ಕೇಂದ್ರ ಬಜೆಟ್ 2024: ಬಜೆಟ್ ಕುರಿತು ನಿಮಗೆ ಗೊತ್ತಿಲ್ಲದ ಅಚ್ಚರಿ ಅಂಶಗಳಿವು..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದಾರೆ. ಸತತ 6ನೇ ಬಾರಿ ಬಜೆಟ್ ಮಂಡಿಸಿರುವ ದಾಖಲೆ ಬರೆಎದ ಅವರು, ನೂತನ ಸಂಸತ್‌ನಲ್ಲಿ ಸುದೀರ್ಘ ಭಾಷಣ ಮಾಡಿದ್ದಾರೆ. ಮೊರಾರ್ಜಿ ದೇಸಾಯಿ ಹೊರತುಪಡಿಸಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ನಾಯಕರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿಕೊಂಡಿದ್ದಾರೆ.

ಇಂದು ಮಂಡನೆಯಾದ ಬಜೆಟ್ ಕುರಿತು ಹಲವು ವಿಚಾರಗಳು ಹರಿದಾಡುತ್ತಿವೆ. ಇದಲ್ಲದೆ ಈ ಬಜೆಟ್ ಕುರಿತಂತೆ ನಿಮಗೆ ಗೊತ್ತಿಲ್ಲದ ಕೆಲವು ಅಚ್ಚರಿಯ ವಿಷಯಗಳಿವೆ. ಆ ವಿಶೇಷ ಅಂಶಗಳು ಯಾವುವು ಎಂಬುದನ್ನು ನಾವಿಂದು ನೋಡೋಣ.

Surprising Facts About Budget in Kannada

ಇಂದು ಮಂಡಿಸಿರುವ ಬಜೆಟ್ ಅನ್ನು 2016ರ ವರೆಗೆ ಫೆಬ್ರವರಿ ಕೊನೆಯ ದಿನದಂದು ಮಂಡಿಸಲಾಗುತ್ತಿತ್ತು. ಆದರೆ 2016ರಿಂದ ಬಜೆಟ್ ಅನ್ನು ಫೆಬ್ರವರಿಯ ಮೊದಲ ದಿನವೇ ಮಂಡಿಸಲಾಗುತ್ತಿದೆ.

1999 ರವರೆಗೆ, ಕೇಂದ್ರ ಬಜೆಟ್ ಅನ್ನು ವಸಾಹತುಶಾಹಿ ಸಂಪ್ರದಾಯವೆಂದು ಹೇಳಲಾದ 5:00 ಗಂಟೆಗೆ ಘೋಷಿಸಲಾಗುತ್ತಿತ್ತು. ನಂತರ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು 2001 ರಿಂದ ಸಮಯವನ್ನು 11 ಗಂಟೆಗೆ ಬದಲಾಯಿಸಿದರು.

ಬಜೆಟ್ ಮಂಡಿಸುವ ಒಂದು ವಾರದ ಮೊದಲು, 'ಹಲ್ವಾ ಸಮಾರಂಭ' ನಡೆಯುತ್ತದೆ, ಅಲ್ಲಿ ಹಣಕಾಸು ಸಚಿವರು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 'ಹಲ್ವಾ' ವಿತರಿಸುತ್ತಾರೆ. ಹಲ್ವಾ ಸಮಾರಂಭವು 'ಲಾಕ್-ಇನ್' ಅವಧಿಯ ಆರಂಭವನ್ನು ಸೂಚಿಸುತ್ತದೆ. ಬಜೆಟ್ ವ್ಯವಸ್ಥೆಯಲ್ಲಿ ಡಿಜಿಟಲ್ ವಿಧಾನಗಳಿಗೆ ಬದಲಾಗುವುದರೊಂದಿಗೆ, ಲಾಕ್-ಇನ್ ಅವಧಿಯನ್ನು ಎರಡು ವಾರಗಳಿಂದ ಕೇವಲ ಐದು ದಿನಗಳಿಗೆ ಕಡಿಮೆ ಮಾಡಲಾಗಿದೆ.

ಅಂದರೆ ಬಜೆಟ್ ತಯಾರಿಕೆಯಲ್ಲಿ ಭಾಗುಯಾಗುವ ಅಧಿಕಾರಿಗಳು ಒಂದರಿಂದ ಎರಡು ವಾರಗಳ ಕಾಲ ಗೌಪ್ಯವಾಗಿರಬೇಕಿತ್ತು. ಅವರ ಪ್ರತಿಯೊಂದು ನಡೆಯ ಮೇಲೂ ಗುಪ್ತಚರ ಇಲಾಖೆ ಕಣ್ಣಿಡುತ್ತದೆ. ಅವರು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮೊಬೈಲ್ ಬಳಸಬೇಕು. ಈಗಲೂ ಈ ನಿಯಮಗಳಿವೆ ಆದರೆ ಕೇವಲ 5 ದಿನಗಳು ಮಾತ್ರ ಅವರು ಗೌಪ್ಯ ಸ್ಥಳದಲ್ಲಿರುತ್ತಾರೆ.


