Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚೈತ್ರ ನವರಾತ್ರಿ: ಈ ವರ್ಷ ದುರ್ಗೆಯ ವಾಹನ ಯಾವುದು, ಈ ವಾಹನ ಏನು ಸೂಚನೆ ನೀಡುತ್ತದೆ?
ವರ್ಷದಲ್ಲಿ ಎರಡು ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಪ್ರತಿ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಬರುತ್ತಾಳೆ. ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೋ ಅದರ ಆಧಾರದ ಮೇಲೆ ವರ್ಷಫಲವನ್ನು ಹೇಳಲಾಗುವುದು.
ಈ ವರ್ಷ ಯುಗಾದಿಯಂದೇ ಚೈತ್ರ ನವರಾತ್ರಿ ಬಂದಿದೆ. ಮಾರ್ಚ್ 22 ಬುಧವಾರದಂದು ನವರಾತ್ರಿ ಪ್ರಾರಂಭವಾಗಿದೆ. ಪ್ರತಿವರ್ಷ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಭೂಮಿಗೆ ಬರುತ್ತಾಳೆ ಎಂದು ಹೇಳಲಾಗುವುದು.

ದುರ್ಗೆ ಬರುವ ಹೋಗುವ ಹೋಗುವ ವಾಹನ ತುಂಬಾನೇ ಮುಖ್ಯವಾಗಿರುತ್ತದೆ, ಅದರಂತೆ ಫಲ ಇರಲಿದೆ. ಈ ವರ್ಷ ಚೈತ್ರ ನವರಾತ್ರಿಯಲ್ಲಿ ದುರ್ಗೆಯು ದೋಣಿಯಲ್ಲಿ ಬಂದು ತನ್ನ ಭಕ್ತರನ್ನು ಹರಿಸುತ್ತಾಳೆ. ಆದರೆ ಈ ವರ್ಷ ಶುಭಫಲ ಹೆಚ್ಚು ನೀಡಲಿದ್ದಾಳೆ.
ಹಿಂದೂ ನಂಬಿಕೆಗಳ ಪ್ರಕಾರ ಮಾತೆ ದುರ್ಗ ಆನೆ ಮೇಲೆ ಕುಳಿತು ಬಂದರೆ ಆ ವರ್ಷ ತುಂಬಾ ಮಳೆಯಿರುತ್ತದೆ, ಕುದುರೆ ಮೇಲೆ ಬಂದರೆ ಯುದ್ಧದ ಪರಿಸ್ಥಿತಿ, ರಾಜ್ಯದಲ್ಲಿ ಗೊಂದಲ, ಗಲಭೆ ಇರಲಿದೆ. ದುರ್ಗೆ ದೋಣಿಯಲ್ಲಿ ಬಂದರೆ ತುಂಬಾನೇ ಶುಭ, ಸಂಪತ್ತು ಹೆಚ್ಚಿಸಲಿದ್ದಾಳೆ ಎಂದು ಹೇಳಲಾಗುವುದು.
ಚೈತ್ರ ನವರಾತ್ರಿ ಬುಧವಾರದಂದು ಪ್ರಾರಂಭವಾಗಿದೆ. ಆದ್ದರಿಂದ ದುರ್ಗೆ ದೋಣಿಯಲ್ಲಿ ಭೂ ಲೋಕಕ್ಕೆ ತನ್ನ ಭಕ್ತರನ್ನು ಹರಿಸಲು ಬಂದಿದ್ದಾಳೆ. ದುರ್ಗೆ ಮಾತೆ ದೋಣಿಯಲ್ಲಿ ಬಂದಿರುವುದರಿಂದ ಮಳೆ ಬೆಳೆ ಚೆನ್ನಾಗಿರಲಿದೆ ಎಂದು ಹೇಳಲಾಗುವುದು.
ನವರಾತ್ರಿ ಯಾವ ದಿನ ಪ್ರಾರಂಭವಾದರೆ ದುರ್ಗೆ ತಾವ ವಾಹನದಲ್ಲಿ ಬರುತ್ತಾಳೆ?
