Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪ್ರಧಾನಿ ಮೋದಿ ವಿರುದ್ಧ ಶ್ಯಾಮ್ ರಂಗೀಲಾ ನಾಮಪತ್ರ..! ಯಾರು ಈ ಯುವಕ ಗೊತ್ತಾ?
ದೇಶದಲ್ಲಿ ಲೋಕಸಭೆ ಚುನಾವಣೆ ಕಣ ರಂಗು ಪಡೆದುಕೊಂಡಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಮತದಾನವೂ ನಡೆದಿದ್ದು, ಮತ್ತೆ ಕೆಲವು ಕಡೆಗಳಲ್ಲಿ ಮತದಾನ ನಡೆಯುವುದು ಬಾಕಿ ಇದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯಲ್ಪಡುವ ದೇಶದ ಚುನಾವಣೆ ಎಲ್ಲೆಲ್ಲೂ ಮಾತಾಗುತ್ತಿದೆ.
ಸದ್ಯ ದೇಶದ ಚುಕ್ಕಾಣಿ ಯಾವ ಪಕ್ಷ ಹಿಡಿಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ಇನ್ನೊಂದು ತಿಂಗಳು ಈ ಫಲಿತಾಂಶಕ್ಕೆ ಕಾಯಬೇಕಿದೆ. ಆದರೆ ಅದಕ್ಕೂ ಮೊದಲು ಚುನಾವಣ ಕಣದಲ್ಲಿ ಕೇಳಿಬರುತ್ತಿರುವ ಹೊಸ ಹೊಸ ಅಭ್ಯರ್ಥಿಗಳ ಹೆಸರು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿವೆ.

ಮೊದಲು ಮೈಸೂರಿನಲ್ಲಿ ಒಡೆಯರ್ ಕುಡಿ ಚುನಾವಣಾ ಕಣಕ್ಕೆ ಧುಮುಕಿದ್ದು, ದೇಶವ್ಯಾಪಿ ಸುದ್ದಿಯಾಗಿತ್ತು. ಇದಾದ ಬಳಿಕ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರ ಸುದ್ದಿಯಲ್ಲಿದೆ. ಅದರಲ್ಲೂ ಪ್ರಧಾನಿ ಎದುರು ಸ್ಪರ್ಧಿಸುತ್ತಿರುವ ವ್ಯಕ್ತಿ ಎಲ್ಲೆಡೆ ಸುದ್ದಿಯಾಗಿದ್ದಾರೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ವಾರಣಾಸಿ ಅವರ ಮೊದಲ ಆದ್ಯತೆ ಆಗಿದೆ. ಈ ನಡುವೆ ವಾರಣಾಸಿಯಿಂದ ಶ್ಯಾಮ್ ರಂಗೀಲಾ ಎಂಬ ಯುವಕ ಪ್ರಧಾನಿ ಎದುರಾಗಿ ಸ್ಪರ್ಧಿಸುತ್ತಿದ್ದಾನೆ. ಈ ಶ್ಯಾಮ್ ರಂಗೀಲಾ ಈ ಮೊದಲು ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಇನ್‌ಪ್ಲೂಯನ್ಸರ್ ಆಗಿದ್ದಾರೆ.
ಯಾರು ಈ ಯುವಕ?
