Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
₹180 ಕೋಟಿ ಮೌಲ್ಯದ ಚಿನ್ನಾಭರಣದೊಂದಿಗೆ ತಿರುಪತಿ ದೇವಾಲಯಕ್ಕೆ ಬಂದ ಕುಟುಂಬ..! ಯಾರಿವರು..?
ಒಬ್ಬರು ಮೈ ಮೇಲೆ ಎಷ್ಟು ರೂಪಾಯಿಯ ಚಿನ್ನ ಧರಿಸಬಹುದು. ಹೆಚ್ಚೆಂದರೆ ಲಕ್ಷ ರೂಪಾಯಿವರೆಗೂ ಧರಿಸಬಹುದು. ಆದ್ರೆ ಇಲ್ಲೊಂದು ಕುಟುಂಬ ಬರೋಬ್ಬರಿ ನೂರಾರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ದೇವರ ದರ್ಶನ ಪಡೆದಿದ್ದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ.
ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವು ಭಾರತದ ಅತ್ಯಂತ ಪೂಜ್ಯ ಹಿಂದೂ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವುದು ನಮಗೆಲ್ಲಾ ತಿಳಿದ ವಿಚಾರ. ಈ ದೇವಾಲಯದ ದೇಶದಲ್ಲಿ ಅತ್ಯಧಿಕ ಆದಾಯ ಗಳಿಸುವ ಹಾಗೂ ಶ್ರೀಮಂತ ದೇವಾಲಯ ಎಂಬ ಕೀರ್ತಿ ಪಡೆದುಕೊಂಡಿದೆ. ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲ ವಿದೇಶದಿಂದಲೂ ಭಕ್ತರು ಬರುತ್ತಾರೆ.

ಇದೇ ತಿರುಪತಿ ದೇವಾಲಯಕ್ಕೆ ಶುಕ್ರವಾರದಂದು ಭೇಟಿ ನೀಡಿದ್ದ ಕುಟುಂಬವೊಂದು ಎಲ್ಲರ ಗಮನ ಸೆಳೆದಿದೆ. ಮೂವರು ಬರೊಬ್ಬರಿ 25 ಕೆ.ಜಿ ಚಿನ್ನಾಭರಣ ತಮ್ಮ ಮೈ ಮೇಲೆ ಹಾಕಿಕೊಂಡು ಬಂದಿದ್ದರು. ಇದನ್ನು ಕಂಡ ಜನರು ಅಚ್ಚರಿ ಜೊಗೆ ಶಾಕ್‌ಗೂ ಒಳಗಾಗಿದ್ದಾರೆ. ಯಾರಿವರು.? ಇಷ್ಟೊಂದು ಚಿನ್ನಾಭರಣ ಹೇಗೆ ಬಂದಿದೆ? ಅದು ಅಸಲಿಯೋ ನಕಲಿಯೋ ಎಂಬ ಅನುಮಾನ ಅವರಲ್ಲಿ ಮೂಡಿದೆ.
ಮೂವರು ಚಿನ್ನಾಭರಣವನ್ನು ಹೂವಿನ ಹಾರದಂತೆ ಹಾಕಿಕೊಂಡು ದೇವಾಲಯದ ಆವರಣದಲ್ಲಿ ನಡೆದುಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಉಡುಪು ತೊಟ್ಟಿದ್ದ ಅವರು ದೇವಾಲಯದ ಆಕರ್ಷಣೇಯ ಕೇಂದ್ರವಾಗಿದ್ದರು ಅವರ ಮೈ ಮೇಲೆ ಸುಮಾರು 180 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವಿತ್ತು.
ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಒಬ್ಬ ಹುಡುಗ ಈ ರೀತಿ ಸಾಂಪ್ರದಾಯಿಕ ಬಟ್ಟೆ ಹಾಕಿಕೊಂಡು ದೇವಾಲಯಕ್ಕೆ ಬಂದಿದ್ದರು. ಚಿನ್ನದ ಸರಗಳು, ಚಿನ್ನದ ಸನ್‌ಗ್ಲಾಸ್‌ಗಳು, ಬಳೆಗಳು, ನೆಕ್ಲೇಸ್‌ಗಳು, '7' ಸಂಖ್ಯೆಯ ಚಿನ್ನದ ಸರ ಮತ್ತು ಇತರ ಆಭರಣಗಳು 180 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಜೊತೆಗೆ ಇವರಿಗೆ ಭದ್ರತೆ ನೀಡಲೆಂದು ಪ್ರೈವೇಟ್ ರಕ್ಷಣಾ ಸಿಬ್ಬಂದಿ ಓರ್ವ ಪೋಲಿಸ್ ಸಹ ಅವರ ಜೊತೆಗಿರುವುದು ನೋಡಬಹುದು.
