Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೂಲೋಕದ ಅತಿ ಸುಂದರಿ ಅಘೋರಿ ಮಾತಾ ಇವರು: ಇವರ ಪವಾಡಗಳ ಬಗ್ಗೆ ಕೇಳಿದ್ದೀರಾ?
144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. ಅಲ್ಲಿಗೆ ಸಾಧು-ಸಂನ್ಯಾಸಿಗಳ ಸಾಗರವೇ ಹರಿದು ಬಂದಿದೆ. ಕುಂಭಮೇಳದ ಪ್ರಮುಖ ಆಕರ್ಷಣೆಯೆಂದರೆ ಅಘೋರಿಗಳು, ನಾಗ ಸಾಧುಗಳು, ಸಂನ್ಯಾಸಿಗಳು. ಅದರಲ್ಲಿಯೂ ನಾಗಸಾಧುಗಳು, ಅಘೋರಿಗಳು ತುಂಬಾನೇ ವಿಭಿನ್ನ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ.ಬಹುತೇಕ ಅಘೋರಿಗಳು ಬಟ್ಟೆ ಧರಿಸುವುದಿಲ್ಲ, ಮೈಗೆ ಬೂದಿ ಮೆತ್ತಿಕೊಂಡಿರುತ್ತದೆ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆಗಳು, ತಲೆಬುರುಡೆಗಳು, ಕೈಯಲ್ಲಿ ಡಮರುಗ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕಾಣಿಸಿಕೊಳ್ಳುತ್ತಾರೆ.
ಅವರೆಲ್ಲಾ ಆಧ್ಯಾತ್ಮಿಕ ಲೋಕದಲ್ಲಿ ತುಂಬಾ ಸಾಧನೆ ಮಾಡಿರುತ್ತಾರೆ, ಅನೇಕ ಪವಾಡಗಳು ಗೊತ್ತಿರುತ್ತದೆ, ಅವರಿಗೆ ಭವಿಷ್ಯದ ಬಗ್ಗೆ ಹೇಳುವ ಶಕ್ತಿ ಇರುತ್ತದೆ ಎಂದು ಹೇಳಲಾಗುವುದು. ಈ ಅಘೋರಿಗಳಲ್ಲಿ ತಮ್ಮದೇ ಆದ ಆಚರಣೆಗಳಿರುತ್ತದೆ.

ಗುರು ಆದೇಶ ನೀಡಿದಾಗ ಅವರು ಶವದ ಮಾಂಸ ಭಕ್ಷಿಸುತ್ತಾರೆ, ಆಹಾರ ಸೇವಿಸದೆ ತಿಂಗಳುಗಟ್ಟಲೆ ಇರುತ್ತಾರೆ, ಗಾಂಜಾವನ್ನು ರಾಜಾರೋಷವಾಗಿ ಸೇವಿಸುತ್ತಾರೆ, ಇವರಿಗೆ ಯಾವುದೇ ಕಾನೂನು ಕಟ್ಟಳೆಗಳಿರಲ್ಲ. ಕೆಲವರು ಜಗತ್ತಿನ ಒಳಿತಿಗಾಗಿ ಒಂದೊಂದು ರೀತಿಯ ಸಂಕಲ್ಪ ತೆಗೆದುಕೊಂಡಿರುತ್ತಾರೆ, ಹಲವು ವರ್ಷಗಳಿಂದ ಒಂದು ಕೈಯನ್ನು ಮೇಲೆ ಎತ್ತಿಕೊಂಡೇ ಇರುವ ಅಘೋರಿ, ತಲೆಯಲ್ಲಿ ಬೆಳೆ ಬೆಳೆಯುತ್ತಿರುವ ಅಘೋರಿ, ಮುಳ್ಳಿನ ಮೇಲೆ ಮಲಗಿರುವ ಅಘೋರಿ, ಹಾವುಗಳನ್ನು ತನ್ನ ಮೇಮೇಲೆ ಹಾಕಿಕೊಂಡು ಓಡಾಡುತ್ತಿರುವ ಅಘೋರಿ ಹೀಗೆ ಒಬ್ಬೊಬ್ಬ ಅಘೋರಿ ವಿಭಿನ್ನ ವೇಷದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇನ್ನು ಈ ಅಘೋರಿಗಳಲ್ಲಿ ಮಹಿಳೆಯರೂ ಇದ್ದು ಅವರಲ್ಲಿ ಅತಿ ಸುಂದರಿಯಾದ ಅಘೋರಿ ಎಂದು ಮಾತಾ ಚಂಚಲನಾಥ ಅವರನ್ನು ಕರೆಯಲಾಗುತ್ತಿದೆ. ಈ ಅಘೋರಿ ನೋಡಲು ತುಂಬಾನೇ ಸುಂದರವಾಗಿದ್ದಾರೆ, ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಇವರು ಕೂಡ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಈ ಮಾತಾ ಅಘೋರಿಯ ವೇಷ ಭೂಷಣಗಳು ಭೀಕರವಾಗಿಲ್ಲ, ಉಡುಪು ಧರಿಸುತ್ತಾರೆ, ಗಂಟು-ಗಂಟಾಗಿರುವ ತಲೆ ಕೂದಲು, ಆದರೂ ಕೂದಲುಗಳು ತುಂಬಾನೇ ಸುಂದರವಾಗಿದೆ. ಇವರ ಪವಾಡಗಳಿಂದಾಗಿ ತುಂಬಾನೇ ಜನಪ್ರಿಯವಾಗಿದ್ದಾರೆ. ಈ ಅಘೋರಿಯಲ್ಲಿ ಯಾವುದೋ ವಿಶೇಷ ಶಕ್ತಿಯಿದೆ ಎಂದು ನಂಬುತ್ತಾರೆ.
