Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Darshan: ನಟ ದರ್ಶನ್ ಬೆನ್ನು ಮೂಳೆ ಶಸ್ತ್ರಚಿಕಿತ್ಸೆ ಯಾವಾಗ? ಅವರ IVDP ಸಮಸ್ಯೆ ಬಗ್ಗೆ ನಿಮಗೆ ಗೊತ್ತಾ?
ಸ್ಯಾಂಡಲ್‌ವುಡ್ ಸ್ಟಾರ್ ನಟ, ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಜಾಮೀನು ಮೇಲೆ ಹೊರಬಂದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸಂಪೂರ್ಣ ವಿಶ್ರಾಂತಿಯ ಮೊರೆ ಹೋಗಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದ್ರೆ ಈ ಫೆಬ್ರವರಿ ಅವರ ಹುಟ್ಟುಹಬ್ಬ ಹಿನ್ನೆಲೆ ವಿಡಿಯೋ ಮಾಡಿ ಅಭಿಮಾನಿಗಳಿಗೆ ಮನವಿ ಹಾಗೂ ಧನ್ಯವಾದ ಕೂಡ ಹೇಳಿದ್ದಾರೆ.
ಹಾಗೆ ನಟಿ ರಕ್ಷಿತಾ ನಿರ್ದೇಶಕ ಪ್ರೇಮ್ ಮನೆಯಲ್ಲಿ ರಾಣಾ ವಿವಾಹಕ್ಕೆ ದಂಪತಿ ಸಮೇತ ಅವರು ಆಗಮಿಸಿದ್ದರು. ಹಾಗೆ ಅವರ ಹುಟ್ಟು ಹಬ್ಬ ಹಿನ್ನೆಲೆ ವಿಡಿಯೋ ಕೂಡ ಮಾಡಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಮನೆ ಹತ್ತಿರ ಯಾರು ಬಾರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹಾಗೆ ಅನಾರೋಗ್ಯ ಹಿನ್ನೆಲೆ ಯಾರನ್ನೂ ಭೇಟಿಯಾಗುವುದಿಲ್ಲ ಎಂದಿದ್ದಾರೆ.

ವಿಡಿಯೋದಲ್ಲಿ ಅವರು ಅಭಿಮಾನಿಗಳ ಕುರಿತು ಮಾತನಾಡುತ್ತಾ, ಶಸ್ತ್ರಚಿಕಿತ್ಸೆ ಮಾಡಲೇಬೇಕಿದೆ. ಒಂದಲ್ಲಾ ಒಂದು ದಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಖಚಿತ ಎಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲಿದ್ದ ಅವರು ಅನಾರೋಗ್ಯ ಕಾರಣ ನೀಡಿಯೇ ಜಾಮೀನಿಗೆ ಅರ್ಜಿ ಹಾಕಿದ್ದರು. ಶಸ್ತ್ರ ಚಿಕಿತ್ಸೆ ನಡೆಸಬೇಕಿರುವುದು ಅನಿವಾರ್ಯ ಎಂದು ದರ್ಶನ್ ಪರ ವಕೀಲರು ವಾದ ಮಾಡಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯೂ ಆಗಿದ್ದರು.
ಹಾಗಾದ್ರೆ ದರ್ಶನ್‌ಗೆ ಕಾಡುತ್ತಿರುವ ಸಮಸ್ಯೆ ಏನು?
ದರ್ಶನ್ ಜೈಲಿನಲ್ಲಿದಾಗಲೂ ನಡೆದಾಡಲು ಹಾಗೂ ಕುಳಿತುಕೊಳ್ಳಲು ಸಮಸ್ಯೆ ಎದುರಿಸಿದ್ದಾರೆ. ಬೆನ್ನು ನೋವಿನ ಕಾರಣ ಓಡಾಡಲು ಕೂಡ ಕಷ್ಟಪಡುತ್ತಿದ್ದರು. ತಾನಾಗಿಯೇ ನೋವು ಕಡಿಮೆ ಆಗಿದ್ದರೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರಲಿಲ್ಲವಂತೆ. ಆದ್ರೆ ಈಗ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾದ್ರೆ ಅವರಿಗೆ ಕಾಡಿದ ಬೆನ್ನು ನೋವಿನ ಸಮಸ್ಯೆ ಏನು?
