Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಲಕ್ಷ್ಮಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಸೂಚಿಸುವ ಲಕ್ಷಣಗಳಿವು!
ಚಾಣಕ್ಯರು ನಮ್ಮ ಜೀವನಕ್ಕೆ ಅಗತ್ಯವಿರುವ ಎಲ್ಲಾ ನೀತಿ ಪಾಠಗಳನ್ನು ರೂಪಿಸಿದ್ದಾರೆ. ಯಾವ ವ್ಯಕ್ತಿ ಚಾಣಕ್ಯ ನೀತಿಯನ್ನು ಪಾಲಿಸುತ್ತಾನೋ ಆತನಿಗೆ ಯಾವತ್ತಿಗೂ ಸೋಲು ಎದುರಾಗೋದಿಲ್ವಂತೆ. ಅದೇ ರೀತಿ ನಾವು ಜೀವನ ಸಾಗಿಸೋದಕ್ಕೆ ಹಣದ ಅವಶ್ಯಕತೆ ಇದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಕೂಡ ಹಣದ ಹಿಂದೆ ಬಿದ್ದವರೇ, ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕೆಂಬ ಹಠ ಅನೇಕರಿಗೆ ಇರುತ್ತದೆ. ಆದ್ರೆ ಕೆಲವರು ಇದ್ರಲ್ಲಿ ಸೋತು ಹೋಗುತ್ತಾರೆ.
ಹೌದು, ಇದರ ಹಿಂದೆ ಒಂದು ಪ್ರಮುಖವಾದ ಕಾರಣವಿದೆ. ನಾವು ಹಣ ಸಂಪಾದನೆಯ ಹಾದಿಯಲ್ಲಿ ತೊಡಗಿದ್ದಾಗ ನಾವು ಅಂದುಕೊಂಡ ಕೆಲಸ ಕೈಗೂಡದಿದ್ದಾಗ ಒಂದು ಸಾರಿ ನಿಮ್ಮ ಮನೆಯ ಸುತ್ತ-ಮುತ್ತ ಗಮನಿಸಿ. ಮನೆಯಲ್ಲಿನ ಕೆಲ ಪರಿಸ್ಥಿತಿಗಳು ನಿಮ್ಮ ಕೈಯಲ್ಲಿ ದುಡ್ಡು ಉಳಿಯೋದಿಲ್ಲ ಅನ್ನೋದನ್ನು ಸಾರಿ ಸಾರಿ ಹೇಳುತ್ತಿರುತ್ತವೆ. ಹಾಗಾದ್ರೆ ನಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದು ಸೂಚಿಸುವ ಲಕ್ಷಣಗಳು ಏನು ಅನ್ನೋದನ್ನು ತಿಳಿಯೋಣ.

1. ಒಡೆದ ಕನ್ನಡಿ
ಆಚಾರ್ಯ ಚಾಣಕ್ಯರು ನಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದದಾಗ ಯಾವೆಲ್ಲಾ ಘಟನೆಗಳು ನಡೆದು ಬಿಟ್ಟುತ್ವೆ ಅನ್ನೋದ್ರ ಬಗ್ಗೆ ವಿವರಣೆ ನೀಡಿದ್ದಾರೆ. ನಿಮ್ಮ ಮನೆಯಲ್ಲಿ ಪದೇ ಪದೇ ಕನ್ನಡಿ ಒಡೆದು ಹೋಗ್ತಿದ್ಯಾ? ಈ ಘಟನೆ ಪದೇ ಪದೇ ಮರುಕಳಿಸುತ್ತಿದ್ದರೆ ಖಂಡಿತ ಆರ್ಥಿಕ ಸಮಸ್ಯೆ ಬರುತ್ತೆ ಎಂದರ್ಥ. ಯಾವುದೇ ಕಾರಣಕ್ಕೂ ಒಡೆದ ಕನ್ನಡಿಯನ್ನು ಮನೆಯೊಳಗಡೆ ಇಟ್ಟುಕೊಳ್ಳಲೇ ಬೇಡಿ. ಇದು ದಾರಿದ್ರ್ಯವನ್ನು ಸೂಚಿಸುತ್ತದೆ. ಕನ್ನಡಿ ಒಂಚೂರು ಒಡೆದರೂ ಮೊದಲಿಗೆ ಅದನ್ನು ಬದಲಾಯಿಸಿ.
2. ಒಣಗುತ್ತಿರುವ ತುಳಸಿ ಗಿಡ
ಹಿಂದೂ ಧರ್ಮದ ಪ್ರಕಾರ ತುಳಸಿ ಗಿಡಕ್ಕೆ ಪವಿತ್ರ ಸ್ಥಾನಮಾನ ನೀಡಲಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡಕ್ಕೆ ನೀರು ಹಾಕುವ ಸಂಪ್ರದಾಯವಿದೆ. ಚಾಣಕ್ಯನ ಪ್ರಕಾರ ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಸಾಕಷ್ಟು ಪೋಷಣೆ ಮಾಡಿದ ನಂತರವೂ ಒಣಗಿ ಹೋಗುತ್ತಿದ್ಯಾ? ಹಾಗಾದ್ರೆ ಖಂಡಿತ ಆರ್ಥಿಕ ಸಮಸ್ಯೆ ಎದುರಾಗುವ ಸೂಚನೆಯಿದು. ಕೆಲವೊಂದು ಸಲ ಮನೆಯಲ್ಲಿ ತುಳಸಿ ಗಿಡ ಒಣಗಿ ಹೋಗೋದನ್ನು ನಾವು ನೋಡಿರ್ತೀವಿ. ತುಳಸಿ ಗಿಡಕ್ಕೆ ಸರಿಯಾಗಿ ನೀರು ಹಾಕದಿದ್ದರೂ ಕೂಡ ಹೀಗಾಗುವ ಸಾಧ್ಯತೆ ಇದೆ.