ಈ ದೇವಾಲಯಕ್ಕೆ ಪ್ರತಿ ದಿನ ಸುಮಾರು 75,000 ರಿಂದ 90,000 ಮಂದಿ ಭಕ್ತರು ಆಗಮಿಸುತ್ತಾರೆ, ಆದ್ರೆ ಅದರಲ್ಲಿ ಈ ಮೂವರು ಗಮನ ಸೆಳೆದಿದ್ದರು. ಈ ದೇವಾಲಯವು ವಿಷ್ಣುವಿನ ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ, ಅವರು ಕಲಿಯುಗದ ಪ್ರಯೋಗಗಳು ಮತ್ತು ತೊಂದರೆಗಳಿಂದ ಮಾನವಕುಲವನ್ನು ರಕ್ಷಿಸಲು ಭೂಮಿಯ ಮೇಲೆ ಕಾಣಿಸಿಕೊಂಡರು ಎಂದು ನಂಬಲಾಗಿದೆ.
ಶ್ರೀನಿವಾಸ, ಬಾಲಾಜಿ ಮತ್ತು ವೇಕಟಾಚಲಪತಿ ಎಂದೂ ಕರೆಯಲ್ಪಡುವ ಶ್ರೀ ವೆಂಕಟೇಶ್ವರನು 5 ಸಾವಿರ ವರ್ಷಗಳ ಹಿಂದೆ ತಿರುಮಲವನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಆದರೆ ಈ ದೇವಾಲಯ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಭಕ್ತರು ಉಆಗೂ ಉದ್ಯಮಿಗಳು ಕೋಟಿ ಕೋಟಿ ರೂಪಾಯಿ ಬೆಲೆಯ ವಜ್ರಾಭರಣ, ಚಿನ್ನ ದಾನವಾಗಿ ನೀಡುತ್ತಾರೆ.
ಬಾಲಿವುಡ್ ನಟ ನಟಿಯರು, ಉದ್ಯಮಿಗಳಾದ ಅನಂತ್ ಅಂಬಾನಿ, ಅನಿಲ್ ಅಂಬಾನಿ, ರತನ್ ಟಾಟಾ ಸೇರಿ ನೂರಾರು ಮಂದಿ ಇಲ್ಲಿಗೆ ಉಡುಗೊರೆಯಾಗಿ ನೂರಾರು ಕೋಟಿ ಮೌಲ್ಯದ ವಸ್ತುಗಳ ನೀಡಿದ್ದಾರೆ. ಆದರೆ ಅವರು ಎಂದಿಗೂ ಇಷ್ಟೊಂದು ಆಭರಣ ಹಾಕಿಕೊಂಡು ದೇವಾಯಲಕ್ಕೆ ಆಗಮಿಸಿಲ್ಲ.
25 ಕೆ.ಜಿ ಆಭರಣ ಹಾಕಿ ದೇವಾಲಯಕ್ಕೆ ಬಂದಿದ್ದ ಈ ಕುಟುಂಬದವರು ದೇವಾಲಯಕ್ಕೆ ಎಷ್ಟು ಉಡುಗೊರೆ ನೀಡಿದ್ದಾರೆ? ಏನು ನೀಡಿದ್ದಾರೆ ಎಂಬುದು ಎಲ್ಲಿಯೂ ದಾಖಲಾಗಿಲ್ಲ. ಆದರೆ ಈ ವಿಡಿಯೋ ನೋಡಿದ ಮಂದಿ ಇವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದೇವಾಲಯದಲ್ಲಿ ತಲೆ ಬಗ್ಗಿಸಿ ನಡೆಯಬೇಕು, ನಮ್ಮ ಸಂಪತ್ತು ಪ್ರದರ್ಶನಕ್ಕೆ ದೇವಾಲಯ ಆಯ್ದುಕೊಂಡ ಈ ಮಂದಿಗೆ ಏನು ಅನಿಸುತ್ತಿಲ್ಲವೇ? ಎಂದು ಬಳಕೆದಾರರೊಬ್ಬರು ಬರೆದುಕೋಂಡಿದ್ದಾರೆ.



Click it and Unblock the Notifications