Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈಶಾ ಫೌಂಡೇಶನ್ ಜಗ್ಗಿ ವಾಸುದೇವ್‌ಗೆ ಕೋರ್ಟ್ ತಪರಾಕಿ.! ಏಕೆ ಗೊತ್ತಾ? ಏನಿದು ಕೇಸ್?
ಈಶಾ ಫೌಂಡೇಶನ್ ಹಾಗೂ ಜಗ್ಗಿ ವಾಸುದೇವ್ ಅವರ ಹೆಸರು ನೀವೆಲ್ಲಾ ಕೇಳಿರುತ್ತೀರಿ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಅವರ ಫೌಂಡೇಶನ್ ತುಂಬಾನೆ ಫೇಮಸ್ ಆಗಿದೆ. ಹಾಗೆ ವಿಶ್ವದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅವರ ಹಿತವಚನ ಕೇಳಲು ಲಕ್ಷ ಲಕ್ಷ ಮಂದಿ ನಿತ್ಯವು ಭೇಟಿಯಾಗುತ್ತಾರೆ.
ಆದ್ರೆ ಆಗಾಗ ಅವರ ವಿರುದ್ಧ ಹಲವು ರೀತಿಯ ವಿವಾದಗಳು, ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ. ಇತ್ತೀಚಿಗೆ ಅವರ ವಿರುದ್ಧ ಕೇಳಿಬರುತ್ತಿದ್ದ ಪ್ರಕರಣವೊಂದು ಈಗ ಮತ್ತೆ ಸುದ್ದಿಯಾಗುತ್ತಿದೆ. ಮಹಿಳೆಯರನ್ನು ಅವರು ಬಲವಂತವಾಗಿ ಬಂಧಿಸಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಅಲ್ಲದೆ ತಮ್ಮ ಮಕ್ಕಳನ್ನು ಈಶಾ ಫೌಂಡೇಶನ್ ಬಂಧಿಸಿಟ್ಟಿದೆ ಎಂದು ಇಬ್ಬರು ಯುವತಿಯರ ತಂದೆ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆ ನಡೆಸುತ್ತಿರುವ ಕೋರ್ಟ್ ಜಗ್ಗಿ ವಾಸುದೇವ್ ಅವರ ವಿರುದ್ಧ ಕಿಡಿ ಕಾರಿದೆ. ವಾಸುದೇವ್ ಅವರ ಈಶಾ ಫೌಂಡೇಶನ್ ಕುರಿತು ಅಸಮಾಧಾನ ಹೊರಹಾಕಿದೆ.
ಏನಿದು ಪ್ರಕರಣ?
ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡುತ್ತಿದ್ದ ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಅವರು ತಮ್ಮ ಪುತ್ರಿಯರನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ತಮ್ಮ ಮಕ್ಕಳನ್ನು ಈಶಾ ಫೌಂಡೇಶನ್‌ನಲ್ಲಿಯೇ ಶಾಶ್ವತವಾಗಿ ಉಳಿಯುವಂತೆ ಮಾಡಲು ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಸೋಮವಾರ ನ್ಯಾಯಾಲಯಕ್ಕೆ ಹಾಜರಾದ 42 ಮತ್ತು 39 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು, ನಮ್ಮನ್ನು ಯಾರು ಸಹ ಬಂಧಿಸಿಟ್ಟಿಲ್ಲ, ನಾವು ನಮ್ಮ ಇಚ್ಚೆಯಂತೆ ಈಶಾ ಫೌಂಡೇಶನ್‌ಗೆ ಬಂದಿದ್ದೇವೆ. ನಮ್ಮನ್ನು ಯಾರು ಅಪಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಈ ಹಿಂದೆಯೂ ಈಶಾ ಫೌಂಡೇಶನ್ ಕುರಿತು ಹಲವು ಪ್ರಕರಣ, ದೂರು ಕೇಳಿಬಂದಿದ್ದ ಹಿನ್ನೆಲೆ ಈಶಾ ಫೌಂಡೇಶನ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಮರು ಪರಿಶೀಲಿಸಲು ಕೋರ್ಟ್ ತಿಳಿಸಿದೆ. ಹಾಗೆ ತಮ್ಮ ಮಕ್ಕಳನ್ನು ಮದುವೆ ಮಾಡಿ ಮನೆಯಿಂದ ಕಳುಹಿಸಿರುವ ಅವರು ಬೇರೆಯವರ ಮಕ್ಕಳ ಸನ್ಯಾಸ ಸ್ವೀಕರಿಸಲಿ ಎಂದು ಬಯಸುವುದೇಕೆ ಎಂದು ಜಗ್ಗಿ ವಾಸುದೇವ್ ಅವರಿಗೆ ಕೋರ್ಟ್ ಪ್ರಶ್ನಿಸಿದೆ.
