Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರಗಳೆಂದರೆ ಅವು ಶಾಲೆಗಳು. ಜ್ಞಾನ ದೇಗುವವಿದು ಕೈ ಮುಗಿದು ಒಳಗೆ ಬಾ ಎಂದು ಶಾಲೆಯ ಬಾಗಿಲ ಮೇಲೆ, ಕಿಟಕಿ ಮೇಲೆ ನಾವು ನೋಡಿರುತ್ತೇವೆ. ಇಂತಹ ಶಾಲೆಗಳಿಗೆ ಮಕ್ಕಳಿಗೆ ಪಾಠ ಮಾಡಲು ಬರುವ ಶಿಕ್ಷಕರು ದೇವರ ಸಮಾನರಾಗಿರುತ್ತಾರೆ. ಗುರುಗಳಿಗೆ ಗೌರವ ನೀಡಿದರೆ ಪುಣ್ಯ ಬರಲಿದೆ ಅನ್ನೋ ಮಾತಿದೆ. ಏಕೆಂದರೆ ಅವರು ಮಕ್ಕಳನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸುವ ದೇವರಿದ್ದಂತೆ. ಹೀಗಾಗಿ ಮನೆಯಲ್ಲಿ ತಂದೆ ತಾಯಿ ಬಿಟ್ಟರೆ ಮುಂದಿನ ಗೌರವ ಪಾಠ ಹೇಳಿಕೊಟ್ಟ ಗುರುಗಳಿಗೆ ಸಿಗಬೇಕು ಎನ್ನುವುದು ಕಾಲರೂಢಿಯಾಗಿದೆ.
ಆದ್ರೆ ಮಕ್ಕಳಿಗೆ ಪಾಠ ಮಾಡಲೆಂದೇ ಶಾಲೆಗೆ ಬರುವ ಶಿಕ್ಷಕರೇ ಅಡ್ಡದಾರಿ ಹಿಡಿದರೆ ಹೇಗೆ? ಹೌದು ಇಲ್ಲೊಬ್ಬ ಶಿಕ್ಷಕ ಆತನಿಗೆ ಜೀವನ ರೂಪಿಸಲು ದಾರಿ ಮಾಡಿಕೊಟ್ಟ ಶಾಲೆಯಲ್ಲೇ ಅನೈತಿಕ ಚಟುವಟಿಕೆ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಆತ ಶಾಲೆಯಲ್ಲೇ ಮದ್ಯಪಾನ ಮಾಡಿ ಪಾಠ ಮಾಡುತ್ತಿದ್ದ.

ಛತ್ತೀಸ್‌ಗಢದ ಬಸ್ತಾರ್‌ನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಈಗ ಮಕ್ಕಳ ಕೈಯಲ್ಲೇ ಚಪ್ಪಲಿ ಏಟು ತಿಂದಿರುವ ಘಟನೆ ನಡೆದಿದೆ. ಇಲ್ಲಿನ ಪ್ರಾಥಮಿಕ ಶಾಲೆ ಶಿಕ್ಷಕನಾಗಿದ್ದ ಆತ ಶಾಲೆಯಲ್ಲೇ ಮದ್ಯ ಪಾನ ಮಾಡುತ್ತಿದ್ದ. ಪ್ರಶ್ನಿಸಿದವರ ಮೇಲೆಯೇ ಮರು ಪ್ರಶ್ನೆ ಮಾಡಿ ನಾನಿರುವುದೇ ಹೀಗೆ, ಕುಡಿದು ಶಾಲೆಗೆ ಬರುತ್ತೇನೆ ಏನು ಮಾಡುತ್ತೀಯ ಎಂಬೆಲ್ಲಾ ಹಾರಿಕೆಯ ಉತ್ತರ ನೀಡುತ್ತಿದ್ದ.
ಮಕ್ಕಳ ಎದುರೇ ಮದ್ಯಪಾನ
ಆತ ಬೆಳಗ್ಗೆ ಬರುವಾಗಲೇ ತನ್ನ ಜೊತೆ ಮದ್ಯ ತರುತ್ತಿದ್ದ, ಬಳಿಕ ಶಾಲೆಯ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಉಳಿದ ಶಿಕ್ಷಕರು, ಮಕ್ಕಳು ಇದ್ದರೂ ತಲೆ ಕೆಡಿಸಿಕೊಳ್ಳದೆ ಆತ ಮದ್ಯಪಾನ ಮಾಡಿ ಮಲಗುತ್ತಿದ್ದ. ಇಲ್ಲವೆ ಪಾಠ ಮಾಡುವ ನೆಪದಲ್ಲಿ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ.
