Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ವಯಸ್ಸು ಕಡ್ಡಾಯ..! ಎಲ್ಲಿ.? ಏಕೆ ಈ ನಿಯಮ?
ಬಾಲ್ಯ ವಿವಾಹ ತಡೆಯಲು ಸರ್ಕಾರ ಎಷ್ಟೋ ಕ್ರಮ ಜಾರಿ ಮಾಡಿದ್ದರು ಹಾಗೆ ಕಠಿಣ ನಿಯಮ, ಜೈಲು, ದಂಡ ಹೀಗೆ ಹತ್ತಾರು ರೀತಿಯಲ್ಲಿ ಕಡಿವಾಣಕ್ಕೆ ಮುಂದಾದರು ಈ ಪಿಡುಗು ಇಂದಿಗೂ ಜಾರಿಯಲ್ಲಿರುವುದು ಆತಂಕ ಹುಟ್ಟಿಸುತ್ತೆ. ಅದರಲ್ಲೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಆಚರಣೆ ಸಂಪ್ರದಾಯ ಎನ್ನುವಂತೆ ಆಚರಿಸಲ್ಪಡುತ್ತದೆ. ಹೀಗಾಗಿ ಈ ಪಿಡುಗು ಹೋಗಲಾಡಿಸಲು ರಾಜಸ್ಥಾನ ಸರ್ಕಾರ ಹೊಸ ಆಲೋಚನೆ ಹೊರತಂದಿದೆ.
ಇನ್ಮು ಮುಂದೆ ವಿವಾಹವಾಗುವ ಜೋಡಿ ತನ್ನ ಆಹ್ವಾನ ಪತ್ರಿಕೆಯಲ್ಲಿ ತಮ್ಮ ವಯಸ್ಸನ್ನು ಕಡ್ಡಾಯವಾಗಿ ನಮೂದಿಸಿರಬೇಕು ಎಂಬ ನಿಯಮ ಜಾರಿ ಮಾಡಿದೆ. ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮುದ್ರಾಣಾಲಯಗಳು ಎರಡೂ ಕುಟುಂಬದವರ ಬಳಿಕ ಹುಡುಗ ಹಾಗೂ ಹುಡುಗಿಯ ವಯಸ್ಸನ್ನು ಕೇಳಿ ಅದನ್ನು ಹೆಸರಿನ ಮುಂದೆ ನಮೂದಿಸಬೇಕು ಎಂದು ನಿರ್ದೇಶನ ನೀಡಿದೆ.

ಹಾಗೆ ಮದುವೆಯ ಸಂದರ್ಭದಲ್ಲಿ ಶಾಮಿಯಾನ, ಟೆಂಟ್, ಪುರೋಹಿತರು, ಲೈಟಿಂಗ್ಸ್ ಹೀಗೆ ಎಲ್ಲಾ ವಿಭಾಗದಲ್ಲಿನ ನೌಕರರು, ಏಜೆಂಟರು ಈ ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಲು ಕಾನೂನಿನ ಕುರಿತು ತಿಳಿಹೇಳುವ ಕೆಲಸ ಮಾಡಬೇಕು ಎಂದಿದೆ.
ರಾಜಸ್ಥಾನದಲ್ಲಿ ಹಲವು ವರ್ಷಗಳಿಂದ ಬಾಲ್ಯ ವಿವಾಹಗಳನ್ನು ಆಚರಿಸುವ ಪ್ರಮುಖ ಸಂದರ್ಭಗಳೆಂದು ಪರಿಗಣಿಸಲಾಗಿರುವ ಅಕ್ಷಯ ತೃತೀಯ ಸಮಯವನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಆದೇಶ ನೀಡಲಾಗಿದೆ. ಈ ಸಮಯದಲ್ಲಿ ಹೆಚ್ಚಿನ ಜನರು ಬಾಲ್ಯ ವಿವಾಹಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆ ಈ ಅಕ್ಷಯ ತೃತೀಯ ದಿನವನ್ನು ವಿವಾಹಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿದೆ.
ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ಬಾಲ್ಯ ವಿವಾಹ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ಗ್ರಾಮ ಮತ್ತು ತಹಸಿಲ್ ಮಟ್ಟದಲ್ಲಿ ನಿಯೋಜಿಸಲಾದ ವಿವಿಧ ಇಲಾಖೆಗಳ ನೌಕರರು, ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಎಸಿಎಸ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹಾಗೆ ಇವರ ಜೊತೆಗೆ ವಿವಿಧ ಬೆಂಬಲ ಗುಂಪುಗಳು, ಮಹಿಳಾ ಗುಂಪುಗಳು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸುರಕ್ಷಾ ಸಖಿ, ಸ್ವ ಸಹಾಯ ಗುಂಪುಗಳು, ಸರ್ಕಾರ ಮಟ್ಟದಲ್ಲಿ ಅಂತಹ ಪೋಷಕರ ಭೇಟಿಯಾಗಿ ಅವರ ಚಿಂತನೆಗಳ ಬದಲಾಯಿಸಲು ಮುಂದಾಗುವಂತೆ ಸೂಚಿಸಲಾಗಿದೆ.
ಸದ್ಯ ಸರ್ಕಾರದ ಈ ಹೊಸ ಆಲೋಚನೆ ಕುರಿತಂತೆ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿವೆ. ಸರ್ಕಾರದ ಮಟ್ಟದಲ್ಲಿ ಬಾಲ್ಯ ವಿವಾಹ ತಡೆಗೆ ಇದು ಸೂಕ್ತ ಹಾಗೂ ವ್ಯವಸ್ಥಿತ ಆಲೋಚನೆಯಾಗುವುದಿಲ್ಲ. ಹಾಗೆ ಇದು ಯಶಸ್ವಿಯಾಗುವ ಯಾವುದೇ ಸೂಚನೆ ಇಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಹಾಗೆ ವಧು ವರರು ತಮ್ಮ ಜನ್ಮ ದಿನಾಂಕ ತಿಳಿಸಲು ಯಾವ ದಾಖಲಾತಿ ನೀಡಬೇಕು. ಹೀಗೆ ನೀಡಲಾಗಿರುವ ಜನ್ಮ ದಿನಾಂಕವು ಎಷ್ಟು ನಿಖರ ಎಂಬುದನ್ನು ಯಾರು ದೃಢಪಡಿಸುತ್ತಾರೆ? ಹೀಗೆ ಹಲವು ಪ್ರಶ್ನೆಗಳು ಈಗ ಮೂಡಿವೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಭಾರತದ 7 ರಾಜ್ಯಗಳಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ನಡೆಯುತ್ತದೆ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ್, ತ್ರಿಪುರ, ಅಸ್ಸಾಂ ಮತ್ತು ಆಂಧ್ರ ಪ್ರದೇಶ. 2029ರ ವೇಳೆಗೆ ಈ ಬಾಲ್ಯ ವಿವಾಹ ದರವನ್ನು ಶೇ.5ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. 2006 ರಲ್ಲಿ ಬಾಲ್ಯವಿವಾಹ ತಡೆ ಕಾಯ್ದೆ ಜಾರಿಗೆ ಬಂದ ನಂತರ 2019-21 ರಲ್ಲಿ 47.4ರಿಂದ ಶೇ.23.3ಕ್ಕೆ ಇಳಿಕೆ ಕಂಡಿದೆ. ಇದು ದಕ್ಷಿಣ ಏಷ್ಯಾದಲ್ಲಿ ಬಾಲ್ಯ ವಿವಾಹ ಪ್ರಮಾಣ ಇಳಿಕೆಗೆ ಗಮನಾರ್ಹ ಕೊಡುಗೆ ನೀಡಿದೆ.



Click it and Unblock the Notifications











