Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಜೂ.24-ಜು. 17ರವರೆಗೆ ಬುಧಾದಿತ್ಯ ಯೋಗ: ಈ ರಾಶಿಯವರಿಗೆ ಅದೃಷ್ಟದ ಅವಧಿ
ಬುಧಾದಿತ್ಯ ಯೋಗವನ್ನು ಅದೃಷ್ಟದ ಯೋಗವೆಂದು ಪರಿಗಣಿಸಲಾಗಿದೆ. ಯಾವಾಗ ಬುಧ ಹಾಗೂ ಆದಿತ್ಯ ಒಂದೇ ರಾಶಿಯಲ್ಲಿ ಸಂಯೋಗವಾಗುವುದೋ ಆವಾಗ ಬುಧಾದಿತ್ಯ ಯೋಗ ಉಂಟಾಗುವುದು. ಜೂನ್ 24ಕ್ಕೆ ಬುಧ ಮಿಥುನ ರಾಶಿಯನ್ನು ಪ್ರವೇಶಿಸಲಿದೆ, ಸೂರ್ಯ ಈಗಾಗಲೇ ಮಿಥುನ ರಾಶಿಯಲ್ಲಿದೆ. ಬುಧ ಹಾಗೂ ಸೂರ್ಯ ಮಿಥುನ ರಾಶಿಯಲ್ಲಿ ಇರುವಾಗ ಇನ್ನು 15 ದಿನ ಬುಧಾದಿತ್ಯ ಯೋಗವಿದ್ದು ಈ ರಾಶಿಯವರಿಗೆ ತುಂಬಾ ಅದೃಷ್ಟಕರವಾಗಿರಲಿದೆ.

ಬುಧಾದಿತ್ಯ ಯೋಗದಿಂದ ದೊರೆಯುವ ಪ್ರಯೋಜನಗಳೇನು?
* ಈ ಅವಧಿಯಲ್ಲಿ ವ್ಯಕ್ತಿಯ ಕೀರ್ತಿ ಹೆಚ್ಚಾಗಲಿದೆ.
* ಬ್ಯುಸ್‌ನೆಸ್, ಮೀಡಿಯಾ, ಸಂವಹನ ಮಾಧ್ಯಮದಲ್ಲಿ ಇರುವವರಿಗೆ ಈ ಅವಧಿ ಅನುಕೂಲಕರವಾಗಿದೆ.
* ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಲಿದೆ.
* ಬುಧಾದಿತ್ಯ ಯೋಗದಿಂದ ವೃತ್ತಿ ಜೀವನದಲ್ಲಿ ಪ್ರಗತಿಯಾಗಲಿದೆ.
ಈ ಬಾರಿ ಬುಧಾದಿತ್ಯ ಯೋಗ ಈ 3 ರಾಶಿಯವರಿಗೆ ಒಳ್ಳೆಯದಿದೆ
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನೀವು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ವ್ಯವಹಾರಸ್ಥರು ತಮ್ಮ ಸಂವಹನ ಸಾಮರ್ಥ್ಯದಿಂದ ತಮ್ಮ ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಮಿಥುನ ರಾಶಿ
ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಿಂದ ನಿಮ್ಮ ಕೀರ್ತಿ, ಗೌರವ ಮತ್ತಷ್ಟು ಹೆಚ್ಚಾಗಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆಸೆಗಳು ನೆರವೇರಲಿದೆ. ವ್ಯಾಪಾರಿಗಳನ್ನು ಒಳ್ಳೆಯ ಲಾಭ ಗಳಿಸುತ್ತಾರೆ. ಏನಾದರೂ ಹೊಸ ಕೆಲಸ ಪ್ರಾರಂಭಿಸಲು ಕೂಡ ಈ ಅವಧಿ ಅನುಕೂಲಕರವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೂ ಬುಧಾದಿತ್ಯದ ಈ ಅವಧಿ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆರ್ಥಿಕವಾಗಿ ಈ ಅವಧಿ ಒಳ್ಳೆಯದಿದೆ. ಈ ಸಮಯದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು.



Click it and Unblock the Notifications