Latest Updates
-
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್
ಶಿರಡಿ ಸಾಯಿ ಬಾಬಾ ಪಾತ್ರದಾರಿಗೆ ಅನಾರೋಗ್ಯ; ಹಣ ನೀಡಲು ಟ್ರಸ್ಟ್‌ಗೆ ಕೋರ್ಟ್ ಅನುಮತಿ!
ಶಿರಡಿ ಸಾಯಿ ಬಾಬಾ ಮಂದಿರಕ್ಕೆ ವರ್ಷವೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುವುದು ನಿಮಗೂ ತಿಳಿದಿದೆ. ಸಾಯಿ ಬಾಬಾ ದರ್ಶನಕ್ಕಾಗಿ ದೂರ ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಸಾಯಿ ಬಾಬಾ ಅವರನ್ನು ಪವಾಡ ಪರುಷ ಎಂಬಂತೆ ನೋಡಲಾಗಿದೆ. ಸದ್ಯ ಶಿರಡಿ ಸಾಯಿ ಬಾಬಾ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಿದ್ದ ಕಲಾವಿದರೊಬ್ಬರು ಈಗ ಆಸ್ಪತ್ರೆಯಲ್ಲಿದ್ದು, ಅವರಿಗೆ ಧನ ಸಹಾಯ ಮಾಡುವಂತೆ ಟ್ರಸ್ಟ್‌ಗೆ ಕೋರ್ಟ್ ಅನುಮತಿ ನೀಡಿದೆ.
ಬಾಲಿವುಡ್ ನಟ ಸುಧೀರ್ ದಳವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗಾಗಿ ಬರೋಬ್ಬರಿ 11 ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತಿದೆ. ಈ ಹಣವನ್ನು ಶಿರಡಿಯ ಸಾಯಿ ಬಾಬಾ ದೇವಸ್ಥಾನ ಟ್ರಸ್ಟ್ ನೀಡಬಹುದು ಎಂಬ ತೀರ್ಪನ್ನು ಬಾಂಬೆ ಹೈಕೋರ್ಟ್ ನೀಡಿದೆ. ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಮತ್ತು ಹಿತನ್ ಎಸ್ ವೆನೆಗಾವ್ಕರ್ ಅವರ ಪೀಠವು, "ಟ್ರಸ್ಟ್ ವೆಚ್ಚವನ್ನು ಭರಿಸಬಹುದು. ಜನರ ನಂಬಿಕೆ ಮತ್ತು ಹಿರಿಯ ನಟ ನಿರ್ವಹಿಸಿದ ಪಾತ್ರವನ್ನು ಪರಿಗಣಿಸಿ ಈ ಕಾರ್ಯ ಮಾಡಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯಾರು ಈ ನಟ ಸುಧೀರ್ ದಳವಿ?
ಸುಧೀರ್ ದಳವಿ ಭಾರತೀಯ ಸಿನಿಮಾ ಮತ್ತು ಕಿರುತೆರೆಯಲ್ಲಿ ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ಕಲಾ ಜಗತ್ತಿಗೆ ಬಹಳಷ್ಟು ಕೊಡಿಗೆ ನೀಡಿರುವ ವ್ಯಕ್ತಿ. ಅವರು 1977ರಲ್ಲಿ ತೆರೆಕಂಡ ಶಿರಡಿ ಕೆ ಸಾಯಿಬಾಬಾ ಎಂಬ ಧಾರಾವಾಹಿ ಅವರು ಸಾಯಿ ಬಾಬಾ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರ ಜೀವನ ಬದಲಾಗಿತ್ತು, ಹಲವರು ಅವರ ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದರು. ಹಾಗೆ ಅವರ ಅತ್ಯುತ್ತಮ ನಟನೆಯಿಂದ ಸಾಯಿಬಾಬಾ ಅವರ ಪವಾಡಗಳನ್ನು ತೆರೆ ಮೇಲೆ ಕಟ್ಟಿಕೊಟ್ಟಿದ್ದರು. ಅನಂತರ ಜನರು ಅವರನ್ನು ಸಾಯಿ ಬಾಬಾ ಆಗಿಯೇ ಗುರುತಿಸಲು ಆರಂಭಿಸಿದ್ದರು.
