Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮೊಟ್ಟೆ ಪ್ರಿಯರೇ, ಮೊಟ್ಟೆ ಬೇಯಿಸುವಾಗ ಈ ತಪ್ಪುಗಳಾದರೆ ಆಪತ್ತು!
ಕೋಳಿ ಮೊಟ್ಟೆಯನ್ನು ಯಾರು ಇಷ್ಟ ಪಡೋದಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರಿಗೂ ಮೊಟ್ಟೆ ಅಂದ್ರೆ ತುಂಬಾನೇ ಇಷ್ಟ. ಬಾಯಿ ಚಪಲ ಶುರುವಾದಾಗ ಬಿಸಿ ಬಿಸಿಯಾಗಿ ಏನಾದ್ರು ತಿನ್ಬೇಕು ಅಂದ್ರೆ ಮನೆಯಲ್ಲಿ ಮೊಟ್ಟೆ ಇದ್ರೆ ಸಾಕು. ಮೊಟ್ಟೆಯಿಂದ ಬುರ್ಜಿ, ಆಮ್ಲೆಟ್, ಹಾಫ್ ಬಾಯ್ಡ್ ಹೀಗೆ ತರೆಹೇವಾರಿ ರೆಸಿಪಿಗಳನ್ನು ತಯಾರಿಸಿ ರುಚಿ ರುಚಿಯಾಗಿ ತಿನ್ನಬಹುದು.
ಇನ್ನೂ ಕೆಲವರು ಮೊಟ್ಟೆಯನ್ನು ಬೇಯಿಸಿ ತಿನ್ನುತ್ತಾರೆ. ಆದರೆ ಕೆಲವೊಂದು ಸಾರಿ ನಮಗೆ ಮೊಟ್ಟೆಯ ರಿಯಲ್ ಟೇಸ್ಟ್ ಸಿಗೋದಿಲ್ಲ. ಕಾರಣ ಮೊಟ್ಟೆಯನ್ನು ಬೇಯಿಸುವಾಗ ಅಥವಾ ಮೊಟ್ಟೆ ರೆಸಿಪಿಗಳನ್ನು ಮಾಡುವಾಗ ಏನಾದ್ರು ತಪ್ಪಾದ್ರೆ ಈ ರೀತಿ ಆಗುವ ಸಾಧ್ಯತೆಗಳಿದೆ. ಅಷ್ಟಕ್ಕು ಮೊಟ್ಟೆ ಬೇಯಿಸುವಾಗ ಯಾವ ತಪ್ಪುಗಳು ಆಗಬಾರದು ಅನ್ನೋದನ್ನು ನೋಡೋಣ.

1. ಹೆಚ್ಚು ಬೇಯಿಸಬೇಡಿ
ಯಾವುದೇ ಆಹಾರವಾದರೂ ಸರಿ ಲೆಕ್ಕಕ್ಕಿಂತ ಹೆಚ್ಚು ಬೇಯಿಸಿದರೆ ಅದರ ರುಚಿ ಹಾಳಾಗುತ್ತೆ. ಹೀಗಾಗಿ ಮೊಟ್ಟೆ ಬೇಯಿಸುವಾಗಲೂ ಆದಷ್ಟು ಎಚ್ಚರಿಕೆ ವಹಿಸಬೇಕು. ಕೆಲವರು ಮೊಟ್ಟೆ ಬೇಯಿಸೋದಕ್ಕೆ ಗ್ಯಾಸ್ ನಲ್ಲಿ ಇಟ್ಟು ಹೋಗಿ ನಂತರ ಅದನ್ನು ಮರೆತು ಹೋಗುತ್ತಾರೆ. ಮತ್ತೆ ಯಾವಾಗಲೋ ಬಂದು ಅದನ್ನು ತೆಗೆಯುತ್ತಾರೆ. ಈ ರೀತಿ ಮಾಡಬಾರದು. ಇಂತಿಷ್ಟು ಸಮಯದವರೆಗೂ ಮಾತ್ರ ಮೊಟ್ಟೆಯನ್ನು ಬೇಯಿಸಬೇಕು. ಇನ್ನೂ ಮೊಟ್ಟೆ ಬೆಂದ ಮೇಲೆ ಅದನ್ನು ಬಿಸಿ ನೀರಿನಲ್ಲಿಯೇ ಇಡಬಾರದು. ಬದಲಾಗಿ ಅದನ್ನು ತಣ್ಣೀರಿನಲ್ಲಿ ಹಾಕಿ ಇಡಬೇಕು.
2. ಬಾಣಲೆಯನ್ನು ಮೊದಲೇ ಕಾಯಲು ಬಿಡಿ
ಆಹಾರವನ್ನು ತಯಾರು ಮಾಡುವಾಗ ಒಂದು ವಿಚಾರ ಗೊತ್ತಿರಬೇಕು. ಮೊದಲಿಗೆ ಪಾತ್ರೆಯನ್ನು ಕಾಯಲು ಬಿಡಬೇಕು. ನಂತರ ಎಣ್ಣೆ ಅಥವಾ ಯಾವುದಾದರೂ ಪದಾರ್ಥವನ್ನು ಅದರ ಮೇಲೆ ಹಾಕಬೇಕು. ಅದೇ ರೀತಿ ಮೊಟ್ಟೆಯ ಬುರ್ಜಿ ಅಥವಾ ಆಮ್ಲೆಟ್ ಮಾಡುವಾಗಲೂ ಕೂಡ ಮೊದಲಿಗೆ ಪಾತ್ರೆಯನ್ನು ಕಾಯಲು ಬಿಡಿ ಆನಂತರ ಮೊಟ್ಟೆಯನ್ನು ಹಾಕಿದರೆ ರುಚಿಯೂ ಚೆನ್ನಾಗಿರುತ್ತೆ, ಜೊತೆಗೆ ಸರಿಯಾದ ಆಕಾರವೂ ಬರುತ್ತೆ.
