Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮೀನ ರಾಶಿಯಲ್ಲಿ ಬುಧ- ಆದಿತ್ಯ ಯೋಗ: ಈ 3 ರಾಶಿಗಳಿಗೆ ಅದೃಷ್ಟ ಕೈ ಹಿಡಿದಿದೆ
ಮೀನ ರಾಶಿಯಲ್ಲಿ ಮಾರ್ಚ್ 16ರಿಮದ ಏಪ್ರಿಲ್ 14ರವರೆಗೆ ಬುಧ-ಆದಿತ್ಯ ಯೋಗ ಏರ್ಪಟ್ಟಿದೆ. ಮಾರ್ಚ್ 15ಕ್ಕೆ ಸೂರ್ಯನು ಮೀನ ರಾಶಿಗೆ ಪ್ರವೇಶಿಸಿದೆ. ಮಾರ್ಚ್ 16ಕ್ಕೆ ಬುಧ ಕೂಡ ಮೀನ ರಾಶಿಗೆ ಆಗಮಿಸಿರುವುದರಿಂದ ಬುಧ ಆದಿತ್ಯ ಯೋಗ ಏರ್ಪಟ್ಟಿದೆ.

ಬುಧನಿಗೆ ಮೀನ ರಾಶಿ ದುರ್ಬಲ ರಾಶಿಯಾಗಿದೆ, ಆದ್ದರಿಂದ ಬಹುತೇಕ ರಾಶಿಗಳಿಗೆ ಈ ಸಂಚಾರ ಒಳ್ಳೆಯದಲ್ಲ, ಆದರೆ ಕೆಲ ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದೆ.
ಅದರಲ್ಲೂ ಸೂರ್ಯ-ಬುಧ ಸಂಯೋಗವಾಗಿ ಬುಧಾದಿತ್ಯ ಯೋಗ ಏರ್ಪಟ್ಟಿದೆ. ಈ ಯೋಗ ಬಲದಿಂದ ಈ ರಾಶಿಗಳಿಗೆ ರಾಜಯೋಗ ಏರ್ಪಟ್ಟಿದೆ ನೋಡಿ:
ವೃಷಭ ರಾಶಿ
ವೃಷಭ ರಾಶಿಯವರಿಗೆ 11ನೇ ಮನೆಯಲ್ಲಿ ರಾಹಯೋಗ ಏರ್ಪಟ್ಟಿದೆ. ಈ ಸಮಯದಲ್ಲಿ, ಸೂರ್ಯ, ಬುಧ ಮತ್ತು ಗುರು ಈ ಮೂರು ಗ್ರಹಗಳೂ ಒಳ್ಳೆಯ ಪ್ರಭಾವ ಬೀರುವುದರಿಂದ ಈ ಅವಧಿ ನಿಮಗೆ ತುಂಬಾನೇ ಒಳ್ಳೆಯದಿದೆ. ಈ ಅವಧಿ ವ್ಯಾಪಾರ, ವ್ಯವಹಾರಗಳಲ್ಲಿ ಒಳ್ಳೆಯ ಲಾಭ ಗಳಿಸುವಿರಿ. ವ್ಯಾಪಾರಸ್ಥರು ಒಳ್ಳೆಯ ಲಾಭ ಪಡೆಯುವಿರಿ. ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುವಿರಿ. ಈ ಅವಧಿಯಲ್ಲಿ ಮನೆ, ಆಸ್ತಿ, ಗಾಡಿ ಖರೀದಿಗೆ ಉತ್ತಮವಾಗಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ 9ನೇ ಮನೆಯಲ್ಲಿ ರಜಯೋಗ ಏರ್ಪಟ್ಟಿದೆ. ಈ ಸಮಯದಲ್ಲಿ, ಬುಧ, ಗುರು ಮತ್ತು ಸೂರ್ಯನ ಈ ಸಂಯೋಜನೆಯು ನಿಮ್ಮ ಅದೃಷ್ಟ ಹೆಚ್ಚಿಸಿದೆ. ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಪಡೆಯುವಿರಿ. ಕುಟುಂಬದಲ್ಲಿ, ಒಡಹುಟ್ಟಿದವರ ಜೊತೆ ಇದ್ದ ವೈಮನಸ್ಸು ಬಗೆಹರಿಯಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರದ ಕಡೆಗೆ ಒಲವು ಹೆಚ್ಚಲಿದೆ. ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಚಿಸಿದ್ದರೆ ಒಳ್ಳೆಯ ಕಡೆಯಿಂದ ಆಫರ್ ಪಡೆಯುವಿರಿ. ಈ ಬುಧ ಆದಿತ್ಯ ಯೋಗದಿಂದಾಗಿ ಈ ಅವಧಿಯಲ್ಲಿ ನೀವು ಯಾವುದಕ್ಕೂ ಚಿಂತೆ ಮಾಡಬೇಕಾಗಿಲ್ಲ.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಐದನೇ ಮನೆಯಲ್ಲಿ ಈ ರಾಜಯೋಗವು ಏರ್ಪಟ್ಟಿದೆ. ಈ ಸಮಯದಲ್ಲಿ ಸೂರ್ಯ, ಬುಧ, ಗುರುಗಳ ಕೃಪೆಯಿಂದ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಫಲ ಸಿಗಲದಿದೆ. ಪ್ರೇಮ ಸಂಬಂಧದಲ್ಲಿ ಇದ್ದಂಥ ಸಮಸ್ಯೆ ಬಗೆಹರಿಯಲಿದೆ. ಈ ರಾಜಯೋಗದಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಒಳ್ಳೆಯ ಲಾಭ ಪಡೆಯುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ನೀವು ಬ್ಯಾಂಕ್‌ನಿಂದ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಈ ಸಮಯದಲ್ಲಿ ನೀವು ಸಾಲವನ್ನು ಪಡೆಯಬಹುದು. ಒಟ್ಟಿನಲ್ಲಿ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ.



Click it and Unblock the Notifications



