Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್‌ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ನಿಧನ..! ನಟಿಗೆ ಆಗಿದ್ದೇನು?
ಇತ್ತೀಚಿಗೆ ಕಿರುತೆರೆ, ಸಿನಿಮಾ ನಟ ನಟಿಯರು ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕುತ್ತಿರುವುದು ಆತಂಕ ಹೆಚ್ಚಲು ಕಾಣವಾಗಿದೆ. ಈಗ ಬ್ರಹ್ಮಗಂಟು ಧಾರವಾಹಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಯಾಗಿದೆ. ಅವರು ಕೆಲ ವರ್ಷದಿಂದ ಹೈದರಾಬಾದ್‌ನಲ್ಲಿ ನೆಲಸಿದ್ದರು ಅಲ್ಲಿಯೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಶೋಭಿತಾ ಶಿವಣ್ಣ, ಬ್ರಹ್ಮಗಂಟು, ನಿನ್ನಿಂದಲೆ ಸೇರಿ ಹಲವು ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಹಾಗೆ ಎರಡೊಂದ್ಲಾ ಮೂರು, ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಎಟಿಎಮ್ , ಅಪಾರ್ಟ್‌ಮಂಟ್ ಟು ಮರ್ಡರ್, ವಂದನಾ ಸೇರಿ ಇತ್ತಿಚಿಗೆ ತೆರೆಕಂಡಿದ್ದ ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗಳಲ್ಲು ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಟಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಆ ನಂತರ ಈ ಘಟನೆ ಜರುಗಿದ್ದು, ಅವರ ಆತ್ಮಹತ್ಯೆಯ ಬಗ್ಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹಾಸನ ಮೂಲದ ಸಕಲೇಶಪುರ ಅವರ ಮೂಲ ಜನ್ಮ ಸ್ಥಳ ಎಂದು ತಿಳಿದುಬಂದಿದೆ. ಅವರ ಸಾವಿನ ಸುದ್ದಿ ಕುಟುಂಬಸ್ಥರು, ಸ್ನೇಹಿತರಿಗೆ ಸಿಡಿಲಿನಂತೆ ಅಪ್ಪಳಿಸಿದೆ.
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ನಟಿಸಿದ್ದ ಅವರು ಎಲ್ಲರ ಮನೆ ಮನೆಯ ಮಾತಾಗಿದ್ದರು, ಹೀಗಾಗಿ ಉತ್ತಮ ನಟನ ಕೌಶಲ್ಯದಿಂದಲೂ ಅವರು ಗಮನ ಸೆಳೆದಿದ್ದರು. ಕಳೆದ ವರ್ಷ 2023ರ ಮೇ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು ಹೃದರಾಬಾದ್‌ನಲ್ಲಿಯೇ ನೆಲೆಸಿದ್ದರು, ಆದರೆ ಅವರು ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಇನ್ನು ಇದೇ ನವೆಂಬರ್ ತಿಂಗಳಲ್ಲಿ ನಟ, ನಿರ್ದೇಶಕ ಗುರು ಪ್ರಸಾದ್ ಕೂಡ ಸಾವಿಗೀಡಾಗಿದ್ದರು. ತಮ್ಮ ಅಪಾರ್ಟ್‌ಮೆಂಟ್‌ನಲ್ಲೇ ಅವರು ನೇಣಿಗೆ ಶರಣಾಗಿದ್ದರು. ಈಗ ನಟಿ ಶೋಭಿತಾ ಶಿವಣ್ಣ ಸುದ್ದಿ ಗಾಂಧಿನಗರದ ಮಂದಿ ಶಾಕ್ ನೀಡಿದೆ. ಹಾಗೆ ಯಾವ ಕಾರಣಕ್ಕೆ ಆತ್ಮಹತ್ಯೆ ಅಂತಹ ಕಠಿಣ ನಿರ್ಧಾರಕ್ಕೆ ನಟ ನಟಿಯರು ಮುಂದಾಗುತ್ತಿದ್ದಾರೆ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿ ಎಲ್ಲರ ಕಾಡುತ್ತಿದೆ.
ಚಿತ್ರರಂಗಕ್ಕೆ ಶಾಕ್ ಕೊಟ್ಟಿತ್ತು ಗುರುಪ್ರಸಾದ್ ಪ್ರಕರಣ
ಅತ್ಯಂತ ಪ್ರತಿಭಾನ್ವಿತ ನಿರ್ದೇಶಕ ಎಂದೇ ಹೆಸರು ಮಾಡಿದ್ದ ಗುರು ಪ್ರಸಾದ್ ಅವರ ಸಾವು ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಿತ್ತು. ಕೇವಲ 50 ವರ್ಷದ ಅವರು ಅಪಾರ್ಟ್‌ಮೆಂಟ್‌ನಲ್ಲಿ ಸಾವಿಗೀಡಾಗಿದ್ದರು. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ವಾಸನೆ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿತ್ತು.
ಸಿನಿಮಾಗಳಿಂದ ಅವರು ಸಾಲಕ್ಕೆ ಬಿದ್ದಿದ್ದರು, ಹಿಂದಿನ ಸಿನಿಮಾ ಸೋಲು ಅವರನ್ನು ಖಿನ್ನತೆಗೆ ತಳ್ಳಿತ್ತು ಎಂಬ ಅನುಮಾನ ಮೂಡಿತ್ತಲ್ಲದೆ, ಕೌಟುಂಬಿಕ ಸ್ಥಿತಿಗತಿಗಳು ಕೂಡ ಅವರನ್ನು ಈ ನಿರ್ಧಾರಕ್ಕೆ ತಳ್ಳಿದ್ದವು ಎಂಬ ಅನುಮಾನ ಮೂಡಿಸಿತ್ತು. ಆದ್ರೆ ಈಗ ಮತ್ತೋರ್ವ ಪ್ರತಿಭಾನ್ವಿತ ಯುವ ನಟಿಯ ದುರಂತ ಅಂತ್ಯ ಎಲ್ಲರಿಗೂ ಶಾಕ್ ನೀಡಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ- 9152987821



Click it and Unblock the Notifications