ಯಾರು ಈ ಚಂಲನನಾಥ್ ಅಘೋರಿ
ಇವರು ಹರಿಯಾಣದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಇವರಲ್ಲಿರುವ ಶಕ್ತಿಯಿಂದಾಗಿ ಈ ಅಘೋರಿ ಮಾತಾ ತುಂಬಾ ಜನಪ್ರಿಯವಾಗಿದ್ದಾರೆ. ಜನರು ತಮ್ಮ ಕಷ್ಟಗಳಿಗೆ ಪರಿಹಾರ ಕೇಳಿ ಈ ಅಗಘೋರಿ ಮಾತಾ ಬಳಿ ಬರ್ತಾರೆ. ಈ ಅಘೋರಿ ಮಾತಾ ತಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿದ್ದಾರೆ, ಇವರು ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಬೆಂಕಿಕಡ್ಡಿ ಹಚ್ಚದೆ ಹೋಮಕುಂಡದಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡುವ ಶಕ್ತಿ ಇವರಲ್ಲಿದೆ
ಇವರು ಹೋಮ-ಹವನಗಳನ್ನು ಮಾಡುವಾಗ ಹೋಮಕುಂಡಕ್ಕೆ ಅಗ್ನಿಯನ್ನು ಬೆಂಕಿಕಡ್ಡಿ ಗೀರಿ ಹಚ್ಚುವುದಿಲ್ಲ, ತಮ್ಮ ಕೈಯಗಳನ್ನು ಮುಂದೆಕ್ಕೆ ಚಾಚಿ ಪ್ರಾರ್ಥಿಸಿದ ತಕ್ಷಣ ಹೋಮಕುಂಡದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸುತ್ತದೆ.
ನಿಂಬೆಹಣ್ಣು ಗಾಳಿಯಲ್ಲಿ ತೇಲುವಂತೆ ಮಾಡ್ತಾರೆ ಇವರು ಕೈಗಳನ್ನು ಸುಮ್ಮನೆ ಮೇಲಕ್ಕೆ ಎತ್ತಿದರೆ ಸಾಕು ನಿಂಬೆಹಣ್ಣು ಗಾಳಿಯಲ್ಲಿ ತೇಲುತ್ತದೆ.
ಕತ್ತರಿಸಿದ ಹಣ್ಣುಗಳನ್ನು ಮತ್ತೆ ಒಂದು ಮಾಡುತ್ತಾರೆ
ಕತ್ತರಿಸಿದ ಹಣ್ಣುಗಳ ಮೇಲೆ ಇವರು ಒಂದು ಕತ್ತಿಯಿದೆ, ಅದಕ್ಕೆ ಮಂತ್ರ ಜಪಿಸಿ ಆಡಿಸಿದರೆ ಸಾಕು ಆ ಹಣ್ಣುಗಳು ಒಂದುಗೂಡುತ್ತದೆ, ಹಣ್ಣು ಕತ್ತರಿಸುವ ಮುನ್ನ ಯಾವ ರೂಪದಲ್ಲಿ ಇರುತ್ತದೋ ಆ ರೂಪಕ್ಕೆ ಮರಳುತ್ತದೆ, ಹೀಗೆ ಹತ್ತು ಹಲವು ಪವಾಡಗಳನ್ನು ತಮ್ಮ ಸಾಧನೆಯಯ ಮೂಲಕ ಪಡೆದುಕೊಂಡಿದ್ದಾರೆ.



Click it and Unblock the Notifications