ನವರಾತ್ರಿಯಂದು ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂಬುವುದು ನವರಾತ್ರಿ ಯಾವ ದಿನ ಪ್ರಾರಂಭವಾಗುವುದು ಅದರ ಆಧಾರದ ಮೇಲೆ ಮೇಲೆ ಹೇಳಲಾಗುವುದು.
ದೇವಿ ಭಾಗವತ ಪ್ರಕಾರ ಭಾನುವಾರ ಅಥವಾ ಸೋಮವಾರ ನವರಾತ್ರಿ ಪ್ರಾರಂಭವಾದರೆ ದೇವಿ ಆನೆ ಮೇಲೆ ಬರುತ್ತಾಳೆ.
ಶನಿವಾರ ಮತ್ತು ಮಂಗಳವಾರ ನವರಾತ್ರಿ ಪ್ರಾರಂಭವಾದರೆ ಕುದುರೆ ಮೇಲೇರಿ ಬರುತ್ತಾಳೆ.
ಬುಧವಾರ ಬಂದರೆ ದೋಣಿ ಮೇಲೆ ಕುಳಿತು ಬರುತ್ತಾಳೆ
ಗುರುವಾರ, ಶುಕ್ರವಾರ ಬಂದರ ಪಲಕ್ಕಿಯೇರಿ ಬರುತ್ತಾರೆ.
ದುರ್ಗೆ ಮಾತೆ ಆನೆ ಮೇಲೇರಿ ಬಂದರೆ ಏನರ್ಥ?
ದುರ್ಗೆ ಮಾತೆ ಆನೆ ಮೇಲೇರಿ ಬರುವುದರಿಂದ ಮಳೆ-ಬೆಳೆ ಚೆನ್ನಾಗಿ ಬರಲಿದೆ. ದೇಶದಲ್ಲಿ ಸಮೃದ್ಧಿ ಹೆಚ್ಚಾಗಲಿದೆ, ಜನರು ಖುಷಿಯ-ನೆಮ್ಮದಿಯ ಬದುಕು ಸಾಧಿಸುತ್ತಾರೆ.
ಕುದುರೆ ಮತ್ತು ಪಲ್ಲಕ್ಕಿಯಲ್ಲಿ ದುರ್ಗೆ ಮಾತೆ ಬಂದರೆ ಏನರ್ಥ?
ದುರ್ಗೆ ಕುದುರೆ, ಪಲ್ಲಕ್ಕಿಯಲ್ಲಿ ಬಂದರೆ ಅದು ಶುಭ ಎಂದು ಪರಿಗಣಿಸುವುದಿಲ್ಲ. ಇವುಗಳು ವಿನಾಶ, ಯುದ್ಧ, ಸಾಂಕ್ರಾಮಿಕ ರೋಗದ ಮುನ್ಸೂಚನೆ ನೀಡುತ್ತಾಳೆ ಎಂದು ಹೇಳಲಾಗುವುದು.
ಆನೆ, ದೋಣಿಯಲ್ಲಿ ಬಂದರೆ ಶುಭ, ಇದೀಗ ದುರ್ಗೆ ದೋಣಿಯಲ್ಲಿ ಬಂದಿರುವುದರಿಂದ ಶುಭ ಫಲ ನೀಡಲಿದ್ದಾಳೆ ಎಂದು ಹೇಳಬಹುದು.
ನವರಾತ್ರಿಯಲ್ಲಿ ಈ ಮಂತ್ರಗಳನ್ನು ಪಠಿಸಿ:
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ವಿದ್ಯಾರ್ಥಿಗಳು ಈ ಮಂತ್ರ ಪಠಿಸುವುದರಿಂದ ಏಕಾಗ್ರತೆ ಹೆಚ್ಚುವುದು
ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್‌ಮನ್
ಈ ಮಂತ್ರ ಪಠಿಸುವುದರಿಂದ ದುಷ್ಟಶಕ್ತಿಗಳು ದೂರಾಗುವುದು, ನಮಗೆ ಒಳಿತಾಗುವುದು
ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್‌ಮುಕ್ತೊ ಧನ ಧ್ಯಾನ ಸುತನ್‌ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‌ಶಯಃ
ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಾಲ, ಕಷ್ಟದಿಂದ ಮುಕ್ತಿ ಪಡೆಯುತ್ತೇವೆ.



Click it and Unblock the Notifications

