Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ಹುಷಾರ್.. ಆಫೀಸ್‌ನಲ್ಲಿ ಈ 5 ಜನರಿಗೆ ಎಂದಿಗೂ ಯಶಸ್ಸು ಸಿಗಲ್ಲ! ಈ ಲಿಸ್ಟ್‌ನಲ್ಲಿ ನೀವೂ ಇದ್ದೀರಾ?
ಕಚೇರಿಯಲ್ಲಿ ಈ 5 ತಪ್ಪುಗಳನ್ನು ಮಾಡುವವರೇ ಸೋಲನ್ನಪ್ಪುತ್ತಾರೆ! ಆ ಲಿಸ್ಟ್‌ನಲ್ಲಿ ನೀವೂ ಇದ್ದೀರಾ? ಹೌದು, ಕೆಲಸದ ಸ್ಥಳದಲ್ಲಿ (Workplace) ಕೆಲವರು ಬುದ್ಧಿವಂತರು ಹಾಗೂ ಶ್ರಮಜೀವಿಗಳಾಗಿದ್ದರೂ ಸಹ, ಬಡ್ತಿ ಅಥವಾ ಯಶಸ್ಸು ಪಡೆಯಲು ವಿಫಲರಾಗುತ್ತಾರೆ. ಆದರೆ, ಅವರಿಗಿಂತ ಕಡಿಮೆ ಪ್ರತಿಭೆ ಹೊಂದಿರುವವರು ವೇಗವಾಗಿ ಮುನ್ನಡೆಯುವುದನ್ನು ನಾವು ನೋಡುತ್ತೇವೆ. ಇಂತಹ ಸನ್ನಿವೇಶದಲ್ಲಿ ಅನೇಕರು ಇದನ್ನು ಅದೃಷ್ಟ ಅಥವಾ ಮೇಲಧಿಕಾರಿಗಳ ನಿರ್ಧಾರವೆಂದು ಭಾವಿಸುವುದು ಸಹಜ.
ಆದರೆ, ಚಾಣಕ್ಯ ನೀತಿಯ (Chanakya Niti) ಪ್ರಕಾರ, ವ್ಯಕ್ತಿಯು ಕಚೇರಿಯಲ್ಲಿ (Office) ಅನುಭವಿಸುವ ಹಿನ್ನಡೆಗೆ ಮೂಲತಃ ಅವರದೇ ಸ್ವಭಾವ ಮತ್ತು ಕೆಲವು ನಿರ್ದಿಷ್ಟ ಅಭ್ಯಾಸಗಳು ಕಾರಣ. ಸಾವಿರಾರು ವರ್ಷಗಳ ಹಿಂದೆಯೇ ಚಾಣಕ್ಯ, ಕೆಲಸದ ಸ್ಥಳದಲ್ಲಿ ವೃತ್ತಿಪರ ನಷ್ಟಗಳಿಗೆ ಕಾರಣವಾಗುವ ಅಂಶಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಂತಹ ಐದು ಪ್ರಮುಖ ತಪ್ಪುಗಳನ್ನು ಇಲ್ಲಿ ತಿಳಿಸಲಾಗಿದೆ.

ಈ 5 ತಪ್ಪುಗಳು ನಿಮ್ಮ ಪ್ರಮೋಷನ್ ತಡೆಯಬಹುದು!
1. ಎಲ್ಲರನ್ನೂ ಮೆಚ್ಚಿಸುವವರು
ಚಾಣಕ್ಯ ನೀತಿಯ ಪ್ರಕಾರ, ಕಚೇರಿಯಲ್ಲಿ ಪ್ರತಿಯೊಬ್ಬರನ್ನೂ ಸದಾ ಸಂತೋಷವಾಗಿಡಲು ಪ್ರಯತ್ನಿಸುವವರು ಅಂತಿಮವಾಗಿ ತಮಗೇ ದೊಡ್ಡ ನಷ್ಟವನ್ನು ಮಾಡಿಕೊಳ್ಳುತ್ತಾರೆ. ಇಂತಹವರು ತಮ್ಮ ಸ್ವಂತ ಜವಾಬ್ದಾರಿಗಳನ್ನು ಬದಿಗಿಟ್ಟು ಇತರರ ಕೆಲಸ ಕಾರ್ಯಗಳಿಗೆ ಅನಗತ್ಯವಾಗಿ ಹೆಚ್ಚಿನ ಸಮಯವನ್ನು ನೀಡುತ್ತಾರೆ.
ಇದರಿಂದ, ಅವರಿಗೆ ಕೇವಲ 'ಬಳಸಿಕೊಳ್ಳುವ ಉದ್ಯೋಗಿ' (Used Employee) ಎಂಬ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಎಲ್ಲರನ್ನೂ ಮೆಚ್ಚಿಸುವ ಈ ಪ್ರಯತ್ನದಲ್ಲಿ ಅವರು ತಮ್ಮ ನಿಜವಾದ ವ್ಯಕ್ತಿತ್ವ ಮತ್ತು ಕೆಲಸದ ಗುಣಮಟ್ಟ ಎರಡನ್ನೂ ಕಳೆದುಕೊಳ್ಳುತ್ತಾರೆ. ಸಹಾಯ ಪಡೆದವರು ಕೂಡ ಅಗತ್ಯಕ್ಕೆ ಬಾರದಿದ್ದಾರೆ ಬೆಂಬಲ ನೀಡದಿರಬಹುದು.
