Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಈ ರೀತಿಯ ನಡವಳಿಕೆ ಇದ್ದರೆ ಬಿಟ್ಟು ಬಿಡಿ ! ಇಲ್ಲದಿದ್ದರೆ ಸಂಸಾರಕ್ಕೆ ಆಪತ್ತು
ಆಚಾರ್ಯ ಚಾಣಕ್ಯರು ಒರ್ವ ಶ್ರೇಷ್ಠ ಅರ್ಥ ಶಾಸ್ತ್ರಜ್ಞರು ಮಾತ್ರವಲ್ಲದೇ ಇವರೊಬ್ಬರು ಮಹಾನ್ ಜ್ಞಾನಿ, ವಿಧ್ವಾಂಸರೂ ಕೂಡ ಹೌದು. ಒರ್ವ ಸಾಮಾನ್ಯ ಧನ ಕಾಯುವ ಹುಡುಗನಿಗೆ ತರಭೇಟಿ ಕೊಟ್ಟು ಮುಂದೆ ಆತ ಮೌರ್ಯ ಸಾಮ್ರಾಜ್ಯ ಸ್ಥಾಪನೆ ಮಾಡೋದಕ್ಕೆ ಕಾರಣರಾಗುತ್ತಾರೆ. ಇಂತಹ ಮಹಾತ್ಮ ಚಾಣಕ್ಯರು ಹಾಕಿಕೊಟ್ಟ ದಾರಿಯಲ್ಲಿ ನಡೆದುಕೊಂಡು ಬಂದವರು ಯಾರೂ ಕೂಡ ಇದುವರೆಗೂ ಸೋಲು ಕಂಡಿದ್ದೇ ಇಲ್ಲ.
ವೈವಾಹಿಕ ಜೀವನದ ಬಗ್ಗೆ ಕೂಡ ಚಾಣಕ್ಯರು ಅನೇಕ ನೀತಿಗಳನ್ನು ರೂಪಿಸಿದ್ದಾರೆ. ಜೀವನದಲ್ಲಿ ಖುಷಿಯಾಗಿರಲು ಏನು ಮಾಡಬೇಕು, ದಾಂಪತ್ಯದಲ್ಲಿ ದುಃಖವನ್ನು ಹೋಗಲಾಡಿಸೋದು ಹೇಗೆ ಅನ್ನೋದ್ರ ಬಗ್ಗೆಯೂ ತಿಳಿಸಿದ್ದಾರೆ. ಸದ್ಯ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳದಿರಲು ಏನು ಮಾಡ್ಬೇಕು ಅನ್ನೋದ್ರ ಬಗ್ಗೆ ತಿಳಿಸಿದ್ದಾರೆ. ಚಾಣಕ್ಯನ ಈ ನೀತಿಗಳನ್ನು ಪಾಲಿಸಿದ್ರೆ ದಾಂಪತ್ಯದಲ್ಲಿ ಬಿರುಕು ಮೂಡೋದಕ್ಕೆ ಸಾಧ್ಯವೇ ಇಲ್ಲ.

1. ಮೋಸ ಮಾಡಬಾರದು
ಚಾಣಕ್ಯರು ತಮ್ಮ ನೀತಿಯಲ್ಲಿ ಮೋಸ ಮಾಡೋದು ವಿಷ ಇದ್ದ ಹಾಗೆ ಎಂದು ಹೇಳಿದ್ದಾರೆ. ಕೇವಲ ಪತ್ನಿ- ಪತ್ನಿ ಒಬ್ಬರಿಗೊಬ್ಬರು ಮೋಸ ಮಾಡೋದು ಮಾತ್ರವಲ್ಲ. ಸಂಬಂಧದಲ್ಲಿ ಯಾರು ಯಾರಿಗೂ ಮೋಸ ಮಾಡಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಪತಿ- ಪತ್ನಿ ತಮ್ಮ ಸಂಬಂಧವನ್ನು ಗಟ್ಟಿ ಮಾಡೋದಕ್ಕೆ ಇಚ್ಚಿಸಿದ್ದೇ ಆದರೆ ಈ ಸಂಬಂಧದಲ್ಲಿ ಮೋಸಕ್ಕೆ ಅವಕಾಶವೇ ಇರಬಾರದು ಎಂದಿದ್ದಾರೆ. ಹೀಗಾಗಿ ಯಾವ ಸಂಬಂಧದಲ್ಲಿ ಮೋಸ ಇರುತ್ತದೆಯೋ ಅಂತಹ ಸಂಬಂಧದಕ್ಕೆ ಬೇಗನೆ ಬಿರುಕು ಕಾಣಿಸಿಕೊಳ್ಳುತ್ತದೆ.
