Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಫಿಟ್ನೆಸ್‌ಗಾಗಿ 39 ನಾಣ್ಯಗಳು , ಅಯಸ್ಕಾಂತ ತಿಂದ ಭೂಪ: ಉಕ್ಕಿನಂಥ ಬಾಡಿಗಾಗಿ ಇವುಗಳನ್ನು ತಿಂದು ಡೆಡ್‌ಬಾಡಿ ಆಗುತ್ತಿದ್ದ ಪಾಪ!
ಮನುಷ್ಯರಿಗೆ ಎಂಥೆಲ್ಲಾ ಹುಚ್ಚುತನ ಎಂದು ಕೆಲವೊಂದು ಪ್ರಕರಣ ನೋಡಿದಾಗ ಅನಿಸದೆ ಇರಲ್ಲ. ದೇಹಕ್ಕೆ ಖನಿಜಾಂಶ ಅವಶ್ಯಕ ಹಾಗಂತ ಖನಿಜ ತಿಂದರೆ ಆಗುತ್ತೇ? ಆದರೆ ಇಲ್ಲೊಬ್ಬ ಪುಣ್ಯಾತ್ಮ ಅಂಥದ್ದೊಂದು ಕೆಲಸ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಗೆ ಈ ವ್ಯಕ್ತಿ ದಾಖಲಾಗಿದ್ದು ವ್ಯಕ್ತಿಯ ದೇಹದಿಂದ ಬರೋಬರಿ 39 ನಾಣ್ಯಗಳು ಹಾಗೂ ಅಯಸ್ಕಾಂತ ಹೊರ ತೆಗೆದಿದ್ದಾರೆ, ಅದು 26 ವರ್ಷದ ಯುವಕನ ಮೈಯಿಂದ ಈ ಖನಿಜಾಂಶಗಳನ್ನು ಹೊರ ತೆಗೆಯಲಾಗಿದೆ. ಅಷ್ಟಕ್ಕೂ ಆತ ಈ ನಾಣ್ಯ, ಅಯಸ್ಕಾಂತ ಏಕೆ ನುಂಗಿದ ಎಂಬುವುದೇ ಇನ್ನೂ ಸ್ವಾರಸ್ಯಕರ.

ಉಕ್ಕಿನಂಥ ಮೈಕಟ್ಟು ಪಡೆಯಲು ಸತು ಬೇಕು, ಹಾಗಾಗಿ ಯುವಕ ಹೀಗೆ ಮಾಡಿದ್ದಾನೆ
ವೈದ್ಯರ ಬಳಿ, ನ್ಯೂಟ್ರಿಷಿಯನಿಸ್ಟ್ ಬಳಿ ಹೋದರೆ ನೀವು ಖನಿಜಾಂಶವಿರುವ ಆಹಾರ ಸೇವಿಸಿ, ಸತು ಸೇವಿಸಿ, ಕಬ್ಬಿಣದಂಶವಿರುವ ಆಹಾರ ಸೇವಿಸಿ ಎಂದೆಲ್ಲಾ ಹೇಳುತ್ತಾರೆ. ರಕ್ತಹೀನತೆ ತಡೆಗಟ್ಟಲು ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು, ಹಾಗಂತ ಕಬ್ಬಿಣ ತಿಂದರೆ ಆದೀತೆ? ಆದರೆ ಈತ ಪೆದ್ದುತನದಿಂದ ನಾಣ್ಯಗಳು ಹಾಗೂ ಅಯಸ್ಕಾಂತ ತಿಂದಿದ್ದಾನೆ, ಅದರ ಪರಿಣಾಮ ನೇರ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಾಡಿ ಬಿಲ್ಡಿಂಗ್ ಮಾಡುವ ಪ್ರಯತ್ನದಲ್ಲಿದ್ದ
26 ವರ್ಷದ ಯುವಕ ಬೇರೆ, ನನ್ನ ಮೈಕಟ್ಟು ನೋಡಿದರೆ ವಾವ್ ಅನ್ನಬೇಕೆಂಬ ಆಸೆ ಅವನದ್ದು ಅದಕ್ಕೆ ದೇಹಕ್ಕೆ ಜಿಂಕ್ ಸಹಾಯಕಾರಿ ಎಂಬುವುದು ಗೊತ್ತು, ಆದರೆ ಅದು ಆಹಾರದಿಂದ ಪಡೆಯಬೇಕು ಅಥವಾ ಸಪ್ಲೆಮೆಂಟ್ ತೆಗೆದುಕೊಳ್ಳಬೇಕು ಎಂದು ಏಕೆ ಗೊತ್ತಾಗಿಲ್ಲವೋ, ನೇರ ನಾಣ್ಯ ಹಾಗೂ ಅಯಸ್ಕಾಂತ ತಿಂದಿದ್ದಾನೆ. ಹೀಗೆ ತಿಂದರೆ ಆತ ಅವುಗಳಂತೆಯೇ ದೇಹ ಸ್ಟ್ರಾಂಗ್ ಆಗುತ್ತೆ ಎಂದು ಯೋಚಿಸಿರಬಹುದು, ಆದರೆ ಅದು ಜೀರ್ಣ ಆಗಲ್ಲ ಅಂತ ಗೊತ್ತಿರಲ್ಲ.
