Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
Budget 2025: ಬಜೆಟ್ ದಿನ ಸೀತಾರಾಮನ್ ಧರಿಸುವ ಸೀರೆಗಳ ಹಿಂದಿರುವ ಒಳಾರ್ಥಗಳು ನಿಮಗೆ ಗೊತ್ತಾ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. 8ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಅವರು ಹಿಂದಿನ ಎಲ್ಲಾ ದಾಖಲೆಗಳ ಮುರಿದಿದ್ದಾರೆ. ಈ ಬಾರಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಕೂಡ ಇದ್ದು, ಯಾರಿಗೆಲ್ಲಾ ಸರ್ಕಾರ ಕೊಡುಗೆ ನೀಡಲಿದೆ ಎಂಬ ಕುತೂಹಲವಂತು ಇದೆ. ಹಾಗೆ ಬಜೆಟ್ ಮಂಡನೆಗೂ ಮೊದಲು ನಿರ್ಮಲಾ ಸೀತಾರಾಮನ್ ಕ್ಯಾಮರಾ ಮುಂದೆ ಡಿಜಿಟಲ್ ಬಜೆಟ್ ಹಿಡಿದು ಪೋಸ್ ನೀಡುತ್ತಾರೆ.
ಈ ವೇಳೆ ಅವರ ಸೀರೆ ಬಹಳಷ್ಟು ಮಂದಿಯ ಗಮನ ಸೆಳೆಯುವುದು ನಾವು ನೋಡಬಹುದು. ಪ್ರತಿವರ್ಷವೂ ಇದಕ್ಕೊಂದು ಅರ್ಥವಿರುವುದು ಕೂಡ ಗಮನಿಸಬಹುದು. ಅವರ ಆಕರ್ಷಕ ವಿನ್ಯಾಸದ ಸೀರೆ ಬಜೆಟ್‌ನಷ್ಟೇ ಗಮನಸೆಳೆಯಲಿದೆ. ಹಾಗಾದ್ರೆ ಈ ಸಂಪ್ರದಾಯ ಬೆಳೆದು ಬಂದಿರುವುದ್ಯಾಕೆ? ಅವರು ಉಡುವ ಸೀರೆಯ ಹಿಂದೆ ಇರುವ ಅರ್ಥಗಳೇನು?

ಪ್ರತಿ ವರ್ಷ ಸಂಸತ್ ಭವನದ ಮುಂದೆ ಅವರು ಕಾಣಿಸಿಕೊಂಡಾಗ ಅವರು ಉಡುವ ಸೀರೆಯ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತದೆ. ಹಾಗೆ ಒಂದೊಂದು ವರ್ಷವೂ ಒಂದೊಂದು ಸಂಪ್ರದಾಯ ಸಾರುವ ಸೀರೆಗಳನ್ನು ಅವರು ಧರಿಸಿದ್ದಾರೆ. ಹಾಗಾದ್ರೆ ಈ ಹಿಂದೆ ಅವರು ಧರಿಸಿದ್ದ ಸೀರೆಯ ಹಿಂದಿನ ಉದ್ದೇಶವೇನು? ಇದರ ಅರ್ಥವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
2024-25ರಲ್ಲಿ ಆಂಧ್ರ ಪರಂಪರೆ
2024-25ರ ಬಜೆಟ್‌ಗಾಗಿ ಸಚಿವೆ ನಿರ್ಮಲಾ ಸೀತಾರಾಮ್ ಅವರು ಬಿಳಿಯ ಮಂಗಳಸಿರಿ ಸೀರೆ ಧರಿಸಿದ್ದರು. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗರಿಯ ಸೀರೆ ಇದಾಗಿದ್ದು, ಕೈಮಗ್ಗದಿಂದ ತಯಾರಿಸಿದ ಅತ್ಯಂತ ಸರಳ, ಸುಂದರ ಡಿಸೈನ್‌ಗೆ ಇದು ಹೆಸರುವಾಸಿಯಾಗಿದೆ. ಆ ಸೀರೆಯಲ್ಲಿ ಕಡಿಮೆ ಕಸೂತಿ ಕೆಲಸವಿರುವ ಕಾರಣ ಬಹಳ ಸರಳವಾಗಿ ಕಾಣಿಸುತ್ತದೆ. ಇದನ್ನು ಸೀತಾರಾಮನ್ ಧರಿಸಿ ಆಗಮಿಸಿದ್ದರು.