2. ಸುಳ್ಳು ಹೇಳಬಾರದು
ಚಾಣಕ್ಯ ಪ್ರಕಾರ ಸುಳ್ಳುಗಳನ್ನೇ ಹೇಳಿ ಕಟ್ಟಿದ ಸಂಸಾರ ಖಂಡಿತವಾಗಿ ಉಳಿಯೋದಿಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಸಂಬಂಧದಲ್ಲಿ ಸುಳ್ಳು ಹೇಳಿರೋದು ಸಾಭೀತಾದರೆ ಆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತದೆ. ಹೀಗಾಗಿ ಸುಳ್ಳಿನಿಂದ ಯಾವತ್ತೂ ದೂರವಿರಿ. ಸಂಬಂಧವನ್ನು ಯಾವಾಗಲೂ ಸತ್ಯ, ನಂಬಿಕೆಯ ಸರಪಳಿಯಿಂದ ಕಟ್ಟಬೇಕೇ ವಿನಹ ಸುಳ್ಳಿನಿಂದಲ್ಲ. ಸುಳ್ಳಿನಿಂದ ಸಂಸಾರ ಇಂದಲ್ಲ ನಾಳೆ ಕೊನೆಯಾಗುತ್ತದೆ.
3. ಕೋಪ ಮಾಡಿಕೊಳ್ಳಬಾರದು
ಚಾಣಕ್ಯನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಕೋಪ ನಿಯಂತ್ರಿಸಿಕೊಳ್ಳುವ ಶಕ್ತಿ ಇರಬೇಕು. ಕೋಪ ಎಂತಹ ಸಂಬಂಧದಲ್ಲೂ ಬಿರುಕು ಕಾಣಿಸಿಕೊಳ್ಳೋದಕ್ಕೆ ಕಾರಣವಾಗುತ್ತದೆ. ಕೋಪದಲ್ಲಿ ಆಡಿದ ಮಾತನ್ನು ಹಿಂತೆಗೆದುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ನಮ್ಮ ಕಟುವಾದ ಮಾತಿನಿಂದ ನೊಂದುಕೊಂಡ ನಮ್ಮ ಸಂಗಾತಿ ಮತ್ತೆಂದಿಗೂ ನಮ್ಮ ಜೊತೆಗೆ ಬದುಕೋದಕ್ಕೆ ಇಷ್ಟ ಪಡೋದಿಲ್ಲ. ಸುಖಾ ಸುಮ್ಮನೆ ಕೋಪ ಮಾಡಿಕೊಳ್ಳುವ ಬದಲು ಆ ಪರಿಸ್ಥಿತಿಯನ್ನು ಅರಿತುಕೊಂಡು ಬಾಳಿದರೆ ಉತ್ತಮ.
4. ಒಬ್ಬರಿಗಿಂತ ಮತ್ತೊಬ್ಬರು ಮೇಲೂ ಎಂದು ಅಂದುಕೊಳ್ಳಬಾರದು
ಗಂಡ-ಹೆಂಡತಿ ಸಂಬಂಧದಲ್ಲಿ ಯಾರೂ ಮೇಲಿಲ್ಲ ಹಾಗೂ ಯಾರು ಕೂಡ ಕೀಳಲ್ಲ. ಇಬ್ಬರೂ ಕೂಡ ಸಮಾನರು. ಆದರೆ ಕೆಲವೊಂದು ಸಂಬಂಧಗಳಲ್ಲಿ ಗಂಡಂದಿರು ಪ್ರಾಬಲ್ಯವನ್ನು ಪ್ರದರ್ಶಿಸುತ್ತಾರೆ. ಇನ್ನೂ ಕೆಲವು ಸಂಬಂಧಗಳಲ್ಲಿ ಪತ್ನಿಯರು ಪ್ರಾಬಲ್ಯ ಸಾಧಿಸುತ್ತಾರೆ. ಸಂಬಂಧ ಹೀಗಿದ್ದರೆ ಖಂಡಿತ ಉಳಿಯೋದಿಲ್ಲ. ನಿಧಾನವಾಗಿ ಬಿರುಕು ಕಾಣಿಸಿಕೊಂಡು ಒಂದಲ್ಲ ಒಂದು ದಿನ ಒಡೆದು ಹೋಗುತ್ತದೆ.
ದಾಂಪತ್ಯ ಜೀವನ ಮೂರು ಗಂಟಿನ ನಂಟಿನಲ್ಲಿ ಭದ್ರವಾಗಬೇಕು. ಅದನ್ನು ಬಿಟ್ಟು ಬಿಕ್ಕ ಪುಟ್ಟ ವಿಚಾರಗಳಿಗೆ ಜಗಳವಾಡಿ ಸಂಬಂಧ ಹಾಳು ಮಾಡಿಕೊಳ್ಳಬಾರದು.



Click it and Unblock the Notifications

