Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಾಣಕ್ಯನ ಈ ಸೂತ್ರಗಳನ್ನು ಪಾಲಿಸಿದ್ರೆ ಕುಟುಂಬದಲ್ಲಿ ಯಾವುದೇ ರೀತಿ ಕಷ್ಟಗಳಿರಲ್ಲ
ಒಂದು ಕುಟುಂಬ ಎಂದ ಮೇಲೆ ಅದರಲ್ಲಿ ಖುಷಿಯೇ ತುಂಬಿರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವೊಂದು ಸಲ ಸಂತೋಷ ಅನುಭವಿಸಿದ್ರೆ ಇನ್ನೂ ಕೆಲವು ಸಲ ದುಃಖವನ್ನೂ ಅನುವಿಸಬೇಕಾಗುತ್ತದೆ. ಕಷ್ಟಗಳು ನಮ್ಮನ್ನು ಬೆನ್ನಟ್ಟಿ ಬರುತ್ತವೆ. ಆದರೆ ಅದನ್ನೆಲ್ಲಾ ನಾವು ಮೆಟ್ಟಿ ನಿಲ್ಲಬೇಕು. ಚಾಣಕ್ಯನ ಈ ಸೂತ್ರಗಳನ್ನು ಪಾಲಿಸಿದ್ರೆ ಜೀವನದಲ್ಲಿ ಕಷ್ಟಗಳೇ ಎದುರಾದಿರೋ ಹಾಗೆ ಬದುಕಬಹುದು. ಹಾಗಾದ್ರೆ ಸುಖ ಸಂಸಾರಕ್ಕೆ ಚಾಣಕ್ಯನ ಟಿಪ್ಸ್ ಏನು ಅನ್ನೋದನ್ನು ತಿಳಿಯೋಣ.
1. ಬುದ್ಧಿವಂತ ಮಕ್ಕಳು ಹಾಗೂ ಮೃದು ಸ್ವಭಾವದ ಪತ್ನಿ
ಚಾಣಕ್ಯನ ಪ್ರಕಾರ ಒಂದು ಕುಟುಂಬ ಸುಖ-ಸಂತೋಷದಿಂದ ಇರಬೇಕಾದರೆ ಆ ಕುಟುಂಬದಲ್ಲಿ ಮಕ್ಕಳು ಬುದ್ಧಿವಂತರಾಗಿರಬೇಕು. ಮಕ್ಕಳು ಬುದ್ಧಿವಂತರಾಗಿದ್ದರೆ ತಂದೆ- ತಾಯಿಗೂ ಯಾವುದೇ ರೀತಿ ಸಮಸ್ಯೆ ಇಲ್ಲ. ಹಾಗೂ ಮಕ್ಕಳು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಕುಟುಂಬಕ್ಕೆ ಸಹಾಯ ಮಾಡುತ್ತಾರೆ. ಎಲ್ಲಾ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಇನ್ನೂ ಹೆಂಡತಿಯ ಮಾತು ಮೃದುವಾಗಿದ್ದರೆ ಆಕೆ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುತ್ತಾಳೆ.

2. ಕಷ್ಟ ಪಡಿ ಹಾಗೂ ಹಣ ಕೂಡಿಡಿ
ಚಾಣಕ್ಯನ ಪ್ರಕಾರ ನಾವು ಯಾವಾಗ ಕಷ್ಟ ಪಟ್ಟು ಕೆಲಸ ಮಾಡುತ್ತೇವೆಯೋ ಆಗ ನಮ್ಮ ಕುಟುಂಬದಲ್ಲಿ ಸಂಪತ್ತು ಹಾಗೂ ಸಮೃದ್ಧಿ ವೃದ್ಧಿಯಾಗುತ್ತದೆ. ಆರ್ಥಿಕ ಸಮಸ್ಯೆ ಇಲ್ಲದ ಮನೆಯಲ್ಲಿ ಸಹಜವಾಗಿ ಸಂತೋಷ ತುಂಬಿರುತ್ತದೆ. ಲಕ್ಷ್ಮಿ ಇದ್ದರೆ ಭಯವಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ಹಾಗೂ ಒಳ್ಳೆಯ ಜೀವನವನ್ನು ನಡೆಸೋದಕ್ಕೆ ಕಷ್ಟ ಪಟ್ಟು ದುಡಿಯಿರಿ ಹಾಗೂ ಭವಿಷ್ಯಕ್ಕಾಗಿ ದುಡ್ಡು ಕೂಡಿಡಿ.
