶಯನಿ ಏಕಾದಶಿಯಂದು ಮೀನ ರಾಶಿಯವರು ಬ್ರಾಹ್ಮಣನಿಗೆ ಊಟ ಹಾಕಿ ಗೋಶಾಲೆಯಲ್ಲಿ ದಾನ ಮಾಡಬೇಕು ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.ವಿಷ್ಣುವನ್ನು ಮೆಚ್ಚಿಸಲು ಮೀನ ರಾಶಿಯವರು 'ಓಂ ಮಾಧವಾಯ ನಮಃ' ಎಂಬ ಮಂತ್ರವನ್ನು ಜಪಿಸಿ.
ದ್ವಾದಶ ರಾಶಿಗಳಿಗೆ ಇತರ ಪರಿಹಾರಗಳು
ಏಕಾದಶಿಯ ಪೂಜೆಯಲ್ಲಿ ತುಳಸಿ ಹಾಗೂ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ



Click it and Unblock the Notifications