ಇದಲ್ಲದೆ 1987ರಲ್ಲಿ ರಾಮಾಯಣದಲ್ಲಿ ಋಷಿ ವಶಿಷ್ಠ ಪಾತ್ರದಲ್ಲಿ ನಟಿಸಿದ್ದರು. ಇದು ಕೂಡ ಅವರ ವೃತ್ತಿ ಜೀವನದಲ್ಲಿ ಅಚ್ಚಳಿಯದೆ ಉಳಿದ ಪಾತ್ರವಾಗಿತ್ತು.
ಸುಧೀರ್ ದಳವಿ ಅವರಿಗೆ ಕಾಡಿದ ಅನಾರೋಗ್ಯ
ನಟ ಸುಧೀರ್ ದಳವಿ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಸಿಸ್ ಎಂದು ಕರೆಯಲ್ಪಡುವ ಕಾಯಿಲೆಗೆ ತುತ್ತಾಗಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅನಾರೋಗ್ಯ ಸಮಸ್ಯೆಯಲ್ಲಿ ವ್ಯಕ್ತಿಯ ದೇಹದ ಅಂಗಗಳು ವೈಫಲ್ಯವಾಗುತ್ತವೆ. ಹಾಗೆ ದೇಹವು ಸೋಂಕಿಗೆ ತೀವ್ರ ಮತ್ತು ಅಗಾಧವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ. 84 ವರ್ಷದ ಅವರಿಗೆ ನಿತ್ಯ ಚಿಕಿತ್ಸೆಯ ಹಣ ಭರಿಸುವುದು ಕಷ್ಟವಾಗಿದೆ. ಹಲವು ಬಾರಿ ಕುಟುಂಬಸ್ಥರು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅವರಿಗೆ ಬಾಲಿವುಡ್‌ನ ಹಲವು ನಟ ನಟಿಯರು ಧನ ಸಹಾಯ ಕೂಡ ಮಾಡಿದ್ದಾರೆ. ಹಾಗೆ ಶಿರಡಿಯ ಸಾಯಿಬಾಬಾ ಟ್ರಸ್ಟ್ ಸಹ ಅವರ ಸಹಾಯಕ್ಕೆ ಧಾವಿಸಿದೆ.
ಆದ್ರೆ ಈ ಸಹಾಯ ಕಾರ್ಯವು ಕೋರ್ಟ್ ಮೆಟ್ಟಿಲೇರಿತ್ತು, ಟ್ರಸ್ಟ್‌ನ ಹಣವನ್ನು ಚಿಕಿತ್ಸೆಗೆ ಬಳಸುವ ಕುರಿತಾಗಿ ಟ್ರಸ್ಟ್‌ನ ವಕೀಲರು ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅವರ ಕಲಾ ಸೇವೆಯನ್ನು ಗುರುತಿಸಿರುವ ಕೋರ್ಟ್ ಟ್ರಸ್ಟ್ ವತಿಯಿಂದ ಧನಸಹಾಯ ಮಾಡಬಹುದು ಎಂಬ ತೀರ್ಪು ನೀಡಿದೆ. ಹೀಗಾಗಿ ನಟರಿಗೆ ಸುಮಾರು 15 ಲಕ್ಷ ರೂಪಾಯಿ ಸಹಾಯಕ್ಕೆ ಟ್ರಸ್ಟ್ ಮನವಿ ಮಾಡಿತ್ತು. ಅವರ ಚಿಕಿತ್ಸೆಗೆ ಈಗಾಗಲೆ 10 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚಾಗಿದೆ.
ಈಗ ಕುಟುಂಬಸ್ಥರು ಶಿರಡಿ ಟ್ರಸ್ಟ್ ಹಾಗೂ ಸಿನಿಮಾ ನಟ ನಟಿಯರು ಸೇರಿದಂತೆ ಅಭಿಮಾನಿಗಳು, ಭಕ್ತರು ನಟರ ಚಿಕಿತ್ಸೆಗೆ ಅಗತ್ಯ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ.



Click it and Unblock the Notifications
