Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಡೀಸೆಲ್ ಬಳಸಿ ಪರೋಟಾ ಮಾಡಿದ್ನಾ ಡಾಬಾ ಮಾಲೀಕ..! ವೈರಲ್ ವಿಡಿಯೋದಲ್ಲಿ ಇರೋದೇನು?
ಇತ್ತೀಚಿಗೆ ಆನ್‌ಲೈನ್ ಜಗತ್ತಲ್ಲಿ ನಾವು ಯಾವೆಲ್ಲಾ ಫುಡ್ ಹ್ಯಾಬಿಟ್‌ಗಳ ನೋಡುತ್ತಿದ್ದೇವೆ ಅಂದ್ರೆ ಕೆಲವೊಮ್ಮೆ ಇದೂ ಸಾಧ್ಯವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಕೆಲವೊಮ್ಮೆ ಚಿತ್ರ ವಿಚಿತ್ರ ಫುಡ್‌ಗಳು ಸಹ ನಮ್ಮಲ್ಲಿ ಅಚ್ಚರಿಗೆ ಕಾರಣವಾಗುತ್ತೆ. ವಿಚಿತ್ರ ಕಾಂಬಿನೇಷನ್ ಇಂದ ಹಿಡಿದು ವಿಭಿನ್ನ ರುಚಿಯ ಫುಡ್ ನಾವು ನೋಡಿದ್ದೇವೆ.
ಆದ್ರೆ ಇಲ್ಲೊಂದು ವಿಡಿಯೋದಲ್ಲಿ ವಿಚಿತ್ರ ರೀತಿಯ ಫುಡ್ ಒಂದು ವೈರಲ್ ಆಗಿದೆ. ನೀವು ತುಪ್ಪ, ಎಣ್ಣೆಯಲ್ಲಿ ಮಾಡಿರುವ ಪರೋಟ ಸವಿದಿರುತ್ತಿರಿ. ಕೆಲವರಿಗೆ ಪರೋಟ ಅಂದ್ರೆ ಪಂಚಪ್ರಾಣ. ಮತ್ತೆ ಕೆಲವರು ಮನೆಯಲ್ಲೂ ಮಾಡಿ ಸವಿದಿರಬಹುದು.

ಆದ್ರೆ ನೀವು ಎಂದಾದರು ಡೀಸೆಲ್ ಪೆಟ್ರೋಲ್‌ನಿಂದ ಮಾಡಿದ ಪರೋಟದ ರುಚಿ ನೋಡಿದ್ದೀರಾ? ಹೌದು ವಾಹನಗಳಿಗೆ ಬಳಸುವ ಡೀಸೆಲ್ - ಪೆಟ್ರೋಲ್ ನಿಂದ ಪರೋಟ ಮಾಡಿ ನೀಡುವ ವಿಡಿಯೋವೊಂದು ವೈರಲ್ ಆಗಿದೆ. ಅಂಗಡಿಯಾತ ಪರೋಟವನ್ನು ಡೀಸೆಲ್ ಹಾಕಿ ಮಾಡುತ್ತಿರುವುದನ್ನು ಕಂಡು ಜನ ಶಾಕ್ ಆಗಿದ್ದಾರೆ.
ಚಂಡೀಗಢದಲ್ಲಿ ಈ ಡಾಬಾ ಇದೆ ಎಂದು ಹೇಳಲಾಗಿದೆ. ಫುಡ್ ಬ್ಲಾಗರ್ ಅಮನ್ಪ್ರೀತ್ ಎಂಬುವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಪರೋಟ ನೋಡಿದ ಜನರು ಶಾಕ್‌ಗೆ ಒಳಗಾಗಿದ್ದಾರೆ.
ಢಾಬಾ ಮಾಲೀಕ ಬಬ್ಲು ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ತಾನು ಡೀಸೆಲ್ ಪರಾಠವನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದ್ದಾನೆ. ಅವನು ಒಂದು ಕ್ಯಾನ್‌ನಿಂದ ಡೀಸೆಲ್ ಅನ್ನು ಪರೋಟಾ ಮೇಲೆ ಹಾಕಿ ಅದನ್ನು ಸಿದ್ದಪಡಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ನೋಡಿದ ಮಂದಿ ಅಚ್ಚರಿಯ ಜೊತೆ ಆಕ್ರೋಶ ಹೊರಹಾಕಿದ್ಧಾರೆ. ಡೀಸೆಲ್ ಸೇವನೆ ಆರೋಗ್ಯಕ್ಕೆ ಖಂಡಿತ ಹಾನಿಕಾರಕವಾಗಿರುತ್ತದೆ. ಆದ್ರೆ ಡಾಬಾ ಮಾಲೀಕನ ಪ್ರಕಾರ''ನಾವು ಯಾವುದೇ ರೀತಿಯ 'ಡೀಸೆಲ್ ಪರೋಟ'ವನ್ನು ತಯಾರಿಸುವುದಿಲ್ಲ ಅಥವಾ ಅಂತಹ ಯಾವುದೇ ವಸ್ತುವನ್ನು ಗ್ರಾಹಕರಿಗೆ ನೀಡುವುದಿಲ್ಲ. ಒಬ್ಬ ಬ್ಲಾಗರ್ ಕೇವಲ ಮೋಜಿಗಾಗಿ ಆ ವಿಡಿಯೋ ಮಾಡಿದ್ದಾನೆ' ಎಂದು ಮಾಲೀಕ ಚನ್ನಿ ಸಿಂಗ್ ತಿಳಿಸಿದ್ದಾರೆ.
