Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಭಾರತದ ಅತ್ಯಂತ ಬಡ ವ್ಯಕ್ತಿ ಯಾರು ಗೊತ್ತಾ? ಇವನ ಆದಾಯ ವಾರ್ಷಿಕ 3 ರೂಪಾಯಿ..!!
ವಿಶ್ವದ ಶ್ರೀಮಂತ ವ್ಯಕ್ತಿ ಯಾರು ಅಂದ್ರೆ ನಾವು ಸುಲಭವಾಗಿ ಎಲಾನ್ ಮಸ್ಕ್ ಎನ್ನುತ್ತೇವೆ. ಹಾಗೆ ಭಾರತದ ಶ್ರೀಮಂತ ಉದ್ಯಮಿ ಯಾರು ಅಂದರೆ ಅಂಬಾನಿ ಅದಾನಿ ಹೆಸರನ್ನು ಕೂಡ ನಾವು ಹೇಳುತ್ತೇವೆ. ಈ ಎಲ್ಲಾ ಶ್ರೀಮಂತರ ಹೆಸರು ನಮಗೆ ಚಿರಪರಿಚಿತ. ಹಾಗೆ ಇವರ ಆಸ್ತಿ ಕುರಿತಾಗಿಯೂ ನೀವು ಹೇಳಿರಬಹುದು. ಆದ್ರೆ ಅತ್ಯಂತ ಬಡ ವ್ಯಕ್ತಿ ಯಾರು ಅಂತ ಕೇಳಿದ್ರೆ ನಿಮಗೆ ಉತ್ತರ ಗೊತ್ತಿದ್ಯಾ?
ಭಾರತದ ಅತ್ಯಂತ ಬಡ ವ್ಯಕ್ತಿ ಯಾರು? ಈ ರೀತಿ ಕೇಳಿದ್ರೆ ಯಾರಿಗೂ ಉತ್ತರ ತಿಳಿದಿರೋದಿಲ್ಲ. ಯಾಕಂದ್ರೆ ಈಗ ಭಿಕ್ಷುಕರು ಕೂಡ ದಿನಕ್ಕೆ ಸಾವಿರಾರು ರೂಪಾಯಿ ದುಡಿಯುವ ಹಾಗೆ ಸಣ್ಣಪುಟ್ಟ ಕೆಲಸ ಮಾಡುವವರು ಕೂಡ ವರ್ಷಕ್ಕೆ ಒಂದಿಷ್ಟು ಹಣ ಗಳಿಸುತ್ತಾರೆ. ಹಾಗೆ ವೃದ್ಧರು ಕೂಡ ಸರ್ಕಾರದ ಯಾವುದಾದರು ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ.

ಹೀಗಾಗಿ ಈಗ ತೀರ ಬಡವರು ಯಾರು ಎಂಬುದನ್ನು ಪತ್ತೆ ಮಾಡುವುದು ಕಷ್ಟಕರ. ಆದ್ರೆ ಇಲ್ಲೊಬ್ಬ ವ್ಯಕ್ತಿಯನ್ನ ಜನರೇ ಆತ ಭಾರತದ ಅತ್ಯಂತ ಬಡ ವ್ಯಕ್ತಿ ಎಂದು ಕರೆದಿದ್ದಾರ. ಅಚ್ಚರಿ ವಿಚಾರ ಏನೆಂದರೆ ಇಲ್ಲೊಬ್ಬ ವ್ಯಕ್ತಿಯ ಆದಾಯ ವರ್ಷಕ್ಕೆ ಕೇವಲ 3 ರೂಪಾಯಿ. ಹೌದು ನಿಮಗೆ ಅಚ್ಚರಿ ಎನಿಸುತ್ತಿರಬಹುದು, ದಿನಕ್ಕೊಬ್ಬನಿಗೆ 100 ರೂಪಾಯಿ ಇದ್ದರೂ ಮೂರು ಹೊತ್ತಿನ ಊಟ ಮಾಡುವುದು ಕಷ್ಟವಾಗುತ್ತೆ. ಆದ್ರೆ ಈತ ಕೇವಲ 3 ರೂಪಾಯಿಯಲ್ಲಿ ಇಡೀ ವರ್ಷ ಕಳೆದಿರೋದು ಹೇಗೆ ಎಂಬ ಅಚ್ಚರಿ ಮೂಡುವುದು ಸಹಜ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರೈತನೊಬ್ಬನ ವಾರ್ಷಿಕ ಆದಾಯ ಕೇವಲ 3 ರೂಪಾಯಿ. ಆದ್ರೆ ಇದು ಸರ್ಕಾರಿ ದಾಖಲಾತಿಗಳಲ್ಲಿ ಮಾತ್ರ. ಹೌದು ರೈನೊಬ್ಬನ ಈ ರೀತಿ ವಾರ್ಷಿಕ ಆದಾಯದ ದಾಖಲಾತಿಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಹಶೀಲ್ದಾರ್ ಅವರ ಅಧಿಕೃತ ಸೀಲ್ ಮತ್ತು ಸಹಿ ಕೂಡ ಇರುವ ಈ ದಾಖಲಾತಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆತ ಭಾರತದ ಅತ್ಯಂತ ಬಡ ವ್ಯಕ್ತಿ ಎಂದು ಜನರೇ ಗುರುತಿಸಿದ್ದಾರೆ.
