Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಡೆದಾಡುವ ರಾಮನನ್ನೇ ಸೃಷ್ಟಿಸಿದ ಕಲಾವಿದ..! ಅಯೋಧ್ಯೆ ರಾಮನ ಹೋಲುವ ಬಾಲಕ
ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡು ಭಾರೀ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿದೆ. ಈ ನಡುವೆ ರಾಮಲಲ್ಲಾನಿಗೆ ಜರುಗುವ ಆರತಿ ದರ್ಶನ ಪಡೆಯಲು ಭಕ್ತರು ನಿತ್ಯ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಬಾಲರಾಮನ ನೋಡಲೆಂದು ದೇಶದ ಮೂಲೆ ಮೂಲೆಯಿಂದಲೂ ಜನರ ಆಗಮನವಾಗುತ್ತಿದೆ.
ಇನ್ನೊಂದೆಡೆ ರಾಮನ ದರ್ಶನ ಪಡೆಯಲು ಸಾಧ್ಯವಾಗದವರಿಗಾಗಿ ದೂರದರ್ಶನ ವಾಹಿನಿ ಆರತಿಯನ್ನು ನೇರಪ್ರಸಾರ ಮಾಡುತ್ತಿದೆ. ಇದೂ ಸಾಲದಂತೆ ಆನ್‌ಲೈನ್‌ನಲ್ಲಿ ಪಾಸ್‌ಗಳ ಪಡೆಯಲು ಅನುವು ಮಾಡಿಕೊಡಲಾಗಿದೆ. ಈ ನಡುವೆ ರಾಮಲಲ್ಲಾನ ದರ್ಶನಕ್ಕಾಗಿ ಕಾಯುತ್ತಿರುವ ದಂಪತಿ ಬಾಲಕನೊಬ್ಬನಿಗೆ ರಾಮನಂತೆ ಬಣ್ಣ ಹಚ್ಚಿ ಸೇಮ್ ರಾಮನಂತೆ ಕಾಣುವಂತೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಈ ದಂಪತಿ ಬಾಲಕನೊಬ್ಬನಿಗೆ ರಾಮನಂತೆ ಬಣ್ಣ ಹಚ್ಚಿ ವೇಷ ಹಾಕಿಸಿ ಸಂಭ್ರಮಿಸಿದ್ದಾರೆ. ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಆಶಿಶ್ ಕುಂದು ಎಂಬ ಕಲಾವಿದ ಬಾಲಕನಿಗೆ ರಾಮನಂತೆ ಬಣ್ಣ ಹಚ್ಚಿದ್ದಾರೆ. ಅವರ ಕಾರ್ಯ ಕಂಡು ಜನ ಬೆರಗಾಗಿದ್ದಾರೆ. ಏಕೆಂದರೆ ರಾಮ ಲಲ್ಲಾ ಮೂರ್ತಿಯಂತೆಯೇ ಆ ಬಾಲಕ ಕಾಣುತ್ತಾನೆ. ಅಷ್ಟೊಂದು ಹೋಲಿಕೆ ಈ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದಿದೆ.

ಮೇಕಪ್ ಆರ್ಟಿಸ್ಟ್ ಕುಂದು ತನ್ನ ಪತ್ನಿಯ ಸಹಾಯದಿಂದ 9 ವರ್ಷದ ಬಾಲಕನನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾನ ವಿಗ್ರಹವನ್ನು ಹೋಲುವಂತೆ ಪರಿವರ್ತಿಸುವ ಕಾರ್ಯವನ್ನು ಕೈಗೊಂಡವರು. ಮನೆಯಲ್ಲಿ ತಯಾರಿಸಿದ ಮತ್ತು ಮಾರುಕಟ್ಟೆಯಲ್ಲಿ ಖರೀದಿಸಿದ ಮೇಕ್ಅಪ್ ವಸ್ತುಗಳ ಬಳಸಿ ಈ ಬಣ್ಣ ಬಳಿಯಲಾಗಿದೆಯಂತೆ. ಆದರೆ ಇದು ಒಂದೇ ದಿನ ಮಾಡಿದ ಕಲೆಯಲ್ಲವಂತೆ. ಇದಕ್ಕೂ ಮೊದಲು ಹಲವು ಬಾರಿ ಪ್ರಯತ್ನಿಸಿದ ಬಳಿಕ ಈ ರೀತಿಯ ಫಲಿತಾಂಶ ಅವರಿಗೆ ಸಿಕ್ಕಿದೆಯಂತೆ.
