ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ.! ಯಾರು ಈ ದಾದಾ? ಪಾಲ್ಕೆ ಕುರಿತು ನಿಮಗೆಷ್ಟು ಗೊತ್ತು?

ಭಾರತದಲ್ಲಿ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡುವವರಿಗೆ ಹಲವು ರೀತಿಯ ಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲೂ ಅತ್ಯುತ್ತಮ ಪ್ರಶಸ್ತಿ ಅಂದರೆ ಅದು ದಾದಾ ಸಾಹೇಬ್ ಪಾಲ್ಕೆ ಅವಾರ್ಡ್ ಆಗಿದೆ. ಈ ಪ್ರಶಸ್ತಿಯನ್ನು ಕಲಾ ಜಗತ್ತಿಗೆ ವ್ಯಕ್ತಿ ನೀಡಿರುವ ಒಟ್ಟಾರೆ ಕೊಡುಗೆಯನ್ನು ಆಧರಿಸಿ ನೀಡಲಾಗುತ್ತದೆ. ಇದು ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿದೆ.

ಈ ಬಾರಿಯ ದಾದಾ ಸಾಹೇಬ್ ಪಾಲ್ಕೆ ಅವಾರ್ಡ್‌ ಅನ್ನು ಬಾಲಿವುಡ್‌ನ ದಂತಕಥೆ ಮಿಥುನ್ ಚಕ್ರವರ್ತಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Dada Saheb Palke Award To Mithun Chakraborty Who Is This Dada

"ಮಿಥುನ್ ದಾ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ದಾದಾಸಾಹೇಬ್ ಫಾಲ್ಕೆ ಆಯ್ಕೆ ಜ್ಯೂರಿ ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ಖ್ಯಾತ ನಟ, ಶಾ. ಮಿಥುನ್ ಚಕ್ರವರ್ತಿ ಜಿ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ಘೋಷಿಸಲು ಗೌರವವಾಗಿದೆ. ಈ ಪ್ರಶಸ್ತಿಯನ್ನು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನೀಡಲಾಗುವುದು. ಅಕ್ಟೋಬರ್ 8, 2024 ರಂದು ನಡೆಸಲು ಉದ್ದೇಶಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗವುದು ಎಂದಿದ್ದಾರೆ.

ಈ ಮೊದಲು ಮಿಥುನ್ ಚಕ್ರವರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಬಾಲಿವುಡ್‌ನಲ್ಲಿ ನೂರಾರು ಸಿನಿಮಾದಲ್ಲಿ ನಟಿಸಿರುವ ಮಿಥುನ್ ಚಕ್ರವರ್ತಿ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ದಾದಾ ಅಂತಲೇ ಅವರು ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ದಾರೆ.

ಮಿಥುನ್ ಚಕ್ರವರ್ತಿ ಅವರ ಕುರಿತು

ಮಿಥುನ್ ಚಕ್ರವರ್ತಿ ಕೊಲ್ಕತ್ತಾದಲ್ಲಿ ಜನಿಸಿದರು ಮತ್ತು 1976 ರ ಚಲನಚಿತ್ರ 'ಮೃಗಯಾ'ದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು, ಈ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಸಸ್ತಿ ಸಹ ದೊರಕಿದೆ. ಮೂಲತಃ ಬೆಂಗಾಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಬ್ಯಾಡ್ ಬಾಯ್ಸ್ ಎಂಬ ಬಾಲಿವುಡ್ ಸಿನಿಮಾ ಮೂಲಕ ಹಿಂದಿಗೆ ಪದಾರ್ಪಣೆ ಮಾಡಿದರು.

ದಾದಾ ಸಾಹೇಬ್ ಪಾಲ್ಕೆ ಯಾರು?

ಸಾಮಾನ್ಯ ಹೊಸ ತಲೆಮಾರಿನ ಸಿನಿಮಾಗೂ ಮೊದಲೇ ಭಾರತದ ಚಿತ್ರರಂಗವನ್ನು ಉತ್ತುಂಗಗಕ್ಕೆ ಏರಿಸಿದ ಕೀರ್ತಿ ಈ ನಿರ್ದೇಶಕರಕ್ಕೂ. ಇವರನ್ನು 'ಭಾರತೀಯ ಸಿನಿಮಾದ ಪಿತಾಮಹ' ಎಂದು ಕರೆಯಲಾಗುತ್ತದೆ. ಸಾವಿರಾರು ಮಂದಿ ಕಲಾವಿದರನ್ನು ಹಿಂದಿ ಚಿತ್ರರಂಗಕ್ಕ ಪರಿಚಯಿಸಿದ ಕೀರ್ತಿಯೂ ಸಹ ಇವರಿಗೆ ಸಲ್ಲಬೇಕು.

