Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನವೆಂಬರ್ 30ಕ್ಕೆ ಅಪ್ಪಳಿಸಲಿದೆ ದಿತ್ವಾ ಚಂಡಮಾರುತ: ಎಲ್ಲೆಲ್ಲಿ ಮಳೆ, ಯಾವ ಪ್ರದೇಶಕ್ಕೆ ಎಚ್ಚರಿಕೆ?
ಮಲಕ್ಕಾ ಜಲಸಂಧಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಪಕ್ಕದ ಭಾಗಗಳ ಮೇಲೆ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿ ಸೆನ್ಯಾರ್ ಚಂಡಮಾರುತ ರೂಪುಗೊಂಡಿತ್ತು. ಇದರಿಂದ ಹಲವು ಕಡೆಗಳಲ್ಲಿ ಮಳೆಯಾಗಿತ್ತು. ಆದ್ರೆ ಈಗ ಸೆನ್ಯಾರ್ ದುರ್ಬಲಗೊಂಡಿದ್ದು, ಅದರ ಜೊತೆಗೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ನೀಡಲಾಗಿದೆ. ನವೆಂಬರ್ 30ರ ಸುಮಾರಿಗೆ ಈ ಚಂಡಮಾರುತವು ತಮಿಳುನಾಡು, ಪುದುಚೆರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲಕ್ಕಾ ಜಲಸಂಧಿ ಮತ್ತು ಪಕ್ಕದ ಇಂಡೋನೇಷ್ಯಾದ ಮೇಲೆ 'ಸೆನ್ಯಾರ್' ಚಂಡಮಾರುತವು ಆಳವಾದ ಹಾನಿ ಉಂಟು ಮಾಡಿದೆ. ಅದರ ನಡುವೆಯೇ ಈಗ ಮತ್ತೊಂದು ಚಂಡಮಾರುತ ಅಪ್ಪಳಿಸುವುದು ಖಚಿತವಾಗಿದೆ. ಈ ಚಂಡಮಾರುತಕ್ಕೆ ದಿತ್ವಾ ಎಂದು ಕರೆಯಲಾಗಿದೆ. ಇದು ನೈಋತ್ಯ ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿ ನೆಲೆಗೊಂಡಿದೆ, ಇದು ನವೆಂಬರ್ 27-30 ರಂದು ತಮಿಳುನಾಡಿನಲ್ಲಿ ಭಾರೀ ಅಥವಾ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ದಿತ್ವಾ ಚಂಡಮಾರುತವು ಇಂದು ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ 6.9°N/81.9°E ಬಳಿ ರೂಪುಗೊಂಡಿದೆ. ಇದು ಪೊಟ್ಟುವಿಲ್, ಬಟಿಕಲೋವಾದ ~90 ಕಿಮೀ ದಕ್ಷಿಣ ಪೂರ್ವ ಮತ್ತು ಚೆನ್ನೈನ ~700 ಕಿಮೀ ದಕ್ಷಿಣ ಪೂರ್ವ ಕರಾವಳಿಗೆ ಹತ್ತಿರದಲ್ಲಿದೆ. ಈ ವ್ಯವಸ್ಥೆಯು ನವೆಂಬರ್ 30 ರ ಆರಂಭದ ವೇಳೆಗೆ ನೈರುತ್ಯ ದಿಕ್ಕಿಗೆ ಚಲಿಸಲಿದೆ. ಹಾಗೆ ಉತ್ತರ ತಮಿಳುನಾಡು-ಪುದುಚೇರಿ-ದಕ್ಷಿಣ ಆಂಧ್ರಪ್ರದೇಶ ಕರಾವಳಿಯನ್ನು ತಲುಪುತ್ತದೆ ಎಂದು ಐಎಂಡಿ ತನ್ನ ವರದಿಯಲ್ಲಿ ತಿಳಿಸಿದೆ.
ಈ ಚಂಡಮಾರುತದ ಹಿನ್ನಲೆಯಲ್ಲಿ ಹವಾಮಾನ ಇಲಾಖೆಯು ನವೆಂಬರ್ 27, 28 ಮತ್ತು 29 ರಂದು ಚೆನ್ನೈ, ನಾಗಪಟ್ಟಣಂ, ತಿರುವಳ್ಳೂರು ಮತ್ತು ತಂಜಾವೂರು ಸೇರಿದಂತೆ ಹಲವಾರು ತಮಿಳುನಾಡು ಜಿಲ್ಲೆಗಳಿಗೆ ಹಳದಿ ಮತ್ತು ಆರೇಂಜ್ ಅಲರ್ಟ್ ಅನ್ನು ಹೊರಡಿಸಿದೆ. ಇದರಿಂದ ನವೆಂಬರ್ 27-30 ರವರೆಗೆ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ನವೆಂಬರ್ 28 ಮತ್ತು 29 ರಂದು ಪ್ರತ್ಯೇಕವಾದ ಮಳೆ ಬೀಳಲಿದೆ. ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂ ಮತ್ತು ರಾಯಲಸೀಮಾದಲ್ಲಿ ನವೆಂಬರ್ 28-ಡಿಸೆಂಬರ್ 1ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನವೆಂಬರ್ 30, 2025 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಹಾಗೆ ಈ ಚಂಡಮಾರುತದ ಪರಿಣಾಮವಾಗಿ ಗಂಟೆಗೆ 80-90 ಕಿ.ಮೀ ವೇಗದ ಗಾಳಿ ಮತ್ತು ಅಲೆಗಳ ಅಬ್ಬರ ಕಂಡುಬರುವ ನಿರೀಕ್ಷೆಯಿದೆ.
ಕರ್ನಾಟಕದಲ್ಲೂ ಮಳೆ ಸಂಭವ
ಈ ದಿತ್ವಾ ಚಂಡಮಾರುತ ಹಿನ್ನೆಲೆ ಕರ್ಕಾಟಕ ಭಾಗದಲ್ಲೂ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ, ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಸಾಧಾರಣದಿಂದ ಕೂಡಿದ ಮಳೆ ಬೀಳಬಹುದು ಎನ್ನಲಾಗಿದೆ.
ಇದಕ್ಕೂ ಮೊದಲು ಸೆನ್ಯಾರ್ ಚಂಡಮಾರುತವು ಇದೇ ರೀತಿ ಅಪ್ಪಳಿಸಿತ್ತು. ಆದ್ರೆ ಅದರ ಪರಿಣಾಮ ಬಹಳ ಕಡಿಮೆಯಾಗಿತ್ತು. ಬಂಗಾಳಕೊಲ್ಲಿಯ ನೈರುತ್ಯ ಮತ್ತು ಶ್ರೀಲಂಕಾದ ಆಗ್ನೇಯ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶಗಳಲ್ಲಿ ಕಡಿಮೆ ಒತ್ತಡದ ಪ್ರದೇಶ ಗುರುತಿಸಲಾಗಿತ್ತು. ಸದ್ಯ ಈಗ ನವೆಂಬರ್ 30ರ ಸುಮಾರಿಗೆ ದಿತ್ವಾ ಚಂಡಮಾರುತವು ತಮಿಳುನಾಡು, ಪುದುಚೆರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



Click it and Unblock the Notifications
