Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರುದ್ರಾಕ್ಷಿ ಧರಿಸಿದಾಗ ಅಪ್ಪಿ-ತಪ್ಪಿಯೂ ಈ 4 ಕಾರ್ಯ ಮಾಡಲೇಬಾರದು
ಶಿವನ ಕೊರಳಿನಲ್ಲಿರುವ ರುದ್ರಾಕ್ಷಿಗೆ ಮಹತ್ವದ ಸ್ಥಾನವಿದೆ. ಅನೇಕ ಸಾಧು- ಸಂತರು ಸೇರಿದಂತೆ ಸಾಮಾನ್ಯ ಜನ ಕೂಡ ರುದ್ರಾಕ್ಷಿಯನ್ನು ಧರಿಸುತ್ತಾರೆ. ಆದರೆ ರುದ್ರಾಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು? ಶಿವನ ಕಣ್ಣೀರು ಭೂಮಿಗೆ ಬಿದ್ದಾಗ ರುದ್ರಾಕ್ಷಿ ಸೃಷ್ಟಿಯಾಯ್ತಂತೆ. ರುದ್ರಾಕ್ಷಿ ಧಾರಣೆಗೆ ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ರುದ್ರಾಕ್ಷಿಯನ್ನು ಮಹಾದೇವನ ಪ್ರತಿರೂಪ ಅಂತಲೇ ಕರೆಯಲಾಗುತ್ತದೆ. ಇನ್ನೂ ಈ ರುದ್ರಾಕ್ಷಿಯನ್ನು ನಮ್ಮ ಮನಸ್ಸಿಗೆ ಬಂದ ಹಾಗೇ ಧರಿಸುವ ಹಾಗಿಲ್ಲ. ಅದಕ್ಕೆ ಅದರದ್ದೇ ಆದ ಕಟ್ಟುಪಾಡುಗಳಿದೆ. ಅಷ್ಟಕ್ಕು ರುದ್ರಾಕ್ಷಿಯನ್ನು ಧರಿಸುವುದು ಹೇಗೆ? ಯಾವೆಲ್ಲಾ ಸಂದರ್ಭಗಳಲ್ಲಿ ರುದ್ರಾಕ್ಷಿ ಧರಿಸಬಾರದು? ರುದ್ರಾಕ್ಷಿ ಧರಿಸುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.

ರುದ್ರಾಕ್ಷಿಯ ಮಹತ್ವವೇನು?
ರುದ್ರಾಕ್ಷಿ ಮಣಿಗಳನ್ನು ರುದ್ರಾಕ್ಷಿ ಮರದಿಂದ ಸಂಗ್ರಹ ಮಾಡಲಾಗುತ್ತದೆ. ಹಾಗೂ ಇದಕ್ಕೆ ಸನಾತನ ಧರ್ಮದಲ್ಲಿ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಸಂಸ್ಕೃತ ಪದವಾದ "ರುದ್ರ" ಹಾಗೂ "ಅಕ್ಷ" ದಿಂದ ರುದ್ರಾಕ್ಷಿ ರೂಪುಗೊಂಡಿದೆ. ಅಕ್ಷ ಎಂದರೆ ಶಿವನ ಕಣ್ಣೀರು. ಅದೇ ರೀತಿ ರುದ್ರ ಎಂದರೆ ಶಿವ. ಇದೇ ಕಾರಣಕ್ಕೆ ರುದ್ರಾಕ್ಷಿಯನ್ನು ಆ ಪರಶಿವನ ದೇಹದ ಒಂದು ಅಂಗ ಅಂತಲೇ ಕರೆಯಲಾಗುತ್ತದೆ. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಒಂದು ಪವಿತ್ರ ಸ್ಥಾನ ಕಲ್ಪಿಸಿರೋದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರುದ್ರಾಕ್ಷಿಗೆ ಮಾನವರ ಮನಸ್ಸನ್ನು ಶಾಂತಗೊಳಿಸುವ ಮತ್ತು ಕೋಪವನ್ನು ತಣ್ಣಗಾಗಿಸುವ ಶಕ್ತಿ ಇದ್ಯಂತೆ.
ಯಾವ ಸಂದರ್ಭಗಳಲ್ಲಿ ರುದ್ರಾಕ್ಷಿ ಧರಿಸಬಾರದು?
1. ಮಧ್ಯಪಾನ, ಧೂಮಪಾನ ಮತ್ತು ಮಾಂಸಹಾರ ಸೇವಿಸುವಾಗ
ನಿಮಗೊಂದು ವಿಚಾರ ಗೊತ್ತಿರಲಿ ಮಧ್ಯಪಾನ, ಧೂಮಪಾನ ಮತ್ತು ಮಾಂಸಹಾರ ಸೇವನೆ ಮಾಡುವಾಗ ರುದ್ರಾಕ್ಷಿಯನ್ನು ಧರಿಸಬಾರದು. ಇದರಿಂದ ರುದ್ರಾಕ್ಷಿಯ ಪಾವಿತ್ರ್ಯತೆ ಹಾಳಾಗುವುದು ಮಾತ್ರವಲ್ಲದೇ, ಇದನ್ನು ಧರಿಸಿದ ವ್ಯಕ್ತಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಲಿದೆಯಂತೆ. ಹೀಗಾಗಿ ಈ ಮೂರು ಚಟುವಟಿಕೆಗಳನ್ನು ಮಾಡುವಾಗ ರುದ್ರಾಕ್ಷಿಯನ್ನು ಧರಿಸಲೇಬೇಡಿ.