ಚಪ್ಪಲಿಯಲ್ಲಿ ಹೊಡೆದ ಮಕ್ಕಳು
ಎಂದಿನಂತೆ ಆತ ಶಾಲೆಗೆ ಬಂದು ಮದ್ಯಪಾನ ಮಾಡಿದ್ದಾನೆ. ಆದರೆ ಇಂದು ಆತನ ಗ್ರಹಚಾರ ಕೆಟ್ಟು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಏನು ಬೇಕಾದರು ಮಾಡಿ ನಾನು ಕುಡಿಯುತ್ತೇನೆ ಎಂಬ ಉತ್ತರ ನೀಡಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಶಿಕ್ಷಕನಿಗೆ ಮಕ್ಕಳು ದಾಳಿ ಮಾಡಲು ಮುಂದಾದಗ ಬೈಕ್ ಹತ್ತಿ ತೆರಳಲು ಸಿದ್ದನಾಗಿದ್ದಾನೆ. ಈ ವೇಳೆ ಮಕ್ಕಳು ಚಪ್ಪಲಿಯನ್ನು ಎಸೆದಿದ್ದು, ಇವರಿಂದ ತಪ್ಪಿಸಿಕೊಳ್ಳಲು ಆತ ಬೈಕ್ ಏರಿ ಓಡಿ ಹೋಗಿದ್ದಾನೆ.
ಆತ ಮನೆಯಿಂದ ಬರುವಾಗಲೇ ಮಧ್ಯದಾರಿಯಲ್ಲಿ ಸಿಗುವ ಅಂಗಡಿಯಿಂದ ಮದ್ಯ ಖರೀದಿಸುತ್ತಿದ್ದ. ಶಾಲೆಗೆ ಬಂದವನೇ ಮೊದಲು ಮದ್ಯ ಸೇವಿಸಿ ಬಳಿಕ ತನ್ನ ಕೆಲಸ ಮಾಡಲು ಮುಂದಾಗುತ್ತಿದ್ದನಂತೆ. ಇದು ಒಂದು ದಿನದ ಕಥೆಯಲ್ಲ ಬದಲಿಗೆ ಹಲವು ದಿನಗಳಿಂದಲೂ ಆತನದ್ದು ಇದೇ ರೀತಿಯ ವರ್ತನೆಯಾಗಿತ್ತು. ಕೆಲವು ಬಾರಿ ಶಾಲೆಯಲ್ಲಿ ಮಲಗಿ ಆರಾಮಾಗಿ ಎದ್ದು ಹೋಗುತ್ತಿದ್ದ. ಕೇಳಿದವರಿಗೆ ಹೆದರಿಸುತ್ತಿದ್ದ ಎಂಬ ಆರೋಪ ಅವನ ಮೇಲಿದೆ.
ಕರ್ತವ್ಯದಿಂದ ಶಿಕ್ಷಕ ವಜಾ
ಈ ರೀತಿ ವರ್ತನೆ ಮಾಡಿದ್ದ ಶಿಕ್ಷಕನ್ನನ್ನು ಸಂತೋಷ್ ಕೇವತ್ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಸಂಬಂಧಿತ ಅಧಿಕಾರಿಗಳು ಆತನನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಆತನ ಕುರಿತು ಈ ಹಿಂದೆಯೂ ಶಾಲಾ ಶಿಕ್ಷಕರು ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಸಹ ಕೇಳಿಬಂದಿದೆ. ಹೀಗಾಗಿಯೇ ಆ ಶಿಕ್ಷಕ ಶಾಲೆಯಲ್ಲೇ ನಿತ್ಯ ಮದ್ಯಪಾನ ಮಾಡುತ್ತಿದ್ದ. ಕೇಳಿದವರಿಗೆ ದಬಾಯಿಸುತ್ತಿದ್ದ ಎಂದು ದೂರಲಾಗಿದೆ.



Click it and Unblock the Notifications
