Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮಗೆ ಏನು ಬೇಕೋ ಖರೀದಿಸಿ: ಡೆಬಿಟ್ ಕಾರ್ಡ್ ಸಂಖ್ಯೆ..ಓಟಿಪಿ ಹಂಚಿಕೊಂಡ ಉದ್ಯಮಿ
ಯಾರಾದರೂ ನಿಮ್ಮ ಎಟಿಎಂ ಕಾರ್ಡ್, ಕ್ರೆಡಿಟ್-ಡೆಬಿಟ್ ಕಾರ್ಡ್ ಮಾಹಿತಿ ಕೇಳಿದರೆ ಹಾಗೆ ಒಟಿಪಿ ಕೇಳಿದರೆ ನೀಡಬಾರದು ಎಂದು ಆರ್‌ಬಿಐ, ಸೈಬರ್ ಪೊಲೀಸ ಸೇರಿ ಹಲವರು ಹೇಳುತ್ತಲೇ ಇರುತ್ತಾರೆ. ಅಲ್ಲದೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಆನ್‌ಲೈನ್‌ಗಳಲ್ಲಿ ಹಂಚಿಕೊಳ್ಳಬೇಡಿ ಅಂತಲೂ ಹೇಳುತ್ತಿರುತ್ತಾರೆ. ಇದೆಲ್ಲಾ ನಮ್ಮ ಗೌಪ್ಯತೆಯ ಪ್ರಶ್ನೆಯಾಗಿರುತ್ತದೆ.
ಆದ್ರೆ ಇಲ್ಲೊಬ್ಬ ತಮ್ಮ ಕಾರ್ಡ್ ಡೀಟೈಲ್ಸ್, ಓಟಿಪಿ, ಎಕ್ಸ್‌ಪೈರಿ ಡೇಟ್ ಎಲ್ಲವನ್ನು ಹಂಚಿಕೊಂಡಿದ್ದಲ್ಲದೆ ನಿಮಗೆ ಏನು ಬೇಕೋ ಅದನ್ನು ಖರೀದಿಸಿ ಎಂದಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಇದು ಯಾವುದೋ ಸ್ಕ್ಯಾಮ್‌ನ ಭಾಗ ಇರಬಹುದು ಎಂದುಕೊಂಡಿದ್ದರು. ಆದ್ರೆ ಇದು ನಿಜವಾಗಿಯೂ ಆತ ಎಲ್ಲಾ ಒಟಿಪಿಗಳನ್ನ ಎಕ್ಸ್ (ಟ್ವಿಟರ್) ಮೂಲಕ ಹಂಚಿಕೊಂಡಿದ್ದಾನೆ.

ಈ ಪೋಸ್ಟ್ ನೋಡಿದ ಮಂದಿ ಜೋಮೆಟೋದಲ್ಲಿ, ಸ್ವಿಗ್ಗಿ ಸೇರಿ ಕೆಲವು ಆನ್‌ಲೈನ್ ಶಾಪಿಂಗ್ ಆಪ್ ತೆರೆದು ತಮಗೆ ಇಷ್ಟಬಂದ ವಸ್ತು ಆರ್ಡರ್ ಮಾಡಿದ್ದಾರೆ. ಇದಕ್ಕೆ ಆತನ ಕಾರ್ಡ್‌ನಿಂದಲೇ ಹಣ ಸಹ ಕಟ್ ಆಗಿರುವುದು ನೋಡಬಹುದು. ಹಾಗಾದ್ರೆ ಆತ ಹೀಗೆ ಮಾಡಿದ್ದೇಕೆ? ಆತ ಯಾರು? ಎಷ್ಟು ಹಣ ಇದರಿಂದ ಆತನಿಗೆ ನಷ್ಟವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ರಾಹುಲ್ ಕೃಷ್ಣನ್ ಎಂಬ ಯುವ ಉದ್ಯಮಿ ಈತ, ಬೋಲ್ಡ್ ಕೇರ್ ಎಂಬ ಸಣ್ಣ ಸ್ಟಾರ್ಟ್‌ಅಪ್‌ನ ಸಂಸ್ಥಾಪಕ. ಬೋಲ್ಡ್ ಕೇರ್ ಎಂಬುದು ಲೈಂಗಿಕ ಆರೋಗ್ಯ ಸಂಬಂಧ ಹತ್ತು ಹಲವು ಪ್ರೋಡಕ್ಟ್‌ಗಳ ಪರಿಚಯಿಸಿರುವ ಒಂದು ಕಂಪನಿಯಾಗಿದೆ. ಆತ ರೀತಿ ಆನ್‌ಲೈನ್‌ನಲ್ಲಿ ಎಸ್‌ಬಿಐ ಕಾರ್ಡ್ ಮಾಹಿತಿ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ರಾಹುಲ್ ಕೃಷ್ಣನ್ ಅವರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು, ಜನರು 1,000 ರೂ.ಗಳ ಮಿತಿಯೊಳಗೆ ಯಾವುದೇ ವಹಿವಾಟು ಮಾಡಲು ಅವಕಾಶ ಇರಲಿದೆ ಎಂದು ಅವರು ತಿಳಿಸಿದ್ದರು. ಇದಾಗಿ ಕ್ಷಣದಲ್ಲಿ ನೂರಾರು ಮಂದಿ ಅವರ ಕಾರ್ಡ್ ನಂಬರ್ ಬಳಸಿ ಆರ್ಡರ್ ಮಾಡಲು ಮುಂದಾದರು, ಆದ್ರೆ ಓಟಿಪಿ ನೇರವಾಗಿ ಕೃಷ್ಣನ್ ಅವರಿಗೆ ಹೋಗುತ್ತಿತ್ತು. ಈ ಓಟಿಪಿಯನ್ನು ಸಹ ಅವರು ಹಂಚಿಕೊಂಡರು. ಇದರಿಂದ ನೂರಾರು ಮಂದಿ ತಮ್ಮಿಷ್ಟದ ವಸ್ತ ಖರೀದಿಸಿದರು.