'ತನ್ನ ಮಗಳನ್ನು ಮದುವೆ ಮಾಡಿಸಿ ಜೀವನದಲ್ಲಿ ನೆಲೆಯೂರುವಂತೆ ಮಾಡಿದ ವ್ಯಕ್ತಿ ಬೇರೆಯವರ ಹೆಣ್ಣುಮಕ್ಕಳನ್ನು ತಲೆ ಕೆಡಿಸಿಕೊಂಡು ಸನ್ಯಾಸಿ ಜೀವನ ನಡೆಸುವಂತೆ ಪ್ರೋತ್ಸಾಹಿಸುತ್ತಿರುವುದು ಏಕೆ ಎಂಬುದು ನಮಗೆ ತಿಳಿಯಬೇಕಿದೆ' ಎಂದು ನ್ಯಾಯಮೂರ್ತಿ ಶಿವಜ್ಞಾನಂ ಹೇಳಿದ್ದಾರೆ.
ಆದರೆ ಮಹಿಳೆಯರು ಸ್ವಯಂಪ್ರೇರಣೆಯಿಂದ ಈಶಾ ಫೌಂಡೇಶನ್‌ಗೆ ಬರುತ್ತಾರೆ. ಇಲ್ಲಿ ಉಳಿಯಲು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಈಶಾ ಫೌಂಡೇಶನ್ ಪ್ರತಿಪಾದಿಸಿದೆ.
ಯಾರು ಈ ಜಗ್ಗಿ ವಾಸುದೇವ್?
ತೆಲುಗು ಕುಟುಂಬದಲ್ಲಿ ಜನಿಸಿದ ಜಗದೀಶ್ ವಾಸುದೇವ್ ಅವರು ಬಿ.ವಿ ವಾಸುದೇವ್ ಮತ್ತು ಸುಶೀಲಾ ವಾಸುದೇವ್ ಅವರ ಐದು ಮಕ್ಕಳಲ್ಲಿ ಕಿರಿಯರಾಗಿದ್ದರು. ಸದ್ಗುರುಗಳ ತಂದೆ ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರಜ್ಞರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಜಗ್ಗಿ ವಾಸುದೇವ್ ಅವರು ಇಂಗ್ಲೀಷ್ ಭಾಷೆಯಲ್ಲಿ ಪದವಿ ಪಡೆದಿದ್ದಾರೆ. ಅವರು 1984ರಲ್ಲಿ ವಿಜಿಕುಮಾರಿ ಅವರನ್ನು ವಿವಾಹವಾಗಿದ್ದರು. ಜೊತೆಗೆ ಇವರಿಗೆ ಒಬ್ಬಳು ಮಗಳಿದ್ದಾಳೆ.
1992 ರಲ್ಲಿ ಚಿಕ್ಕದಾದ ಆಶ್ರಮ ಮತ್ತು ಯೋಗ ಕೇಂದ್ರವನ್ನು ಆರಂಭಿಸಿದ್ದರು. ಇಲ್ಲಿಂದ ಅವರ ಆಧ್ಯಾತ್ಮಿಕ ಜೀವನ ಆರಂಭಗೊಂಡಿತ್ತು. ಜನವರಿ 1997ರಲ್ಲಿ ಸದ್ಗುರು ಪತ್ನಿ ನಿಧನರಾದರು. ಆಕೆಯ ಸಾವಿನ ಹಿಂದೆ ಸದ್ಗುರು ಕೈವಾಡವಿದೆ ಎಂಬ ಆರೋಪ ಸಹ ಕೇಳಿಬಂದಿತ್ತು.
ಆದರೆ ಈಶಾ ಫೌಂಡೇಶನ್‌ಗೂ ಮುನ್ನ ಅವರು ಮೈಸೂರಿನಲ್ಲಿ ಕೋಳಿ ಫಾರಂ ತೆರೆದಿದ್ದರು. ಆದರೆ ನಿಧಾನವಾಗಿ ಅವರು ಆಧ್ಯಾತ್ಮದ ಕಡೆ ಒಲವು ಹೊಂದಿದರು. ಅವರೇ ಹೇಳಿದ ಪ್ರಕಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಒಮ್ಮೆ ಹೋದಾಗ ಅಲ್ಲಿ ಅವರಿಗೆ ಆಧ್ಯಾತ್ಮವನ್ನು ಅಪ್ಪಿಕೊಳ್ಳಬೇಕು ಎಂಬ ಮನಸ್ಸಾಗಿತಂತೆ.



Click it and Unblock the Notifications