2024ರ ಮಧ್ಯಂತರ ಬಜೆಟ್
ಚುನಾವಣೆಗೂ ಮುನ್ನ ಮಧ್ಯಂತರ ಬಜೆಟ್ ಮಂಡಿಸುವಾಗ ಸೀತಾರಾಮನ್, ನೀಲಿ ಕಂಠದ ಹೊಲಿಗೆಯ ಸೀರೆ ಧರಿಸಿದ್ದರು, ಇದು ಎಲ್ಲರ ಗಮನ ಸೆಳೆದಿತ್ತು. ಪಶ್ಚಿಮ ಬಂಗಾಳದ ಸಂಪ್ರದಾಯಗಳ ಸಾರುವ ಸೀರೆ ಇದಾಗಿತ್ತು. ಬಂಗಾಳಿ ಕರಕುಶಲತೆಯನ್ನು ಎತ್ತಿ ತೋರಿಸುತ್ತಿತ್ತು, ಹಾಗೆ ನೀಲಿ ಕ್ರಾಂತಿಯನ್ನು ಪ್ರತಿಬಿಂಬಿಸುವ ಕರಕುಶಲ ಕೆಲಸಗಳು ಆ ಸೀರೆಮೇಲಿದ್ದವು.
2023ರಲ್ಲಿ ಚಿನ್ನದಂತ ಅಂಚಿನ ಸೀರೆ
2023ರಲ್ಲಿ ಸೀತಾರಾಮನ್ ಅವರು ಕೆಂಪು ರೇಷ್ಮೆ ಹಾಗೂ ಚಿನ್ನದಂತೆ ಹೊಳೆಯುವ ಅಂಚು ಹೊಂದಿದ್ದ ಸೀರೆ ಧರಿಸಿದ್ದರು. ಇದು ಭಾರತದ ಪರಂಪರೆಯ ಸಾರುವ ಚಿತ್ರಕಲೆಗಳು ಅಂಚಿನಲ್ಲಿದ್ದವು. ನವಿಲು, ರಥ, ಕಮಲದಂತಗಹ ರಚನೆ ಅಲ್ಲಿತ್ತು.
2022ರಲ್ಲಿ ಒಡಿಶಾಗೆ ಗೌರವಾರ್ಥ
2022ರಲ್ಲಿ ಸೀತಾರಾಮನ್ ಒಡಿಶಾದ ಬೆರಗುಗೊಳಿಸುವ ಕಂದು ಬಣ್ಣದ ಬೊಮ್ಕೈ ಸೀರೆಯನ್ನು ಧರಿಸಿ ಸಂಸತ್ ಪ್ರವೇಶಿಸಿದ್ದರು. ಇದನ್ನು ಬೆಳ್ಳಿಯಂತಹ ಜರಿ ಹೊಂದಿತ್ತು. ಇದು ಶ್ರೀಮಂತಿಕೆಯ ಸಾರುವ, ಒಡಿಶಾದ ಸಂಪ್ರದಾಯ ಸಾರುವ ಕರಕುಶಲತೆ ಆ ಸೀರೆಯಲ್ಲಿತ್ತು.
2021ರಲ್ಲಿ ತೆಲಂಗಾಣದ ಸೀರೆ
ಸೀತಾರಾಮನ್ 2021ರಲ್ಲಿ ಧರಿಸಿದ್ದ ಸೀರೆ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಇದು ತೆಲಂಗಾಣದಲ್ಲಿ ಕೈಯಿಂದ ನೆಯ್ದು ತಯಾರಿಸಿದ ಸೀರೆಯಾಗಿತ್ತು. ತೆಲಂಗಾಣದ ಪೋಚಂಪಲ್ಲಿ ಇಕ್ಕತ್‌ನಲ್ಲಿ ಈ ಸೀರೆಯನ್ನು ಕೈಯಿಂದ ನೇಯ್ದು ಮಾಡಲಾಗಿತ್ತು. ಕೆಂಪು ಮತ್ತು ಬಿಳಿ ಬಣ್ಣದ ಸೀರೆ ಇದಾಗಿತ್ತು.
2020ರಲ್ಲಿ ಹಳದಿ ಸೀರೆ
ಸೀತಾರಾಮನ್ 2020ರಲ್ಲಿ ಕೊರೊನಾ ನಡುವೆಯೂ ಮಂಡಿಸಿದ್ದ ಬಜೆಟ್ ಸಮಯದಲ್ಲಿ ಹಳದಿ ಬಣ್ಣದ ಸೀರೆ ಧರಿಸಿದ್ದರು. ಇದು ಸಾಂಕ್ರಾಮಿಕದ ವಿರುದ್ಧ ಗೆಲುವಿನ ಸಂಕೇತ ಹಾಗೂ ಆರ್ಥಿಕ ಬೆಳವಣಿಗೆಯ ಸಂಕೇತ ಎಂದು ಗುರುತಿಸಲಾಗಿತ್ತು. ಹಾಗೆ ಅವರು 2019ರಲ್ಲಿಯೂ ಕೂಡ ಮಂಗಳಗಿರಿ ಸೀರೆಯನ್ನೇ ಆಯ್ಕೆ ಮಾಡಿಕೊಂಡಿದ್ದರು.



Click it and Unblock the Notifications