Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಆನ್‌ಲೈನ್‌ನಲ್ಲೇ ಶ್ರೀರಾಮನ ಮಂತ್ರ ಪಠಿಸಿ...ಪ್ರಮಾಣ ಪತ್ರ ಪಡೆಯಿರಿ..! ಹೇಗೆ ಗೊತ್ತಾ?
ಇಂದು ಭವ್ಯ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಇಡೀ ವಿಶ್ವದ ದೃಷ್ಟಿ ಭಾರತದ ಮೇಲಿದೆ. ಎಲ್ಲಾ ಕಡೆ ರಾಮ ನಾಮ ಸ್ಮರಣೆಯಾಗುತ್ತಿದೆ. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟುತ್ತಿದೆ. ಅಯೋಧ್ಯೆ ರಾಮನ ದರ್ಶನ ಪಡೆಯಲು ಕೋಟಿ ಕೋಟಿ ರಾಮ ಭಕ್ತರು ಕಾದಿದ್ದಾರೆ. ಆದರೆ ಎಲ್ಲಾ ಭಕ್ತರು ಇಂದು ಅಯೋಧ್ಯೆಗೆ ತೆರಳಲು ಸಾಧ್ಯವಿಲ್ಲ. ಕೇವಲ ಆಹ್ವಾನಿತ ಗಣ್ಯರಿಗೆ ಮಾತ್ರ ಇಂದು ವಿಶೇಷ ಆರತಿ ಮತ್ತು ದರ್ಶನ ಭಾಗ್ಯವಿದೆ. ಆದರೆ ನೀವು ಕುಳಿತಲ್ಲೇ ರಾಮನ ತಲುಪಬಹುದಿದೆ.
ಹೌದು ನೀವು ಕುಳಿತಲ್ಲೇ ಆನ್‌ಲೈನ್ ಮೂಲಕ ರಾಮ ಮಂದಿರ ಉದ್ಘಾಟನೆಯನ್ನೂ ವೀಕ್ಷಿಸಬಹುದು ಜೊತೆಗೆ ರಾಮ ನಾಮ ಸ್ಮರಣೆಯ ಮಾಡಿ ಪ್ರಮಾಣ ಪತ್ರವನ್ನೂ ಪಡೆದುಕೊಳ್ಳಬಹುದು. ಆನ್‌ಲೈನ್ ಮೂಲಕವೇ ಭಾಗವಹಿಸಿ ರಾಮ ನಾಮವನ್ನು ಜಪಿಸಬಹುದು.
ಕಿರು ವಿಡಿಯೋ ಅಪ್ಲಿಕೇಶನ್ ಜೋಶ್ ಮತ್ತು ಸ್ಥಳೀಯ ಸುದ್ದಿ ಅನ್ವೇಷಣೆ ವೇದಿಕೆ ಡೈಲಿ ಹಂಟ್ ಹಾಗೂ ಒನ್ ಇಂಡಿಯಾ ವೆಬ್‌ಸೈಟ್ ವೇದಿಕೆಗಳು ರಾಮ ಭಕ್ತರಿಗೆ ಇಂತಹದೊಂದು ಅವಕಾಶ ಮಾಡಿಕೊಟ್ಟಿವೆ. ಹಾಗಾದ್ರೆ ನೀವು ಮಾಡಬೇಕಾಗಿರೋದು ಏನು ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ.

ಜೋಶ್ ಮತ್ತು ಡೈಲಿ ಹಂಟ್ ಮತ್ತು ಒನ್ ಇಂಡಿಯಾ ವರ್ಚುವಲ್ ಮೂಲಕ ಶ್ರೀರಾಮ ಮಂತ್ರ ಪಠಿಸಲು ವೇದಿಕೆ ಕಲ್ಪಿಸಿದ್ದು, ನೀವೂ ಸಹ ಭಾಗವಹಿಸಿ ಶ್ರೀರಾಮನ ಮೇಲಿರುವ ಭಕ್ತಿಯನ್ನು ಪ್ರದರ್ಶಿಸಬಹುದು. ಈ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಇಲ್ಲವೆ ಜೋಶ್ ಅಥವಾ ಡೈಲಿ ಹಂಟ್ ಆಪ್ ತೆರೆಯುವ ಮೂಲಕ ನೀವು ಆನ್‌ಲೈನ್ ರಾಮ ನಾಮ ಸ್ಮರಣೆಯಲ್ಲಿ ಭಾಗಿಯಾಗಬಹುದು.