3. ಮನೆಯಲ್ಲಿ ಪದೇ ಪದೇ ಜಗಳಗಳಾಗೋದು
ನಿಮ್ಮ ಮನೆಯಲ್ಲಿ ಯಾವುದೇ ಕಾರಣಗಳು ಇಲ್ಲದೇ ಪದೇ ಪದೇ ಜಗಳವಾಗ್ತಿದ್ಯಾ? ಸಣ್ಣ ಪುಟ್ಟ ಕಾರಣಕ್ಕೆ ಮನೆಯ ಸದಸ್ಯರು ಕಿತ್ತಾಡಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇದು ಆರ್ಥಿಕ ಸಮಸ್ಯೆಯ ಮುನ್ಸೂಚನೆ. ಚಾಣಕ್ಯನ ಪ್ರಕಾರ ಇದು ಗ್ರಹಗಳ ದೋಷ ಅಥವಾ ವಾಸ್ತು ದೋಷದಿಂದಲೂ ಎದುರಾಗುವ ಸಾಧ್ಯತೆಗಳಿದೆ. ಹೀಗಾಗಿ ಈ ರೀತಿ ಸಮಸ್ಯೆ ಕಂಡು ಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.
4. ದೇವರ ಆರಾಧನೆ ಮಾಡದಿದ್ದಾಗ
ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿಯೂ ದೇವರ ಆರಾಧನೆಯನ್ನು ಖಂಡಿತವಾಗಿ ಮಾಡಲಾಗುತ್ತದೆ. ಯಾವುದೇ ಧರ್ಮದವರಾದರೂ ಬೆಳಗ್ಗೆ ಎದ್ದ ತಕ್ಷಣ ದೇವರನ್ನು ಪೂಜಿಸದೇ ಇರೋದಿಲ್ಲ. ಹಿಂದೂ ಧರ್ಮದಲ್ಲಿ ಕೆಲವೊಂದು ಕಟ್ಟುಪಾಡುಗಳಿದೆ. ಇದರ ಪ್ರಕಾರವೇ ದೇವರ ಆರಾಧನೆ ನಡೆಯಬೇಕು. ದೇವರನ್ನು ಭಕ್ತಿಯಿಂದ ನೆನೆದರೆ ಸಾಕು. ಅದರ ಹೊರತಾಗಿ ಯಾವ ಆಡಂಬರವೂ ಬೇಕಾಗಿಲ್ಲ. ಆದರೆ ಕೆಲವು ಮನೆಗಳಲ್ಲಿ ಇದ್ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಯಾರು ದೇವರನ್ನು ಪೂಜಿಸುವ ಪದ್ಧತಿ ಪಾಲಿಸುವುದಿಲ್ಲವೋ ಅಂತಹ ಮನೆಗಳಲ್ಲಿ ದಾರಿದ್ರ್ಯ ಕಾಡುತ್ತೆ ಅಂತ ಹೇಳಲಾಗುತ್ತದೆ.
5. ಹಿರಿಯರಿಗೆ ಅಗೌರವ ತೋರುವುದು
ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು. ನಮ್ಮಕ್ಕಿಂತ ಹಿರಿಯರಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗ ಎಂದರೆ ತಪ್ಪಾಗೋದಿಲ್ಲ. ಯಾವ ಮನೆಯಲ್ಲಿ ಹಿರಿಯರಿಗೆ ಗೌರವ ಸಲ್ಲೋದಿಲ್ಲವೋ ಆ ಮನೆಯಲ್ಲಿ ಸುಖ, ಸಮೃದ್ಧಿ ಹಾಗೂ ನೆಮ್ಮದಿ ನೆಲೆಸೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಹಿರಿಯರಿಗೆ ಅವಮಾನ ಮಾಡೋದಾಗಲಿ ಅಥವಾ ಅವರನ್ನು ನಿಂದಿಸೋದಕ್ಕೆ ಹೋಗಬೇಡಿ.
ಚಾಣಕ್ಯ ಪ್ರಕಾರ ಈ ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು. ಒಂದು ವೇಳೆ ಈ ರೀತಿ ಲಕ್ಷಣಗಳು ಕಂಡು ಬಂದರೆ ಖಂಡಿತ ಅದನ್ನು ನಿರ್ಲಕ್ಷ್ಯ ಮಾಡೋದಕ್ಕೆ ಹೋಗಬೇಡಿ. ಬದಲಾಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಿ. ಆಗ ಕೊಂಚ ಮಟ್ಟಿಗೆ ನೀವು ಆರ್ಥಿಕ ಸಮಸ್ಯೆಯಿಂದ ಬಚಾವ್ ಆಗುವ ಸಾಧ್ಯತೆ ಇದೆ.



Click it and Unblock the Notifications