ಮಹಾರಾಷ್ಟ್ರದ ನಾಸಿಕ್‌ನ ತ್ರಯಂಬಕ್ ನಗರದಲ್ಲಿ 1870 ರಲ್ಲಿ ಧುಂಡಿರಾಜ್ ಗೋವಿಂದ್ ಫಾಲ್ಕೆಯಾಗಿ ಜನಿಸಿದ ಫಾಲ್ಕೆ ನಂತರ ಸಾಮಾನ್ಯ ಬ್ರಾಹ್ಮಣ ಕುಟುಂಬದಂತೆ ಕುಲಕಸುಬು ಮಾಡಲು ಮುಂದಾದರು.

ಆದರೆ ಫಾಲ್ಕೆ ಅವರು ತಮ್ಮ 15ನೇ ವಯಸ್ಸಿನಲ್ಲಿ ಮುಂಬೈನ ಅತ್ಯಂತ ಹಳೆಯ ಕಲಾ ಸಂಸ್ಥೆಗೆ ದಾಖಲಾದರು. ಇಲ್ಲಿಯೇ ಅವರು ಒಂದು ವರ್ಷದ ಡ್ರಾಯಿಂಗ್ ಕೋರ್ಸ್ ಪೂರ್ಣಗೊಳಿಸಿದ್ದರು. ಆರಂಭದಲ್ಲಿ ಅವರು ಛಾಯಾಗ್ರಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಫಾಲ್ಕೆ ಅವರು ಸ್ವತಃ ಕ್ಯಾಮೆರಾ ಹೊಂದಿದ ಬಳಿಕ ಛಾಯಾಗ್ರಹಣ ಮತ್ತು ಮುದ್ರಣದಲ್ಲಿ ತಮ್ಮ ಪ್ರಯೋಗಗಳನ್ನು ಪ್ರಾರಂಭಿಸಿದರು. 1890 ರ ದಶಕದ ಮಧ್ಯಭಾಗದಲ್ಲಿ, ಫಾಲ್ಕೆ ಅವರು ವೃತ್ತಿಪರ ಛಾಯಾಗ್ರಾಹಕರಾಗಿ ತಮ್ಮ ಅಲ್ಪಾವಧಿಯ ವೃತ್ತಿಜೀವನವನ್ನು ಪ್ರಾರಂಭಿಸಿದರು.

ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು ತಮ್ಮದೇ ಪಾಲ್ಕೆ ಫಿಲ್ಮ್ಸ್‌ ಕಂಪನಿ ತೆರೆದರು. ಅವರು ಮೊದಲ ಮೂಕಿ ಸಿನಿಮಾವಾದ ರಾಜಾ ಹರಿಶ್ಚಂದ್ರವನ್ನು ನಿರ್ಮಿಸಿದರು. ಈ ಸಿನಿಮಾದ ಬಳಿಕ 27 ಕಿರುಚಿತ್ರಗಳನ್ನು ಮತ್ತು 90 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದರು. ಅವರ ಇತರ ಕೆಲವು ಪ್ರಸಿದ್ಧ ಕೃತಿಗಳೆಂದರೆ ಲಂಕಾ ದಹನ್, ಶ್ರೀ ಕೃಷ್ಣ ಜನ್ಮ ಮತ್ತು ಸತ್ಯವಾನ್ ಸಾವಿತ್ರಿ. ಹೀಗಾಗಿ ಅವರ ಅಭೂತ ಪೂರ್ವ ಕೊಡುಗೆಯ ಗುರುತಿಸಿದ ಭಾರತ ಸರ್ಕಾರವು 1969 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವುದಾಗಿ ಘೋಷಿಸಿತು.

English summary

Dada Saheb Palke Award To Mithun Chakraborty! Who Is This Dada?

Mithun Chakraborty was selected for Padma Bhushan. Mithun Chakraborty, who has acted in hundreds of movies in Bollywood, has acted in many different roles and is known as Sai.
Story first published: Monday, September 30, 2024, 11:35 [IST]
X
Desktop Bottom Promotion