ಈ ಲಿಂಕ್‌ನಲ್ಲಿ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಮಂತ್ರವನ್ನು ಪಠಿಸಬಹುದು. ನೀವು ನಿಮ್ಮ ಹೆಸರನ್ನು ಮೊದಲು ನಮೂದಿಸಿ ಬಳಿಕ ಎಷ್ಟು ಬಾರಿ ಈ ಮಂತ್ರವನ್ನು ಪಠಿಸುತ್ತೀರಿ ಎಂಬ ಆಯ್ಕೆಯನ್ನು ಮಾಡಿದರೆ ಸ್ವಯಂಚಾಲಿತವಾಗಿ ಮಂತ್ರ ಆರಂಭವಾಗುತ್ತದೆ. ಬಳಿಕ ನೀವು ಆ ಮಂತ್ರವನ್ನು ಜಪಿಸಿದರೆ ಸಾಕು. ಈ ಮಂತ್ರ ಪಠಣೆ ಮುಗಿದ ಬಳಿಕ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನೀವು 11, 108, ಅಥವಾ 1008 ಬಾರಿ ಮಂತ್ರವನ್ನು ಪಠಿಸಬಹುದು.
ಆನ್‌ಲೈನ್‌ನಲ್ಲಿ ರಾಮ ಮಂದಿರ ಉದ್ಘಾಟನೆ ನೋಡುವುದು ಹೇಗೆ?
ಅಯೋಧ್ಯೆಗೆ ತೆರಳಲು ಸಾಧ್ಯವಾಗದಿರುವ ಭಕ್ತರು ಆನ್‌ಲೈನ್‌ನಲ್ಲೂ ಪ್ರಭು ಶ್ರೀರಾಮನ ಈ ಸ್ಮರಣೀಯ ಕಾರ್ಯಕ್ರಮ ಕಣ್ತುಂಬಿಕೊಳ್ಳಬಹುದು. ಡಿಡಿ ನ್ಯಾಷನಲ್ ಮತ್ತು ದೂರದರ್ಶನದ ಯೂಟ್ಯೂಬ್ ಚಾನಲ್‌ನಲ್ಲಿ ಬೆಳಗ್ಗೆಯಿಂದಲೇ ನೇರಪ್ರಸಾರವಿದ್ದು, ಅಲ್ಲಿ ಉಚಿತವಾಗಿ ನೀವು ರಾಮ ಮಂದಿರ ಉದ್ಘಾಟನೆಯ ದೃಶ್ಯ ಕಣ್ತುಂಬಿಕೊಳ್ಳಬಹುದು.
ಪ್ರಾಣ ಪ್ರತಿಷ್ಠಾಪನೆಗೆ ಇರುವ ಶುಭ ಮುಹೂರ್ತ ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಅಭಿಜಿತ್ ಮುಹೂರ್ತ ಕೂಡ ಇದೆ ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿಯೇ ಅಭಿಜಿತ್ ಮುಹೂರ್ತ ಕೂಡ ಬಂದಿರುವುದರಿಂದ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಪ್ರಗತಿ ಉಂಟಾಗುವುದು.
ಅಯೋಧ್ಯೆ ರಾಮ ಮಂದಿರಲ್ಲಿ ನೀಡಲಾಗುವ ಪ್ರಸಾದ
ತಿರುಪತಿಯಿಂದ 1 ಲಕ್ಷ ಲಡ್ಡುಗಳನ್ನು ಕಳುಹಿಸಲಾಗಿದೆ, ಅದನ್ನು ಇಂದು ಅಯೋಧ್ಯೆಯಲ್ಲ ನೆರೆದಿರುವ ಭಕ್ತರಿಗೆ ಲಡ್ಡುಪ್ರಸಾದ ನೀಡಲಾಗುವುದು. ಅಯೋಧ್ಯೆಗೆ ಪ್ರಸಾದವಾಗಿ ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಇಲ್ಲಿ ನಿಮಗೆ ಕಲ್ಲು ಸಕ್ಕರೆ ಹೊರತು ಪಡಿಸಿ ಬೇರೆ ಯಾವುದೇ ಪ್ರಸಾದ ಸಿಗುವುದಿಲ್ಲ , ಕಲ್ಲುಸಕ್ಕರೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಇದೇ ಕಲ್ಲು ಸಕ್ಕರೆ ಪ್ರಸಾದವಾಗಿ ನೀಡಲಾಗುವುದು.
ಈ ಲಿಂಕ್ ಮೂಲಕ ನೀವು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ರಾಮ ನಾಮ ಸ್ಮರಣೆಯಲ್ಲಿ ಭಾಗಿಯಾಗಬಹುದು. ಮೊಬೈಲ್‌ನಲ್ಲಾದರೆ ಡೈಲಿ ಹಂಟ್ ಅಥವಾ ಜೋಶ್ ಆಪ್ ತೆರೆದು ಭಾಗಿಯಾಗಬಹುದು https://share.myjosh.in/webview/ram-mandir-event



Click it and Unblock the Notifications

