Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಹಣದ ಸಮಸ್ಯೆಗೆ ಮುಕ್ತಿ ಪಡೆಯಲು ಈ ಕುಬೇರ ಮಂತ್ರ ಪಠಿಸಿ..!
ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಮಂತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆಗಳಿವೆ. ಯಾವ ಸಮಯದಲ್ಲಿ ಯಾವ ಮಂತ್ರ ಪಠಿಸಬೇಕು ಎಂಬುದನ್ನು ನಿಯಮಸಾರವಾಗಿ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೆಲವು ಮಂತ್ರಗಳು ನಮ್ಮ ಜೀವನವನ್ನೇ ಬದಲಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ. ಅದರಲ್ಲೂ ಯಾವ ವಾರ ಯಾವ ಮಂತ್ರ ಪಠಿಸಬೇಕು ಎಂಬುದು ಸಹ ಹಿಂದೂ ಧರ್ಮದಲ್ಲಿ ಮುಖ್ಯವಾಗಿದೆ.
ಎಲ್ಲಾ ಮಂತ್ರಗಳಿಗಿಂತಲು ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರ ಎಂದು ಪರಿಗಣಿಸಲಾಗಿದೆ. ಇದರ ಜೊತೆ ಕುಬೇರ ಮಂತ್ರ ಸಹ ಅಷ್ಟೇ ಪ್ರಭಾವಶಾಲಿ ಎಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯ ಜೊತೆಗೆ ಕುಬೇರ ಮಂತ್ರ ಪಠಣೆ ಆದಾಯ, ಸಂಪತ್ತಿನ ವೃದ್ಧಿಗೆ ಮೂಲ ಎಂದು ಹೇಳಲಾಗಿದೆ.
ಈ ಮಂತ್ರವನ್ನು ನಿಯಮಿತವಾಗಿ ಪಠಿಸುವ ವ್ಯಕ್ತಿಯ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಮತ್ತು ಕುಬೇರನ ಆಶೀರ್ವಾದವಿದೆ ಮತ್ತು ಹಣದ ಕೊರತೆಯಿಲ್ಲ ಎಂಬ ನಂಬಿಕೆ ಜ್ಯೋತಿಷ್ಯದಲ್ಲಿದೆ.

ಈ ಮಂತ್ರವನ್ನು ಶುಕ್ರವಾರದಂದು ಪಠಿಸಿದರೆ ವಿಶೇಷವಾಗಿ ಅನುಗ್ರಹಕ್ಕೆ ನೀವು ಪಾತ್ರರಾಗಬಹುದು ಎಂಬುದು ಶಾಸ್ತ್ರದಲ್ಲಿರುವ ಸಾರಾಂಶವಾಗಿದೆ. ಹಾಗಾದರೆ ಶುಕ್ರವಾರದಂದು ಯಾವ ಮಂತ್ರ ಪಠಿಸಬೇಕು? ಯಾವ ಮಂತ್ರ ಪಠಿಸಿದರೆ ಕುಬೇರನ ಒಲಿಸಬಹುದು ಆತನ ಆರ್ಶೀವಾದ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.
ಕುಬೇರನ ಕೃಪೆಗಾಗಿ ಈ ಮಂತ್ರ ಪಠಿಸಿ
'ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ-ಲಕ್ಷ್ಮೀ ಮಮ ಗೃಹೇ ಧನಂ ಪುರಾಯೈ ನಮಃ ||
ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮೀ ಮಮ ಗೃಹೇ ಧನಂ ಪುರಾಯೈ ನಮಃ ||
ಈ ಕುಬೇರ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ನಿಮಗೆ ದೊರೆಯುತ್ತದೆ.
ಲಕ್ಷ್ಮಿ ಕುಬೇರನಿಗೆ ಇತರ ಮಂತ್ರಗಳು
ಓಂ ಶ್ರೀಮ್ ಕ್ರೀಂ ಓಂ ಕುಬೇರ್ ಲಕ್ಷ್ಮೀ ಕಮಲಾ, ದೇವ್ನಾಯೇ ಧನ ಕಾರ್ಷಿಣ್ಯೈ ಸ್ವಾಹಾ ||
ಈ ಮಂತ್ರದ ಅಕ್ಷರಶಃ ಅರ್ಥವೇನೆಂದರೆ "ನಾನು ಲಕ್ಷ್ಮಿ ದೇವಿ ಮತ್ತು ಭಗವಂತ ಕುಬೇರನನ್ನು ನನಗೆ ಸಂಪತ್ತು ಮತ್ತು ಸಮೃದ್ಧಿಯಿಂದ ಆಶೀರ್ವದಿಸುವಂತೆ ಪ್ರಾರ್ಥಿಸುತ್ತೇನೆ.
ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಯಶಸ್ಸು ಸಾಧಿಸಬಹುದು. ಈ ಮಂತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಸಂತೋಷ ಇರುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದ ಕೆಟ್ಟ ಸಮಯವನ್ನು ಸಹ ಒಳ್ಳೆಯ ಸಮಯಗಳಾಗಿ ಬದಲಾಯಿಸುವ ಶಕ್ತಿ ಇದೆ ಮತ್ತು ದೊಡ್ಡ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ರಾತ್ರಿ ನೀವು 'ಲಕ್ಷ್ಮೀ ಕುಬೇರ ಮಂತ್ರ'ವನ್ನು ಪಠಿಸಿದರೆ, ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಸಂಪತ್ತಿನ ಮಾರ್ಗಗಳು ತೆರೆದುಕೊಳ್ಳುತ್ತವೆ ಮತ್ತು ನಿಮ್ಮ ಕೆಲಸದ ಜೊತೆಗೆ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಪ್ರಾರಂಭಿಸುತ್ತೀರಿ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮನೆ ಮಕ್ಕಳ ಬುದ್ಧಿವಂತಿಕೆ ಹೆಚ್ಚುತ್ತದೆ.
ಕುಬೇರನ ಆರ್ಶೀವಾದ ಪಡೆಯಲು ಇತರೆ ಮಂತ್ರಗಳು
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಶನಧಾನ್ಯಧೀಪತಯೇ
ಧನಧಾನ್ಯಸಮೃದ್ಧಿಮ್ ಮೇದೇಹಿ ದಾಪಯ ಸ್ವಾಹಾ||
ಧನ ಪಾಪ್ತಿಗೆ ಮಂತ್ರ
ಓಂ ಶ್ರೀಮ್ ಹ್ರೀಮ್ ಕ್ಲೀಮ್ ಶ್ರೀಮ್ ಕ್ಲೀಮ್ ವಿತ್ತೇಶ್ವರಾಯ ನಮಃ
ಕುಬೇರ ಅಷ್ಟಲಕ್ಷ್ಮಿ ಮಂತ್ರ
ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮಿ
ಮಾಮಾ ಗ್ರಿಹೆ ಧನಂ ಪುರಾಯ ಪುರಾಯ ನಮಃ
ಲಕ್ಷ್ಮಿ ಕುಬೇರ ಮಂತ್ರ
"ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮಿ ಮಮ ಗೃಹೆ ಧನಂ ಪುರಾಯ ಪುರಾಯ ನಮಃ"
ಮಹಾಲಕ್ಷ್ಮಿ ಮಂತ್ರ:
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ, ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೆ ನಮಃ"
ಕುಬೇರ ಮಂತ್ರ:
ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ



Click it and Unblock the Notifications