ಚಂಡೀಗಢದ ಧಾಬಾವೊಂದರಲ್ಲಿ ವ್ಯಕ್ತಿಯೊಬ್ಬರು "ಡೀಸೆಲ್ ಪರಂಥಾ" ತಯಾರಿಸುವ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿತು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಪ್ರಮುಖ ಆರೋಗ್ಯ ಕಾಳಜಿಯನ್ನು ಹುಟ್ಟುಹಾಕಿತು. ಹಿನ್ನಡೆಯ ನಡುವೆ, ಮಾಲೀಕ ಚನ್ನಿ ಸಿಂಗ್ ಅವರು ಬಬ್ಲು ವೈಷ್ಣೋ ಧಾಬಾದಲ್ಲಿ ಅಂತಹ ವಸ್ತುವನ್ನು ಮಾರಾಟ ಮಾಡುತ್ತಾರೆ ಎಂಬ ಎಲ್ಲಾ ಹಕ್ಕುಗಳನ್ನು ನಿರಾಕರಿಸಿದರು ಮತ್ತು ಆಹಾರ ಬ್ಲಾಗರ್ ಮೋಜಿಗಾಗಿ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಿದರು.
"ನಾವು ಅಂತಹ ಯಾವುದೇ ವಸ್ತುವನ್ನು ಡೀಸೆಲ್ ಪರಾಠವನ್ನು ತಯಾರಿಸುವುದಿಲ್ಲ ಅಥವಾ ಗ್ರಾಹಕರಿಗೆ ಸೇವೆ ಸಲ್ಲಿಸುವುದಿಲ್ಲ. ಒಬ್ಬ ಬ್ಲಾಗರ್ ಮೋಜಿಗಾಗಿ ಆ ವಿಡಿಯೋ ಮಾಡಿದ್ದ. ಡೀಸೆಲ್‌ನಲ್ಲಿ ತಯಾರಿಸಿದ ಪರೋಟಾವನ್ನು ಯಾರೂ ಸೇವಿಸುವುದಿಲ್ಲ ಅಥವಾ ಹಾಗೆ ಬೇಯಿಸುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ. ವೀಡಿಯೋ ವೈರಲ್ ಆಗುತ್ತಿರುವುದು ನನಗೆ ಗೊತ್ತಿರಲಿಲ್ಲ, ನಿನ್ನೆಯಷ್ಟೇ ಗೊತ್ತಾಗಿದೆ ಎಂದು ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.
ಆದ್ರೆ ಈ ವಿಡಿಯೋ ವೈರಲ್ ಆದ ಬಳಿಕ ಹಲವರು ಇದನ್ನು ಆರೋಗ್ಯ ಇಲಾಖೆಗೆ ಟ್ಯಾಗ್ ಮಾಡಿದ್ದರು. ಆದರೆ ಡಾಬಾ ಮಾಲೀಕರು ಸ್ಪಷ್ಟನೆ ನೀಡಿದ ಬಳಿಕ ಈ ವಿಡಿಯೋವನ್ನು ಬ್ಲಾಗರ್ ಡಿಲೀಟ್ ಮಾಡಿದ್ದು, ಜನರಲ್ಲಿ ಕ್ಷಮೆಯಾಚಿಸಿದ್ದಾನೆ. ಆದರೆ ಆತ ಪರೋಟ ಮಾಡುವಾಗ ಅಗತ್ಯಕ್ಕಿಂತ ಹೆಚ್ಚಿನ ಎಣ್ಣೆ ಬಳಸಿರುವುದು ಮಾತ್ರ ದೃಢಪಟ್ಟಿದೆ. ಆತ ಒಂದು ಕ್ಯಾನ್ ಎಣ್ಣೆಯನ್ನು ಪರೋಟ ಮಾಡಲು ಬಳಸುತ್ತಿರುವುದು ಕಂಡುಬಂದಿದೆ.



Click it and Unblock the Notifications