ನೀವು ಈ ಬಾಲಕನನ್ನು ಅಯೋಧ್ಯೆ ರಾಮ ಮಂದಿರ ರಾಮಲಲ್ಲಾನ ಪಕ್ಕದಲ್ಲಿ ನಿಲ್ಲಿಸಿದರೆ ಇಬ್ಬರಲ್ಲಿ ಯಾರು ನಿಜವಾದ ರಾಮ ಎಂದು ಕಂಡುಹಿಡಿಯುವುದು ಸಹ ಸ್ವಲ್ಪ ಕಷ್ಟವಾಗುತ್ತದೆ. ಅಷ್ಟೊಂದು ನಿಖರವಾಗಿ ಕಲಾವಿದ ರಾಮನ ಚಿತ್ರಿಸಿದ್ದಾನೆ. ಈ ರೀತಿ ಚಿತ್ರಿಸಲು ಅವರು ರಾಮನ ಚಿತ್ರವನ್ನು ಹಲವು ವಿಧದಲ್ಲಿ, ಹಲವು ಬಾರಿ ನೋಡಿದ್ದರಂತೆ. ಕೆಲವು ಫೋಟೋಗಳನ್ನು ಇಡೀ ದಿನ ನೋಡುತ್ತಿದ್ದರಂತೆ.
ಸದ್ಯ ಅವರ ಬಾಲರಾಮನ ಫೊಟೋಗಳು, ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಅವರ ಕಾರ್ಯ, ನೈಪುಣ್ಯತೆ ಕಂಡು ಜನರು ಬೆರಗಾಗಿದ್ದಾರೆ. ಜೊತೆಗೆ ನಡೆದಾಡುವ ರಾಮಲಲ್ಲಾನ ಕಂಡು ನಿಬ್ಬೆರಗಾಗಿದ್ದಾರೆ.
ಈ ದಂಪತಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಒಂದು ದಿನ ಅವರಿಗೆ ರಾಮಲಲ್ಲಾನ ರೀತಿ ಬಾಲಕನಿಗೆ ಬಣ್ಣ ಹಚ್ಚು ಆಸೆ ಆಗಿತ್ತಂತೆ ಮತ್ತೆ ತಡ ಮಾಡದೆ ಈ ಕಾರ್ಯಕ್ಕೆ ಬೇಕಾಗಿದ್ದ ತಯಾರಿ ನಡೆಸಿದ್ದಾರೆ. ಇದಕ್ಕೆ ಅಬೀರ್ ಎಂಬ ಬಾಲಕನನ್ನೂ ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಮೊದಲು ಆತನ ಮೈ ಮೇಲೆ ಕಪ್ಪು ಬಣ್ಣ ಹಚ್ಚಲಾಗಿದೆ. ಜೊತೆಗೆ ರಾಮಲಲ್ಲಾನ ಕೈಯಲ್ಲಿದ್ದ ಬಿಲ್ಲು ಬಾಣವನ್ನೂ ಸಹ ಕೃತಕವಾಗಿ ತಯಾರಿಸಿದ್ದಾರೆ. ಎಲ್ಲ ಮುಗಿದ ಬಳಿಕ ಅಯೋಧ್ಯೆ ರಾಮ ಲಲ್ಲಾನಂತಯೇ ಈ ಬಾಲಕ ಕಂಡುಬಂದಿದ್ದಾನೆ.
ಈ ದಂಪತಿ ಜನವರಿಯಲ್ಲಿ ಮಂದಿರ ಉದ್ಘಾಟನೆಯ ದಿನವೇ ಈ ರೀತಿಯ ವಿಶೇಷವಾದ ಕಾರ್ಯ ಮಾಡುವ ಕನಸು ಹೊತ್ತಿದ್ದರಂತೆ ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅಂದಿನಿಂದ ಇಂದಿನವರೆಗೂ ಈ ರೀತಿ ಏನಾದರು ಮಾಡಬೇಕು ಎಂದು ಬಾಲಕನನ್ನು ನಡೆದಾಡುವ ರಾಮಲಲ್ಲಾನನ್ನಾಗಿ ಪರಿವರ್ತಿಸಿದ್ದಾರೆ.
ಆನ್‌ಲೈನ್‌ನಲ್ಲಿ ಈ ವಿಡಿಯೋ, ಫೋಟೋಗಳೂ ವೈರಲ್ ಆಗಿದ್ದು, ಇದನ್ನು ಕಂಡ ಜನ ಒಂದು ಕ್ಷಣ ಗೊಂದಲಕ್ಕೊಳಗಾಗಿದ್ದಾರೆ. ರಾಮನ ಮೂರ್ತಿಗೆ ಜೀವ ಬಂದಿದ್ಯಾ ಎಂದು ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications