Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ಫೋಟೋದಲ್ಲಿರುವ ಚಿರತೆಯಲ್ಲಿ ವಿಶೇಷತೆ ಇದೆ..! ನೀವು ಗುರುತಿಸುತ್ತೀರಾ..?
ಪ್ರಾಣಿಗಳ ಪ್ರಪಂಚದಲ್ಲಿ ಎಷ್ಟೊಂದು ವಿಚಿತ್ರಗಳು ನಡೆಯುತ್ತವೆ ಅನ್ನೋದನ್ನ ನಾವು ಊಹಿಸಲು ಸಾಧ್ಯವಿಲ್ಲ. ಅಲ್ಲಿ ಒಂದೊಂದು ದಿನ ಒಂದೊಂದು ವಿಭಿನ್ನ ಚಮತ್ಕಾರಗಳು ನಡೆಯುತ್ತವೆ. ಕೆಲವೊಮ್ಮೆ ಈ ಅಚ್ಚರಿಗಳ ನೋಡಿದ್ರೆ ನಾವು ದಂಗಾಗಿ ಬಿಡುತ್ತೇವೆ. ಇಂತಹ ವಿಚಿತ್ರಗಳಲ್ಲಿ ಕೆಲವೊಂದು ಇದೇ ಮೊದಲು ದಾಖಲಾಗಿರುತ್ತದೆ.
ಈಗ ಈ ಚಿರತೆಯೊಂದರೆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಫೋಟೋ ದೇಶದಲ್ಲಿ ಇದೇ ಮೊದಲು ಸೆರೆ ಹಿಡಿಯಲಾಗಿದೆ. ನೀವು ಈ ಫೋಟೋದಲ್ಲಿರುವ ಒಂದು ವಿಶೇಷವನ್ನ ಗುರುತಿಸುತ್ತೀರಾ? ಫೋಟೋದಲ್ಲಿ ಚಿರತೆಯೊಂದು ಮರದ ಮೇಲೆ ಮಲಗಿರುವುದು ನೋಡಬಹುದು. ಈ ಚಿರತೆಯಲ್ಲಿ ಒಂದು ವಿಶೇಷತೆ ಅಡಗಿದೆ.

ಹೌದು ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ್ ಈ ಫೋಟೋವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಹಿಡಿದಿದ್ದು, ಈ ಫೋಟೋ ಇದೆ ಮೊದಲ ಬಾರಿಗೆ ಸೆರೆಹಿಡಿದ ವಿಶೇಷತೆಯಿಂದ ಕೂಡಿರುವ ಚಿತ್ರವಾಗಿದೆ. ಚಿರತೆಯೊಂದು ಮರದಲ್ಲಿ ಮಲಗಿ ಕ್ಯಾಮರಾ ಕಡೆ ನೋಡುತ್ತಿದೆ. ಆದರೆ ಈ ಫೋಟೋ ಸಾಮಾನ್ಯ ಚಿರತೆಗಳ ಸಾಲಿಗೆ ಸೇರುವುದಿಲ್ಲ.
ನಿಮಗಿದು ಅಚ್ಚರಿಯಾಗಬಹುದು, ಈ ಚಿರತೆ ಸಾಮಾನ್ಯ ಚಿರತೆಯಲ್ಲ. ಈ ಫೋಟೋದಲ್ಲಿರುವ ಚಿರತೆಯಲ್ಲಿ ಒಂದು ವಿಶೇಷವಿದೆ ಅದು ಏನೆಂಬುದನ್ನು ನೀವು ಗುರುತಿಸಲು ಸಾಧ್ಯವೇ ಎಂಬುದನ್ನು ನೋಡಿ. ಈ ಚಿರತೆಯ ಕಣ್ಣನ್ನು ಸ್ವಲ್ಪ ಗಮನಿಸಿ ನೋಡಿ. ಈ ಚಿರತೆಯ ಕಣ್ಣು ಒಂದೇ ಬಣ್ಣದಲ್ಲಿಲ್ಲ. ಬದಲಿಗೆ ಎರಡೂ ಕಣ್ಣುಗಳು ಬೇರೆ ಬೇರೆ ಬಣ್ಣ ಹೊಂದಿವೆ. ಇದನ್ನು ಗಮನವಿಟ್ಟು ನೋಡಿದರೆ ಮಾತ್ರ ನಮ್ಮ ಗಮನಕ್ಕೆ ಬರುತ್ತವೆ.
ಅಚ್ಚರಿ ಎಂದರೆ ಈ ಚಿರತೆಯ ಕಣ್ಣು ಎರಡು ಬಣ್ಣದಲ್ಲಿ ಇರುವುದು ಎಡಿಟ್ ಮಾಡಿರುವ ಚಿತ್ರವಲ್ಲ ಬದಲಿಗೆ ಇದು ಅಪರೂಪದ ಚಿರತೆಯಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಚಿತ್ರ ಸೆರೆಯಾಗಿದೆ. ಹೆಟೆರೋಕ್ರೊಮಿಯಾ ಇರಿಡಮ್ ಎಂಬ ಸಮಸ್ಯೆಯಿಂದ ಈ ರೀತಿ ಕಣ್ಣುಗಳನ್ನು ಈ ಚಿರತೆ ಹೊಂದಿದೆ. ಚಿರತೆ-ಅಸಾಮಾನ್ಯ ಆನುವಂಶಿಕ ಸ್ಥಿತಿಯ ಪರಿಣಾಮವಾಗಿ ಎರಡು ವಿಭಿನ್ನ ಬಣ್ಣಗಳ ಕಣ್ಣುಗಳು-ಭಾರತದಲ್ಲಿ8 ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಚಿರತೆ ಕಂಡುಬಂದಿದೆ.
ಹೆಟೆರೋಕ್ರೊಮಿಯಾ ಇರಿಡಮ್ ಅಪರೂಪದ ರೂಪಾಂತರವಾಗಿದ್ದು, ಪ್ರತಿ ಕಣ್ಣುಗಳು ವಿಭಿನ್ನ ಬಣ್ಣವನ್ನು ಹೊಂದಿರುತ್ತವೆ. ಚಿರತೆಯ ಒಂದು ಕಣ್ಣು ನೀಲಿ-ಹಸಿರು ಮತ್ತು ಇನ್ನೊಂದು ಕಂದು ಬಣ್ಣವಿದ್ದು ಇದು ಫೋಟೋ ತೆಗೆಯುವಾಗ ಗಮನಕ್ಕೆ ಬಂದಿರಲಿಲ್ಲವಂತೆ, ಬಳಿಕ ಫೋಟೋವನ್ನು ಗಮನವಿಟ್ಟು ನೋಡುವಾಗ ಕಣ್ಣುಗಳ ಬಣ್ಣ ಬೇರೆ ಬೇರೆಯಾಗಿರುವುದು ತಿಳಿದುಬಂದಿದೆ. ಇದು ಹೆಣ್ಣು ಹುಲಿಯಾಗಿದ್ದು, ವಯಸ್ಸಾಗಿದೆ.
ಇನ್ನು ಬಂಡೀಪುರದಲ್ಲಿ ಈ ಚಿರತೆ ಹಾಗೂ ಕಪ್ಪು ಬಣ್ಣದ ಪ್ಯಾಂಥರ್ ಸಹ ಇದೇ ಬಂಡೀಪುರ ಅರಣ್ಯದಲ್ಲಿ ಪತ್ತೆಯಾಗಿತ್ತು, ಹೀಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇಂತಹ ವಿಭಿನ್ನ ಪ್ರಾಣಿಗಳ ವಾಸಸ್ಥಾನವಾಗಿದೆ ಎಂಬುದು ಮತ್ತೆ ಸಾಬೀತಾಗಿದೆ.
ಪಾಟೀಲ್ ಅವರು ಈ ಹಿಂದೆ ಮೈಸೂರು ಸಮೀಪದ ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಪ್ಪು ಪ್ಯಾಂಥರ್ ಅನ್ನು ಸಹ ಸೆರೆಹಿಡಿದು ಗಮನ ಸೆಳೆದಿದ್ದರು. ಈಗ ಈ ವಿಭಿನ್ನ ಕಣ್ಣುಗಳ ಹೊಂದಿರುವ ಚಿರತೆಯು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಬಂಡೀಪುರದಲ್ಲಿ ಬಿಳಿ ಬಣ್ಣದ ಜಿಂಕೆಯೂ ಕಾಣಿಸಿಕೊಂಡಿತ್ತು. ಇದು ಕಂದು ಬಣ್ಣವಿಲ್ಲದೆ ಸ್ವಲ್ಪ ಬಿಳಿ ಬಣ್ಣದಲ್ಲಿ ಕಂಡುಬಂದಿತ್ತು, ಇದು ಬಣ್ಣಗಳಿಗೆ ಕಾರಣವಾಗುವ ಮೆಲನಿನ್ ಕೊರತೆ ಈ ರೀತಿ ಬಣ್ಣಕ್ಕೆ ಕಾರಣವಾಗುತ್ತದೆ.
ಸದ್ಯ ಈ ವಿಚಿತ್ರ ಕಣ್ಣಿನ ಬಣ್ಣಗಳ ಹೊಂದಿರುವ ಚಿರತೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ. ಈಗ ಬಂಡೀಪುರಕ್ಕೆ ಮತ್ತೊಂದು ವಿಭಿನ್ನ ಪ್ರಾಣಿ ಸೇರ್ಪಡೆಯಾದಂತಾಗಿದೆ.



Click it and Unblock the Notifications

