Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂಗ್ಲೆಂಡ್ ಪ್ರಯಾಣಕ್ಕೆ ಮುಂದಾಗಿವೆ ಚನ್ನಪಟ್ಟಣ ಗೊಂಬೆಗಳು: ಈ ಕೈಗಾರಿಕೆ ಹುಟ್ಟಿದ್ದು ಹೇಗೆ?
ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಎರಡು ದಿನಗಳ ಕಾಲ ಅವರು ಲಂಡನ್‌ನಲ್ಲಿ ಹಲವು ರೀತಿಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಅದ್ರಲ್ಲೂ ವ್ಯಾಪಾರ ಸಂಬಂಧವಾಗಿ ಎರಡು ದೇಶಗಳ ನಡುವೆ ಒಪ್ಪಂದಗಳು ನಡೆಯಲಿದೆ. ಇಂಡೋ-ಪೆಸಿಫಿಕ್ ಉಸ್ತುವಾರಿ ಹೊಂದಿರುವ ಯುಕೆ ವಿದೇಶಾಂಗ ಕಚೇರಿಯ ಸಚಿವೆ ಕ್ಯಾಥರೀನ್ ವೆಸ್ಟ್, ಯುಕೆಯಲ್ಲಿನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಸೇರಿ ಹಲವರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡಿದ್ದಾರೆ.
ಇನ್ನು ಮೋದಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದಂತೆ ಭಾರತದ ಸಣ್ಣ ಹಾಗೂ ಐತಿಹಾಸಿಕ ವ್ಯಾಪಾರ ವಸ್ತುಗಳಿಗೆ ಬಂಪರ್ ಸಿಕ್ಕಿದೆ. ವೋಕಲ್ ಫಾರ್ ಲೋಕಲ್ ಕಾರ್ಯಕ್ರಮದಲ್ಲಿ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದವು ಒಂದು ಹೆಜ್ಜೆ ಮುಂದೆ ಸಾಗಿದ್ದು, ಸ್ಥಳೀಯವಾಗಿ ಮಾಡಲ್ಪಟ್ಟ ವಸ್ತುಗಳು ಕೂಡ ಜಾಗತಿಕ ವೇದಿಕೆಗೆ ತೆರಳುತ್ತಿವೆ.

ಈ ಒಪ್ಪಂದವು 'ಮೇಕ್ ಇನ್ ಇಂಡಿಯಾ' ಮತ್ತು 'ವೋಕಲ್ ಫಾರ್ ಲೋಕಲ್'ಗೆ ಗೆಲುವು, ಉದ್ಯೋಗ ಸೃಷ್ಟಿಗೆ ಚಾಲನೆ ನೀಡುತ್ತದೆ. ಸಮುದಾಯಗಳನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಲಾಗಿದೆ. ಈ ಸಂಬಂಧ ನಮ್ಮ ರಾಜ್ಯದಲ್ಲಿನ ಚನ್ನಪಟ್ಟಣ ಗೊಂಬೆಗಳಿಗೂ ಈಗ ಅಂತಾರಾಷ್ಟ್ರೀಯ ವೇದಿಕೆ ಸಿಕ್ಕಂತಾಗಿದೆ.
ಸ್ಥಳೀಯವಾಗಿ ತಯಾರಾಗುವ ಈ ಈ ಚನ್ನಪಟ್ಟಣ ಗೊಂಬೆಯು ಇಂಗ್ಲೆಂಡ್ ಮಾರುಕಟ್ಟೆ ತಲುಪಲಿವೆ. ಚನ್ನಪಟ್ಟಣದ ಗೊಂಬೆಗಳು ಈಗಾಗಲೇ ವಿದೇಶದಲ್ಲೂ ಫೇಮಸ್ ಆಗಿವೆ. ಈಗ ಲಂಡನ್‌ನಲ್ಲೂ ತನ್ನ ವಿಶೇಷತೆ ಹರಡಲು ಸಿದ್ದಗೊಂಡಿವೆ. ಇದು ಆರ್ಥಿಕ ದೃಷ್ಟಿಕೋನದಿಂದ ಮುಖ್ಯವಾದುದು ಮಾತ್ರವಲ್ಲದೆ, ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಕೊಂಡೊಯ್ಯುವ ಪ್ರಬಲ ಮಾಧ್ಯಮವೂ ಆಗಿದೆ.
ಈ ಚನ್ನಪಟ್ಟಣ ಗೊಂಬೆಗಳು ವಿಶ್ವದಾದ್ಯಂತ ಈಗ ಹರಡಿಕೊಂಡಿವೆ. ಆನ್‌ಲೈನ್ ಜಗತ್ತಿನಲ್ಲೂ ಕೂಡ ಚನ್ನಪಟ್ಟಣ ಗೊಂಬೆಗಳು ಮಾರಾಟವಾಗುತ್ತವೆ. ಇವು ಸ್ಥಳೀಯವಾಗಿ ಹಾಗೆ ಕರಕುಶಲತೆಯಿಂದ ಬಹುತೇಕ ನೈಸರ್ಗಿಕ ರೀತಿಯಲ್ಲಿ ತಯಾರಾಗುತ್ತವೆ. ಹೀಗಾಗಿ ಆಟಿಕೆಗಳು ಬಹಳ ಕಾಲ ಬಾಳಿಕೆ ಬರುವುದು ನೋಡಬಹುದು.
