Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಈ ವರ್ಷ ಚಾತುರ್ಮಾಸ ಯಾವಾಗ ಶುರು? ಈ ಸಮಯದಲ್ಲಿ ಶುಭ ಕಾರ್ಯ ಮಾಡುವುದಿಲ್ಲ ಏಕೆ?
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಚಾತುರ್ಮಾಸ ಶುರು, ಅಂದರೆ ಜೂನ್ 17ಕ್ಕೆ ಏಕಾದಶಿ, ಅಂದಿನಿಂದ ಚಾತುರ್ಮಾಸ ಶುರು. ವೈದಿಕ ಶಾಸ್ತ್ರದಲ್ಲಿ ಚಾತುರ್ಮಾಸವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಈ ನಾಲ್ಕು ಮಾಸ ಶ್ರೀ ವಿಷ್ಣುವಿಗೆ ಸಮರ್ಪಿತವಾದ ಮಾಸವಾಗಿದೆ. ಈ ಮಾಸದಲ್ಲಿ ಪೂಜೆ, ಹೋಮ , ಹವನಗಳನ್ನು ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು.

ಈ ವರ್ಷ ಚಾತುರ್ಮಾಸ ಎಲ್ಲಿಂದ ಎಲ್ಲಿಯವರೆಗೆ ಇರಲಿದೆ?
ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಚಾತುರ್ಮಾಸ ಪ್ರಾರಂಭವಾಗುತ್ತದೆ. ಈ ಬಾರಿ ಜುಲೈ 17ರಂದು ಆರಂಭವಾಗುತ್ತಿದೆ. ಈ ದಿನದಲ್ಲಿ ಬರುವ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುವುದು.
ದೇವಶಯನಿ ಏಕಾದಶಿ ತಿಥಿ ಪ್ರಾರಂಭ ಮತ್ತು ಮುಕ್ತಾಯ
ಏಕಾದಶಿ ತಿಥಿ ಜುಲೈ 16 ರಂದು ರಾತ್ರಿ 08:35 ಕ್ಕೆ ಪ್ರಾರಂಭವಾಗಿ ಜುಲೈ 17 ರಂದು ರಾತ್ರಿ 09:04 ಕ್ಕೆ ಕೊನೆಗೊಳ್ಳುತ್ತದೆ.
ಈ ಚಾತುರ್ಮಾಸದ ವಿಶೇಷತೆಯೇನು?
ದೇವಶಯನಿ ಏಕಾದಶಿಯಂದು, ಭಗವಾನ್ ವಿಷ್ಣುವು ಯೋಗ ನಿದ್ರಾಗೆ ಹೋಗುತ್ತಾ, , ಶ್ರಾವಣ ಮಾಸದಿಂದ, ಪ್ರಪಂಚದ ಅಧಿಕಾರವು ಶಿವನ ಕೈಗೆ ಬರುತ್ತದೆ, ಶ್ರೀವಿಷ್ಣು ನಿದ್ದೆಯಲ್ಲಿ ಇರುತ್ತಾನೆ, ನವೆಂಬರ್ 12ರವರೆಗೆ ಚಾತುರ್ಮಾಸ ಇರಲಿದೆ.
ಚಾತುರ್ಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಏಕೆ?
ದೇವಶಯನಿ ಏಕಾದಶಿಯಂದು ಶ್ರೀ ವಿಷ್ಣು ನಿದ್ದೆಗೆ ಜಾರುತ್ತಾನೆ. ವಿಷ್ಣುವು ವೈಕುಂಠ ಧಾಮವನ್ನು ತೊರೆದು ನಾಲ್ಕು ತಿಂಗಳ ಕಾಲ ಭೂಗತ ಲೋಕದಲ್ಲಿ ನೆಲೆಸುತ್ತಾನೆ. ಭಗವಾನ್ ವಿಷ್ಣುವು ಯೋಗ ನಿದ್ರಾದಲ್ಲಿ ನಾಲ್ಕು ತಿಂಗಳುಗಳ ಕಾಲ ಕಳೆಯುತ್ತಾನೆ, ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.