2. ಮಲಗುವಾಗ ರುದ್ರಾಕ್ಷಿ ಧರಿಸಬೇಡಿ
ಕೆಲವೊಂದು ನಂಬಿಕೆಗಳ ಪ್ರಕಾರ ಮಲಗಿದ ನಂತರ ನಮ್ಮ ದೇಹವು ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಂತೆ. ಹೀಗಾಗಿ ಇದರಿಂದ ರುದ್ರಾಕ್ಷಿಯ ಪಾವಿತ್ರ್ಯತೆಗೆ ತೊಂದರೆಯನ್ನುಂಟು ಮಾಡುತ್ತಂತೆ. ಹೀಗಾಗಿ ಮಲಗೋದಕ್ಕೆ ಹೋಗೋದಕ್ಕಿಂತ ಮೊದಲು ರುದ್ರಾಕ್ಷಿಯನ್ನು ತೆಗೆದಿಡೋದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರುದ್ರಾಕ್ಷಿಯನ್ನು ದಿಂಬಿನ ಅಡಿಯಲ್ಲಿ ಇಟ್ಟುಕೊಂಡರೆ ಆಗ ನಮಗೆ ಕೆಟ್ಟ ಕನಸುಗಳು ಬೀಳುವುದಿಲ್ಲವಂತೆ.
3. ಮರಣ ನೋಡೋದಿಕ್ಕೆ ಹೋಗುವಾಗ ಧರಿಸಬಾರದು
ಸತ್ತವರನ್ನು ನೋಡೋದಿಕ್ಕೆ ಹೋಗುವಾಗ ಅಥವಾ ಅವರ ಅಂತಿಮ ಕಾರ್ಯಗಳನ್ನು ಪೂರೈಸುವ ಸಂದರ್ಭದಲ್ಲಿ ರುದ್ರಾಕ್ಷಿಯನ್ನು ಧರಿಸಬಾರದು. ಈ ಸಂದರ್ಭದಲ್ಲಿ ರುದ್ರಾಕ್ಷಿಯನ್ನು ಧರಿಸಿದರೆ ಅದು ಪಾವಿತ್ರ್ಯತೆಯನ್ನು ಕಳೆದುಕೊಂಡು ಬಿಡುತ್ತಂತೆ. ಅಷ್ಟೇ ಅಲ್ಲ, ಇದರಿಂದ ನಿಮ್ಮ ಜೀವನದ ಮೇಲೂ ಋಣಾತ್ಮಕ ಪರಿಣಾಮ ಬೀಳಲಿದೆ.
4. ಈಗ ತಾನೇ ಹುಟ್ಟಿದ ಮಗುವಿನ ಕೋಣೆಗೆ ಹೋಗುವಾಗ
ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಮಗು ಹುಟ್ಟಿದ ಕೆಲವು ದಿನಗಳನ್ನು ಸೂತಕ ಕಾಲ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ತಾಯಿ ಹಾಗೂ ಮಗು ಸೂತಕದಲ್ಲಿರೋದ್ರಿಂದ ಮಗು ಹಾಗೂ ತಾಯಿ ಇರುವ ಕೋಣೆಗೆ ಹೋಗುವಾಗ ರುದ್ರಾಕ್ಷಿಯನ್ನು ಧರಿಸಬಾರದು. ಇದರಿಂದ ರುದ್ರಾಕ್ಷಿ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಂತೆ.
ರುದ್ರಾಕ್ಷಿಯನ್ನು ಕಾಟಾಚರಕ್ಕೆ ಧರಿಸುವುದಲ್ಲ. ಅಥವಾ ಫ್ಯಾಷನ್ ಅಂತಾನೋ, ಇನ್ನೋವುದೋ ಕಾರಣಕ್ಕೆ ಧರಿಸಬೇಡಿ. ರುದ್ರಾಕ್ಷಿ ಧರಿಸುವಾಗ ಈ ಎಲ್ಲಾ ವಿಚಾರಗಳು ನಿಮ್ಮ ಗಮನದಲ್ಲಿ ಇರಲೇಬೇಕು. ಯಾಕಂದ್ರೆ ಕೊಂಚ ಯಡವಟ್ಟು ಮಾಡಿದ್ರೂ ಕೂಡ ಇದ್ರಿಂದ ನಿಮಗೆ ಆಪತ್ತು ಎದುರಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.



Click it and Unblock the Notifications