ಸತ್ನಾ ಜಿಲ್ಲೆಯ ಕೋಥಿ ತಹಶೀಲ್ ಪ್ರದೇಶದ ನಿವಾಸಿ ರಾಮಸ್ವರೂಪ್ ಅವರಿಗೆ ನೀಡಲಾದ ಆದಾಯ ಪ್ರಮಾಣಪತ್ರದ ಫೋಟೋ ವೈರಲ್ ಆಗಿದೆ, ಅದ್ರಲ್ಲೂ ತಹಶೀಲ್ದಾರ್ ಸೌರಭ್ ದ್ವಿವೇದಿ ಅವರ ಸಹಿ ಕೂಡ ಇರುವುದು ಗಮನಿಸಬಹುದು. ಈ ದಾಖಲೆಯ ಪ್ರಕಾರ ರೈತ ರಾಮಸ್ವರೂಪ್ ತಿಂಗಳಿಗೆ ಕೇವಲ 25 ಪೈಸೆ ಅಷ್ಟು ಮಾತ್ರ ಗಳಿಸುತ್ತಾರೆ ಎಂದು ಅರ್ಥೈಸಬಹುದು.
ಆದ್ರೆ ಈ ಘಟನೆ ಭಾರೀ ಟೀಕೆ ಹಾಗೂ ಸರ್ಕಾರಿ ದಾಖಲೆಗಳಲ್ಲಿನ ತಪ್ಪುಗಳ ಕುರಿತಾಗಿ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಆಡಳಿತ ಮಂಡಳಿ ತಕ್ಷಣವೇ ಎರಡು ದಿನದಲ್ಲಿ ರೈತನ ಆದಾಯ ವಾರ್ಷಿಕ 30,000 ಅಂದರೆ ತಿಂಗಳಿಗೆ 2,500 ಎಂದು ನಮೂದಿಸಿರುವ ಹೊಸ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಮೊದಲು ತಹಶೀಲ್ದಾರ್ ಅವರ ಸಹಿ ಇದ್ದ ದಾಖಲಾತಿಯಲ್ಲಿ ಇಷ್ಟೊಂದು ದೊಡ್ಡ ತಪ್ಪಾಗಿದ್ದರೂ ಯಾರೊಬ್ಬರು ಗುರುತಿಸದೆ ಇರುವುದು ದೊಡ್ಡ ಪ್ರಮಾದ ಎನ್ನಬಹುದು.
ಆದ್ರೆ ರೈತರ ಯಾವುದಾದರು ಸರ್ಕಾರಿ ದಾಖಲೆಗಳಲ್ಲಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಆತ ಹತ್ತಾರು ದಿನ ಹತ್ತಾರು ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಅದನ್ನು ಸರಿಪಡಿಸಲು ಮಧ್ಯವರ್ತಿಗಳ ಹಿಡಿಯಬೇಕು, ಹಣ ಖರ್ಚು ಮಾಡಬೇಕು. ಈ ಫೈಲ್‌ಗಳು ಟೇಬಲ್ ಇಂದ ಟೇಬಲ್‌ಗೆ ಹೋಗಬೇಕಾದ್ರೆ ಲಂಚ ನೀಡಬೇಕು. ಆದ್ರೆ ಅಧಿಕಾರಿಗಳೇ ತಪ್ಪು ಮಾಡಿದ್ರೆ ದಿನದಲ್ಲಿ ಅದನ್ನು ತಿದ್ದುಪಡಿ ಮಾಡಿ ಹೊಸ ದಾಖಲೆಯು ನಿಮ್ಮ ಕೈಸೇರುತ್ತೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.



Click it and Unblock the Notifications