ಶ್ರಾವಣದಲ್ಲಿ ಶಿವ ಪೂಜೆಯ ಪ್ರಾಮುಖ್ಯತೆ
ಯೋಗ ನಿದ್ರಾಗೆ ಹೋಗುವ ಮೊದಲು, ವಿಷ್ಣುವು ಪ್ರಪಂಚದ ಎಲ್ಲಾ ಜವಾಬ್ದಾರಿಯನ್ನು ಶಿವನಿಗೆ ನೀಡುತ್ತಾನೆ ಹೀಗಾಗಿ ಇನ್ನು ನಾಲ್ಕು ತಿಂಗಳು ಈ ಭೂಮಂಡಲದ ಆಡಳಿತ ಶಿವ ಮಾಡುತ್ತಾನೆ, ಹಾಗಾಗಿ ಚಾತುರ್ಮಾಸದಲ್ಲಿ ಬರುವ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು, ಈ ಶ್ರಾವಣ ಮಾಸ ಶಿವ ಭಕ್ತರಿಗೆ ಅತ್ಯಂತ ಶ್ರೇಷ್ಠವಾದ ಮಾಸವಾಗಿದೆ.
ಪೂಜೆಗೆ ಶ್ರೇಷ್ಠವಾದ ಮಾಸ
ಈ ಸಮಯದಲ್ಲಿ ಮದುವೆ ಮುಂತಾದ ಶುಭ ಕಾರ್ಯ ನಡೆಯುವುದಿಲ್ಲ, ಆದರೆ ಪೂಜೆ, ಹವನಗಳಿಗೆ ಅತ್ಯಂತ ಶ್ರೇಷ್ಠವಾದ ಮಾಸವೆಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಏನು ಮಾಡಬೇಕು?
ಈ ಸಮಯದಲ್ಲಿ ಜನರು ಸಮತೋಲಿತ ಜೀವನವನ್ನು ನಡೆಸುವತ್ತ ಗಮನಹರಿಸಬೇಕು. ಈ ಅವಧಿಯಲ್ಲಿ ಮೊಸರು, ಉಪ್ಪಿನಕಾಯಿ, ಹಸಿರು ತರಕಾರಿಗಳು ಮತ್ತು ಮೂಲಂಗಿ ಇತ್ಯಾದಿಗಳನ್ನು ತಿನ್ನಬಾರದು ಎಂದು ಹೇಳಲಾಗುವುದು. ಇದಲ್ಲದೆ ಚಾತುರ್ಮಾಸದಲ್ಲಿ ನಿಶ್ಚಿತಾರ್ಥ, ಮುಂಡನ, ಮದುವೆ, ನಾಮಕರಣ ಮತ್ತು ಗೃಹಪ್ರವೇಶ ಇತ್ಯಾದಿಗಳನ್ನು ಕೂಡ ಮಾಡುವುದಿಲ್ಲ. ಈ ನಾಲ್ಕು ತಿಂಗಳುಗಳಲ್ಲಿ ಮಾಂಸ, ಮೀನು, ಮೊಟ್ಟೆ ಮತ್ತು ಮದ್ಯದಂತಹ ತಾಮಸಿಕ ಆಹಾರವನ್ನು ಮುಟ್ಟಬಾರದು ಎಮದು ಹೇಳಲಾಗುವುದು. ಶ್ರೀ ವಿಷ್ಣು ಯೋಗ ನಿದ್ರೆಯಿಂದ ಎಚ್ಚೆತ್ತುಕೊಂಡ ಮೇಲೆ ಅಂದರೆ ಚಾತುರ್ಮಾಸ ಮುಗಿದ ಮೇಲೆ ಶುಭ ಕಾರ್ಯಗಳು ಶುರುವಾಗುವುದು.



Click it and Unblock the Notifications