ತೀವ್ರ ಹೊಟ್ಟೆ ನೋವಿನ ಸಮಸ್ಯೆ ಬಳಲಿದ ಯುವಕ
ಈ ಯುವಕನಿಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆನೋವು ಉಂಟಾಗಿತ್ಯು, ಜೊತೆಗೆ ತುಂಬಾನೇ ವಾಂತಿ, ಮನೆಯವರು ಆತನನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ, ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ವೈದ್ಯರಿಗೆ ದಿಗ್ಭ್ರೆಮೆಯಾಗುವಂತೆ ಇತ್ತು ಆ ರಿಪೋರ್ಟ್, ಏಕೆಂದರೆ ಆ ಯುವಕ ಹೊಟ್ಟೆಯಲ್ಲಿ 39 ನಾಣ್ಯಗಳಿತ್ತು. ಜೊತೆಗೆ ಅಯಸ್ಕಾಂತ ಕೂಡ ಪತ್ತೆಯಾಗಿತ್ತು. ಈತನ ನಾಣ್ಯ ಸೇವಿಸಿರುವುದರಿಂದ ಕರುಳಿಗೆ ಬ್ಲಾಕೇಜ್ ಕಂಡು ಬಂದಿತ್ತು.
ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು, ಅಯಸ್ಕಾಂತ ಹೊರ ತೆಗೆದಿದ್ದಾರೆ. ಬಾಡಿ ಬಿಲ್ಡ್ ಮಾಡಲು ನಾಣ್ಯ ತಿಂದು ಡೆಡ್‌ಬಾಡಿ ಆಗುವ ಪರಿಸ್ಥಿತಿ ಆತನಿಗೆ ಉಂಟಾಯ್ತು. ಸರ್ಜರಿ ಸುಮಾರು ಎರಡು ಗಂಟೆ ಕಾಲ ಮಾಡಲಾಯ್ತು. ಈ ಯುವಕನಿಗೆ ಆಪರೇಷನ್ ಮಾಡಿದ ವೈದ್ಯರು ಡಾ. ಮಿತ್ತಲ್ ಯಾರೂ ಈ ರೀತಿಯ ಕೆಲಸ ಮಾಡಬಾರದು, ಆ ಯುವಕನ ಪ್ರಾಣಕ್ಕೆ ಅಪಾಯ ಬಂದಿತ್ತು, ನಾವು ಏಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ಬಾಡಿ ಬಿಲ್ಡ್ ಮಾಡುವ ಆಸೆಯಿಂದ ಎಂದು ಹೇಳಿದ, ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ.
ಆತನೇ ಆ ರೀತಿ ತಿಂದನೋ ಅಥವಾ ಬೇರೆಯವರು ಆತನ ತಲೆಕೆಡಿಸಿ ಆ ರೀತಿ ಮಾಡಿದರೋ ಎಂದು ಗೊತ್ತಿಲ್ಲ, ಆತನಿಗೆ schizophrenia ಅಂದರೆ ಒಂದು ಬಗೆಯ ಮಾನಸಿಕ ಕಾಯಿಲೆ ಇತ್ತು ಎಂದು ವೈದ್ಯರು ಹೇಳಿದ್ದಾರೆ, ಹಾಗಾಗಿ ಬಹುಶಃ ಈತ ನಾಣ್ಯಗಳನ್ನು ಸೇವಿಸಿರಬಹುದು, ಮನೆಯವರು ಸಕಾಲಕ್ಕೆ ಆಸ್ಪತ್ರೆಗೆ ಕರೆತಂದಿದ್ದಕ್ಕೆ ಪ್ರಾಣ ಉಳಿದಿದೆ.



Click it and Unblock the Notifications