ಬಜೆಟ್ ತಯಾರಿ ಮಾಹಿತಿ ಸಚಿವರಿಗೆ ಮಾತ್ರ

ಬಜೆಟ್‌ ತಯಾರಿ ಕುರಿತಂತೆ ಹಣಕಾಸು ಸಚಿವರು ಮಾತ್ರ ಮಾಹಿತಿ ಪಡೆಯಬಹುದು. ಅಧಿಕಾರಿಗಳಿರುವ ಸ್ಥಳಕ್ಕೆ ಹಣಕಾಸು ಸಚಿವರು ಮಾತ್ರ ತೆರಳಲು ಅನುಮತಿ ಇರಲಿದೆ. ಅಲ್ಲದೆ ಸಚಿವರು ಸಹ ಆ ಸ್ಥಳದಿಂದ ಯಾರಿಗೆ ಕರೆ ಮಾಡುವಂತಿಲ್ಲ, ಅಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ಹೀಗೆ ಹತ್ತಾರು ಭದ್ರತಾ ಅಂಶಗಳಿವೆ.

2018 ರವರೆಗೆ, ಹಣಕಾಸು ಮಂತ್ರಿಗಳು ಆರ್ ಕೆ ಷಣ್ಮುಖಂ ಚೆಟ್ಟಿಯವರು ಪ್ರಾರಂಭಿಸಿದ ಸಂಪ್ರದಾಯವನ್ನು ಅನುಸರಿಸಿದರು, ಚರ್ಮದ ಬ್ರೀಫ್ಕೇಸ್ನಲ್ಲಿ ಬಜೆಟ್ ಅನ್ನು ಒಯ್ಯುತ್ತಿದ್ದರು. ಆದರೆ, ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ 1, 2021 ರಂದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಟ್ಯಾಬ್ಲೆಟ್ ಬಳಸಿ ಮೊದಲ ಕಾಗದರಹಿತ ಬಜೆಟ್ ಅನ್ನು ಪರಿಚಯಿಸಿದರು.

ಕೇಂದ್ರ ಬಜೆಟ್ ಎರಡು ಭಾಗಗಳನ್ನು ಹೊಂದಿದೆ: ವಾರ್ಷಿಕ ಹಣಕಾಸು ಹೇಳಿಕೆ ಮತ್ತು ಅನುದಾನಕ್ಕಾಗಿ ಬೇಡಿಕೆ. ವಾರ್ಷಿಕ ಹಣಕಾಸು ಹೇಳಿಕೆಯು ಮುಂಬರುವ ವರ್ಷದಲ್ಲಿ ಸರ್ಕಾರದ ಆದಾಯದ ಸಾರಾಂಶವನ್ನು ಒದಗಿಸುತ್ತದೆ. ಅನುದಾನಕ್ಕಾಗಿ ಬೇಡಿಕೆಯು ಸಲ್ಲಿಸಬೇಕಾದ ಕನ್ಸಾಲಿಡೇಟೆಡ್ ಫಂಡ್‌ನಿಂದ ಅಂದಾಜು ವೆಚ್ಚವನ್ನು ಒಳಗೊಂಡಿರುತ್ತದೆ.

ಇನ್ನು ಮಧ್ಯಂತರ ಬಜೆಟ್ ಜಾರಿಯಾಗದೆಯೂ ಇರಬಹುದು. ಏಕೆಂದರೆ ಮಧ್ಯಂತರ ಬಜೆಟ್ ಮಂಡಿಸಿರುವ ವರ್ಷದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುತ್ತದೆ. ಹೊಸ ಸರ್ಕಾರ ಬಂದರೆ ಇಲ್ಲವೆ ಅದೇ ಸರ್ಕಾರ ಚುನಾಯಿತಗೊಂಡರೆ ಈ ಬಜೆಟ್ ಬದಲು ಮತ್ತೊಂದು ಪೂರ್ಣಾವಧಿ ಬಜೆಟ್ ಮಂಡಿಸಬಹುದು. ಆಗ ಈ ಮಧ್ಯಂತರ ಬಜೆಟ್ ಅನುಷ್ಠಾನಕ್ಕೆ ಬರುವುದಿಲ್ಲ.

English summary

Budget 2024: Surprising Facts About Budget You Probably didn't know

As Union Finance Minister Nirmala Sitharaman will be presenting the Interim Budget for the fiscal year 2024-25 on February 1, we take a look at 10 interesting facts about the Union Budget here. Union Budget, which is presented on February 1 by Finance Minister in the Lok Sabha, used to be presented on the last working day of February until 2016.
Story first published: Thursday, February 1, 2024, 15:00 [IST]
X
Desktop Bottom Promotion