Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಾತುರ್ಮಾಸ ಶುರು: 4 ಮಾಸ ಈ ಶುಭ ಕಾರ್ಯಗಳನ್ನು ಮಾಡಲೇಬಾರದು
ಜುಲೈ 17ಕ್ಕೆ ದೇವಶಯನಿ ಏಕಾದಶಿ ಅದಾದ ಬಳಿಕ ಚಾತುರ್ಮಾಸ, ದೇವಶಯನಿ ಏಕಾದಶಿ ಬಳಿಕ ಶ್ರೀವಿಷ್ಣು ಯೋಗ ನಿದ್ದೆಗೆ ಜಾರುತ್ತಾನೆ, ಶಿವನು ಈ ಭೂಮಂಡಲದ ಆಡಾಳಿತ ಮಾಡುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ, ಚಾರ್ತುಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು, ಈ ಚಾರ್ತುಮಾಸದ ವಿಶೇಷತೆಯೇನು? ಈ ಚಾತುರ್ಮಾಸದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಚಾತುರ್ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು?
ಮದುವೆ ಮಾಡುವುದು, ಉಪನಯನ, ಗೃಹ ಪ್ರವೇಶ, ಹೊಸ ಮನೆ ಕಟ್ಟುವುದಕ್ಕೆ ಶುರು ಮಾಡುವುದು, ಭೂಮಿ ಪೂಜೆ ಹೀಗೆ ಯಾವುದೇ ಶುಭ ಕಾರ್ಯಗಳನ್ನು ಈ ನಾಲ್ಕು ಮಾಸದಲ್ಲಿ ಮಾಡಲೇಬಾರದು.
ಚಾತುರ್ಮಾಸದಲ್ಲಿ ಒಟ್ಟು ನಾಲ್ಕು ಮಾಸದಲ್ಲಿ ಪ್ರತಿಯೊಂದು ಮಾಸವೂ ವಿಶೇಷವಾಗಿರಲಿದೆ
ಶ್ರಾವಣ ಮಾಸ:: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು, ಅಲ್ಲದೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ.
ಭಾದ್ರಪದ ಮಾಸ: ಈ ಮಾಸದಲ್ಲಿ ಮೊಸರು ಸೇವನೆ ಮಾಡಬಾರದು ಎಂದು ಹೇಳಲಾಗುವುದು
ಅಶ್ವಿನಿ ಮಾಸದಲ್ಲಿ ಹಾಲು ಸೇವನೆ ಒಳ್ಳೆಯದಲ್ಲ
ಕಾರ್ತಿಕ ಮಾಸದಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಉದ್ದಿನ ಬೇಳೆ ಸೇವಿಸಬಾರದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಹಾಲು, ಬೆಲ್ಲ, ಮೊಸರು, ಎಣ್ಣೆ, ಬದನೆಕಾಯಿ, ಎಣ್ಣೆ, ಹಸಿರು ತರಕಾರಿ, ಉಪ್ಪು, ಖಾರ, ಸಿಹಿ ಪದಾರ್ಥ,ಮದ್ಯ, ಮಾಂಸ ಇವುಗಳನ್ನು ಸೇವಿಸಬಾರದು ಎಂದು ಹೇಳಲಾಗುವುದು, ಕೆಲವರು ಈ ನಿಯಮ ಕೂಡ ಪಾಲಿಸುತ್ತಾರೆ, ಈ ಆಹಾರಕ್ರಮದಿಂದ ಆರೋಗ್ಯ ಕೂಡ ವೃದ್ಧಿಯಾಗುವುದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಏನು ಮಾಡಬಾರದು?
ಈ ಸಮಯದಲ್ಲಿ ದೇವರ ಪೂಜೆ ಮಾಡಬೇಕು, ಪೂಜಾ ಕಾರ್ಯಗಳನ್ನು ಮಾಡಲು ಈ ಅವಧಿ ತುಂಬಾನ ಒಳ್ಳೆಯದು
ತೀರ್ಥಯಾತ್ರೆಗೆ ಈ ಅವಧಿ ಅನುಕೂಲಕರವಾಗಿದೆ.
