Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಕ್ರಿಕೆಟರ್ ರಿಂಕು ಸಿಂಗ್ ತಂದೆ ಕ್ಯಾನ್ಸರ್‌ನಿಂದ ನಿಧನ! ಅವರಿಗೆ ಕಾಡಿದ ಲಿವರ್ ಕ್ಯಾನ್ಸರ್ ಕುರಿತು ಗೊತ್ತಾ?
ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್ ಈಗ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯ ಆಡುತ್ತಿದ್ದಾರೆ, ಆದ್ರೆ ಈ ನಡುವೆ ಅವರಿಗೆ ಕುಟುಂಬಸ್ಥರಿಂದ ಬಂದಿರುವ ಸುದ್ದಿ ಆಘಾತ ತಂದಿದೆ. ರಿಂಕು ಸಿಂಗ್ ಅವರ ತಂದೆ ಕ್ಯಾನ್ಸರ್ ಕಾರಣದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತ ತಂಡದಿಂದ ಹೊರಗುಳಿಯಲಿದ್ದಾರೆ.
ಸದ್ಯ ಅವರು ತವರಿಗೆ ಆಗಮಿಸಿದ್ದು ಮುಂದಿನ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ, ಹಾಗೆ ಬಿಸಿಸಿಐ ರಿಂಕು ಸಿಂಗ್ ಹಾಗೂ ಕುಟುಂಬಸ್ಥರೊಂದಿಗೆ ನಿಲ್ಲುವುದಾಗಿ ಹೇಳಿಕೊಂಡಿದೆ. ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ ಅವರು 4 ನೇ ಹಂತದ ಲಿವರ್ ಕ್ಯಾನ್ಸರ್‌ನೊಂದಿಗೆ ದೀರ್ಘಕಾಲದ ಹೋರಾಟದ ನಂತರ ನಿಧನರಾಗಿದ್ದಾರೆ.

ಹಲವು ಸಮಯದಿಂದ ಅವರು ಈ ಕ್ಯಾನ್ಸರ್ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿತ್ತು ನಂತರ ಅವರನ್ನು ಫೆಬ್ರವರಿ 21 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಆರೋಗ್ಯ ಹದಗೆಟ್ಟ ಕಾರಣ ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
4ನೇ ಹಂತದ ಕ್ಯಾನ್ಸರ್ ಎಂದರೆ ಅವರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಯಕೃತ್ತಿನಿಂದ ದೇಹದ ಇತರ ಭಾಗಗಳಿಗೆ ಹರಡಿರುವ ಸ್ಥಿತಿಯಾಗಿದೆ. ಈ ಹಂತದಲ್ಲಿ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ, ಆದರೆ ಪೂರ್ಣ ಪ್ರಮಾಣದ ಚಿಕಿತ್ಸೆಯೂ ಅವರನ್ನು ಒಂದಿಷ್ಟು ದಿನ ಬದುಕುಳಿಸುವ ಸಾಧ್ಯತೆಗಳು ಇರಲಿದೆ. ಸದ್ಯ ಈಗ ರಿಂಕು ಸಿಂಗ್ ತಂದೆ ಕೂಡ ಈ ಲಿವರ್ ಕ್ಯಾನ್ಸರ್ ಕಾರಣದಿಂದಾಗಿ ಮೃತಪಟ್ಟಿದ್ದಾರೆ. ಕಡು ಬಡ ಕುಟುಂಬದಲ್ಲಿ ರಿಂಕು ಸಿಂಗ್ ಕ್ರಿಕೆಟ್ ಕನಸು ಕಂಡು ಇತ್ತೀಚಿನ ವರ್ಷದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಹಾಗೆ ಇತ್ತೀಚಿಗೆ ದೊಡ್ಡ ಮನೆ ಕಾರು ಕೂಡ ಖರೀದಿಸಿದ್ದರು.
4ನೇ ಹಂತದ ಲಿವರ್ ಕ್ಯಾನ್ಸರ್ ಕುರಿತು ಇನ್ನಷ್ಟು ಮಾಹಿತಿ!