ಈ ಆಟಿಕೆಗಳನ್ನು ಈಗಾಗಲೇ ವಿಶ್ವದ ನಾಯಕರ ಕೈಸೇರಿವೆ. ಹಾಗೆ 1970ರ ದಶಕದಲ್ಲಿ ಚನ್ನಪಟ್ಟಣಕ್ಕೆ ಬಂದಿದ್ದ ಅಮೆರಿಕದ ಜಾಕಿ ಚಂದಾನಿ ಎಂಬಾಕೆ ಈ ಕಲೆಯ ಬಗ್ಗೆ ಅಧ್ಯಯನ ನಡೆಸಿದ್ದರು. ಅಲ್ಲಿನ ಜನರಿಗೆ ಇದನ್ನೇ ಗುಡಿ ಕೈಗಾರಿಕೆಯಾಗಿ ಅಭಿವೃದ್ಧಿ ಪಡಿಸಲು ಹಾಗೆ ಆಧುನಿಕ ಸ್ಪರ್ಶ ನೀಡಲು ಮುಂದಾದರು ಎಂದು ಹೇಳಲಾಗಿದೆ. ಹಾಗೆ ಸರ್ಕಾರಗಳು ಕೂಡ ಈ ಕಲೆಯನ್ನು, ಕೈಗಾರಿಕೆಯನ್ನು ಉತ್ತೇಜಿಸಲು, ಉಳಿಸಲು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನೆರವಾಗುತ್ತಿವೆ.
ವಿಶ್ವ ದಿಗ್ಗಜರ ಕೈ ಸೇರಿದ ಗೊಂಬೆ!
ಚನ್ನಪಟ್ಟಣದ ಸಣ್ಣ ಹಳ್ಳಿಯಿಂದ ಆರಂಭಗೊಂಡ ಈ ಗೊಂಬೆಗಳ ಪ್ರಯಾಣ ಇಡೀ ವಿಶ್ವಕ್ಕೆ ಹರಡಿದೆ. ಅದ್ರಲ್ಲೂ ದಶಕಗಳ ಹಿಂದೆಯೇ ಬ್ರಿಟನ್ ರಾಣಿ ಡಯಾನ, ದೊರೆ ಚಾರ್ಲ್ಸ್ ವಿವಾಹಕ್ಕೆ ಪೌಡರ್‌ಬಾಕ್ಸ್‌ಗಳು ಚನ್ನಪಟ್ಟಣದಿಂದ ರವಾನೆಯಾಗಿದ್ದವು. ಇದಲ್ಲದೆ ಶ್ರೀಲಂಕಾ ಮಾಜಿ ಪ್ರಧಾನಿ ಭಂಡಾರ ನಾಯಕೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿ ಗೊಂಬೆಗಳ ಖರೀದಿಸಿದ್ದರು. ಇದಕ್ಕೂ ಮೊದಲು ಬರಾಕ್ ಒಬಾಮಾ ಪತ್ನಿ ಮಿಶೆಲ್ ಕೂಡ ದೆಹಲಿಯಲ್ಲಿ ಈ ಗೊಂಬೆಗಳ ಖರೀದಿಸಿದ್ದರು. ಹಾಗೆ ಭೂತಾನ್ ದೊರೆ ವಾಂಗ್ ಚುಕ್ ಭಾರತಕ್ಕೆ ಪ್ರವಾಸ ಬಂದಾಗ ಇದೆ ಗೊಂಬೆಗಳನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು.
ಈ ಗೊಂಬೆ ತಾಯಾರಾಗೋದು ಹೇಗೆ?
ಚನ್ನಪಟ್ಟಣದ ಬಹುತೇಕ ಎಲ್ಲಾ ಗೊಂಬೆಗಳು ನೈಸರ್ಗಿಕವಾಗಿ ತಯಾರಾಗುತ್ತವೆ. ಈ ಗೊಂಬೆಗಳನ್ನು ಆಲೆ ಮರದಿಂದ ತಯಾರಿಸಲಾಗುತ್ತದೆ. ಈ ಮರ ಅಪರೂಪವಾಗಿದ್ದು, ಚನ್ನಪಟ್ಟಣದಲ್ಲಿ ಹೇರಳವಾಗಿವೆ. ಈ ಮರ ಒಣಗಿದ ಬಳಿಕ ಗೊಂಬೆ ತಯಾರಿಕೆಗೆ ಅಣಿ ಮಾಡಲಾಗುತ್ತದೆ. 1902ರಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚನ್ನಪಟ್ಟಣದಲ್ಲಿ ಕುಶಲ ಕರ್ಮಿ ತರಬೇತಿ ಸಂಸ್ಥೆ ಆರಂಭಿಸಿದ್ದರು. ಆದ್ರೆ ಅವರಿಗಿಂತ ಮುನ್ನ ಟಿಪ್ಪು ಸುಪ್ತಾನ್ ಪರ್ಶಿಯಾ ದೇಶಕ್ಕೆ ತೆರಳಿದ್ದಾಗ ಅಲ್ಲಿನ ಗೊಂಬೆಗಳಿಗೆ ಮಾರುಹೋಗಿ ಕಲಾವಿದರೊಬ್ಬರ ಕರೆತಂದು ಅದೇ ಮಾದರಿಯ ಗೊಂಬೆಗಳ ತಯಾರಿಕೆಗೆ ಮುಂದಾದರಂತೆ.



Click it and Unblock the Notifications


