Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅಬ್ಬರಿಸಲಿದೆ ಫೆಂಗಲ್ ಚಂಡಮಾರುತ..! ಫೆಂಗಲ್ ಅರ್ಥವೇನು? ಹೆಸರು ಇಡುವುದು ಯಾರು?
ಹವಾಮಾನ ಬದಲಾಗುತ್ತಿದೆ. ಹಾಗೆ ಒಂದಲ್ಲಾ ಒಂದು ಚಂಡಮಾರುತಗಳು ಈಗ ಕಾಣಿಸಿಕೊಳ್ಳಲು ಆರಂಭಿಸಿದೆ. ಈಗ ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರೂಪಗೊಂಡ ಫೆಂಗಲ್ ಚಂಡಮಾರುತ ಕರ್ನಾಟಕದತ್ತ ಆಗಮಿಸುತ್ತಿದೆ. ಫೆಂಗಲ್ ಚಂಡಮಾರುತ ಸಮೀಪಿಸುತ್ತಿರುವಂತೆಯೇ ತಮಿಳುನಾಡು ಹಾಗೂ ಪುದುಚೆರಿಯ ಹಲವು ಕಡೆ ರೆಡ್ ಅಲರ್ಟ್ ಘೋಷಣೆಯಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ವಾಯುಬಾರ ಕುಸಿತದ ಪರಿಣಾಮವಾಗಿ ಈ ಫೆಂಗಲ್ ಚಂಡಮಾರುತ ಸೃಷ್ಟಿಯಾಗಿದೆ. ಹಾಗೆ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ನಿರೀಕ್ಷೆ ಕೂಡ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಚಂಡಮಾರುತದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಉತ್ತರಕ್ಕೆ ಗಂಟೆಗೆ 10 ಕಿ.ಮೀ ವೇಗದಲ್ಲಿ ಈ ಚಂಡಮಾರುತ ಚಲಿಸುತ್ತಿದೆ.

ಚೆನ್ನೈ ಸೇರಿ ಅಲ್ಲಿನ ಹಲವು ಕಡೆಗಳಲ್ಲಿ ಮಂಗಳವಾರದಿಂದ ಮಳೆಯಾಗುತ್ತಿದೆ. ಈ ಪ್ರಮಾಣ ಮುಂದುವರೆದರೆ ತಮಿಳುನಾಡಿನ ಕರಾವಳಿ ಹಾಗೂ ದಕ್ಷಣ ಭಾಗದಲ್ಲಿ ಅತ್ಯಧಿಕ ಹಾನಿ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ. ಗುರುವಾರ ನವೆಂಬರ್ 28 ರವರೆಗೆ ವಿವಿಧ ಕಡೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ನವೆಂಬರ್ 29ರ ವರೆಗೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಹಾಗೆ ಹಲವು ಕಡೆಗಳಲ್ಲಿ ಶಢಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿತ್ತು, ತೀರ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಸಮುದ್ರ ತೀರದಲ್ಲಿನ ಪ್ರವಾಸಿ ತಾಣಗಳನ್ನ ಮುಂದಿನ ಆದೇಶದ ವರೆಗೂ ಮುಚ್ಚಲಾಗಿದೆ.
ಇನ್ನು ಕರ್ನಾಟಕದಲ್ಲೂ ಮುಂದಿನ ನಾಲ್ಕೈದು ದಿನ ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬೆಂಗಳೂರು ಸೇರಿದಂತೆ ಶಿವಮೊಗ್ಗ, ಉಡುಪಿ, ಮಂಡ್ಯ, ರಾಮನಗರ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ವಿಜಯನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಹಾಗೆ ಮೈಸೂರು, ಚಾಮರಾಜನಗರ, ಧಾರವಾಡ, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ, ಕೊಡಗು, ಕೋಲಾರ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ. ಹಾಗೆ ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.
ಫೆಂಗಲ್ ಚಂಡಮಾರುತ ಎಂದು ಹೆಸರು ಕೊಟ್ಟಿದ್ಯಾರು?
ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ಮೇಲ್ವಿಚಾರಣೆಯ ವ್ಯವಸ್ಥಿತ ಕಾರ್ಯವಿಧಾನದ ಭಾಗವಾಗಿ ಈ ಚಂಡಮಾರುತಕ್ಕೆ ಫೆಂಗಲ್ ಚಂಡಮಾರುತ ಎಂಬ ಹೆಸರು ಬಂದಿದೆ. ಈ ಸಂಸ್ಥೆಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಓಮನ್‌ನಂತಹ ದೇಶಗಳನ್ನು ಒಳಗೊಂಡಿರುವ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಉಂಟಾಗುವಂತಹ ಸೈಕ್ಲೋನ್‌ಗಳಿಗೆ ಹೆಸರು ಇಡುವ ಕಾರ್ಯ ಮಾಡಲಿದೆ.
'ಫೆಂಗಲ್' ಎಂದರೆ ಬಲವಾದ ಗಾಳಿ ಎಂಬ ಅರ್ಥ ನೀಡುತ್ತದೆ. ಈ ಹೆಸರುಗಳನ್ನು ಪ್ರಾದೇಶಿಕ ಲಕ್ಷಣಗಳು, ಭಾಷೆ, ಸೈಕ್ಲೋನ್‌ನಿಂದ ಪ್ರಭಾವಕ್ಕೆ ಒಳಗಾಗುವ ದೇಶದ ಸಂಬಂಧಿಸಿದಂತೆ ಇಡಲಾಗುತ್ತದೆ. ಉಚ್ಚರಿಸಲು ಸುಲಭವಾಗುವಂತೆ ಹಾಗೂ ಸರಳವಾಗಿ ಗುರುತಿಸುವಂತೆ ಈ ಹೆಸರನ್ನೂ ಸೂಚಿಸಲಾಗುತ್ತದೆ. ಫೆಂಗಲ್ ಅಂದರೆ ಅರೇಬಿಕ್‌ನಲ್ಲಿ ಅಸಡ್ಡೆ ಎಂಬ ಅರ್ಥವೂ ಇದೆ. ಹಿಂದೆ ಚಂಡಮಾರುತಕ್ಕೆ ಹೆಸರು ಸೂಚಿಸುವ ಪರಿಪಾಠವಿರಲಿಲ್ಲ. ಒಂದೊಂದು ದೇಶ ಅಥವಾ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಈ ಹೆಸರನ್ನು ಸೂಚಿಸಲೆಂದೇ ವಿಶ್ವ ಆರೋಗ್ಯ ಸಂಸ್ಥೆ ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗವನ್ನು ಕಟ್ಟಿತ್ತು.



Click it and Unblock the Notifications