ಲಿವರ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಗುರುತಿಸಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ಇದೆ. ಗುಣಪಡಿಸಬಹುದಾದ ಕ್ಯಾನ್ಸರ್ ಬಗೆಯಲ್ಲಿ ಲಿವರ್ ಕ್ಯಾನ್ಸರ್ ಕೂಡ ಒಂದಾಗಿದೆ. ಆದ್ರೆ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಸೂಕ್ತ ಚಿಕಿತ್ಸೆಯಿಂದ ಮಾತ್ರ ಇದು ಸಾಧ್ಯವಾಗಲಿದೆ. ಈ 4ನೇ ಹಂತದ ಲಿವರ್ ಕ್ಯಾನ್ಸರ್ ಅನ್ನು ಮೆಟಾಸ್ಟಾಟಿಕ್ ಲಿವರ್ ಕ್ಯಾನ್ಸರ್ ಎಂದು ಕೂಡ ಕರೆಯುತ್ತಾರೆ. ಇದು ಯಕೃತ್ತಿನ ಕ್ಯಾನ್ಸರ್‌ನ ಅತ್ಯಂತ ಮುಂದುವರಿದ ಹಂತವಾಗಿದೆ, ಇದರಲ್ಲಿ ಕ್ಯಾನ್ಸರ್ ಯಕೃತ್ತನ್ನು ಮೀರಿ ಶ್ವಾಸಕೋಶಗಳು, ಮೂಳೆಗಳು ಅಥವಾ ಹತ್ತಿರದ ದುಗ್ಧರಸ ಗ್ರಂಥಿಗಳಂತಹ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ಹಂತದಲ್ಲಿ ಚಿಕಿತ್ಸೆ ತಡವಾಗುತ್ತದೆ, ಹಾಗೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯಾಗಿರಲಿದೆ.
4ನೇ ಹಂತದ ಲಿವರ್ ಕ್ಯಾನ್ಸರ್ ಲಕ್ಷಣಗಳೇನು?
ಲಿವರ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆಗೆ ಮುಂದಾಗುವುದು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ, ಆದ್ರೆ 4ನೇ ಹಂತದ ಲಿವರ್ ಕ್ಯಾನ್ಸರ್‌ನ ಲಕ್ಷಣವೇನು ಎಂಬುದನ್ನು ತಿಳಿದುಕೊಳ್ಳೋಣ. ಹೆಚ್ಚಿನ ಕ್ಯಾನ್ಸರ್ ಪ್ರಕಾರಗಳಂತೆ ಈ ಲಿವರ್ ಕ್ಯಾನ್ಸರ್ ಸಹ ಆರಂಭದಲ್ಲಿ ತಿಳಿದುಬರುವುದಿಲ್ಲ. 3ನೇ ಹಂತದಲ್ಲಿ ಈ ಕ್ಯಾನ್ಸರ್ ಲಕ್ಷಣಗಳು ಗೋಚರವಾಗುವುದು ನೋಡಬಹುದು. ಸಾಮಾನ್ಯ ಈ ಕೆಳಗಿನ ಲಕ್ಷಣಗಳು 4ನೇ ಹಂತದಲ್ಲಿ ಕಾಣಿಸಬಹುದು.
ಕಾಮಾಲೆ
ತೂಕ ಇಳಿಕೆ
ಹಸಿವಾಗದೆ ಇರುವುದು
ಆಯಾಸ
ಮೂಳೆ ನೋವು ಅಥವಾ ಸವೆತದಿಂದ ನೋವು
ಉಸಿರಾಟಕ್ಕೆ ಸಮಸ್ಯೆ
ಚಿಕಿತ್ಸೆಗಳೇನು?
ಕೀಮೋಥೆರಪಿ
ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್
ಟ್ರಾನ್ಸ್‌ಆರ್ಟೀರಿಯಲ್ ಕೀಮೋಎಂಬೊಲೈಸೇಶನ್
ಯಕೃತ್ತು ಕಸಿ



Click it and Unblock the Notifications