3. ಗ್ಯಾಸ್ ಹೈ ಫ್ಲೇಮ್ ನಲ್ಲಿ ಇಡಬೇಡಿ
ಹೆಚ್ಚಿನವರು ಅಡುಗೆ ಬೇಗ ಆಗುತ್ತೆ ಅನ್ನೋ ಉದ್ದೇಶದಿಂದ ಗ್ಯಾಸ್ ಅನ್ನು ಹೈ ಪ್ಲೇಮ್ ನಲ್ಲಿ ಇಟ್ಟು ಆಹಾರ ತಯಾರು ಮಾಡ್ತಾರೆ. ಈ ರೀತಿ ಮಾಡಿದರೆ ನೀವು ತಯಾರಿಸುವ ಆಹಾರ ಕೆಟ್ಟು ಹೋಗುವ ಸಾಧ್ಯತೆಗಳಿದೆ. ಹೀಗಾಗಿ ಆದಷ್ಟು ಕಡಿಮೆ ಅಥವಾ ಮಧ್ಯಮ ಉರಿಯಲ್ಲಿಟ್ಟು ಮೊಟ್ಟೆಯ ರೆಸಿಪಿಯನ್ನು ತಯಾರಿಸಿ. ಆಗ ಮಾತ್ರ ಸರಿಯಾದ ಆಕಾರ ಹಾಗೂ ರುಚಿ ಬರೋದಕ್ಕೆ ಸಾಧ್ಯ.
4. ಬಿಸಿ ನೀರಿಗೆ ಮೊಟ್ಟೆಯನ್ನು ಹಾಕಬೇಡಿ
ಹೆಚ್ಚಿನ ಸಂದರ್ಭದಲ್ಲಿ ನಾವು ಮೊಟ್ಟೆಯನ್ನು ಬೇಯಿಸುವಾಗ ಅದರ ಚಿಪ್ಪು ಒಡೆದು ಹೋಗಿ ಮೊಟ್ಟೆಯ ಬಿಳಿಭಾಗ ಹೊರಗಡೆ ಬರುತ್ತದೆ. ಹೀಗಾಗಿ ಮೊಟ್ಟೆ ಬೇಯಿಸುವಾಗ ಸರಿಯಾದ ಕ್ರಮ ಪಾಲಿಸಬೇಕು. ಪಾತ್ರೆಯಲ್ಲಿ ನೀರು ಹಾಕಿ ಮೊಟ್ಟೆಯನ್ನು ಒಟ್ಟಿಗೆ ಗ್ಯಾಸ್ ನಲ್ಲಿ ಇಟ್ಟರೆ ಒಳ್ಳೆಯದು. ಹಾಗೂ ಮಧ್ಯ ಉರಿಯಲ್ಲಿ ಇರುವಂತೆ ನೋಡಿಕೊಳ್ಳಿ. ಇನ್ನೂ ಕೆಲವರು ಬಿಸಿ ಬಿಸಿ ಕಾದ ನೀರಿಗೆ ಮೊಟ್ಟೆಯನ್ನು ಹಾಕುತ್ತಾರೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ಮೊಟ್ಟೆ ಒಡೆಯುವ ಸಾಧ್ಯತೆಯಿದೆ.
5. ಸರಿಯಾದ ಪಾತ್ರೆಯನ್ನು ಬಳಕೆ ಮಾಡಿ
ಮೊಟ್ಟೆಯ ರೆಸಿಪಿ ತಯಾರು ಮಾಡುವಾಗ ಸರಿಯಾದ ಪಾತ್ರೆಯನ್ನು ಬಳಕೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಕೆಲವೊಂದು ಪಾತ್ರೆಗಳಲ್ಲಿ ಮೊಟ್ಟೆಯೂ ಹಾಗೆಯೇ ಅಂಟಿಕೊಳ್ಳುತ್ತದೆ. ನಂತರ ಅದನ್ನು ಕೆರೆದರೆ ಮೊಟ್ಟೆಯ ಜೊತೆಗೆ ಅದರ ಮೇಲೆ ಹಚ್ಚಿರುವ ಪದರವು ಎದ್ದು ಬರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸರಿಯಾದ ಪಾತ್ರೆಯನ್ನೇ ಆಯ್ಕೆ ಮಾಡಿ. ಸಿಲಿಕಾನ್ ಅಥವಾ ಮರದ ಪಾತ್ರೆಗಳನ್ನು ಆರಿಸಿ. ಇದರಿಂದ ಮೇಲ್ಮೈಗೆ ಹಾನಿಯಾಗುವುದಿಲ್ಲ.
ಮೊಟ್ಟೆಯನ್ನು ಬೇಯಿಸುವಾಗ ಅಥವಾ ಮೊಟ್ಟೆಯಿಂದ ಯಾವುದೇ ರೆಸಿಪಿಯನ್ನು ತಯಾರು ಮಾಡುವಾಗ ಈ ತಪ್ಪುಗಳು ಆಗದಂತೆ ಎಚ್ಚರ ವಹಿಸಿ.



Click it and Unblock the Notifications


