Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿಗೆ ಏನಾಗಿತ್ತು.? ಸ್ನೇಹಿತರ ಮದುವೆಯಲ್ಲಿ ಆಗಿದ್ದೇನು?
ನೀವು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ವೀಕ್ಷಕರಾಗಿದ್ದರೆ ರಾಕೇಶ್ ಪೂಜಾರಿ ನಿಮಗೆ ಚಿರಪರಿಚಿತ. ಆತನ ಕಾಮಿಡಿಗೆ ನಗದವರೇ ಇಲ್ಲ. ಕಾಮಿಡಿ ಕಿಲಾಡಿಗಳು ಸೀಸನ್ 3ಯಲ್ಲಿ ಆತನ ಕಾಮಿಡಿ ನೋಡಿ ಹಲವರು ಈತ ಮುಂದಿನ ದಿನದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ಕಾಮಿಡಿ ನಟನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು.
ಆದರೆ ರಾಕೇಶ್ ಪೂಜಾರಿ ಈಗ ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಇಡೀ ಸಿನಿಮಾ ರಂಗದ ಮಂದಿ ಹಾಗೆ ಅಭಿಮಾನಿಗಳಲ್ಲಿಯೂ ಶಾಕ್‌ಗೆ ಕಾರಣವಾಗಿದೆ. ಕೇವಲ 34 ವರ್ಷದ ಆತ ಹಠಾತ ಹೃದಯಾಘಾತದಿಂದ ಮೃತಪಟ್ಟಿರುವುದು ಎಲ್ಲರನ್ನೂ ಶಾಕ್‌ಗೆ ಗುರಿ ಮಾಡಿದೆ. ಇತ್ತೀಚಿಗಷ್ಟೇ ಹೊಸ ಮನೆ ಗೃಹ ಪ್ರವೇಶ ಮುಗಿಸಿದ್ದ ಅವರು ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲೂ ನಟಿಸುತ್ತಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಈಗಷ್ಟೇ ಹಲವು ಅವಕಾಶ ಪಡೆಯುತ್ತಿದ್ದ ಯುವ ನಟನ ಅಗಲಿಕೆ ಚಿತ್ರ ಪ್ರೇಮಿಗಳಲ್ಲಿ ದುಖಃಕ್ಕೆ ಕಾರಣವಾಗಿದೆ. ಉಡುಪಿ ನಿವಾಸಿಯಾಗಿದ್ದ ಅವರು, ಹಲವು ಧಾರಾವಾಹಿಗಳು, ರಿಯಾಲಿಟಿ ಶೋ, ಸಿನಿಮಾದಲ್ಲೂ ನಟಿಸುತ್ತಿದ್ದರು. ಒಬ್ಬನೇ ಪುತ್ರನ ಕಳೆದುಕೊಂಡ ತಾಯಿ ಈಗ ಕಣ್ಣೀರಲ್ಲಿ ಮುಳುಗಿದ್ದಾರೆ ಹಾಗೆ ತಂಗಿಗೆ ಮದುವೆ ಮಾಡುವುದು ತನ್ನ ದೊಡ್ಡ ಕನಸು ಎಂದು ರಾಕೇಶ್ ಹೇಳಿಕೊಂಡಿದ್ದರು.
ರಾಕೇಶ್ ಪೂಜಾರಿಗೆ ಆಗಿದ್ದೇನು?
ಇತ್ತೀಚಿಗೆ ನೀವು ನೋಡುತ್ತಿರುವಂತೆ ಅನೇಕರಲ್ಲಿ ಹಠಾತ್ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಈ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಮದುವೆ, ಶುಭ ಸಮಾರಂಭದಂತಹ ಸಮಯದಲ್ಲಿ ಕುಸಿದು ಬಿದ್ದು ಮೃತಪಡುತ್ತಿರುವ ಒಂದಿಷ್ಟು ಪ್ರಕರಣಗಳು ವರದಿಯಾಗುತ್ತಲೇ ಇವೆ. ರಾಕೇಶ್ ಪೂಜಾರಿ ಕೂಡ ಆಫ್ತರೊಬ್ಬರ ಮದುವೆಯ ಸಂಬಂಧ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮದ ನಡುವೆ ಅವರು ಲೋ ಬಿಪಿ ಎದುರಿಸಿದ್ದರು.
ಈ ಸಮಾರಂಭದಲ್ಲೇ ಅವರು ಕುಸಿದು ಬಿದ್ದಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದಾ ಕಾಲ ನಗುತ್ತಲೇ ಇರುತ್ತಿದ್ದ ಅವರಿಗೆ ಯಾವುದೇ ಅನಾರೋಗ್ಯ ಅಥವಾ ಕಾಯಿಲೆ ಇರಲಿಲ್ಲ. ಸ್ನೇಹಿತನ ಮೆಹಂದಿ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೂ ಡ್ಯಾನ್ಸ್ ಕೂಡ ಮಾಡಿದ್ದರು.
ಡ್ಯಾನ್ಸ್ ಮಾಡುವಾಗ ಸುಸ್ತಾದಂತೆ ಕಂಡುಬಂದಿದ್ದರು, ಹಾಗೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ತುಳು ರಿಯಾಲಿಟಿ ಶೋನಿಂದ ಕಿರುತೆರೆ ಬದುಕು ಆರಂಭ
ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ಆಗಿದ್ದ ಅವರು ತುಳು ರಿಯಾಲಿಟಿ ಶೋನಿಂದ ತಮ್ಮ ಕಿರುತೆರೆ ಬದುಕು ಆರಂಭಿಸಿದ್ದರು. 2014ರಲ್ಲಿ ಕಡ್ಲೆ ಬಜಿಲ್ ಎಂಬ ತುಳು ರಿಯಾಲಿಟಿ ಶೋನಲ್ಲಿ ಅವರ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಹಲವು ಸಿನಿಮಾ ಆಡಿಷನ್‌ಗಳು, ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದರು. ಹಾಗೆ 2018ರಲ್ಲಿ ಜೀ ಕನ್ನಡದಲ್ಲಿ ಆರಂಭಗೊಂಡ ಕಾಮಿಡಿ ಕಿಲಾಡಿಗಳು ಸೀಸನ್ 2ಗೆ ಆಯ್ಕೆಯಾದರು. ಈ ಸೀಸನ್‌ನಲ್ಲಿ ರನ್ನರ್ ಅಪ್ ಆಗಿದ್ದ ತಂಡದಲ್ಲಿ ರಾಜೇಶ್ ಕೂಡ ಒಬ್ಬರಾಗಿದ್ದರು.
ನಟ ಸುದೀಪ್ ನಟನೆಯ ಪೈಲ್ವಾನ್ ಚಿತ್ರದಲ್ಲೂ ಒಂದು ಪಾತ್ರ ಮಾಡಿದ್ದರು, ಇದಾದ ಬಳಿಕ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆಯುವಂತಹ ಪಾತ್ರ ಮಾಡಿದ್ದರು. ಬಳಿಕ ಈಗ ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲೂ ಅವರು ನಟಿಸುತ್ತಿದ್ದರು. ಆದ್ರೆ ವಿಧಯಾಟ ಈಗ ಅವರ ಬದುಕು ಅಂತ್ಯಗೊಳಿಸಿದೆ. ಕೇವಲ 34 ಕ್ಕೆ ಅವರು ಇಹಲೋಕ ತ್ಯಜಿಸಿರುವುದು ಎಲ್ಲರಿಗೂ ಶಾಕ್ ತಂದಿದೆ.



Click it and Unblock the Notifications