ಆದ್ರೆ ಬುದ್ದಿವಂತರಾದ ಮಂದಿ 1 ಸಾವಿರ ರೂಪಾಯಿಗಿಂತ ಅಧಿಕ ಬೆಲೆಯ ವಸ್ತು ಖರೀದಿಸಲು ಮುಂದಾಗಿದ್ದಾರೆ. ಆದ್ರೆ ಇಂತಹ ವಹಿವಾಟಿಗೆ ಕೃಷ್ಣನ್ ಓಟಿಪಿ ನೀಡಿಲ್ಲ. ಬದಲಾಗಿ 1 ಸಾವಿರ ಒಳಗಿನ ವಹಿವಾಟಿಗೆ ಮಾತ್ರವೇ ಈ ಒಟಿಪಿ ನೀಡಿದ್ದಾರೆ. ಇನ್ನೊಂದು ಕಡೆ ಒಟಿಪಿಯನ್ನು ಹಂಚಿಕೊಳ್ಳುವುದು ಆರ್ಬಿಐ ನಿಯಮದಡಿ ಅಪರಾಧ. ಅಷ್ಟೇ ಅಲ್ಲ ಬ್ಯಾಂಕ್ ಅವರ ಯುಪಿಐ ವಹಿವಾಟನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರಿಂದ ಹಲವರಿಗೆ ಖರೀದಿಸಲು ಸಾಧ್ಯವಾಗಿಲ್ಲ. ಅವರ ಗರಿಷ್ಠ ವಹಿವಾಟು ಅಂತ್ಯವಾಗಿದ್ದ ಬಳಿಕ ಈ ಖರೀದಿ ನಿಂತಿದೆ.
ಆತ ಈ ರೀತಿ ಮಾಡಿದ್ಯಾಕೆ?
ಯಾರು ಲಾಭವಿಲ್ಲದೆ ಈ ರೀತಿಯ ಕೆಲಸಕ್ಕೆ ಹೈ ಹಾಕುವುದಿಲ್ಲ. ಅದ್ರಲ್ಲೂ ಆತನ ಸ್ಟಾರ್ಟ್‌ಅಪ್‌ಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಮಾರ್ಕೆಟಿಂಗ್ ಮಾಡಲಾಗಿದೆ. ಬೋಲ್ಡ್ ಕೇರ್‌ಗೆ ರಣವೀರ್ ಸಿಂಗ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅದರ ಜೊತೆಗೆ ತನ್ನ ಕಂಪನಿ ಬಗ್ಗೆ ಒಂದಿಷ್ಟು ಜನರಿಗೆ ತಿಳಿಯಲಿ ಎಂಬ ಕಾರಣಕ್ಕೆ ಆತ ಈ ರೀತಿಯ ಮಾರ್ಕೆಟಿಂಗ್ ಮಾಡಿದ್ದಾನೆ.
ಆದ್ರೆ ಈ ಟ್ರಿಕ್ಸ್ ನೋಡಿದ ಮಂದಿ ಹಾಗೂ ಅವರ ಫಾಲೋವರ್ಸ್ ಸಂಖ್ಯೆ ಒಂದೇ ದಿನದಲ್ಲಿ ದುಪ್ಪಟ್ಟಾಗಿದೆ. ಹೀಗಾಗಿ ಅವರು ಮತ್ತೊಮ್ಮೆ ಈ ರೀತಿಯ ಆಫರ್ ನೀಡಬಹುದು ಎಂದು ಜನರು ಕಾಯುವಂತಿದೆ. ಕೆಲವರಿಗೆ ಸಿಕ್ಕಿದ್ದನ್ನು ಆರ್ಡರ್ ಮಾಡಿ ಸಂತೋಷಗೊಂಡಿದ್ದಾರೆ.



Click it and Unblock the Notifications