ಶ್ಯಾಮ್ ರಂಗೀಲಾ ಪ್ರಧಾನಿ ಮೋದಿ ಅವರ ಧ್ವನಿಯನ್ನೇ ಅನುಕರಣೆ ಮಾಡುತ್ತಿದ್ದ ಯುವಕನಾಗಿದ್ದಾನೆ. ಆತ ಯೂಟ್ಯೂಬ್‌ನಲ್ಲಿ ಪ್ರಧಾನಿ ಮೋದಿ ಅವರ ಧ್ವನಿ ಅನುಕರಣೆ ಮಾಡಿ ಹಲವು ವಿಡಿಯೋ ಮಾಡುತ್ತಿದ್ದ, ಆದರೆ ಈ ವಿಡಿಯೋದಲ್ಲಿ ಆತನ ಧ್ವನಿ ಕೇಳಿದರೆ ಪ್ರಧಾನಿ ಮೋದಿ ಅವರ ಧ್ವನಿಗೂ ಆತನಿಗೂ ಎಳ್ಳಷ್ಟು ಬದಲಾವಣೆ ಇರಲಿಲ್ಲ. ಇಬ್ಬರ ಧ್ವನಿಯೂ ಒಂದೇ ರೀತಿ ಇತ್ತು. ಅಷ್ಟು ನಿಖರವಾಗಿ ಆತ ಅನುಕರಣೆ ಮಾಡುತ್ತಿದ್ದ.
ಈ ಕುರಿತು ಶ್ಯಾಮ್ ರಂಗೀಲಾ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದು, "ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುವ ಘೋಷಣೆಯ ನಂತರ ನಿಮ್ಮೆಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿಯಿಂದ ನಾನು ಉತ್ಸುಕನಾಗಿದ್ದೇನೆ. ನನ್ನ ನಾಮಿನೇಷನ್ ಮತ್ತು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಶೀಘ್ರದಲ್ಲೇ ವಿಡಿಯೋ ಮೂಲಕ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದಿಡುತ್ತೇನೆ'' ಎಂದಿದ್ದಾರೆ.
ಆದರೆ ಇದಕ್ಕೂ ಮೊದಲು ಆತ ''ನಾನು ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದೇನೆ. ಏಕೆಂದರೆ ಯಾವಾಗ ಯಾರು ನಾಮಪತ್ರ ಹಿಂಪಡೆಯುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ'' ಎಂದು ವ್ಯಂಗ್ಯವಾಡಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಜನರು ಸ್ಪರ್ಧಿಸುವಂತೆ ಮನವಿ ಸಹ ಮಾಡಿದ್ದರು. ಹೀಗಾಗಿ ಆತ ಚುನಾವಣೆ ಸ್ಪರ್ಧಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ.
ಮೋದಿ ಅಭಿಮಾನಿಯಾಗಿದ್ದ ಶ್ಯಾಮ್ ರಂಗೀಲಾ
ಆರಂಭದಲ್ಲಿ ಪ್ರಧಾನಿ ಮೋದಿ ಅಭಿಮಾನಿಯಾಗಿದ್ದ ಶ್ಯಾಮ್ ರಂಗೀಲಾ ಅವರಂತೆ ಧ್ವನಿ ಮಾಡಿ ಅವರ ಅನುಕರಣೆ ಮಾಡುತ್ತಿದ್ದರು. ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್ ವಿರುದ್ಧ ಅವರು ಸ್ಟ್ಯಾಂಡ್ ಅಪ್ ಕಾಮಿಡಿಗಳ ಮಾಡುತ್ತಿದ್ದರು. ಆದರ ಬರು ಬರುತ್ತಾ ಅವರು ಮೋದಿ ಕುರಿತಂತೆ ಕಾಮಿಡಿ ಮಾಡಲು ಆರಂಭಿಸಿದರು. ಹಲವು ಬಾರಿ ಅವರ ವಿರುದ್ಧ ಪ್ರಕರಣಗಳು ಸಹ ದಾಖಲಾಗಿದ್ದವು. ಈಗ ಪ್ರಧಾನಿ ವಿರುದ್ಧವೇ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.
ಇಂದೋರ್ ಹಾಗೂ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಇತರೆ ಪಕ್ಷದ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆಯಲಾಗಿತ್ತು. ಇದಾದ ಬಳಿಕ ಆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಎಂದು ಘೋಷಿಸಲಾಗಿತ್ತು. ಈ ಪ್ರಕರಣಗಳು ನಡೆದ ಬಳಿಕ ಶ್ಯಾಮ್ ರಂಗೀಲಾ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.



Click it and Unblock the Notifications