2. ದೌರ್ಬಲ್ಯಗಳನ್ನು ಹಂಚಿಕೊಳ್ಳುವವರು
ತಮ್ಮ ವೈಯಕ್ತಿಕ ರಹಸ್ಯಗಳು ಅಥವಾ ಆಂತರಿಕ ದೌರ್ಬಲ್ಯಗಳನ್ನು (Weaknesses) ಕೆಲಸದ ಸ್ಥಳದಲ್ಲಿ ಬಹಿರಂಗಪಡಿಸುವುದು ಅತಿದೊಡ್ಡ ತಪ್ಪುಗಳಲ್ಲಿ ಒಂದು ಎಂದು ಚಾಣಕ್ಯರು ತಿಳಿಸಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ನಿಮ್ಮ ಕಷ್ಟಗಳು, ಅಭದ್ರತೆಗಳು ಅಥವಾ ಯಾವುದೇ ಭಯಗಳನ್ನು ಪದೇ ಪದೇ ಪ್ರಸ್ತಾಪಿಸಿದರೆ, ಕೆಲವರು ಅದರ ಲಾಭ ಪಡೆಯಲು ಯತ್ನಿಸಬಹುದು.
ಇಂತಹ ವರ್ತನೆಯು ನಿಮ್ಮ ವ್ಯಕ್ತಿತ್ವವನ್ನು ದುರ್ಬಲಗೊಳಿಸುತ್ತದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಅಸಮರ್ಥರು ಎಂಬ ಭಾವನೆಯನ್ನು ಮೇಲಧಿಕಾರಿಗಳಲ್ಲಿ ಮೂಡಿಸುತ್ತದೆ, ಇದು ನಂಬಿಕೆಯ ಕೊರತೆಗೆ ಕಾರಣವಾಗಿ, ಪ್ರಮುಖ ಪ್ರಾಜೆಕ್ಟ್‌ಗಳು ನಿಮ್ಮ ಕೈತಪ್ಪಿ ಹೋಗಬಹುದು.
3. ವಾದ ಮಾಡುವವರು
ಅನಗತ್ಯವಾಗಿ ಹೆಚ್ಚು ಮಾತನಾಡುವವರು ಮತ್ತು ನಿರಂತರವಾಗಿ ವಾದ ಮಾಡುವವರು ಸ್ವತಃ ತಮಗೇ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಪ್ರತಿ ಸಭೆಗಳಲ್ಲಿಯೂ ಅನಾವಶ್ಯಕವಾಗಿ ವಾದದಲ್ಲಿ ತೊಡಗುವುದು ಅಥವಾ ಪ್ರತಿಯೊಂದು ವಿಷಯದಲ್ಲೂ ತಮ್ಮದೇ ಅಭಿಪ್ರಾಯ ಸರಿ ಎಂದು ಹಠ ಸಾಧಿಸುವುದು ವೃತ್ತಿಜೀವನಕ್ಕೆ ಮಾರಕವಾಗಬಲ್ಲದು.
ಅತಿಯಾದ ಮಾತು ಮತ್ತು ನಿರಂತರ ವಾದಗಳು ಮೇಲಧಿಕಾರಿಗಳ ದೃಷ್ಟಿಯಲ್ಲಿ ನಿಮ್ಮನ್ನು 'ಅಶಿಸ್ತಿನ ವ್ಯಕ್ತಿ' ಎಂದು ಬಿಂಬಿಸಬಹುದು. ಇದು ನಿಮ್ಮ ಬಡ್ತಿ ಅವಕಾಶಗಳು ಮತ್ತು ಒಟ್ಟಾರೆ ವೃತ್ತಿಜೀವನದ ಬೆಳವಣಿಗೆಯ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
4. ಈ ನಿರ್ಧಾರ ತೆಗೆದುಕೊಳ್ಳುವವರು
ಕಚೇರಿಯಂತಹ ವೃತ್ತಿಪರ ವಾತಾವರಣದಲ್ಲಿ ಭಾವನಾತ್ಮಕವಾಗಿ ನಿರ್ಧಾರಗಳನ್ನು ಕೈಗೊಳ್ಳುವುದು ಸೂಕ್ತವಲ್ಲ. ಇದು ವೃತ್ತಿಪರತೆಗೆ ಸಂಪೂರ್ಣ ವಿರುದ್ಧವಾದ ನಡೆ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಕೋಪ, ಭಯ, ಅಸೂಯೆ ಅಥವಾ ಅತಿಯಾದ ಸಂಭ್ರಮದಂತಹ ಭಾವನೆಗಳ ಪ್ರಭಾವದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಾಮಾನ್ಯವಾಗಿ ತರ್ಕಬದ್ಧವಾಗಿರುವುದಿಲ್ಲ.
ಭಾವನೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯ ವಿವೇಚನಾ ಶಕ್ತಿಯ ಬಗ್ಗೆ ಕಾರ್ಯಕ್ಷೇತ್ರದಲ್ಲಿ ಅನುಮಾನಗಳು ಮೂಡುತ್ತವೆ. ಇಂತಹ ಆಯ್ಕೆಗಳು ನಂತರದ ದಿನಗಳಲ್ಲಿ ವ್ಯಕ್ತಿಗೆ ಬಹಳಷ್ಟು ಪಶ್ಚಾತ್ತಾಪಕ್ಕೆ ಮತ್ತು ವೃತ್ತಿಪರ ಸಮಸ್ಯೆಗಳಿಗೆ ಕಾರಣವಾಗಬಹುದು.
5. ಸ್ವಯಂ ನಿರ್ವಹಣೆ ತಿಳಿಯದವರು
ಯಶಸ್ಸಿಗೆ ಕೇವಲ ಕಠಿಣ ಶ್ರಮ (Hardwork)ವೊಂದೇ ಸಾಕಾಗುವುದಿಲ್ಲ, ಬದಲಿಗೆ ಅದನ್ನು ಸರಿಯಾಗಿ ಪ್ರಸ್ತುತಪಡಿಸುವ ಕಲೆ (Smartwork) ಕೂಡ ತಿಳಿದಿರಬೇಕು ಎಂದು ಚಾಣಕ್ಯರು ಪ್ರತಿಪಾದಿಸುತ್ತಾರೆ. ಅನೇಕರು ಹಗಲಿರುಳು ಅಹರ್ನಿಶಿ ಕೆಲಸ ಮಾಡುತ್ತಿದ್ದರೂ, ತಮ್ಮ ಸಾಧನೆಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗಳ ಮುಂದೆ ಪರಿಣಾಮಕಾರಿಯಾಗಿ ಇರಿಸುವಲ್ಲಿ ವಿಫಲರಾಗುತ್ತಾರೆ.
ನಿಮ್ಮ ಕೆಲಸದ ಗುಣಮಟ್ಟ ಮತ್ತು ಶ್ರಮದ ಬಗ್ಗೆ ಮೇಲಧಿಕಾರಿಗಳಿಗೆ ಅಥವಾ ಇತರ ಸಹೋದ್ಯೋಗಿಗಳಿಗೆ ಸೂಕ್ತ ಅರಿವಿಲ್ಲದಿದ್ದರೆ, ನಿಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಬಹುದು. ಯಾರು ತಮ್ಮ ಕಾರ್ಯಕ್ಷಮತೆಯನ್ನು ಸಮರ್ಥವಾಗಿ 'ಮಾರ್ಕೆಟ್' ಮಾಡಿಕೊಳ್ಳುತ್ತಾರೋ ಅವರು ಮಾತ್ರ ವೃತ್ತಿಜೀವನದಲ್ಲಿ ಮುಂದೆ ಹೋಗುತ್ತಾರೆ. ಅಸಮರ್ಪಕ ನಿರ್ವಹಣೆಯಿಂದಾಗಿ ನೀವು ಪಟ್ಟ ಶ್ರಮದ ಫಲ ಇತರರ ಪಾಲಾಗುವ ಸಾಧ್ಯತೆ ಹೆಚ್ಚು.
ಯಶಸ್ಸಿಗಾಗಿ ಚಾಣಕ್ಯರ ಕಿವಿಮಾತು
ಕಚೇರಿಯಲ್ಲಿ ನೀವು ಯಶಸ್ಸನ್ನು ಸಾಧಿಸಿ ಬೆಳೆಯಬೇಕೆಂದರೆ ಕೇವಲ ಕಠಿಣ ಶ್ರಮವಷ್ಟೇ ಅಲ್ಲ. ಅದರ ಜೊತೆಗೆ, ಮೌನ, ಸಂಯಮ ಮತ್ತು ಸರಿಯಾದ ಸಮಯಪ್ರಜ್ಞೆಯಂತಹ ಗುಣಗಳು ಅತ್ಯಗತ್ಯ. ನಿಮ್ಮ ನಿರ್ದಿಷ್ಟ ಯೋಜನೆಗಳು ಸಂಪೂರ್ಣವಾಗಿ ಯಶಸ್ವಿಯಾಗುವವರೆಗೆ ಅವುಗಳನ್ನು ರಹಸ್ಯವಾಗಿಡುವುದು ಮತ್ತು ನಿಮ್ಮನ್ನು ಸರಿಯಾಗಿ ಮೌಲ್ಯೀಕರಿಸಿಕೊಳ್ಳುವುದು ಯಶಸ್ಸಿನ ನಿರ್ಣಾಯಕ ಗುಟ್ಟು ಎಂದು ಚಾಣಕ್ಯರು ಸಾರಿದ್ದಾರೆ.



Click it and Unblock the Notifications











