Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಬಗೆಗಿನ 10 ಇಂಟ್ರಸ್ಟಿಂಗ್ ವಿಚಾರಗಳು
ಛತ್ರಪತಿ ಶಿವಾಜಿಯನ್ನು " ಹಿಂದೂ ಹೃದಯ ಸಾಮ್ರಾಟ" ಎಂದು ಕರೆಯಲಾಗುತ್ತದೆ. ಮರಾಠ ಸಾಮ್ರಾಜ್ಯದ ಸ್ಥಾಪಕರಾದ ಶಿವಾಜಿಯು ದೈರ್ಯಶಾಲಿ ಹಾಗೂ ಅಪ್ರತಿಮ ವೀರ ಅಂತಲೇ ಹೆಸರು ವಾಸಿಯಾಗಿದ್ದವರು. ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಲು ಹೋರಾಡಿದ ಕೆಚ್ಚೆದೆಯ ಹೋರಾಟಗಾರ ಅಂದ್ರೆ ತಪ್ಪಾಗೋದಿಲ್ಲ.
ಶಿವಾಜಿಯಲ್ಲಿದ್ದ ಆಡಳಿತದ ಚಾಕಚಕ್ಯತೆ, ಹಾಗೂ ಅವರು ರೂಪಿಸುತ್ತಿದ್ದ ಯುದ್ಧ ತಂತ್ರಗಳಿಂದಲೇ ಪ್ರಸಿದ್ಧಿ ಪಡೆದಿದ್ದ ಇವರು ಮೊದಲ ಬಾರಿಗೆ ಭಾರತದಲ್ಲಿ ಗೆರಿಲ್ಲಾ ಯುದ್ಧತಂತ್ರವನ್ನು ಪರಿಚಯಿಸಿದ ಖ್ಯಾತಿ ಇವರದ್ದಾಗಿದೆ. ಏಪ್ರಿಲ್ 3, 2023 ಕ್ಕೆ ಶಿವಾಜಿ ಸಾವನ್ನಪ್ಪಿ 343 ವರ್ಷಗಳಾಗಿದ್ದು ಈ ದಿನ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವೊಂದು ಇಂಟ್ರಸ್ಟಿಂಗ್ ಫ್ಯಾಕ್ಟ್‌ಗಳ ಬಗ್ಗೆ ತಿಳಿದುಕೊಳ್ಳೋಣ.

1. ಶಿವಾಜಿ ಹಿಂದೂ ಧರ್ಮದ ಪರವಾಗಿದ್ದರು. ಆದರೆ ಅವರಿಗೆ ಜಾತಿಗಾಗಿ ಕಚ್ಚಾಡೋದು ಇಷ್ಟವಿರಲಿಲ್ಲ. ಶಿವಾಜಿ ಬದುಕಿದ್ದ ಸಮಯದಲ್ಲಿ ಭಾರತದಲ್ಲಿ ಬೇರೆ ರಾಜರುಗಳು ತಮ್ಮ ಧರ್ಮದ ಆಚರಣೆಗಳನ್ನು ಪಾಲಿಸುತ್ತಿದ್ದರು. ಆದರೆ ಶಿವಾಜಿ ಎಲ್ಲಾ ಧರ್ಮದ ಆಚರಣೆಯ ಮೇಲೂ ನಂಬಿಕೆ ಇಟ್ಟಿದ್ದರು.
2. ಛತ್ರಪತಿ ಶಿವಾಜಿಯ ಹೆಸರು ಶಿವನ ಹೆಸರಿನಿಂದ ಬಂದಿದಲ್ಲ. ಬದಲಾಗಿ ಅಲ್ಲಿನ ಸ್ಥಳಿಯ ದೇವತೆ ಶಿವೈಯಿಂದ ಆ ಹೆಸರನ್ನು ಇಡಲಾಗಿದೆ.
3. ಶಿವಾಜಿಯು ಹಿಂದೂ ಧರ್ಮದ ಮೂಲ ಆಚರಣೆಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಂಡವರೇ ಅಲ್ಲ. ಅವರು ಹಿಂದೂ ಧರ್ಮವನ್ನು ಧನಾತ್ಮಕವಾಗಿ ಪುನರುಜ್ಜೀವನಗೊಳಿಸಲು ಯತ್ನಿಸಿದರು.
4. ಛತ್ರಪತಿ ಶಿವಾಜಿಯನ್ನು ಮುಸ್ಲಿಂಮರ ವಿರುದ್ಧ ಹೋರಾಡಿದ ರಾಜ ಎಂಬ ಕಳಂಕವಿದೆ. ಆದರೆ ಶಿವಾಜಿ ಆತನ ರಾಜ್ಯದ ಮೇಲೆ ದಾಳಿ ಮಾಡುತ್ತಿದ್ದ ಮುಸ್ಲಿಂಮರ ಜೊತೆಗೆ ಹೋರಾಡುತ್ತಿದ್ದನೇ ಹೊರತು ಒಂದು ಧರ್ಮದ ವಿರುದ್ಧ ಅಲ್ಲ.
5. ಶಿವಾಜಿಯು ಔರಂಗಜೇಬನಿಗೆ ಬಿಜಾಪುರವನ್ನು ವಶಪಡಿಸಿಕೊಳ್ಳಲು ಸಹಾಯ ಮಾಡಲು ಇಚ್ಛಿಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
6. ಶಿವಾಜಿ ಅಪ್ರತಿಮ ಹೋರಾಟಗಾರ ಅನೋದು ನಮಗೆಲ್ಲಾ ಗೊತ್ತಿದೆ. ಅವರ ತಂದೆ 2,000 ಸೈನಿಕರನ್ನು ಹೊಂದಿದ್ದರು. ಆದರೆ ಅವರ ನಂತರದ ಕಾಲದಲ್ಲಿ ಶಿವಾಜಿ ಈ ಸೈನ್ಯವನ್ನು ಹತ್ತು ಸಾವಿರಕ್ಕೆ ಹೆಚ್ಚಿಸುತ್ತಾರೆ. ಶಿವಾಜಿಯ ಬಳಿ ಸಕಲ ಕೌಶಲ್ಯಗಳನ್ನು ಹೊಂದಿದ್ದ ಸುಸಜ್ಜಿತ ಸೈನ್ಯವಿತ್ತು. ಹಾಗೂ ಇವರ ಮುಖ್ಯ ಯುದ್ಧತಂತ್ರವೆಂದರೆ ಅದು ಗೆರಿಲ್ಲಾ ಯುದ್ಧ ತಂತ್ರ.
7. ಶಿವಾಜಿಯು ತನ್ನ ಸೈನಿಕರಿಗೆ ಕೆಚ್ಚೆದೆಯಿಂದ ಹೋರಾಡಿ ಎಂದು ಪ್ರೇರೇಪಿಸಿದ್ದರು. ಆದರೆ ಎಂದಿಗೂ ಸಾವಿಗೆ ಬಲಿಯಾಗಿ ಎಂದು ಹೇಳಲಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಯುದ್ಧ ಭೂಮಿಯಿಂದ ಒಂದು ಹೆಜ್ಜೆ ಹಿಂದಿಟ್ಟು ಮತ್ತೆ ಗುಂಪುಗೂಡಿ ಹೋರಾಡಿ ಎಂದಿದ್ದಾರೆ.
8. ಮರಾಠರ ನೌಕಾ ಸೇನೆಯನ್ನು ಕೂಡ ಸ್ಥಾಪಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ತನ್ನ ಸಾಮ್ರಾಜ್ಯವನ್ನು ವಿದೇಶಿ ದಾಳಿಯಿಂದ ತಪ್ಪಿಸಬೇಕಾದರೆ ನೌಕಾಸೇನೆ ಬೇಕೆಂಬ ಅರಿವು ಶಿವಾಜಿಗೆ ಇತ್ತು. ಹೀಗಾಗಿ ಮರಾಠ ನೌಕಾ ಸೇನೆಯನ್ನು ಹೊಂದಿದ್ದರು.
9. ಒಂದು ಸಾರಿ ಶಿವಾಜಿಯ ಜೊತೆಗೆ ಮಾತುಕತೆಗೆ ಬಂದಿದ್ದ ಅಪ್ಝಲ್ ಖಾನನು ಶಿವಾಜಿಯನ್ನು ಕೊಲ್ಲಲು ತಂತ್ರ ರೂಪಿಸಿರುತ್ತಾನೆ. ಈ ವಿಚಾರ ಶಿವಾಜಿಗೆ ಮೊದಲೇ ಗೊತ್ತಿತ್ತು. ಅಪ್ಝಲ್ ಖಾನ್ ಶಿವಾಜಿಗಿಂತ ಬೃಹತ್ತ್ ಆಕಾರದ ದೇಹವನ್ನು ಹೊಂದಿದ್ದು, ಆತನನ್ನು ಅಪ್ಪಿಕೊಳ್ಳುವಾಗ ಕೊಲ್ಲಲು ಪ್ರಯತ್ನಿಸುತ್ತಾನೆ. ಈ ವೇಳೆ ಶಿವಾಜಿ ತನ್ನ ಬಳಿ ಇದ್ದ ಹುಲಿಯ ಉಗುರಿನಿಂದ ಅಪ್ಝಲ್ ಖಾನನನ್ನು ಚುಚ್ಚಿ ಚುಚ್ಚಿ ಕೊಲೆ ಮಾಡುತ್ತಾನೆ.
10. ಶಿವಾಜಿಯ ಸಾಮ್ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿತ್ತು.
ಇದು ಶಿವಾಜಿಯ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವೇ ಕೆಲವು ವಿಚಾರಗಳು ಅಷ್ಟೇ. ಶಿವಾಜಿಯಲ್ಲಿದ್ದ ಆ ದೈರ್ಯ, ಸಾಹಸ ಎಂತವರನ್ನು ಕೂಡ ಪ್ರೇರೇಪಿಸುತ್ತದೆ.



Click it and Unblock the Notifications