ಈ ಅವಧಿಯಲ್ಲಿ ಕೆಲಸ ಬದಲಾವಣೆ ಸುಕ್ತವಲ್ಲ
ಆಹಾರ, ವಸ್ತ್ರಗಳನ್ನು ದಾನ ಮಾಡಿ.
ಈ ಸಮಯದಲ್ಲಿ ತುಂಬಾ ಭಕ್ತರು ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ.
ದೇವ ಶಯನಿ ಏಕಾದಶಿ ಪೂಜಾ ವಿಧಿಯೇನು?
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮನಸ್ಸು, ದೇಹವನ್ನು ಶುದ್ಧಗೊಳಿಸಿ
ನಂತರ ಶ್ರೀ ವಿಷ್ಣುವಿನ ಫೋಟೋ ಅಥವಾ ಮೂರ್ತಿಯನ್ನು ಒರೆಸಿ ಅಲಂಕರಿಸಿ, ನಂತರ ತುಪ್ಪದ ದೀಪ ಹಚ್ಚಿ ಪೂಜಿಸಿ
ಈ ದಿನ ಶ್ರೀ ವಿಷ್ಣು ಮಂತ್ರಗಳನ್ನು ಹೇಳಿ
ದೇವಶಯನಿ ಏಕಾದಶಿ ಬಳಿಕ ವಿಷ್ಣು ನಿದ್ರೆಗೆ ಜಾರುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆಯಾಗಿದೆ.
ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಶೈವಾರದಕರು ಈ ನಾಲ್ಕೂ ತಿಂಗಳು ಸೋಮವಾರ ಶಿವನಿಗೆ ಅಭಿಷೇಕ ಮಾಡುತ್ತಾರೆ. ಒಟ್ಟು 16 ಸೋಮವಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಈ ಕಾರ್ಯ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಲಕ್ಷ್ಮ ಪ್ರದರ್ಶಣೆ ಮಾಡುವುದು
ಲಕ್ಷ ತುಳಸಿ ಅರ್ಪಿಸಿ ಶ್ರೀವಿಷ್ಣುವಿಗೆ ಪೂಜೆ ಮಾಡುವುದು
ಸಂಜೆ ದೇವರಿಗೆ ತುಪ್ಪದ ದೀಪ ಹಚ್ಚಿಡುವುದು
ಬೆಡ್ ಮೇಲೆ ಮಲಗದೆ ನೆಲದ ಮೇಲೆ ಅಥವಾ ಬರಿ ಚಾಪೆ ಹಾಕಿ ಮಲಗುವುದು
ಮೌನವ್ರತ
ಹುಣ್ಣಿಮೆಗೆ ದುರ್ಗೆ, ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದು
ಮಂತ್ರಗಳ ಪಠಣೆ
ಪೂಜೆಗಳನ್ನು ಮಾಡಿಸುವುದು
ದಾನ , ಧರ್ಮ ಮಾಡುವುದು
ಈ ನಾಲ್ಕು ಮಾಸ ಶ್ರಾವಣ, ಗಣೇಶ ಚತುರ್ಥಿ, ಕಾರ್ತಿಕ ಪೂಜೆ ಹೀಗೆ ವಿಶೇಷ ಧಾರ್ಮಿಕ ಆಚರಣೆಗಳಿರುತ್ತದೆ, ಈ ಅವಧಿಯಲ್ಲಿ ಮಾಂಸಾಹಾರ ಮಾಡಬಾರದು ಎಂದು ಹೇಳಲಾಗುವುದು. ಚಾತುರ್ಮಾಸ ವ್ರತ ಆಚರಣೆ ಮಾಡುವಿದರಿಂದ ಶ್ರೀವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ.



Click it and Unblock the Notifications