ವೈದ್ಯಕೀಯ ವರದಿಯಲ್ಲಿ ದರ್ಶನ್ ಬೆನ್ನುಮೂಳೆಯಲ್ಲಿ ಐದನೇ ಲಂಬರ್ (L5) ಮತ್ತು ಮೊದಲ ಸ್ಯಾಕ್ರಲ್ (S1) ನಡುವಿನ ನರಗಳ ಮೇಲಿನ ಸಂಕೋಚನದಿಂದಾಗಿ ಇಂಟರ್ವರ್ಟೆಬ್ರಲ್ ಡಿಸ್ಕ್ ಪ್ರೋಲ್ಯಾಪ್ಸ್ (IVDP- Intervertebral Disc Prolapse) ಉಂಟಾಗಿದೆ ಎಂದು ಹೇಳಲಾಗಿದೆ. ಬೆನ್ನು ಮೂಳೆ ಅಥವಾ ಸ್ಪೈನಲ್ ಕಾರ್ಡ್ ರಚನೆಯಲ್ಲಿ ಒಂದು ಮೂಳೆ ಹಾಗೂ ಮತ್ತೊಂದು ಮೂಳೆ ನಡುವೆ ಡಿಸ್ಕ್ ರಚನೆ ಹಾಗೂ ಅದರಲ್ಲಿ ಫ್ಲೂಯಿಡ್ ಕೂಡ ಇರುತ್ತದೆ.
ಎರಡು ಮೂಳೆ ನಡುವೆ ಇರುವ ಮೃದುವಾದ ರಬ್ಬರ್‌ನಂತಹ ರಚನೆಯು ಕುಶನ್ ರೀತಿ ಕೆಲಸ ಮಾಡುತ್ತದೆ. ಇದು ಮೂಳೆಗಳ ನಡುವೆ ಸಂಪರ್ಕ ಸಾಧಿಸದಂತೆ ನೋಡಿಕೊಳ್ಳುತ್ತದೆ. ಹಾಗೆ ಮೂಳೆ ಸವೆಯದಂತೆ ನೋಡಿಕೊಳ್ಳುತ್ತದೆ. ಈ ಡಿಸ್ಕ್‌ಗಳ ಹೊರಭಾಗವು ಗಟ್ಟಿಯಾದ ಫೈಬ್ರೊಕಾರ್ಟಿಲೇಜ್ ಎಂಬ ಅಂಶದಿಂದ ಮಾಡಲ್ಪಟ್ಟಿರುತ್ತದೆ.
ಒಂದು ವೇಳೆ ಈ ಡಿಸ್ಕ್‌ನಲ್ಲಿನ ಹೊರ ಪದರವಾದ ಫೈಬ್ರೊಕಾರ್ಟಿಲ್ಯಾಜಿನಸ್ ಹಾನಿಯಾದಾಗ ಮೂಳೆಗಳ ನಡುವಿನ ನ್ಯೂಕ್ಲಿಯಸ್ ಪಲ್ಪೋಸಸ್ ಮೂಲಕ ಸ್ರವಿಕೆ ಆರಂಭವಾಗುತ್ತದೆ. ಇದು ಅತೀಯಾದ ನೋವು, ಓಡಾಡಲು ಆಗದೇ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯನ್ನು ಡಿಸ್ಕ್ ಜಾರುವಿಕೆ ಅಂತಲೂ ಕರೆಯುವುದುಂಟು.
ಸಂಕ್ರಾಂತಿ ಸಮಯಕ್ಕೆ ಶಸ್ತ್ರ ಚಿಕಿತ್ಸೆ
ಈ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಅವರಿಗೆ ಸಂಕ್ರಾತಿ ಹಬ್ಬದ ವೇಳೆಗೆ ಆಪರೇಷನ್ ಮಾಡುವ ಸಾಧ್ಯತೆ ಇದೆ. ಮೈಸೂರಿನಲ್ಲಿಯೇ ಈ ಶಸ್ತ್ರಚಿಕಿತ್ಸೆ ನೆರವೇರುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ನಟ ದರ್ಶನ್ ಕೂಡ ತಮ್ಮ ವಿಡಿಯೋ ಸಂದೇಶದಲ್ಲಿ ಈ ಕುರಿತು ಹೇಳಿದ್ದು, ಶಸ್ತ್ರ ಚಿಕಿತ್ಸೆ ಮಾಡದೆ ವಿಧಿ ಇಲ್ಲ ಎಂದಿದ್ದಾರೆ.



Click it and Unblock the Notifications