3. ಅತಿಥಿ ಸತ್ಕಾರ ಮಾಡಿ
ಆಚಾರ್ಯ ಚಾಣಕ್ಯರು ಅತಿಥಿ ಸತ್ಕಾರದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ಇನ್ನೂ ನಾವು ಮಾಡುವ ಅತಿಥಿ ಸತ್ಕಾರ ಕಾಟಚಾರಕ್ಕಾಗಿ ಮಾಡಬಾರದು ಭಕ್ತಿ ಹಾಗೂ ಪ್ರೀತಿಯಿಂದ ಮಾಡಬೇಕು. ಈ ರೀತಿ ಮಾಡಿದರೆ ನಮಗೆ ದೇವರು ಆಶೀರ್ವದಿಸುತ್ತಾನಂತೆ. ಇದರಿಂದ ಕುಟುಂಬದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
4. ಸಹಾನುಭೂತಿ ಇರಬೇಕು
ಚಾಣಕ್ಯರು ಸಹಾನುಭೂತಿಯ ಮಹತ್ವ ಏನು ಅನ್ನೋದನ್ನು ತಿಳಿಸಿದ್ದಾರೆ. ಅದರ ಜೊತೆಗೆ ಮನುಷ್ಯತ್ವವು ತುಂಬಾನೇ ಮುಖ್ಯವಾಗಿದೆ. ಯಾರು ಬೇರೆಯವರ ಮೇಲೆ ಸಹಾನುಭೂತಿ ಹಾಗು ಮನುಷ್ಯತ್ವವನ್ನು ತೋರುತ್ತಾನೋ ಆತನ ಕುಟುಂಬ ಸಂತೋಷವಾಗಿರುತ್ತದೆ. ಅಷ್ಟೇ ಅಲ್ಲದೇ, ಹಿರಿಯರಿಗೆ, ತಂದೆ-ತಾಯಿಗೆ, ಶಿಕ್ಷಕರಿಗೆ ಗೌರವ ಕೊಡುವ ಗುಣ ನಮ್ಮಲ್ಲಿದ್ದರೆ ಜೀವನ ಪೂರ್ತಿ ಸಂತೋಷವಾಗಿರಬಹುದು.
5. ದಾನ ಮಾಡಬೇಕು
ಚಾಣಕ್ಯನ ಪ್ರಕಾರ ಒರ್ವ ಮನುಷ್ಯನ ಜೀವನದಲ್ಲಿ ದಾನ ತುಂಬಾನೇ ಮುಖ್ಯ. ಕೇವಲ ಹಣ ಸಂಪಾದನೆ ಮಾಡಿ ರಾಶಿ ರಾಶಿ ಹಣ ಕೂಡಿಟ್ಟರೆ ಪ್ರಯೋಜನವಿಲ್ಲ. ಅದರ ಬದಲಾಗಿ ಆ ಹಣವನ್ನು ದಾನ ಮಾಡಬೇಕು. ಹಾಗಂತ ಪೂರ್ತಿ ದಾನ ಮಾಡಿ ಅಂತ ಹೇಳುತ್ತಿಲ್ಲ. ನಾವು ದುಡಿಯುತ್ತಿರುವ ಸ್ವಲ್ಪವೇ ಸ್ವಲ್ಪ ಭಾಗವನ್ನು ನಿರ್ಗತಿಕರಿಗೆ, ಕೈಲಾಗದವರಿಗೆ ದಾನ ಮಾಡಿದರೆ ನಮ್ಮ ಕುಟುಂಬ ಚೆನ್ನಾಗಿರುತ್ತದೆ.
6. ಋಣಾತ್ಮಕತೆಯನ್ನು ತೊಲಗಿಸಿ
ಚಾಣಕ್ಯನ ಪ್ರಕಾರ ಯಾವ ವ್ಯಕ್ತಿ ವೇದಗಳನ್ನು ನಂಬುವುದಿಲ್ಲವೋ, ನಿರ್ಗತಿಕರಿಗೆ ದಾನ ಮಾಡುವುದಿಲ್ಲವೋ, ಒಳ್ಳೆಯ ಜನರ ಸಹವಾಸ ಮಾಡುವುದಿಲ್ಲವೋ ಇಂತಹ ವ್ಯಕ್ತಿ ಜೀವನದಲ್ಲಿ ಖುಷಿಯಾಗಿರೋದಕ್ಕೆ ಸಾಧ್ಯವೇ ಇಲ್ಲ. ನಮ್ಮಲ್ಲಿ ಋಣಾತ್ಮಕತೆ ತುಂಬಿ ಹೋಗಿದ್ದರೆ ಕೋಪ, ಜಗಳ ಹೆಚ್ಚಾಗುತ್ತದೆ. ಇದು ನಮ್ಮ ಕುಟುಂಬವನ್ನೇ ನಾಶ ಗೊಳಿಸಬಹುದು.
ನಿಮ್ಮ ಜೊತೆಗೆ ನಿಮ್ಮ ಕುಟುಂಬವು ಸಂತೋಷವಾಗಿರಬೇಕೆಂದರೆ ಚಾಣಕ್ಯ ಈ ನೀತಿಗಳನ್ನು ಪಾಲಿಸಿ. ನಾವು ಸಂತೋಷವಾಗಿರಲು ಇಂತಹದ್ದೇ ಕಾರಣ ಬೇಕೆಂದೇನಿಲ್ಲ. ಬೇರೆಯವರ ಸಂತೋಷ ನೋಡಿಯೂ ನಾವು ಖುಷಿಯಾಗಿರಬಹುದು. ಆದರೆ ಬದುಕುವ ಕಲೆ ಗೊತ್ತಿರಬೇಕು ಅಷ್ಟೇ.



Click it and Unblock the Notifications
